For Quick Alerts
ALLOW NOTIFICATIONS  
For Daily Alerts

ತಿಂಗಳವರೆಗೆ ನೋಟಿನಲ್ಲಿ ಜೀವಿಸುವ ಕೊರೊನಾವೈರಸ್: ನೋಟು ಮುಟ್ಟುವಾಗ ಹುಷಾರ್‌!

|

ಕೊರೊನಾವೈರಸ್ ಸೋಂಕಿತರ ಸಂಖ್ಯೆ ಇಳಿಕೆಯಾಗಬಹುದು ಎಂದು ಕಳೆದ 10 ತಿಂಗಿನಿಂದ ಜನರು ನಿರೀಕ್ಷೆ ಮಾಡುತ್ತಲೇ ಇದ್ದಾರೆ, ಆದರೆ ಪ್ರತಿನಿತ್ಯ ಪತ್ತೆಯಾಗುತ್ತಿರುವ ಕೊರೊನಾವೈರಸ್ ಸಂಖ್ಯೆಯಲ್ಲಿ ಇಳಿಕೆ ಕಂಡು ಬರುತ್ತಿಲ್ಲ. ಕೊರೊನಾವೈರಸ್ ತಡೆಗಟ್ಟಲು ಜನರು ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕಾಗಿದೆ, ಅಲ್ಲದೆ ಸರಕಾರ ಇದರ ಕುರಿತು ಸಾಕಷ್ಟು ಮಾರ್ಗದರ್ಶನ ನೀಡುತ್ತಿದೆ.

ಕೊರೊನಾವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಜನರು ಕೂಡ ಮಾಸ್ಕ್‌ ಧರಿಸಿ ಓಡಾಡಿದರೆ ಕೊರೊನಾ ತಡೆಗಟ್ಟಬಹುದು ಎಂದು ಭಾವಿಸಿದ್ದಾರೆ, ಆದರೆ ಹೊರಗಡೆ ಕ್ಯಾಶ್‌ ವ್ಯವಹಾರ ಮಾಡುವಾಗಲೂ ಅಷ್ಟೇ ಎಚ್ಚರಿಕೆವಹಿಸಬೇಕಾಗಿದೆ. ಏಕೆಂದರೆ ಕೊರೊನಾವೈರಸ್ ಕ್ಯಾಶ್‌ ಮೂಲಕವೂ ಹರಡಬಹುದು. ಅದರಲ್ಲೂ ಹಣದಲ್ಲಿ ತಿಂಗಳವರೆಗೆ ವೈರಸ್ ಜೀವಂತವಾಗಿರುತ್ತದೆ ಎಂದು ಅಧ್ಯಯನ ಹೇಳಿದೆ.

 ಕ್ಯಾಶ್‌ನಲ್ಲಿ 28 ದಿನಗಳವರೆಗೆ ಬದುಕಿರುವ ವೈರಸ್

ಕ್ಯಾಶ್‌ನಲ್ಲಿ 28 ದಿನಗಳವರೆಗೆ ಬದುಕಿರುವ ವೈರಸ್

ಈ ಮೊದಲು ನಾವೆಲ್ಲಾ ಯೋಚಿಸಿರುವುದಕ್ಕಿಂತಲೂ ಇದರ ಸ್ವರೂಪ ಭಯಾನಕವಾಗಿದೆ, ಇದು ನೆಲದಲ್ಲಿ, ನೋಟುಗಳಲ್ಲಿ, ಫೋನ್‌ ಸ್ಕ್ರೀನ್‌ಗಳಲ್ಲಿ 28 ದಿನಗಳಿಗೂ ಹೆಚ್ಚು ಕಾಲ ಜೀವಿಸಿರುತ್ತದೆ ಎಂದು ತಿಳಿದು ಬಂದಿದೆ.

ಅಧ್ಯಯನ ವರದಿ

ಅಧ್ಯಯನ ವರದಿ

ಕಾಮನ್‌ವೆಲ್ತ್‌ ಸೈಂಟಿಫಿಕ್ ಅಂಡ್‌ ಇಂಡಸ್ಟ್ರಿಯಲ್ ರಿಸರ್ಚ್ ಆರ್ಗನೈಸೇಷನ್ ನಡೆಸಿದ ಅಧ್ಯಯನದಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಕೊರೊನಾವೈರಸ್ ತಂಪು ವಾತಾವರಣದಲ್ಲಿ ಹಾಗೂ ನುಣಪಾದ ನೆಲದಲ್ಲಿ, ಗ್ಲಾಸ್‌ನಲ್ಲಿ ಹೆಚ್ಚು ಕಾಲ ಜೀವಿಸಿರುತ್ತದೆ ಎಂದು ಆಸ್ಟ್ರೇಲಿಯಾದ ನ್ಯಾಷನಲ್ ಸೈನ್ಸ್ ಏಜೆನ್ಸಿ ಪತ್ತೆ ಹಚ್ಚಿದೆ.

