For Quick Alerts
ALLOW NOTIFICATIONS  
For Daily Alerts

ಅಪಾಯಕಾರಿಯಾದ ಲಿವರ್‌ ಕಾಯಿಲೆ ಹೆಪಟೈಟಿಸ್ ಬಿ ಲಕ್ಷಣಗಳೇನು?

|

ಜುಲೈ 28ನ್ನು ಹೆಪಟೈಟಿಸ್ ಕುರಿತು ಜಾಗೃತಿ ಮೂಡಿಸಲು ವಿಶ್ವ ಹೆಪಟೈಟಿಸ್ ದಿನವನ್ನಾಗಿ ಆಚರಿಸಲಾಗುವುದು.

ಹೆಪಟೈಟಿಸ್ ಎಂದರೇನು?

ಹೆಪಟೈಟಿಸ್ ಎನ್ನುವುದು ಲಿವರ್‌ಗೆ ತಗುಲುವ ಸೋಂಕು ಆಗಿದೆ. ಇದು ಲಿವರ್‌ನಲ್ಲಿ ಉರಿಯೂತ ಉಂಟು ಮಾಡುವುದು. ಇದು ಲಿವರ್‌ಗೆ ಹಾನಿಯುಂಟು ಮಾಡುವುದರ ಜೊತೆಗೆ ಕ್ಯಾನ್ಸರ್ ಕೂಡ ಉಂಟು ಮಾಡುವುದು. ಹೆಪಟೈಟಿಸ್ ಬಿ ವೈರಸ್‌ ತಗುಲಿದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು, ದೇಹದ ತೂಕ ಕಡಿಮೆಯಾಗುವುದು. ಕ್ಯಾನ್ಸರ್ ಪಿತ್ತ ಜನಕಾಂಗಕ್ಕೆ ಹರಡಿ ದೇಹದ ಇತರ ಭಾಗಗಳಿಗೂ ಹರಡುತ್ತದೆ ಇದಕ್ಕೆ ಚಿಕಿತ್ಸೆ ಪಡೆಯದೇ ಇದ್ದರೆ ಅಪಾಯ ತಪ್ಪಿದ್ದಲ್ಲ.

ಹೆಪಟೈಟಿಸ್ ಬಿ ಹರಡುವ ಕಾಯಿಲೆ ಆಗಿದ್ದು ಹೆಪಟೈಟಿಸ್ ರೋಗಿಯ ರಕ್ತ, ದೇಹದ ದ್ರವದ ಮೂಲಕ ಹರಡುತ್ತದೆ. ಇದು ಹುಟ್ಟುವಾಗಲೇ ಬಂದಿದ್ದರೆ ಗುಣವಾಗುವುದು ಕಷ್ಟ.

ಹೆಪಟೈಟಿಸ್ ಬಿ ಲಕ್ಷಣಗಳೇನು?

ಹೆಪಟೈಟಿಸ್ ಬಿ ಲಕ್ಷಣಗಳೇನು?

  • ಕಾಮಲೆ ರೋಗ: ನಿಮ್ಮ ತ್ವಚೆ, ಕಣ್ಣುಗಳು ಹಾಗೂ ಮೂತ್ರ ಹಳದಿ ಬಣ್ಣಕ್ಕೆ ತಿರುಗುವುದು
  • ಬಣ್ಣ ರಹಿತ ಮಲ
  • ಜ್ವರ
  • ವಾರ ಅಥವಾ ತಿಂಗಳಿನಿಂದ ತಲೆಸುತ್ತು
  • ಹೊಟ್ಟೆ ಸಮಸ್ಯೆ ಅಂದರೆ ಹಸಿವು ಇಲ್ಲದಿರುವುದು, ತಲೆಸುತ್ತು, ವಾಂತಿ
  • ಕಿಬ್ಬೊಟ್ಟೆ ನೋವು
  • ಈ ರೋಗ ಮತ್ತೊಂದು ಭಯಾನಕ ಸಂಗತಿ ಎಂದರೆ ರೋಗ ಬಂದು ಆರು ತಿಂಗಳವರೆಗೆ ಏನೂ ಲಕ್ಷಣಗಳು ಕಾಣಿಸುವುದೇ ಇಲ್ಲ, ಹೆಚ್ಚಿನವರಿಗೆ ಮೊದಲಿಗೆ ಈ ಕಾಯಿಲೆ ಬಂದಿದೆ ಎಂಬುವುದು ಗಮನಕ್ಕೂ ಬಂದಿರುವುದಿಲ್ಲ. ಈ ಕಾಯಿಲೆ ಬಗ್ಗೆ ರಕ್ತ ಪರೀಕ್ಷೆ ಮಾಡಿಸಿದಾಗ ಗೊತ್ತಾಗುತ್ತದೆ.

