For Quick Alerts
ALLOW NOTIFICATIONS  
For Daily Alerts

ನಗೋದಕ್ಕೂ ಕ್ಲಬ್‌ ಬೇಕೆ? ನಗು ಹೇಗಿದ್ದರೆ ಆರೋಗ್ಯಕರ

By ಲವಕುಮಾರ್ ಬಿ ಎಂ
|

ನಗುವುದಕ್ಕೆ ಜಿಪುಣತನವೇಕೆ? ನೋವ ನುಂಗಿ ನಗುವ ಚೆಲ್ಲಿ ಬಿಡೋಣ.. ಈ ಜಗತ್ತಿನಲ್ಲಿ ಯಾರಿಗೆ ಕಷ್ಟವಿಲ್ಲ ಹೇಳಿ? ಕಷ್ಟ ಬಂತು ಅಂಥ ಕೊರಗುವುದಕ್ಕಿಂತ ಎಲ್ಲವನ್ನು ಬದಿಗೊತ್ತಿ ನಗುವುದೇ ನಿಜವಾದ ಬದುಕು..

ನಮ್ಮ ಒತ್ತಡದ ಬದುಕಿನಲ್ಲಿ ಎಲ್ಲವನ್ನೂ ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದೇವೆ. ಈ ಗಂಭೀರತೆ ಮತ್ತು ಅನಿವಾರ್ಯತೆ ನಮ್ಮ ನಗುವನ್ನು ನಮಗೆ ಗೊತ್ತಿಲ್ಲದಂತೆ ಕೊಂದು ಹಾಕಿದೆ. ಮುಖದ ಮೇಲಿನ ನಗುವಿಗೆ ಗ್ರಹಣ ಬಡಿದಂತೆ ಮಾಡಿದೆ. ಹೀಗಾಗಿ ಬಹಳಷ್ಟು ಜನ ಮನಸ್ಸಿನಿಂದ ನಗದೆ ಬಲತ್ಕಾರವಾಗಿ ಮುಖದ ಮೇಲೆ ನಗು ತಂದುಕೊಳ್ಳುತ್ತಿದ್ದಾರಷ್ಟೆ.

ನಗುವುದಕ್ಕೆ ಜಿಪುಣತನವೇಕೆ?

ನಗುವುದಕ್ಕೆ ಜಿಪುಣತನವೇಕೆ?

ನೋವ ನುಂಗಿ ನಗುವ ಚೆಲ್ಲಿ ಬಿಡೋಣ.. ಈ ಜಗತ್ತಿನಲ್ಲಿ ಯಾರಿಗೆ ಕಷ್ಟವಿಲ್ಲ ಹೇಳಿ? ಕಷ್ಟ ಬಂತು ಅಂಥ ಕೊರಗುವುದಕ್ಕಿಂತ ಎಲ್ಲವನ್ನು ಬದಿಗೊತ್ತಿ ನಗುವುದೇ ನಿಜವಾದ ಬದುಕು..

ನಮ್ಮ ಒತ್ತಡದ ಬದುಕಿನಲ್ಲಿ ಎಲ್ಲವನ್ನೂ ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದೇವೆ. ಈ ಗಂಭೀರತೆ ಮತ್ತು ಅನಿವಾರ್ಯತೆ ನಮ್ಮ ನಗುವನ್ನು ನಮಗೆ ಗೊತ್ತಿಲ್ಲದಂತೆ ಕೊಂದು ಹಾಕಿದೆ. ಮುಖದ ಮೇಲಿನ ನಗುವಿಗೆ ಗ್ರಹಣ ಬಡಿದಂತೆ ಮಾಡಿದೆ. ಹೀಗಾಗಿ ಬಹಳಷ್ಟು ಜನ ಮನಸ್ಸಿನಿಂದ ನಗದೆ ಬಲತ್ಕಾರವಾಗಿ ಮುಖದ ಮೇಲೆ ನಗು ತಂದುಕೊಳ್ಳುತ್ತಿದ್ದಾರಷ್ಟೆ.