ಆದ್ದರಿಂದ ಇಂಥ ವಸ್ತುಗಳನ್ನು ಸ್ಯಾನಿಟೈಸ್ ಮಾಡುತ್ತಿರುವ ಮೂಲಕ ಕೊರೊನಾವೈರಸ್ ತಡೆಗಟ್ಟಬಹುದು ಎಂದು ವೈರಾಲಾಜಿ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿ ಹೇಳಿದೆ.

ಕಡಿಮೆ ತಾಪಮಾನದಲ್ಲಿ ಅಧಿಕ ಕಾಲ ಜೀವಿಸುವ ವೈರಸ್

ಕಡಿಮೆ ತಾಪಮಾನದಲ್ಲಿ ಅಧಿಕ ಕಾಲ ಜೀವಿಸುವ ವೈರಸ್

CSIRO ಅಧ್ಯಯನ ವರದಿಯು ಕೊರೊನಾ ಸೋಂಕಿಗೆ ಕಾರಣವಾದ Sars-Cov-2 ವೈರಸ್ ವಿವಿಧ ವಾತಾವರಣದಲ್ಲಿ ಅದು ಜೀವಿಸುವ ಅವಧಿಯು ಭಿನ್ನವಗಿರುತ್ತದೆ ಎಂದು ಹೇಳಿದೆ. 20C, 30C ಮತ್ತು 40C ಉಷ್ಣತೆಯಲ್ಲಿ ಆ ವೈರಸ್‌ ಬದುಕಿರುವ ಅವಧಿಯು ಭಿನ್ನವಾಗಿರುತ್ತದೆ. ಕಡಿಮೆ ತಾಪಮಾನದಲ್ಲಿ ವೈರಸ್ ವಸ್ತುಗಳ ಮೇಲೆ ಜೀವಿಸಿರುವ ಅವಧಿಯು ಹೆಚ್ಚಿರುತ್ತದೆ.

ಸ್ಯಾನಿಟೈಸ್ ಬಗ್ಗೆ ಹೆಚ್ಚು ಗಮನ ನೀಡಿ

ಸ್ಯಾನಿಟೈಸ್ ಬಗ್ಗೆ ಹೆಚ್ಚು ಗಮನ ನೀಡಿ

ಗ್ಲಾಸ್, ಸ್ಟೈನ್‌ಲೆಸ್ ಸ್ಟೀಲ್, ಪೇಪರ್ ಮತ್ತು ಪಾಲಿಮರ್ ಬ್ಯಾಂಕ್‌ ನೋಟುಗಳಲ್ಲಿ 28 ದಿನಗಳವರೆಗೆ ವೈರಸ್ ಬದುಕಿರುತ್ತದೆ ಎಂದು ಅಧ್ಯಯನ ವರದಿ ಹೇಳಿದೆ.

ಕೊರೊನಾವೈರಸ್ ಕಾಟನ್ ವಸ್ತುಗಳಲ್ಲಿ 7 ದಿನಗಳವರೆಗೆ ಬದುಕಿರುತ್ತದೆ. ಮನೆಯಲ್ಲಿರುವ ಕರ್ಟನ್, ಫ್ಯಾಬ್ರಿಕ್ ವಸ್ತುಗಳು, ಮಂಚ ಇವುಗಳಲ್ಲಿ ಇದ್ದರೆ ಏಳು ದಿನಗಳವರೆಗೆ ಜೀವಿಸಿರುತ್ತದೆ.

ಸಲಹೆ: ಕೊರೊನಾದಿಂದ ಈ ಜಗತ್ತು ಮುಕ್ತವಾಗುವವರೆಗೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿಬೇಕು. ಹೊರಗಡೆ ಹೋಗುವಾಗ ಮಾಸ್ಕ್ ಧರಿಸಿಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಜೊತೆಗೆ ಹಣದವನ್ನು ಪಡೆಯುವಾಗ ಕೈಗೆ ಸ್ಯಾನಿಟೈಸ್ ಹಚ್ಚಿಕೊಳ್ಳಬೇಕು.

English summary

Coronavirus Survives For Almost A Month On Cash And Phones

Coronavirus Survives For Almost A Month On Cash And Phones, here are more details....
X
Desktop Bottom Promotion