For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ಇದೇ ಮೊದಲ ಬಾರಿಗೆ ಗ್ರೀನ್ ಫಂಗಸ್‌ ಪತ್ತೆ: ಇದನ್ನು ತಡೆಗಟ್ಟುವುದು ಹೇಗೆ

|

ಕೊರೊನಾ 2ನೇ ಅಲೆ ದೇಶಕ್ಕೆ ದೊಡ್ಡ ನಷ್ಟವನ್ನೇ ತಂದಿದೆ. ಸಾಕಷ್ಟು ಜನ ಇದರಿಂದಾಗ ಪ್ರಾಣ ಕಳೆದುಕೊಂಡಿದ್ದಾರೆ. ಚೇತರಿಸಿಕೊಂಡವರಲ್ಲಿ ಬಗೆ-ಬಗೆಯ ಕಾಯಿಲೆಗಳು ಕಾಣಿಸುವ ಮೂಲಕ ಕೊರೊನಾ ಎಂಬ ಮಹಾಮಾರಿ ಭೀಕರ ಸ್ವರೂಪ ತೋರುತ್ತಿದೆ.

ಕೊರೊನಾದಿಂದ ಚೇತರಿಸಿಕೊಂಡ ಕೆಲವರಲ್ಲಿ ಬ್ಲ್ಯಾಕ್‌ ಫಂಗಸ್‌, ವೈಟ್‌ ಫಂಗಸ್, ಯೆಲ್ಲೋ ಫಂಗಸ್ ಕಾಣಿಸಿಕೊಂಡಿತ್ತು, ಕೋವಿಡ್‌ನಿಂದ ಚೇತರಿಸಕೊಂಡ ಮಕ್ಕಳಲ್ಲಿ ಎಂಐಎಸ್‌ ಸಮಸ್ಯೆ ಕಂಡು ಬರುತ್ತಿದೆ, ಇವೆಲ್ಲದರ ಜೊತೆಗೆ ಇದೀಗ ಗ್ರೀನ್‌ ಫಂಗಸ್‌ ಎಂಬುವುದು ಕಂಡು ಬಂದಿದೆ. ಗ್ರೀನ್‌ ಫಂಗಸ್‌ ದೇಶದಲ್ಲಿ ಇದೇ ಮೊದಲಿಗೆ ಕಂಡು ಬಂದಿದ್ದು ಕೋವಿಡ್‌ನಿಂದ ಚೇತರಿಸಿದ ಮಧ್ಯಪ್ರದೇಶದ 34 ವರ್ಷದ ವ್ಯಕ್ತಿಯಲ್ಲಿ ಈ ಸೋಂಕು ಕಂಡು ಬಂದಿದೆ.

ಸೈಮ್ಸ್ (Sri Aurobindo Institute of Medical Sciences)ನ ಹೃದಯ ಕಾಯಿಲೆ ವಿಭಾಗದ ಮುಖ್ಯಸ್ಥರಾಗಿರುವ ಡಾ. ರವಿ ದೋಸಿಯವರು ಕೋವಿಡ್‌ 19ನಿಂದ ಚೇತರಿಸಿದ ವ್ಯಕ್ತಿಯಲ್ಲಿ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾದಾಗ ಬ್ಲ್ಯಾಕ್‌ ಫಂಗಸ್‌ ಇರಬಹುದೆಂದು ಪರೀಕ್ಷಿಸಿದಾಗ ಗ್ರೀನ್ ಫಂಗಸ್ ಪತ್ತೆಯಾಗಿದೆ.
ಇದರ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯಬೇಕಾಗಿದೆ
ಗ್ರೀನ್‌ ಫಂಗಸ್‌ ರೋಗಿಗಳಲ್ಲಿ ಇತರರಿಗಿಂತ ಬೇರೆ ರೋಗ ಲಕ್ಷಣಗಳು ಕಂಡು ಬರುತ್ತಿದೆಯೇ ಎಂಬುವುದರ ಬಗ್ಗೆ ಅಧಿಕ ಸಂಶೋಧನೆಗಳು ಆಗಬೇಕಾಗಿವೆ ಎಂದು ಡಾ. ದೋಸಿ ಹೇಳಿದ್ದಾರೆ.

ಗ್ರೀನ್‌ ಫಂಗಸ್ ಎಂದರೇನು?

ಗ್ರೀನ್‌ ಫಂಗಸ್ ಎಂದರೇನು?