 ನಗೋದಕ್ಕೂ ಕ್ಲಬ್‌ಗೆ ಹೋಗಬೇಕಾ?

ನಗೋದಕ್ಕೂ ಕ್ಲಬ್‌ಗೆ ಹೋಗಬೇಕಾ?

ನಮ್ಮಲ್ಲೊಂದು ಕೆಟ್ಟ ಮನೋಭಾವವಿದೆ ಅದೇನೆಂದರೆ ನಾವು ನಗದಿದ್ದರೂ ಬೇರೆಯವರು ನಗುನಗುತ್ತಾ ಇರುವುದನ್ನು ಮಾತ್ರ ಸಹಿಸೋಕೆ ಆಗಲ್ಲ. ಅಷ್ಟೇ ಅಲ್ಲ ಅವರು ನೋಡಿ ದಿನಾಲೂ ನಗುತ್ತಲೇ ಇರುತ್ತಾರೆ. ಇದ್ರೆ ಅವರಂತೆ ಇರಬೇಕು ಎಂಬ ರಾಗವನ್ನು ಎಳೆದು ಬಿಡುತ್ತೇವೆ.

ಹಾಗೆನೋಡಿದರೆ ನಗು ಎಂಬುದು ಹಣ ನೀಡಿ ಪಡೆಯುವಂತಹದ್ದಲ್ಲ. ಅದನ್ನು ನಾವು ನಮ್ಮಿಂದಲೇ ನಾವೇ ಪಡೆದುಕೊಳ್ಳಬೇಕಾಗಿದೆ. ಆದರೆ ದುರಂತವೆಂದರೆ ಇವತ್ತು ನಗುವನ್ನು ಬಲತ್ಕಾರವಾಗಿ ಪಡೆದುಕೊಳ್ಳುವಂತಹ ಪರಿಸ್ಥಿತಿಗೆ ಬಂದು ನಿಂತಿದ್ದೇವೆ. ಅದಕ್ಕಾಗಿಯೇ ಕೆಲವೆಡೆ ನಗುವಿನ ಕ್ಲಬ್‌ಗಳು ಹುಟ್ಟಿಕೊಂಡಿವೆ. ಸದಾ ದುಡಿಮೆಯಲ್ಲಿಯೇ ಇರುವವರು ಕ್ಲಬ್‌ಗೆ ಹೋಗಿ ನಕ್ಕು ಬರುವಂತಹ ದುಸ್ಥಿತಿಗೆ ತಲುಪಿದ್ದೇವೆ.

ನಗುವನ್ನು ನುಂಗಿದ ಯಾಂತ್ರಿಕ ಬದುಕು

ನಗುವನ್ನು ನುಂಗಿದ ಯಾಂತ್ರಿಕ ಬದುಕು

ಇವತ್ತಿನ ಯಾಂತ್ರಿಕ ಬದುಕು ದೈವದತ್ತವಾಗಿ ಬಂದ ನಗುವನ್ನು ನುಂಗಿ ನೀರು ಕುಡಿಯುತ್ತಾ ಹೋಗುತ್ತಿದೆ. ಹಣದ ವ್ಯಾಮೋಹಕ್ಕೆ ಬಿದ್ದ ಮಂದಿ ಸದಾ ದುಡಿಮೆಯಲ್ಲಿಯೇ ತೊಡಗಿರುತ್ತಾರೆ. ಕೆಲಸ ಕಾರ್ಯಗಳಲ್ಲಿ ಲೀನವಾಗಿರುವ ಕಾರಣ ನಗುವುದಕ್ಕೂ ಸಮಯ ಇಲ್ಲದಾಗಿದೆ. ಒತ್ತಡ, ಆತಂಕ, ಕಳವಳ, ಪೈಪೋಟಿಗಳ ನಡುವೆ ನಗು ತನ್ನಿಂದ ತಾನೇ ದೂರ ಸರಿದು ಬಿಟ್ಟಿದೆ.

