Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ಕಾಯಿಲೆ ಬಂದಾಗ ಈ ಜ್ಯೂಸ್‌ಗಳನ್ನು ಕುಡಿದರೆ ಬೇಗನೆ ಚೇತರಿಸಿಕೊಳ್ಳುವಿರಿ
ನಮಗೆ ಕಾಯಿಲೆ ಬಂದಾಗ ಕಾಯಿಲೆ ಗುಣವಾದರೂ ಅದರ ಸುಸ್ತು, ಮೈಕೈ ನೋವು ಹೋಗಲು ಒಂದೆರಡು ದಿನ ಬೇಕು, ಇನ್ನು ಕೆಲವೊಮ್ಮೆ ವಾರವಾದರೂ ಸುಸ್ತು ಕಡಿಮೆಯಾಗುವುದಿಲ್ಲ. ಇನ್ನು ಮಾತ್ರೆ ಇನ್ನೂ ತಗೊಳುತ್ತಿದ್ದರೆ ಸುಸ್ತು ಜೊತೆಗೆ ತುಂಬಾ ನಿದ್ದೆ ಬರುವುದು, ಯಾವಾಗಪ್ಪ ಈ ಸುಸ್ತು ಹೋಗುವುದು ಎಂದು ಅನಿಸುವುದು. ಕಾಯಿಲೆ ಬಂದಾಗ ನೀವು ಎಷ್ಟು ನೀರು ಅಥವಾ ದ್ರವಾಂಶ ತೆಗೆದುಕೊಳ್ಳುತ್ತೀರೋ ಅಷ್ಟು ಬೇಗ ಸುಸ್ತು ಕಡಿಮೆಯಾಗುವುದು.

ಸೂಪ್‌ಗಳು, ಜ್ಯೂಸ್‌ಗಳು ಮೈ ಸುಸ್ತು ಕಡಿಮೆ ಮಾಡುವಲ್ಲಿ ತುಂಬಾನೇ ಸಹಕಾರಿ. ನಾವಿಲ್ಲಿ ಸುಸ್ತು ಬೇಗನೆ ಕಡಿಮೆ ಮಾಡಿ, ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕೆಲವೊಂದು ಜ್ಯೂಸ್‌ಗಳ ಬಗ್ಗೆ ಹೇಳಿದ್ದೇವೆ ನೋಡಿ:

1. ದಾಳಿಂಬೆ ಜ್ಯೂಸ್
ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ ಅಧಿಕವಿರುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ನಿಮಗೆ ದಾಳಿಂಬೆ ಜ್ಯೂಸ್ ಕುಡಿಯುವುದರಿಂದ ವಿಟಮಿನ್ ಸಿ, ವಿಟಮಿನ್ ಎ, ವಿಟಮಿನ್ ಇ ಮತ್ತು ಫಾಲಿಕ್ ಆಮ್ಲ ಇರುವುದರಿಂದ ದೇಹಕ್ಕೆ ಶಕ್ತಿಯನ್ನು ತುಂಬುವುದನ್ನು ಹಾಗೂ ಕಾಯಿಲೆಯಿಂದ ಬೇಗನೆ ಚೇತರಿಸಿಕೊಳ್ಳಲು ಸಹಕಾರಿ.

2. ಟೊಮೆಟೊ-ಕ್ಯಾರೆಟ್ ಜ್ಯೂಸ್
ಈ ಜ್ಯೂಸ್ ಕೂಡ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ತುಂಬಾನೇ ಸಹಕಾರಿ. ಇದರಲ್ಲಿ ವಿಟಮಿನ್ ಸಿ ಮತ್ತು ಎ ಇರುವುದರಿಂದ ಸೋಂಕು ತಡೆಗಟ್ಟಲು ಸಹಕಾರಿಯಾಗಿದೆ.

