Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದೈವಿಕ ಮಹತ್ವವಿರುವ ಅರಳಿ ಮರದಿಂದ ಸಿಗುತ್ತೆ ಅನೇಕ ಅಸ್ವಸ್ಥತೆಗಳಿಗೆ ಔಷಧಿ!
ಅರಳಿ ಮರವನ್ನು ಪೂಜಿಸುವುದು, ಅದಕ್ಕೆ ಪ್ರದಕ್ಷಣೆ ಹಾಕುವುದು ಸಾಮಾನ್ಯವಾಗಿ ನೋಡಿರುತ್ತೀರಿ. ಇದರಿಂದ ಒಳಿತಾಗುವುದು ಎಂಬುದು ಧಾರ್ಮಿಕ ನಂಬಿಕೆಯಾದರೆ, ಉಸಿರಾಟಕ್ಕೆ ಶುದ್ಧ ಆಮ್ಲಜನಕ ಸಿಗುವುದು ಎಂಬುದು ವೈಜ್ಞಾನಿಕ ಹಿನ್ನಲೆಯಾಗಿದೆ. ಏಕೆಂದರೆ, ಆಮ್ಲಜನಕವನ್ನು ಹೆಚ್ಚಾಗಿ ಹೊರಹಾಕುವ ಮರಗಳಲ್ಲಿ ಅಶ್ವತ್ಥ ವೃಕ್ಷ ಅಥವಾ ಅರಳಿ ಮರ ಕೂಡ ಒಂದು.
ಹಾಗೆಯೇ ಔಷಧೀಯ ದೃಷ್ಟಿಕೋನದಿಂದ ಅರಳಿ ಮರ ಅತ್ಯಂತ ಉಪಯುಕ್ತ. ಅರಳಿ ಮರದ ಎಲೆಗಳು ಮತ್ತು ಅದರ ತೊಗಟೆ, ರೆಂಬೆ ಸೇರಿದಂತೆ ಇದರ ಎಲ್ಲಾ ಭಾಗಗಳನ್ನು ಬಳಸಿ ಅನೇಕ ರೀತಿಯ ರೋಗಗಳನ್ನು ತಡೆಗಟ್ಟಬಹುದು. ನಾವಿಂದು ಅರಳಿ ಮರದಿಂದ ಯಾವ ಸಮಸ್ಯೆಗಳಿಗೆ ಚಿಕಿತ್ಸೆ ನೀಡಬಹುದು ಎಂಬುದನ್ನು ತಿಳಿದುಕೊಳ್ಳೋಣ.
ಅರಳಿ ಮರದ ಔಷಧೀಯ ಗುಣಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಗಾಯಗಳಿಗೆ ಚಿಕಿತ್ಸೆ ನೀಡುವುದು:
ನಿಮ್ಮ ಕಾಲು ಅಥವಾ ಕೈಗಳ ಕೂದಲುಗಳನ್ನು ಶೇವ್ ಮಾಡುವಾಗ ಗಾಯವಾಗಿದ್ದರೆ, ಅದಕ್ಕೆ ಅರಳಿ ಮರ ತುಂಬಾ ಉಪಯುಕ್ತವಾಗಿದೆ. ಗಾಯದ ಮೇಲೆ ಈ ಮರದ ಹಾಲನ್ನು ಹಚ್ಚುವುದರಿಂದ ಶೀಘ್ರವಾಗಿ ಗುಣವಾಗುತ್ತದೆ. ಜೊತೆಗೆ ಅರಳಿ ಎಲೆಗಳ ಬೆಚ್ಚಗಿನ ಪೇಸ್ಟ್ ಅನ್ನು ಹಚ್ಚಬಹುದು. ಹೀಗೆ ಮಾಡುವುದರಿಂದ ನೋವು ನಿವಾರಣೆಯಾಗುತ್ತದೆ. ಅದೇ ರೀತಿ ಅರಳಿ ಮರದ ತೊಗಟೆ ಪುಡಿಯನ್ನು ಗಾಯಗಳಿಗೆ ಅನ್ವಯಿಸುವುದರಿಂದ ಕಿರಿಕಿರಿ ಕಡಿಮೆಯಾಗುವುದಲ್ಲದೆ, ತ್ವರಿತವಾಗಿ ಗಾಯ ಗುಣವಾಗುತ್ತದೆ. ಜೊತೆಗೆ ಮರದ ತೊಗಟೆಯನ್ನು ಜಜ್ಜಿ, ನೀರಿನಿಂದ ಕುದಿಸಿದ ಮೇಲೆ ಹಚ್ಚುವುದರಿಂದ ಹುಣ್ಣು ಬೇಗ ಗುಣವಾಗುತ್ತದೆ.