ಗ್ರೀನ್‌ ಫಂಗಸ್ (Aspergillosis) ಆಸ್ಪರ್ಜಿಲಸ್ ಎಂಬ ಫಂಗಸ್‌ನಿಂದ ಬರುವುದು. ನಮ್ಮಲ್ಲಿ ಬಹುತೇಕರು ಆಸ್ಪರ್ಜಿಲಸ್ ಅನ್ನು ಉಸಿರಾಡುತ್ತಾರೆ, ಆದರೆ ಅವುಗಳಿಂದ ಯಾವುದೇ ಹಾನಿಯುಂಟಾಗಿರುವುದಿಲ್ಲ. ಸುಮಾರು 180ಕ್ಕೂ ಪ್ರಬೆಧಗಳಿವೆ, ಅವುಗಳಲ್ಲಿ 40ರಷ್ಟು ಮಾತ್ರ ಈ ರೀತಿ ಫಂಗಸ್‌ ಸೋಂಕಿಗೆ ಕಾರಣವಾಗಿದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಇದನ್ನು ಉಸಿರಾಡಿದಾಗ ತೊಂದರೆ ಉಂಟಾಗುವುದು.

ಲಕ್ಷಣಗಳು

ಲಕ್ಷಣಗಳು

* ಉಸಿರಾಟದ ತೊಂದರೆ

* ದಮ್ಮು

* ಜ್ವರ (ಕೆಲವೊಮ್ಮೆ)

* ಸೋಂಕು ತುಂಬಾ ಇದ್ದರೆ ಎದೆನೋವು, ಕೆಮ್ಮುವಾಗ ರಕ್ತ ಬರುವುದು.

ಪತ್ತೆ ಹೇಗೆ?

ಆರೋಗ್ಯ ತಜ್ಞರು ನಿಮ್ಮ ಆರೋಗ್ಯ ಸ್ಥಿತಿ, ಲಕ್ಷಣಗಳು, ನಿಮ್ಮ ವೈದ್ಯಕೀಯ ಇತಿಹಾಸ ಎಲ್ಲವನ್ನು ಪರಿಶೀಲಿಸಿದ ಮೇಲೆ ಸಿಟಿ ಸ್ಕ್ಯಾನ್‌ ಮೇಲೆ ಕಂಡು ಹಿಡಿಯಲಾಗುವುದು.

ಆಸ್ಪರ್ಜಿಲಸ್ ತಡೆಗಟ್ಟುವುದು ಅಸಾಧ್ಯ

ಆಸ್ಪರ್ಜಿಲಸ್ ತಡೆಗಟ್ಟುವುದು ಅಸಾಧ್ಯ

ಆಸ್ಪರ್ಜಿಲಸ್ ವಾತಾವರಣದಲ್ಲಿರುತ್ತದೆ. ಇದನ್ನು ಕೆಲವೊಮ್ಮೆ ನಾವೆಲ್ಲಾ ಉಸಿರಾಡುತ್ತೇವೆ, ಆದರೆ ಯಾರಲ್ಲಿ ರೋಗ ನಿರೋಧಕ ಶಕ್ತಿ ತುಂಬಾ ಕಡಿಮೆ ಇರುತ್ತದೋ ಅಂಥವರು ಆಸ್ಪರ್ಜಿಲಸ್‌ನ ಹಾನಿಕಾರಕ ಪ್ರಬೇಧ ಉಸಿರಾಡಿದಾಗ ತೊಂದರೆ ಉಂಟಾಗುವುದು.

ರೋಗ ನಿರೋಧಕ ಶಕ್ತಿ ತುಂಬಾ ಕಡಿಮೆ ಇರುವವರು ಏನು ಮಾಡಬೇಕು?

ರೋಗ ನಿರೋಧಕ ಶಕ್ತಿ ತುಂಬಾ ಕಡಿಮೆ ಇರುವವರು ಏನು ಮಾಡಬೇಕು?

* ದೂಳು ಇರುವ ಕಡೆ ಹೀಗಬೇಡಿ, ಒಂದು ವೇಳೆ ಅಂಥ ಪ್ರದೇಶಕ್ಕೆ ಹೋಗದೇ ಇರಲು ಸಾಧ್ಯವಾಗದಿದ್ದರೆ ಅಥವಾ ನಿಮ್ಮ ಅಕ್ಕಪಕ್ಕ ಕಟ್ಟಡ ನಿರ್ಮಾಣವಾಗುತ್ತಿದ್ದರೆ N95 ಮಾಸ್ಕ್ ಧರಿಸಿ.

* ಮಣ್ಣು, ದೂಳು ಇವುಗಳನ್ನು ಮುಟ್ಟಬೇಡಿ.

* ಇನ್ನು ಗಾಯವಿದ್ದರೆ ಅದನ್ನು ಸೋಪು ಹಚ್ಚಿ ತೊಳೆದು ಸ್ವಚ್ಛವಾಗಿಡಿ. ಮಣ್ಣು, ದೂಳು ಅದರ ಮೇಲೆ ಕೂರದಂತೆ ಎಚ್ಚರವಹಿಸಿ.

English summary

Indore Covid-Recovered Patient Diagnosed With Green Fungus Infection; All You Need To Know in kannada

Indore Covid-recovered patient diagnosed with green fungus infection; All you need to know in kannada read on,
X
Desktop Bottom Promotion