3. ಗೋಧಿ ಹುಲ್ಲಿನ ಜ್ಯೂಸ್
ಗೋಧಿ ಹುಲ್ಲಿನ ಜ್ಯೂಸ್‌ನಲ್ಲಿ ಕೂಡ ಅನೇಕ ರೋಗಗಳನ್ನು ಗುಣಪಡಿಸುವ ಔಷಧೀಯ ಗುಣಗಳಿವೆ. ಇದರಲ್ಲಿ ವಿಟಮಿನ್‌ಗಳಾ ಎ, ಬಿ-ಕಾಂಪ್ಲೆಕ್ಸ್, ಸಿ, ಇ, ಕೆ ಇದ್ದು , ಗ್ಲುಟೇನ್ ಫ್ರೀ ಆಗಿದೆ. ಗೋಧಿ ಹುಲ್ಲಿನ ಜ್ಯೂಸ್ ಮಾಡಿ ಸ್ವಲ್ಪ ನಿಂಬೆರಸ ಹಾಕಿ ಕುಡಿದರೆ ಮತ್ತಷ್ಟು ಒಳ್ಳೆಯದು.

4. ಕ್ರೇನ್ ಬರ್ರಿ ಜ್ಯೂಸ್
ಕ್ರೇನ್‌ಬರ್ರಿ ಜ್ಯೂಸ್ ಗಂಟಲು ಕೆರೆತ, ಶೀತದ ವಿರುದ್ಧ ಹೋರಾಡುತ್ತದೆ. ಚಕ್ಕೆ, ಲವಂಗ ಹಾಕಿ ಮಾಡುವ ಕ್ರೇನ್ ಬರ್ರಿ ಟೀ ಸಾಮಾನ್ಯ ಶೀತ, ಕೆಮ್ಮಿನ ಸಮಸ್ಯೆಯನ್ನು ಮೈಲಿ ದೂರ ಓಡಿಸುತ್ತದೆ.

5.ಕಲ್ಲಂಗಡಿ ಹಣ್ಣು ಹಾಗೂ ಶಿಯಾ ಬೀಜಗಳನ್ನು ಹಾಕಿ ಮಾಡಿದ ಜ್ಯೂಸ್
ಕಾಯಿಲೆ ಬಿದ್ದಾಗ ಬಾಯಿ ರುಚಿ ಹಾಳಾಗಿರುತ್ತದೆ. ಈ ಜ್ಯೂಸ್ ನಿಮ್ಮ ಬಾಯಿ ರುಚಿ ಹೆಚ್ಚಿಸುವುದು ಹಾಗೂ ಆರೋಗ್ಯಕ್ಕೂ ಒಳ್ಳೆಯದು. ಈ ಜ್ಯೂಸ್‌ನಲ್ಲಿ ವಿಟಮಿನ್ 2, ಸಿ, ಬಿ6 ಇದ್ದು ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಉರಿಯೂತದ ಸಮಸ್ಯೆ ಇರುವವರಿಗೆ ಈ ಜ್ಯೂಸ್ ತುಂಬಾನೇ ಪ್ರಯೋಜನಕಾರಿ.

6. ಕಿವಿ ಜ್ಯೂಸ್
ಕಿವಿ ಹಣ್ಣಿನ ಜ್ಯೂಸ್ ಕೂಡ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿ. ಡೆಂಗ್ಯೂ, ಚಿಕನ್‌ಗುನ್ಯಾ, ಟೈಫಾಯ್ಡ್ ಮುಂತಾದ ಆರೋಗ್ಯ ಸಮಸ್ಯೆ ಉಂಟಾದಾಗ ಕಿವಿ ಹಣ್ಣಿನ ಜ್ಯೂಸ್ ಪ್ರತಿದಿನ ಕುಡಿಯುವುದರಿಂದ ಬೇಗನೆ ಚೇತರಿಸಿಕೊಳ್ಳಲು ಸಹಕಾರಿ. ಕಿವಿ ಹಣ್ಣಿನಲ್ಲಿ ವಿಟಮಿನ್ ಸಿ ರಕ್ತದೊತ್ತಡ ನಿಯಂತ್ರಿಸುತ್ತದೆ, ಗಾಯವಿದ್ದರೆ ಅದು ಬೇಗನೆ ಒಣಗಲು ಸಹಕಾರಿ ಹಾಗೂ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ.



Click it and Unblock the Notifications