ಚರ್ಮದ ಸಮಸ್ಯೆಗಳಿಗೆ ಪರಿಹಾರ:
ತ್ವಚೆಯ ಸಮಸ್ಯೆ ಕೆಲವರಿಗೆ ತುಂಬಾ ಕಾಡುತ್ತದೆ, ಅಂತಹವರು 20 ಗ್ರಾಂ ಅಶ್ವಸ್ಥ ಮರದ ತೊಗಟೆಯನ್ನು 200 ಗ್ರಾಂ ನೀರಿನಲ್ಲಿ ಕುದಿಸಿ ನಾಲ್ಕನೇ ಒಂದು ಭಾಗದಷ್ಟು ನಂತರ ಫಿಲ್ಟರ್ ಮಾಡಿ ಬೆಳಿಗ್ಗೆ ಕುಡಿದರೆ ಚರ್ಮದ ಸಮಸ್ಯೆಗಳು ದೂರವಾಗುತ್ತವೆ. ಇದರ ಎಲೆಗಳನ್ನು ತಿನ್ನುವುದು ಅಥವಾ ಅದರ ಕಷಾಯವನ್ನು ಕುಡಿಯುವುದು ರಿಂಗ್ವರ್ಮ್ ಗೆ ಪ್ರಯೋಜನಕಾರಿಯಾಗಿದೆ. ಈ ತೊಗಟೆಯನ್ನು ಪುಡಿ ಮಾಡಿ ತುರಿಕೆ ಇರುವ ಜಾಗದಲ್ಲಿ ಹಚ್ಚುವುದರಿಂದ ಸಮಸ್ಯೆ ನಿವಾರಿಸಿಕೊಳ್ಳಬಹುದು. ಅಷ್ಟೇ ಅಲ್ಲ, ಅರಳಿ ಮರದ ತೊಗಟೆ ಚರ್ಮದ ಬಣ್ಣವನ್ನು ಸುಧಾರಿಸಲು ಬಹಳ ಪರಿಣಾಮಕಾರಿಯಾಗಿದೆ. ತೊಗಟೆ ಅಥವಾ ಅದರ ಎಲೆಗಳನ್ನು ಬಳಸಿ ಚರ್ಮದ ಸುಕ್ಕುಗಳನ್ನು ಕಡಿಮೆ ಮಾಡಬಹುದು.

