Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನಿಮಗೆಷ್ಟೇ ಹಸಿವಾಗಿದ್ದರೂ, ಈ ಐದು ವಸ್ತುಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬೇಡಿ!
ಕೆಲವೊಮ್ಮೆ ನಾವು ಬೆಳಿಗ್ಗೆ ಏಳುವಾಗ ತುಂಬಾ ಹಸಿವಿನಿಂದ ಕೂಡಿರುತ್ತೇವೆ. ಆ ಸಮಯದಲ್ಲಿ ನಮಗೆ ಏನು ಸಿಗುತ್ತದೆಯೋ ಅದನ್ನು ಹಿಂದೆ-ಮುಂದೆ ಯೋಚಿಸದೇ ತಿನ್ನಲು ಪ್ರಾರಂಭಿಸುತ್ತೇವೆ. ಆದರೆ ಹಾಗೆ ಮಾಡುವುದರಿಂದ ನಿಮ್ಮ ಅರೋಗ್ಯಕ್ಕೆ ಮಾರಕವಾಗಬಹುದು. ಆಯುರ್ವೇದದ ಪ್ರಕಾರ, ಹೆಚ್ಚು ಹಸಿವು ಆದಾಗ ತಿನ್ನಬಾರದಂತಹ ಎಂದು ಕೆಲವು ವಿಷಯಗಳಿವೆ. ಅವು ಯಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ:
ಖಾಲಿ ಹೊಟ್ಟೆಯಲ್ಲಿ ತಿನ್ನಬಾರದಂತಹ ಕೆಲವು ಆಹಾರಗಳನ್ನು ಈ ಕೆಳಗೆ ನೀಡಲಾಗಿದೆ:

ಪೇರಳೆ:
ಪೇರಳೆಯನ್ನು ನೀವು ಹೆಚ್ಚು ಹಸಿವಾದಾಗ ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು. ಏಕೆಂದರೆ ಇದು ವಿಭಿನ್ನ ಪರಿಸ್ಥಿತಿಗಳಲ್ಲಿ ತಿಂದಾಗ ವಿಭಿನ್ನ ಫಲಿತಾಂಶಗಳನ್ನು ನೀಡುತ್ತದೆ. ಅಂದರೆ, ಚಳಿಗಾಲದಲ್ಲಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪೇರಳೆಯನ್ನು ಸೇವಿಸಿದರೆ, ನಿಮಗೆ ಹೊಟ್ಟೆ ನೋವಿನ ಅನುಭವವಾಗಬಹುದು. ಒಂದು ವೇಳೆ ಬೇಸಿಗೆಯಲ್ಲಿ ಖಾಲಿ ಹೊಟ್ಟೆಯಲ್ಲಿ ಪೇರಳೆಯನ್ನು ಸೇವಿಸದರೆ, ಅದು ಕೆಲವೊಂದು ಆರೋಗ್ಯ ಪ್ರಯೋಜನವನ್ನು ನೀಡುತ್ತದೆ. ಆದ್ದರಿಂದ ಖಾಲಿ ಹೊಟ್ಟೆಯಲ್ಲಿ ಪೇರಳೆ ಸೇವಿಸುವಾಗ ಒಂದು ಬಾರಿ ಯೋಚಿಸುವುದು ಉತ್ತಮ.

ಸೇಬು:
ಪ್ರತಿದಿನ ಸೇಬು ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಎಂಬ ಮಾತನ್ನು ಹಿಂದಿನಿಂದಲೂ ಕೇಳಿಕೊಂಡೇ ಬಂದಿದ್ದೇವೆ. ಆದರೆ ಚಳಿಗಾಲದಲ್ಲಿ ಖಾಲಿ ಹೊಟ್ಟೆಯಲ್ಲಿ ಸೇಬು ತಿನ್ನುವುದರಿಂದ ನಿಮ್ಮ ಬಿಪಿ ಹೆಚ್ಚಾಗುತ್ತದೆ. ನೀವು ಬೆಳಿಗ್ಗೆ ಏನನ್ನೂ ತಿನ್ನದೆ ಸೇಬನ್ನು ಸೇವಿಸಿದರೆ, ನೀವು ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಎದುರಿಸಬೇಕಾಗಬಹುದು. ಆದರೆ ಬೇಸಿಗೆಯಲ್ಲಿ ನೀವು ಖಾಲಿ ಹೊಟ್ಟೆಯಲ್ಲಿ ಸೇಬನ್ನು ತಿನ್ನಬಹುದು. ಇದರಿಂದ ಏನೂ ಸಮಸ್ಯೆಯಾಗುವುದಿಲ್ಲ.