ಹಣದಿಂದಲೇ ಎಲ್ಲವನ್ನೂ ಅಳೆಯುವ ಕೆಟ್ಟ ಸಂಸ್ಕೃತಿಯಿಂದಾಗಿ ನಕ್ಕು ಮಾತನಾಡಿಸುವ ಸಂಪ್ರದಾಯ ದೂರವಾಗಿದ್ದು, ನಗು ಸಹ ವ್ಯವಹಾರಿಕ ಎಂಬಂತೆ ಭಾಸವಾಗ ತೊಡಗಿದೆ. ಇವತ್ತಿಗೂ ಅಷ್ಟೆ. ನಗುವಿನಿಂದ ನಮಗಿರುವ ಉಪಯೋಗದ ಬಗ್ಗೆ ಬಹಳಷ್ಟು ಮಂದಿ ತಿಳಿದೇ ಇಲ್ಲ. ಹಾಗಾಗಿ ಅವರು ಒಂದಲ್ಲ ಒಂದು ರೀತಿಯಲ್ಲಿ ಸೋಲುತ್ತಿದ್ದಾರೆ. ವ್ಯಾಪಾರ, ವ್ಯವಹಾರದಲ್ಲಿ ತೊಡಗಿರುವವರಿಗೆ 'ನಗುವೂ' ಒಂದು ಬಂಡವಾಳವೇ...

ನಾವೇಕೆ ನಗಬೇಕು? ಅದರಲ್ಲೇನು ಉಪಯೋಗ?

ನಾವೇಕೆ ನಗಬೇಕು? ಅದರಲ್ಲೇನು ಉಪಯೋಗ?

ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ವ್ಯಾಪಾರ ಆರಂಭಿಸಿದ್ದೀರಿ ಅಂದುಕೊಳ್ಳಿ. ನಿಮ್ಮಲ್ಲಿಗೆ ಬರುವ ಗ್ರಾಹಕರೊಂದಿಗೆ ನಗು ಮೊಗದಿಂದ ಮಾತನಾಡದೆ ಹೋದರೆ ಗ್ರಾಹಕರು ಖಂಡಿತಾ ಮತ್ತೊಮ್ಮೆ ನಿಮ್ಮ ಬಳಿಗೆ ಬರಲಾರರು. ಹಾಗಾದರೆ ನಗುವಿನ ಮಹತ್ವವೇನು ಎಂಬುದು ಗೊತ್ತಾಯಿತಲ್ಲವೆ?

ಆರೋಗ್ಯದ ದೃಷ್ಠಿಯಿಂದಲೂ ನಗು ಸಾಕಷ್ಟು ಉಪಯೋಗಕ್ಕ ಬರುತ್ತದೆ. ಶರೀರದಲ್ಲಿರುವ ಎಂಡಾರ್ಫಿನ್ಸ್ ಎಂಬ ರಾಸಾಯನಿಕ ಕಣಗಳು ನಗುವುದರಿಂದ ಅಧಿಕವಾಗಿ ಬಿಡುಗಡೆ ಹೊಂದುತ್ತದೆ. ಈ ರಾಸಾಯನಿಕ ಶರೀರದಲ್ಲಿರುವ ನೋವುಗಳನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ. ಎಂಡಾರ್ಫಿನ್ಸ್ ರಾಸಾಯನಿಕಕ್ಕೆ ಮಾಂಸ ಖಂಡಗಳ, ಕೀಲು, ತಲೆ ನೋವನ್ನು ಕಡಿಮೆ ಮಾಡುವ ಶಕ್ತಿಯೂ ಇದೆಯಂತೆ.