ಮಲಬದ್ಧತೆ ನಿವಾರಣೆ:
ಅರಳಿ ಮರದ ಎಲೆಗಳನ್ನು ಮಲಬದ್ಧತೆ ಮತ್ತು ಗ್ಯಾಸ್ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಇದನ್ನು ಪಿತ್ತರಸ ವಿನಾಶಕ ಎಂದು ಪರಿಗಣಿಸಲಾಗುತ್ತದೆ. ಹೊಟ್ಟೆಯ ಸಮಸ್ಯೆಗಳನ್ನು ತೊಡೆದುಹಾಕಲು ಅರಳಿ ಮರದ ಎಲೆಗಳನ್ನು ಔಷಧಿಯಾಗಿ ಬಳಸಬಹುದು. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಅರಳಿ ಎಲೆಗಳ ರಸವನ್ನು ಕುಡಿಯುವುದರಿಂದ ಹೊಟ್ಟೆಯ ಸಮಸ್ಯೆಗಳಿಗೆ ಪರಿಹಾರವನ್ನು ಕಾಣಬಹುದು. ಹಾಗೆಯೇ ದಿನನಿತ್ಯ ಒಂದು ಟೀಸ್ಪೂನ್ ಅರಳಿ ಎಲೆ ರಸವನ್ನು ಕುಡಿಯುವುದರಿಂದ ಪಿತ್ತದ ಸಮಸ್ಯೆಯನ್ನು ನಿವಾರಿಸಬಹುದು.

ಉಸಿರಾಟದ ಸಮಸ್ಯೆಗಳಿಗೆ ರಾಮಬಾಣ:
ನೀವು ಅಸ್ತಮಾ ಮತ್ತು ಇತರೆ ಉಸಿರಾಟದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಅರಳಿ ಮರಗಳ ಸಹಾಯದಿಂದ ಮನೆಮದ್ದುಗಳನ್ನು ಸಿದ್ಧಪಡಿಸಿಕೊಳ್ಳಬಹುದು. ಇದಕ್ಕಾಗಿ ಮರದ ತೊಗಟೆಯ ಒಳ ಭಾಗವನ್ನು ತೆಗೆದು ಒಣಗಿಸಿ. ನಂತರ ಒಣಗಿದ ಭಾಗದ ಪುಡಿಯನ್ನು ತಯಾರಿಸಿ ಅದನ್ನು ನೀರಿನೊಂದಿಗೆ ಔಷಧಿಯಾಗಿ ತೆಗೆದುಕೊಳ್ಳಿ. ಹೀಗೆ ನಿಯಮಿತವಾಗಿ ಮಾಡುವುದರಿಂದ ಅನೇಕ ಉಸಿರಾಟದ ಸಮಸ್ಯೆಗಳನ್ನು ನಿವಾರಿಸಬಹುದು. ಇಷ್ಟೇ ಅಲ್ಲದೆ, ಅದರ ಎಲೆಗಳನ್ನು ಹಾಲಿನಲ್ಲಿ ಕುದಿಸಿ ಕುಡಿಯಬಹುದು. ಹೀಗೆ ಮಾಡುವುದರಿಂದ, ಅಸ್ತಮಾದ ಸಮಸ್ಯೆ ನಿವಾರಣೆಯಾಗುತ್ತದೆ. ಅರಳಿ ಎಲೆಗಳಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಅದರ ಮೃದುವಾದ ಎಲೆಗಳನ್ನು ನಿಯಮಿತವಾಗಿ ಅಗಿಯುವುದರಿಂದ ದೇಹದೊತ್ತಡ ಕಡಿಮೆಯಾಗುತ್ತದೆ.

ಹಲ್ಲು ಮತ್ತು ಒಸಡುಗಳನ್ನು ಬಲಗೊಳಿಸುವುದು:
ಅರಳಿ ಮರದಿಂದ ಮಾಡಿದ ಬ್ರಶ್ ಹಲ್ಲುಗಳನ್ನು ಬಲಪಡಿಸುತ್ತವೆ. ಈ ಕಡ್ಡಿಗಳಿಂದ ಪ್ರತಿದಿನ ಹಲ್ಲುಗಳನ್ನು ಸ್ವಚ್ಚಗೊಳಿಸುವ ಮೂಲಕ ಹಲ್ಲುನೋವು ಸಮಸ್ಯೆಗೆ ಪರಿಹಾರ ಕಾಣಬಹುದು. ಹಾಗೆಯೇ ಇದರಿಂದ ಒಸಡುಗಳು ಬಲಗೊಳ್ಳುತ್ತದೆ.



Click it and Unblock the Notifications