Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ನಿಮ್ಮನ್ನು ಪದೇ ಪದೇ ಕಾಡುವ ಬಾಯಿ ಹುಣ್ಣಿಗೆ ಇಲ್ಲಿದೆ ಸಿಂಪಲ್ ಪರಿಹಾರ
ಶೀತ ಚಳಿಗಾಲದ ದಿನಗಳು ಕ್ರಮೇಣ ಕಡಿಮೆಯಾಗಿ ಬೆಚ್ಚಗಿನ ದಿನಗಳಿಗೆ ದಾರಿ ಮಾಡಿಕೊಡುತ್ತಿವೆ. ಬೇಸಿಗೆಯ ದಿನಗಳು ಶೀಘ್ರದಲ್ಲೇ ಪ್ರಾರಂಭವಾಗಲಿವೆ. ಇದರ ಜೊತೆಗೆ ಅನೇಕ ಆರೋಗ್ಯ ಸಮಸ್ಯೆಗಳು ಬೇಸಿಗೆಯ ಜೊತೆಜೊತೆಗೆ ಬರಲು ಕಾಯುತ್ತಿವೆ. ಬೇಸಿಗೆಯ ದಿನಗಳಲ್ಲಿ ನೀವು ಜಾಗರೂಕರಾಗಿರದಿದ್ದರೆ ನಿರ್ಜಲೀಕರಣದಿಂದಾಗಿ ಹೀಟ್‌ಸ್ಟ್ರೋಕ್ ನಿಂದ ಜೀರ್ಣಕಾರಿ ಸಮಸ್ಯೆಗಳವರೆಗೆ, ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ಭಾರೀ ಪರಿಣಾಮ ಬೀರಲಿದೆ.

ಬೇಸಿಗೆಯಲ್ಲಿ ಕಾಡುವ ಮತ್ತೊಂದು ಸಾಮಾನ್ಯ ಸಮಸ್ಯೆ ಎಂದರೆ ಬಾಯಿಯ ಹುಣ್ಣು. ಇದು ಸಂಭವಿಸಲು ಹಲವು ಕಾರಣಗಳಿವೆ ಹಾಗಂತ ಬೇಸಿಗೆಯಲ್ಲಿ ಮಾತ್ರ ನೀವು ಬಾಯಿ ಹುಣ್ಣನ್ನು ಪಡೆಯುತ್ತೀರಿ ಎಂದರ್ಥವಲ್ಲ. ನೀವು ಅದನ್ನು ವರ್ಷದ ಯಾವುದೇ ಸಮಯದಲ್ಲಿ ಪಡೆಯಬಹುದು. ಆದರೆ, ಬೇಸಿಗೆಯಲ್ಲಿ, ಈ ಸ್ಥಿತಿಯ ವಿರುದ್ಧ ಹೋರಾಡಲು ನಿಮ್ಮಲ್ಲಿ ರಹಸ್ಯ ಆಯುಧವಿದೆ, ಅದೇನಪ್ಪ ಅಂದ್ರೆ ತೆಂಗಿನ ನೀರು. ಇಲ್ಲಿ ನಾವು ಬಾಯಿಹುಣ್ಣಿಗೆ ತೆಂಗಿನಕಾಯಿ ನೀರು ಹೇಗೆ ಸಹಕಾರಿ ಎಂಬುದನ್ನು ಹೇಳಲಾಗಿದೆ.