ನಗು ಮನಸ್ಸಿನ ಖಿನ್ನತೆಗೂ ಔಷಧಿ

ನಗು ಮನಸ್ಸಿನ ಖಿನ್ನತೆಗೂ ಔಷಧಿ

ನಿದ್ರಾಹೀನತೆಯಿಂದ ಬಳಲುವವರು ನಿದ್ದೆ ಮಾತ್ರೆಗೆ ಮಾರು ಹೋಗದೆ, ನಗುವಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದೇ ಆದರೆ ನಿದ್ದೆ ತನ್ನಿಂದ ತಾನಾಗಿಯೇ ಬರುತ್ತದೆ. ರಕ್ತದೊತ್ತಡ, ಹೃದಯಕ್ಕೆ ಸಂಬಂಧಿಸಿದ ರೋಗಗಳು ಒತ್ತಡದಿಂದ ಬರುತ್ತವೆ. ನಗುವುದರಿಂದ ದೇಹದಲ್ಲಿನ ರಕ್ತನಾಳಗಳಲ್ಲಿ ರಕ್ತ ಸಂಚಾರ ಅಧಿಕವಾಗಿ ರಕ್ತದೊತ್ತಡ ಕಡಿಮೆಯಾಗುತ್ತದೆ. ಖಿನ್ನತೆ, ಒತ್ತಡ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಬಲಹೀನಗೊಳಿಸುತ್ತದೆ ಎಂಬುದು 'ಸೈಕೋನ್ಯೂರೋ ಇಮ್ಯೂನಾಲಜಿಸ್ಟ್'ಗಳ ಪರಿಶೋಧನೆಗಳಲ್ಲಿ ಬೆಳಕಿಗೆ ಬಂದಿದೆ. ನಗುವುದರಿಂದ ನಮ್ಮಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿ, ನಮ್ಮ ಶರೀರದೊಳಗೆ ಪ್ರವೇಶಿಸಿ ರೋಗ ಹರಡುವ ಬ್ಯಾಕ್ಟಿರಿಯಾಗಳನ್ನು ಸಮರ್ಥವಾಗಿ ನಾಶಮಾಡುತ್ತದೆ.

ನಗುವಿನಿಂದ ಸಿಗುತ್ತೆ ಮುಖಕ್ಕೆ ವ್ಯಾಯಾಮ

ನಗುವಿನಿಂದ ಸಿಗುತ್ತೆ ಮುಖಕ್ಕೆ ವ್ಯಾಯಾಮ

ನಗು ನಮ್ಮೊಳಗಿನ ಅಂಗಾಂಗಳಿಗೆ ರಕ್ತ ಸಂಚಾರವನ್ನು ಹೆಚ್ಚಿಸಿ ಸಾಮರ್ಥ್ಯ ಹೆಚ್ಚಿಸುವಲ್ಲಿ ಸಹಕರಿಸುತ್ತದೆ. ಅಸ್ತಮಾ, ಬ್ರಾಂಕೈಟಿಸ್ ರೋಗಿಗಳಿಗೆ ಒಳ್ಳೆಯ ವ್ಯಾಯಾಮವಾಗಿದ್ದು, ರಕ್ತದಲ್ಲಿನ ಆಮ್ಲಜನಕ ಪ್ರಮಾಣವನ್ನು ನಗು ಹೆಚ್ಚಿಸುತ್ತದೆ. ಜ್ಞಾಪಕ ಶಕ್ತಿ ವೃದ್ದಿಸುವಲ್ಲಿಯೂ ಸಹಕಾರಿ. ನಗು ಮುಖಕ್ಕೊಂದು ವ್ಯಾಯಾಮವೂ ಹೌದು.

ನಗುವಿನಿಂದ ಇಷ್ಟೆಲ್ಲ ಉಪಯೋಗವಿದೆ ಎಂಬುದನ್ನು ತಿಳಿದ ಮೇಲೆಯೂ ನಾವು ತೆಪ್ಪಗಿದ್ದರೆ ಹೇಗೆ? ನಕ್ಕುಬಿಡೋಣ.. ಆದರೆ ಒಂದು ವಿಚಾರ ನೆನಪಿರಲಿ ನಮ್ಮೊಳಗಿನ ನಗು ಸಹಜ, ಪ್ರಾಮಾಣಿಕವಾಗಿರಲಿ ಮತ್ತೊಬ್ಬರನ್ನು ಅಣಕಿಸಿ ನಗುವುದನ್ನು ಯಾವತ್ತೂ ಮಾಡಬೇಡಿ.......

English summary

Health Benefits of Laughter in Kannada

Laugh is very important in life, Here are health benefits of laughter, read on,
X