     ಹೆಪಟೈಟಿಸ್ ಕಾಯಿಲೆಗೆ ಪ್ರಮುಖ ಕಾರಣವೇನು?

    ಹೆಪಟೈಟಿಸ್ ಕಾಯಿಲೆಗೆ ಪ್ರಮುಖ ಕಾರಣವೇನು?

    ಹೆಪಟೈಟಿಸ್ ಕಾಯಿಲೆಯು ಹೆಪಟೈಟಿಸ್‌ ಬಿ ಎಂಬ ವೈರಸ್‌ನಿಂದ ಬರುತ್ತದೆ. ಸೆಂಟ್ರಲ್ ಡಿಸೀಜ್ ಕಂಟ್ರೋಲ್‌ ಪ್ರಕಾರ ಈ ಕಾಯಿಲೆ ಹರಡುವ ಪ್ರಮಾಣ ಕಡಿಮೆಯಾಗಿದೆ. 1980ರಲ್ಲಿ 2 ಲಕ್ಷ ಜನರಲ್ಲಿದ್ದ ಈ ಕಾಯಿಲೆ 2016ರಲ್ಲಿ 20,000 ಸಾವಿರ ಜನರಿಗೆ ಇಳಿದಿರುವುದು ಒಳ್ಳೆಯ ಸೂಚನೆಯಾಗಿದೆ. ಇಪ್ಪತ್ತು ವಯಸ್ಸಿನಿಂದ 50 ವರ್ಷದ ಒಳಗಿನವರಿಗೆ ಈ ಕಾಯಿಲೆ ಬರುವ ಸಾಧ್ಯತೆ ಹೆಚ್ಚು.

    ಈ ಕಾಯಿಲೆ ಹರಡುವ ವಿಧಾನಗಳು

    ಈ ಕಾಯಿಲೆ ಹರಡುವ ವಿಧಾನಗಳು

    • ಅಸುರಕ್ಷಿತ ಲೈಂಗಿಕ ಕ್ರಿಯೆ: ಒಬ್ಬರಿಗಿಂತ ಅಧಿಕ ಜನರಲ್ಲಿ ಕಾಂಡೋಮ್ ಬಳಸದೆ ಅಸುರಕ್ಷಿತ ಲೈಂಗಿಕ ಸಂಪರ್ಕ ಹೊಂದಿದ್ದರೆ ಈ ರೋಗ ಬರುವುದು.
    • ರೋಗಿಯ ರಕ್ತ ತಗುಲಿದರೆ: ಆಸ್ಪತ್ರೆಯಲ್ಲಿ ಕೆಲಸ ಮಾಡುವವರಿಗೆ ಈ ರೀತಿಯಲ್ಲಿ ಸೋಂಕು ಹರಡುವ ಸಾಧ್ಯತೆ ಹೆಚ್ಚು. ರೋಗಿಗೆ ಸೂಜಿ ಚುಚ್ಚುವಾಗ ಅಚಾನಕ್ ಆ ಸೂಜಿ ಅಥವಾ ರಕ್ತ ತಗುಲಿದರೆ ಹರಡುವ ಸಾಧ್ಯತೆ ಇದೆ.
    • ತಾಯಿಂದ ಮಗುವಿಗೆ: ತಾಯಿಗೆ ಹೆಪಟೈಟಿಸ್ ಬಿ ಇದ್ದರೆ ಹುಟ್ಟುವಾಗಲೇ ಮಗುವಿಗೂ ಬರುತ್ತದೆ.
    • ಒಂದೇ ಸೂಜಿ ಬಳಕೆ ಮಾಡಿದರೆ: ಮಾದಕ ವ್ಯಸನಿಗಳು ಒಂದೇ ಸೂಜಿ ಬಳಕೆ ಮಾಡುವುದರಿಂದ ಈ ರೋಗ ಹರಡುವುದು.
    • ಹೆಪಟೈಟಿಸ್ ಬಿ ಪತ್ತೆ ಹಚ್ಚುವುದು ಹೇಗೆ? ಹೆಪಟೈಟಿಸ್ ಬಿ ಗುಣಪಡಿಸಬಹುದೇ?