ಬಾಯಿಯ ಹುಣ್ಣುಗಳು:
ಬಾಯಿಯ ಹುಣ್ಣುಗಳು ಸಾಮಾನ್ಯ ಸಮಸ್ಯೆಯಾಗಿದ್ದು, ವಿಶೇಷವಾಗಿ ನಿಮ್ಮ ದೈನಂದಿನ ಊಟವು ಮಸಾಲೆಯುಕ್ತ ಆಹಾರವನ್ನು ಒಳಗೊಂಡಿದ್ದರೆ ಮತ್ತು ಪೋಷಕಾಂಶಗಳ ಕೊರತೆಯಿದ್ದರೆ ಸಂಭವಿಸುತ್ತವೆ. ನೀವು ಒತ್ತಡಕ್ಕೊಳಗಾದಾಗ ಅಥವಾ ಸಾಕಷ್ಟು ಧೂಮಪಾನ ಮಾಡಿದಾಗಲೂ ಇದು ಸಂಭವಿಸುತ್ತದೆ. ಯಾವುದೇ ಕಾರಣವಿರಲಿ, ಬಾಯಿ ಹುಣ್ಣು ನೋವಿನಿಂದ ಕೂಡಿರುತ್ತದೆ ಮತ್ತು ಮಾತನಾಡುವ ಮತ್ತು ತಿನ್ನುವ ನಿಮ್ಮ ಸಾಮರ್ಥ್ಯದ ಮೇಲೆ ಆಗಾಗ್ಗೆ ಪರಿಣಾಮ ಬೀರುತ್ತದೆ. ಆದರೆ ಎಳನೀರನ್ನು ಮುಂಜಾನೆ ಒಂದು ಅಥವಾ ಎರಡು ದಿನ ಕುಡಿಯುವುದರಿಂದ ಬಾಯಿ ಹುಣ್ಣನ್ನು ಉತ್ತಮವಾಗಿ ಎದುರಿಸಬಹುದು.

ಪರಿಣಾಮಕಾರಿ ಆಯುರ್ವೇದ ಪರಿಹಾರ:
ಆಯುರ್ವೇದದ ಪ್ರಕಾರ, ದೇಹದಲ್ಲಿನ ಹೆಚ್ಚುವರಿ ಶಾಖವು ಬಾಯಿಯ ಹುಣ್ಣುಗಳಾಗಿ ಪರಿವರ್ತನೆಯಾಗುತ್ತವೆ. ವಿಶೇಷವಾಗಿ ಬೇಸಿಗೆಯಲ್ಲಿ, ದೇಹದಲ್ಲಿನ ಹೆಚ್ಚಿನ ಶಾಖದಿಂದಾಗಿ ನಿಮಗೆ ಬಾಯಿ ಹುಣ್ಣು ಬರುವ ಸಾಧ್ಯತೆ ಹೆಚ್ಚು. ಆದ್ದರಿಂದ ಮುಂಜಾನೆ ಒಂದು ಲೋಟ ತೆಂಗಿನ ನೀರನ್ನು ಕುಡಿಯುವುದರಿಂದ ಬಾಯಿ ಹುಣ್ಣನ್ನು ಎದುರಿಸಲು ಸಹಾಯವಾಗುತ್ತದೆ. ತೆಂಗಿನಕಾಯಿ ನೀರು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಶೇಕಡಾ 94 ರಷ್ಟು ನೀರನ್ನು ಹೊಂದಿರುತ್ತದೆ, ಇದು ದೇಹವನ್ನು ತಂಪಾಗಿಸಲು ಸಹಾಯ ಮಾಡುತ್ತದೆ. ದೇಹದ ಹೆಚ್ಚಿನ ಉಷ್ಣತೆಯಿಂದಾಗಿ ನಿಮಗೆ ಬಾಯಿ ಹುಣ್ಣು ಬಂದರೆ, ಬೆಳಗ್ಗೆ ಮತ್ತು ಮಧ್ಯಾಹ್ನ ಖಾಲಿ ಹೊಟ್ಟೆಯಲ್ಲಿ ಎಳನೀರನ್ನು ದಿನಕ್ಕೆ ಎರಡು ಬಾರಿ ಕುಡಿಯಿರಿ. ಎರಡು ಅಥವಾ ಮೂರು ದಿನಗಳವರೆಗೆ ಇದನ್ನು ಮಾಡಿ. ಇದು ನಿಮ್ಮ ದೇಹವನ್ನು ತಣ್ಣಗಾಗಿಸುತ್ತದೆ ಮತ್ತು ಹುಣ್ಣನ್ನು ಗುಣಪಡಿಸಲು ಪರೋಕ್ಷವಾಗಿ ಸಹಾಯ ಮಾಡುತ್ತದೆ.

