ಎಚ್ಚರ! ಅಧಿಕ ರಕ್ತದೊತ್ತಡವು ನಿಮ್ಮ ನೆನಪಿನ ಶಕ್ತಿಯನ್ನು ಕುಗ್ಗಿಸಿಬಿಡಬಹುದು

ಇಂದಿನ ಗಡಿಬಿಡಿಯ ಜೀವನ, ಮಾನಸಿಕ ಒತ್ತಡ, ವ್ಯಾಯಾಮವಿಲ್ಲದ ದೇಹ, ಅನಾರೋಗ್ಯಕರವಾದ ಆಹಾರಗಳ ಸೇವನೆ, ಒಟ್ಟಿನಲ್ಲಿ ಹೇಳುವುದಾದರೆ ಹದಗೆಟ್ಟ ಜೀವನ ಶೈಲಿಯಿಂದ ರೋಗಗಳಿಗೆ ಆಹ್ವಾನ ವಿಟ್ಟಂತೆ. ಇದರಿಂದ ಚಿಕ್ಕವಯಸ್ಸಿನಲ್ಲೇ ಕಾಡಬಹುದಾದ ಅಧಿಕ ರಕ್ತದೊತ್ತಡ ಅಥವಾ ಹೈಪರ್ ಟೆನ್ಶನ್ ತೊಂದರೆ ಸಾಮಾನ್ಯವಾಗಿ ಬಿಟ್ಟಿದೆ.

ಸದ್ದಿಲ್ಲದೆ ಸಮಸ್ಯೆ ಹೆಚ್ಚಿಸುತ್ತದೆ?

ಸದ್ದಿಲ್ಲದೆ ಸಮಸ್ಯೆ ಹೆಚ್ಚಿಸುತ್ತದೆ?

ರಕ್ತದೊತ್ತಡದ ತೊಂದರೆಗೊಳಪಟ್ಟಿದ್ದಲ್ಲಿ, ಡಯಟ್ ನಿಂದ ಹಿಡಿದು ಧ್ಯಾನ, ವ್ಯಾಯಾಮದ ತನಕ ಗಮನಹರಿಸಿ ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಸೂಕ್ತ. ಸಾಮಾನ್ಯವಾಗಿ ಈ ರೋಗ ಲಕ್ಷಣವು ಹೆಚ್ಚಾದಲ್ಲಿ, ಯಾವುದೇ ರೀತಿಯ ದೈಹಿಕವಾದ ಮುನ್ನೆಚ್ಚರಿಕೆಯ ಲಕ್ಷಣಗಳು ಕಂಡುಬರುವುದಿಲ್ಲ. ಹೀಗಾಗಿ, ಎಷ್ಟೋ ಬಾರಿ ಇದು ಸದ್ದಿಲ್ಲದೆಯೇ ಹೆಚ್ಚಾಗಿ, ಗೊತ್ತಿಲ್ಲದಂತೆಯೇ ಸಾವಿಗೆ ಕಾರಣವಾಗಬಹುದು.ಯಾವುದೇ ರೀತಿಯ ರೋಗ ಲಕ್ಷಣವೂ ಕಂಡು ಬರದಿರುವ ಕಾರಣ ಅಧಿಕ ರಕ್ತದೊತ್ತಡವು ವಯಸ್ಸಿನ ಪರಿಮಿತಿ ಇಲ್ಲದೆಯೇ ನಮ್ಮ ಅರಿವಿನ ಶಕ್ತಿಯನ್ನು ಕೂಡ ಕುಗ್ಗಿಸಿ ಬಿಡುತ್ತದೆ ಎಂಬುದು ನಿಮಗೆ ಗೊತ್ತೇ?

ವರದಿ ಏನು ಹೇಳುತ್ತದೆ?

ವರದಿ ಏನು ಹೇಳುತ್ತದೆ?

ಹೆಲ್ತ್ ಲೈನ್ ವರದಿಯ ಪ್ರಕಾರ ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ಜರ್ನಲ್ ಹೈಪರ್ ಟೆನ್ಶನ್ ಲೇಖನವೊಂದರಲ್ಲಿ, ಸ್ವಲ್ಪ ಮಟ್ಟಿಗೆ ಏರಿದ ರಕ್ತ ದುತ್ತಡಕ್ಕೂ, ಅತಿ ವೇಗದಲ್ಲಿ ಕುಗ್ಗಿದ ಅರಿವಿನ ಶಕ್ತಿಗೂ ಸಂಬಂಧವಿದೆ ಇದು ಮಧ್ಯ ವರ್ಗದ ವಯಸ್ಸಿನವರಿನಿಂದ ಹಿಡಿದು ವಯಸ್ಸಾದವರ ತನಕವೂ ಅನ್ವಯಿಸುತ್ತದೆ, ಎಂಬ ಅಂಶವನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ.

