Latest Updates
-
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ -
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ -
March 07 Horoscope: ಪ್ರಯಾಣ ಮಾಡುವಾಗ ಎಚ್ಚರವಿಡಿ! -
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ -
ಮಾರ್ಚ್ನಲ್ಲಿ ಕಾಳಸರ್ಪ ಯೋಗ: ಈ ರಾಶಿಯವರಿಗೆ ಯೋಗದಿಂದ ಇದೆ ದೊಡ್ಡ ಲಾಭ!
ಅಧ್ಯಯನ: ನಿದ್ರಾಹೀನತೆ ವ್ಯಕ್ತಿಯನ್ನ ಸ್ವಾರ್ಥಿಯಾಗಿಸುವುದಂತೆ!
ವ್ಯಕ್ತಿಯ ಆರೋಗ್ಯಕ್ಕೆ ನಿದ್ರೆ ಬಹಳ ಮುಖ್ಯ. ಮಾನಸಿಕ ಮತ್ತು ದೈಹಿಕ ಯೋಗಕ್ಷೇಮಕ್ಕೆ ನಿದ್ರೆ ಅತ್ಯಗತ್ಯ. ಕನಿಷ್ಠ ಏಳರಿಂದ ಎಂಟು ಗಂಟೆ ನಿದ್ದೆ ಮಾಡಬೇಕು ಎನ್ನುತ್ತಾರೆ ತಜ್ಞರು. ಆದರೆ ರಾತ್ರಿ ತುಂಬಾ ಹೊತ್ತಾದರೂ ನಿದ್ದೆ ಬಾರದವರು ಬಹಳ ಜನರಿದ್ದಾರೆ. ಇಂತಹವರು ನಿದ್ರಾಹೀನತೆ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ.

ಇದಕ್ಕೆ ಕಾರಣಗಳು ಹಲವು ಇರಬಹುದು. ಆದರೆ, ಈ ರೀತಿಯ ನಿದ್ರಾಹೀನತೆಯು ಹೃದಯರಕ್ತನಾಳದ ಕಾಯಿಲೆ, ಖಿನ್ನತೆ, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಒಟ್ಟಾರೆ ಮರಣದ ಹೆಚ್ಚಿನ ಅಪಾಯಕ್ಕೆ ಸಂಬಂಧಿಸಿದೆ. ಆದರೆ, ಇತ್ತೀಚಿನ ಸಂಶೋಧನೆಯೊಂದು, ನಿದ್ರಾಹೀನತೆಯು ವ್ಯಕ್ತಿಯನ್ನು ಸ್ವಾರ್ಥಿಯಾಗಿಸುತ್ತದೆ ಎಂದು ಕಂಡುಹಿಡಿದಿದೆ. ಈ ಕುರಿತ ಸಂಪೂರ್ಣ ಮಾಹಿತಿ ನಿಮಗಾಗಿ.

ಏನಿದು ಅಧ್ಯಯನ?
ಇಂದು ವೈಜ್ಞಾನಿಕ ಜಗತ್ತಿನಲ್ಲಿ ನಿದ್ರೆಗೆ ಸಂಬಂಧಿಸಿದಂತೆ ಅನೇಕ ಅಧ್ಯಯನಗಳು ನಡೆಯುತ್ತಿವೆ. ಈಗ ಹೊಸ ಅಧ್ಯಯನವೊಂದು ನಿದ್ದೆಯ ಕೊರತೆಯು ವ್ಯಕ್ತಿಯನ್ನು ಸ್ವಾರ್ಥಿಯಾಗಿಸುತ್ತದೆ ಎಂದು ಹೇಳುತ್ತದೆ.
ಈ ಅಧ್ಯಯನವನ್ನು PLOS ಬಯಾಲಜಿ ಜರ್ನಲ್‌ನಲ್ಲಿ ಪ್ರಕಟಿಸಲಾಗಿದ್ದು, ನಿದ್ರೆಯಿಲ್ಲದ ರಾತ್ರಿಗಳು ವ್ಯಕ್ತಿಯನ್ನು ಸ್ವಾರ್ಥಿಯಾಗಿಸಬಹುದು ಎಂದು ಅಧ್ಯಯನಗಳು ತೋರಿಸಿದೆ. ಸರಿಯಾಗಿ ನಿದ್ದೆ ಮಾಡದ ವ್ಯಕ್ತಿಯ ವ್ಯಕ್ತಿತ್ವದ ಪ್ರಮುಖ ಬದಲಾವಣೆಯೆಂದರೆ ಸ್ವಾರ್ಥ ಎಂಬುದಾಗಿ ಸಂಶೋಧಕರು ಹೇಳುತ್ತಾರೆ.