ಪರಿಣಾಮಕಾರಿ ಆಯುರ್ವೇದ ಪರಿಹಾರ:
ಪರ್ಯಾಯವಾಗಿ, ಬಾಯಿಯ ಹುಣ್ಣುಗಳಿಂದ ಪರಿಹಾರ ಪಡೆಯಲು ನೀವು ತೆಂಗಿನ ಹಾಲು ಮತ್ತು ಅದರೊಂದಿಗೆ ಗಾರ್ಗ್ಲ್ ಅನ್ನು ಸಹ ಬಳಸಬಹುದು. ವಾಸ್ತವವಾಗಿ, ಇದು ಬಾಯಿ ಹುಣ್ಣುಗಳಿಗೆ ಉತ್ತಮವಾದ ಪರಿಹಾರವಾಗಿದೆ. ಇದನ್ನು ಪ್ರತಿದಿನ ಮೂರರಿಂದ ನಾಲ್ಕು ಬಾರಿ ಮಾಡಿ. ನಿಮ್ಮ ನೋವಿನಲ್ಲಿ ಗಮನಾರ್ಹವಾದ ಕಡಿತವಿದೆ ಎಂದು ನೀವು ಗಮನಿಸಬಹುದು.

ಎಳನೀರು ಏಕೆ
ಬಾಯಿಯ ಹುಣ್ಣುಗಳು ಸಾಮಾನ್ಯವಾಗಿ ಪೌಷ್ಟಿಕಾಂಶದ ಕೊರತೆಯ ಪರಿಣಾಮವಾಗಿದೆ . ನಿರ್ಜಲೀಕರಣವು ನಿಮಗೆ ಈ ಸ್ಥಿತಿಯನ್ನು ನೀಡುತ್ತದೆ. ತೆಂಗಿನ ನೀರಿನಲ್ಲಿ ಅಗತ್ಯವಾದ ಖನಿಜಗಳು ಮತ್ತು ಜೀವಸತ್ವಗಳು ತುಂಬಿರುತ್ತವೆ, ಇದು ದೇಹದ ಗುಣಪಡಿಸುವ ಪ್ರಕ್ರಿಯೆಯನ್ನು ವೇಗಗೊಳಿಸಲು ಅಗತ್ಯವಾಗಿರುತ್ತದೆ. ಇದು ಪೌಷ್ಠಿಕಾಂಶದ ಹೈಡ್ರೇಟಿಂಗ್ ಪಾನೀಯವಾಗಿದ್ದು, ಬೇಸಿಗೆಯ ತಿಂಗಳುಗಳಲ್ಲಿ ಸುಲಭವಾಗಿ ಲಭ್ಯವಾಗಿರುವಂತದ್ದು. ಮೆಗ್ನೀಸಿಯಂನಿಂದ ಹಿಡಿದು ಪೊಟ್ಯಾಸಿಯಮ್, ಪ್ರೋಟೀನ್ ಮತ್ತು ಫೈಬರ್ ವರೆಗೆ, ತೆಂಗಿನಕಾಯಿ ನೀರು ಎಲ್ಲವನ್ನೂ ಹೊಂದಿದೆ. ಇದು ಆ್ಯಂಟಿಆಕ್ಸಿಡೆಂಟ್ ಗಳ ಮೂಲವಾಗಿದೆ.
ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಅನೇಕ ಕಾಯಿಲೆಗಳಿಂದ ನಿಮ್ಮನ್ನು ಸುರಕ್ಷಿತವಾಗಿರಿಸುತ್ತದೆ. ಇದರ ಕೂಲಿಂಗ್ ಪರಿಣಾಮಗಳು ಎಲ್ಲರಿಗೂ ತಿಳಿದಿದ್ದು, ಬೇಸಿಗೆಯಲ್ಲಿ ನಿಮ್ಮ ಆರೋಗ್ಯವನ್ನು ಕಾಪಾಡುತ್ತದೆ. ನಿಮ್ಮ ದೇಹವನ್ನು ಸ್ಥಿತಿಯ ವಿರುದ್ಧ ಹೋರಾಡಲು ಮತ್ತು ನಿಮ್ಮ ದೇಹವನ್ನು ತಂಪಾಗಿಡಲು ಅಗತ್ಯವಾದ ಪೋಷಕಾಂಶಗಳೊಂದಿಗೆ ಸಾಬೀತುಪಡಿಸುವ ಮೂಲಕ ಬಾಯಿ ಹುಣ್ಣುಗಳ ನೋವನ್ನು ಎದುರಿಸಲು ಇದು ನಿಮಗೆ ಸಹಾಯ ಮಾಡುತ್ತದೆ.



Click it and Unblock the Notifications