ಸಾಂಧೀ ಮಾರಿಯಾ ಬರೆಟ್ಟೊ, ಪಿ ಎಚ್ ಡಿ ಪ್ರೊಫೆಸರ್ ಆಫ್ ಮೆಡಿಸಿನ್ ಯೂನಿವರ್ಸಿಡೇಡ್ ಫೆಡರಲ್ ಡಿ ಮಿನಾಸ್ ಗೆರೈಸ್ ಬೆಲೊ ಹಾರಿಜಾಂಟೆ, ಬ್ರೆಜಿಲ್ ನಲ್ಲಿ ಮತ್ತು ಅಧ್ಯಯನದ ಲೇಖಕರಲ್ಲಿ ಒಬ್ಬರಾಗಿರುವ ಇವರು ಪ್ರೆಸ್ ಬಿಡುಗಡೆಯಲ್ಲಿ ," ಚಿಕ್ಕ ವಯಸ್ಸಿನಲ್ಲೇ ರಕ್ತದ ಒತ್ತಡವು ಹೆಚ್ಚಾದಲ್ಲಿ ಇದರ ಅಡ್ಡ ಪರಿಣಾಮಗಳು ಅರಿವಿನ ಶಕ್ತಿಯನ್ನು ಹಾಗೂ ಕಾರ್ಯವಿಧಾನವನ್ನು ಕುಗ್ಗಿಸಿ ತೀವ್ರತೆಯನ್ನು ಹೆಚ್ಚಿಸುತ್ತದೆ " ಎಂಬುದನ್ನು ನಾವು ಪ್ರಾರಂಭದಲ್ಲಿ ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ.

ಹರೆಯದ ಯಾವುದೇ ಹಂತದಲ್ಲಿ ಪರಿಣಾಮಕಾರಿಯಾಗಿ ಸೂಕ್ತ ಚಿಕಿತ್ಸೆ ಮತ್ತು ಪತ್ತೆ ಹಚ್ಚುವುದು ಅವಶ್ಯಕ, ಇದರಿಂದ ಅರಿವಿನ ಕಾರ್ಯವಿಧಾನವನ್ನು ಕಾಪಾಡಿಕೊಳ್ಳಬಹುದು ಎಂದೂ ಹೇಳಿದ್ದಾರೆ.

ವಯಸ್ಕರಲ್ಲಿ ಶಕ್ತಿಯನ್ನು ಕ್ಷೀಣಿಸುತ್ತದೆ

ವಯಸ್ಕರಲ್ಲಿ ಶಕ್ತಿಯನ್ನು ಕ್ಷೀಣಿಸುತ್ತದೆ

ವಯಸ್ಕರಲ್ಲಿ, ನಿಯಂತ್ರಣವಿಲ್ಲದ ಅಧಿಕ ರಕ್ತ ಒತ್ತಡವು ಅವರ ನೆನಪಿನ ಶಕ್ತಿಯನ್ನು ಕ್ಷೀಣಿಸುದಷ್ಟೇ ಅಲ್ಲದೆ ಅರಿವಿನ ಕಾರ್ಯವಿಧಾನವನ್ನು ಕುಗ್ಗಿಸಿ ಬಿಡುತ್ತದೆ, ಆದರೆ ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿರುವ ವಯಸ್ಕರಲ್ಲಿ ಈ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಕಡಿಮೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಈ ಸಂಶೋಧನೆಯಲ್ಲಿ 7,000 ವಯಸ್ಕರನ್ನು ಒಳಪಡಿಸಿದ್ದು,ಅದರಲ್ಲಿ ಭಾಗವಹಿಸಿರುವವರ ಸರಾಸರಿ ಪ್ರಾರಂಭಿಕ ಹಂತ 59 ಎಂದು ತಿಳಿಸಿದ್ದಾರೆ.ಅಧಿಕ ರಕ್ತದೊತ್ತಡಕ್ಕೆ ಯಾರು ಔಷಧಿಯನ್ನು ತೆಗೆದುಕೊಂಡಿಲ್ಲವೋ, ಅವರ ನೆನಪಿನ ಶಕ್ತಿ, ಕಾರ್ಯನಿರ್ವಹಣೆಯ ಸಾಮರ್ಥ್ಯ ಮತ್ತು ಮೌಖಿಕ ಶಕ್ತಿ ಅತಿ ವೇಗದಲ್ಲಿ ಕುಗ್ಗಿದೆ ಎಂದು ಸತತ ನಾಲ್ಕು ವರ್ಷಗಳ ಪರೀಕ್ಷೆಗಳ ನಂತರ ಸಂಶೋಧಕರು ದೃಢಪಡಿಸಿದ್ದಾರೆ.

ಈ ಅಂಕಿ ಅಂಶಗಳನ್ನು, ಸಂಶೋಧಕರ ಅಧ್ಯಯನವನ್ನು ಗಮನದಲ್ಲಿರಿಸಿಕೊಂಡು ಅಧಿಕ ರಕ್ತ ಒತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದೇ ಇದಕ್ಕೆ ಪರಿಹಾರ ಎಂಬುದನ್ನು ಮನಗಾಣಬೇಕಿದೆ.

English summary

high blood pressure can affect memory cognitive function at any age

Researchers says high blood pressure can affect memory, cognitive function at any age. So it is very important to treat hypertension effectively.
Story first published: Saturday, November 12, 2022, 14:26 [IST]
X
Desktop Bottom Promotion