ಸಂಶೋಧನೆಯಲ್ಲಿ ಇರೋದೇನು?
ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರು ಈ ಅಧ್ಯಯನವನ್ನು ನಡೆಸಿದ್ದು, ಕಡಿಮೆ ನಿದ್ರೆಯಿಂದ, ಇತರರಿಗೆ ಸಹಾಯ ಮಾಡುವ ನಿಮ್ಮ ಬಯಕೆ ಮತ್ತು ಇಚ್ಛೆಯನ್ನು ಹಿಂತೆಗೆದುಕೊಳ್ಳುವಂತೆ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ನಿದ್ರೆಯ ಅಭಾವವು ವ್ಯಕ್ತಿಯ ಭಾವನಾತ್ಮಕ ಸ್ಥಿತಿಯನ್ನು ಬದಲಾಯಿಸುತ್ತದೆ. ಜೊತೆಗೆ ಸಾಮಾಜಿಕ ಸನ್ನಿವೇಶಗಳಲ್ಲಿ ವ್ಯಕ್ತಿಯ ನಡವಳಿಕೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿವೆ.
UC ಬರ್ಕ್ಲಿ ಸಂಶೋಧನಾ ವಿಜ್ಞಾನಿ ಎಟಿ ಬೆನ್ ಸೈಮನ್ ಮತ್ತು UC ಬರ್ಕ್ಲಿ ಮನೋವಿಜ್ಞಾನದ ಪ್ರಾಧ್ಯಾಪಕ ಮ್ಯಾಥ್ಯೂ ವಾಕರ್ ನೇತೃತ್ವದ ಅಧ್ಯಯನವು, ಕಡಿಮೆ ನಿದ್ರೆ ವ್ಯಕ್ತಿಯ ಮಾನಸಿಕ ಮತ್ತು ದೈಹಿಕ ಯೋಗಕ್ಷೇಮಕ್ಕೆ ಹಾನಿಯನ್ನುಂಟುಮಾಡುತ್ತದೆ ಮಾತ್ರವಲ್ಲದೇ, ಪರಸ್ಪರ ಸಂಬಂಧಗಳನ್ನು ಅಪಾಯಕ್ಕೆ ಒಳಪಡಿಸುತ್ತದೆ ಎಂದು ಸಾಬೀತುಪಡಿಸಿದೆ.

ನಿದ್ರೆಯ ಅಭಾವವು ಹೇಗೆ ಪರಿಣಾಮ ಬೀರುತ್ತದೆ
ನಿದ್ರೆಯ ಅಭಾವವು ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳಲು ಸಂಶೋಧಕರು ಕ್ರಿಯಾತ್ಮಕ ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜರ್ (fMRI) ಅನ್ನು ಬಳಸಿಕೊಂಡು ರಾತ್ರಿ ನಿದ್ರೆಯಿಲ್ಲದ 24 ಆರೋಗ್ಯವಂತ ಸ್ವಯಂಸೇವಕರ ಮಿದುಳುಗಳನ್ನು ಸ್ಕ್ಯಾನ್ ಮಾಡಿದರು.
ಈ ಮೂಲಕ ಇವರಿಗೆ ಇತರರ ಕಷ್ಟಗಳಿಗೆ ಸಹಾಯ ಮಾಡುವ ಮನಸ್ಸು ಅಥವಾ ಇತರರಿಗೆ ಕಷ್ಟಗಳಿಗೆ ಸಹಾನುಭೂತಿ ತೋರುವ ಆಸಕ್ತಿ ಕಡಿಮೆಯಿತ್ತು ಎಂದು ಕಂಡುಹಿಡಿದಿದೆ. ಇವರು ತಮ್ಮ ವಿಚಾರಗಳಿಗೆ ಮಾತ್ರ ಆಸಕ್ತಿ ಹೊಂದಿದ್ದು, ಹೆಚ್ಚು ಸ್ವಾರ್ಥತೆಯನ್ನು ತೋರಿದ್ದರೆಂದು ಸಂಶೋಧನೆಯಲ್ಲಿ ತಿಳಿಸಲಾಗಿದೆ. ಅಷ್ಟೇ ಅಲ್ಲ, ನಿದ್ರೆಯ ಕೊರತೆಯು ನಮ್ಮನ್ನು ಸಮಾಜದಿಂದ ದೂರ ಉಳಿಯುವಂತೆ ಮಾಡುತ್ತದೆ. ಇತರರೊಂದಿಗೆ ಬೆರೆಯುವ ಮನಸ್ಸನ್ನು ಕುಂಠಿತಗೊಳಿಸಿ, ನಮ್ಮನ್ನು ಒಂಟಿತನಕ್ಕೆ ತಳ್ಳಬಹುದು ಎಂಬುದನ್ನು ಕೂಡ ಸಂಶೋಧಕು ತಿಳಿಸಿದ್ದಾರೆ. ಆದ್ದರಿಂದ ಆರೋಗ್ಯಕರವಾಗಿರಲು ಉತ್ತಮ ನಿದ್ದೆ ಮಾಡುವುದು ಎಷ್ಟು ಅವಶ್ಯಕ ಎಂಬುದನ್ನು ಈ ಮೂಲಕ ಅರಿತುಕೊಳ್ಳಬಹುದು.

ನಿದ್ರಾಹೀನತೆಯನ್ನು ನಿವಾರಿಸಲು ಸಹಾಯ ಮಾಡುವ ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ:
1. ಸರಿಯಾದ ಮಲಗುವ ಪರಿಸ್ಥಿತಿಗಳು ಮತ್ತು ಸರಿಯಾದ ಸಮಯವನ್ನು ಖಚಿತಪಡಿಸಿಕೊಳ್ಳಿ.
2. ಬೆಳಕು ನಿದ್ರೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಆದ್ದರಿಂದ ಲೈಟ್ ಆಫ್ ಮಾಡಿದ ನಂತರ ಮಲಗಿಕೊಳ್ಳಿ.
3. ಮಲಗುವಾಗ ಮೊಬೈಲ್ ಫೋನ್ ಬಳಸಬೇಡಿ.
4. ರಾತ್ರಿಯಲ್ಲಿ ಚಹಾ, ಕಾಫಿ ಮತ್ತು ಕೋಲಾವನ್ನು ಕುಡಿಯದಿರಲು ಪ್ರಯತ್ನಿಸಿ.
5. ಒತ್ತಡವನ್ನು ನಿವಾರಿಸಲು ಯೋಗದಂತಹ ವಿಷಯಗಳನ್ನು ಪ್ರಯತ್ನಿಸಿ.
6. ಮದ್ಯಪಾನ ಮತ್ತು ಧೂಮಪಾನವನ್ನು ತ್ಯಜಿಸಿ.



Click it and Unblock the Notifications