      ಹೆಪಟೈಟಿಸ್ ಬಿ ಪತ್ತೆ ಹಚ್ಚುವುದು ಹೇಗೆ? ಹೆಪಟೈಟಿಸ್ ಬಿ ಗುಣಪಡಿಸಬಹುದೇ?

      ಲಿವರ್‌ನಲ್ಲಿ ಉರಿಯೂತದ ಸಮಸ್ಯೆಯಿದ್ದರೆ ವೈದ್ಯರು ರಕ್ತ ಪರೀಕ್ಷೆ ಮಾಡುತ್ತಾರೆ. ಆಗ ಅತ್ಯಧಿಕ ಪ್ರಮಾಣದ ಲಿವರ್‌ ಎಂಜೈಮ್ಸ್ ಕಂಡು ಬಂದರೆ ಹೆಪಟೈಟಿಸ್ ಬಿ ಇದೆ ಎಂದು ತಿಳಿದು ಬರುತ್ತದೆ.

      ಹೆಪಟೈಟಿಸ್ ಬಿ ಗುಣಪಡಿಸಬಹುದೇ?

      ಹೆಪಟೈಟಿಸ್ ಬಿ ಗುಣಪಡಿಸಬಹುದೇ?

      ಹೆಪಟೈಟಿಸ್ ಬಿ ಗುಣಪಡಿಸಲು ಸಾಧ್ಯವಿಲ್ಲ. ಆದರೆ ಸೂಕ್ತ ತೆಗೆದುಕೊಂಡರೆ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿ ಇಡಬಹುದು. ಹೆಪಟೈಟಿಸ್ ಬಿ ಇರುವವರು ಆರು ತಿಂಗಳಿಗೊಮ್ಮೆ ರಕ್ತ ಪರೀಕ್ಷೆ ಮಾಡಿಸಿ ಆರೋಗ್ಯ ಸ್ಥಿತಿಯ ಬಗ್ಗೆ ತಿಳಿದುಕೊಳ್ಳಬೇಕು. ಹೆಪಟೈಟಿಸ್ ಬಿ ಚುಚ್ಚುಮದ್ದು ಈ ರೋಗ ಬರುವುದನ್ನು ತಡೆಯುವಲ್ಲಿ ಪರಿಣಾಮಕಾರಿಯಾಗಿದ್ದು ಇದನ್ನು 3 ಡೋಸೇಜ್‌ಗಳಾಗಿ ಆರು ತಿಂಗಳ ಕೋರ್ಸ್‌ನಲ್ಲಿ ನೀಡಲಾಗುವುದು.

      ಸೆಂಟರ್ಸ್ ಫಾರ್ ಡಿಸೀಜ್ ಕಂಟ್ರೋಲ್ 19 ವರ್ಷದ ಒಳಗಿನ ವಯಸ್ಸಿನವರು ಈ ಚುಚ್ಚುಮದ್ದು ತೆಗೆದುಕೊಳ್ಳುತ್ತಿದ್ದರೆ, ತೆಗೆದುಕೊಳ್ಳುವಂತೆ ಸಲಹೆ ನೀಡಿದೆ. ಇದು ಈ ರೋಗ ಬರುವುದನ್ನು ತಡೆಯುವಲ್ಲಿ ಸಹಕಾರಿಯಾಗಿದೆ.

English summary

Hepatitis B Symptoms, Causes and Treatment

Here are what is Hepatitis B, its symptoms, causes and treatment, Read on
X
Desktop Bottom Promotion