ಟೊಮ್ಯಾಟೋ:
ಟೊಮ್ಯಾಟೋಸ್ ನೈಸರ್ಗಿಕವಾಗಿ ಬಿಸಿಯಾಗಿರುತ್ತದೆ. ಚಳಿಗಾಲದಲ್ಲಿ ನೀವು ಅದನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಬಹುದು, ಆದರೆ ಬೇಸಿಗೆಯಲ್ಲಿ ಹಾಗೆ ಮಾಡುವುದರಿಂದ ಹೊಟ್ಟೆ ಅಥವಾ ಎದೆಯಲ್ಲಿ ಸುಡುವ ಸಂವೇದನೆ ಉಂಟಾಗುತ್ತದೆ. ಇದರಿಂದ ಗ್ಯಾಸ್ಟ್ರಿಕ್ ಅಥವಾ ಅಸಿಡಿಟಿ ಸಮಸ್ಯೆ ಉಂಟಾಗಬಹುದು. ಆದ್ದರಿಂದ ಈ ಕಾಲದಲ್ಲಿ ನೀವು ಬೆಳಿಗ್ಗೆ ಎದ್ದ ಕೂಡಲೇ ಟೊಮೆಟೊ ತಿನ್ನುವುದನ್ನು ತಪ್ಪಿಸಬೇಕು.

ಚಹಾ ಮತ್ತು ಕಾಫಿ:
ಚಹಾ ಅಥವಾ ಕಾಫಿ ಬೆಳಿಗ್ಗೆ ಕುಡಿಯುವುದು ರೂಢಿ. ಆದರೆ ತುಂಬಾ ಹಸಿವಿದ್ದಾಗ ಕೇವಲ ಚಹಾ ಅಥವಾ ಕಾಫಿಯನ್ನು ಮಾತ್ರ ಕುಡಿಯಬೇಡಿ. ಅದರ ಜೊತೆಗೆ ಏನಾದರೂ ತಿಂಡಿ ಸೇವಿಸುವುದು ಉತ್ತಮ. ಕೇವಲ ಚಹಾ ಕಾಫಿಯಷ್ಟೇ ಕುಡಿದರೆ ನಿಮಗೆ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗಬಹುದು. ಆದ್ದರಿಂದ ಈ ವಿಚಾರಗಳಲ್ಲಿ ಎಚ್ಚರಿಕೆ ವಹಿಸಿ.

ಮೊಸರು :
ಬೆಳಿಗ್ಗೆ ಎದ್ದು ಹಸಿವಾದಾಗ ಮೊಸರು ಸೇವಿಸುವ ಜನರು ಅನೇಕರಿದ್ದಾರೆ. ಆದರೆ ಆ ಮೊಸರು ಅವರಿಗೆ ಪ್ರಯೋಜನಕ್ಕೆ ಬದಲು ಹಾನಿ ಮಾಡುವುದೇ ಹೆಚ್ಚು. ಇಂತಹ ಪರಿಸ್ಥಿತಿಯಲ್ಲಿ, ಮೊಸರನ್ನು ಖಾಲಿ ಹೊಟ್ಟೆಯಲ್ಲಿ ಬೆಳಿಗ್ಗೆ ಸೇವಿಸುವುದನ್ನು ತಪ್ಪಿಸಬೇಕು, ಇಲ್ಲದಿದ್ದರೆ ನಿಮ್ಮ ಆರೋಗ್ಯವು ಹದಗೆಡಬಹುದು.



Click it and Unblock the Notifications
