Latest Updates
-
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ!
ಕುರ್ಚಿಯಲ್ಲೇ ಕುಳಿತು ಕೆಲಸ ಮಾಡೋರಿಗೆ ರಿಲ್ಯಾಕ್ಸ್ ಆಗಲು ಈ ಯೋಗಾಸನಗಳು ಬೆಸ್ಟ್..!
ಕೋವಿಡ್ ಬಂದ ಮೇಲೆ ಆಫೀಸ್‌ನಲ್ಲಿದ್ದು ಕೆಲಸ ಮಾಡುತ್ತಿದ್ದವರಿಗೆಲ್ಲಾ ವರ್ಕ್ ಫ್ರಂ ಹೋಮ್ ಶುರುವಾಯ್ತು, ಇದರ ಜೊತೆಗೆ ಬೆನ್ನು ನೋವು, ಸೊಂಟ ನೋವು, ಕತ್ತು ನೋವು ಎಲ್ಲ ಸಮಸ್ಯೆಗಳೂ ಅಂಟಿಕೊಳ್ಳಲು ಶುರುವಾಯ್ತು, ಕಾರಣ ನಾವು ಕುಳಿತುಕೊಳ್ಳುವ ಪೊಸಿಶನ್.
ಹೌದು.. ಮನೆ ಮಾತ್ರವಲ್ಲ, ಆಫೀಸ್‌ನಲ್ಲಿ ದಿನದ ಹೆಚ್ಚಿನ ಸಮಯವನ್ನು ಕಂಪ್ಯೂಟರ್ ಮುಂದೆಯೇ ಕುಕ್ಕರಿಸಿಕೊಂಡು ಕುಳಿತುಕೊಳ್ಳುವವರಿಗೆ ಬೆನ್ನುನೋವಿನ ಸಮಸ್ಯೆ ಭಾದಿಸದೆ ಬಿಡದು. ಅರ್ಧಗಂಟೆಗೊಮ್ಮೆ ಎದ್ದು ಓಡಾಡುವುದೋ, ಕುಳಿತಲ್ಲಿಯೇ ಕೆಲವೊಂದು ಸ್ಟ್ರೆಚಿಂಗ್ ಮಾಡುವ ಮೂಲಕ ಕುಳಿತುಕೊಂಡೇ ಇದ್ದು ಬರುವ ನೋವನ್ನು ನಿವಾರಿಸಬಹುದು ಗೊತ್ತಾ..

ಅಷ್ಟೇ ಅಲ್ಲ ಕೆಲವೊಂದು ಚೇರ್‌ನಲ್ಲೇ ಕುಳಿತು ಮಾಡುವಂತಹ ಯೋಗಾಸನಗಳಿವೆ, ಇದನ್ನೊಮ್ಮೆ ಟ್ರೈ ಮಾಡಿ ನೋಡಿ, ನಿಮ್ಮ ಮೈಕೈನೋವಿನ ಸಮಸ್ಯೆಗಳಿಗೆ ಅಲ್ಪವಿರಾಮವಾದರೂ ಹಾಕಬಹುದು. ಆ ಯೋಗಾಸನಗಳು ಯಾವುದು ಎನ್ನುವುದನ್ನು ಈ ಕೆಳಗೆ ವಿವರಿಸಲಾಗಿದೆ ನೋಡಿ.

ಗೋಮುಖಾಸನ
ಕುರ್ಚಿಯಲ್ಲಿ ನೇರವಾಗಿ ಕುಳಿತುಕೊಳ್ಳಿ, ದೀರ್ಘವಾದ ಉಸಿರು ತೆಗೆದುಕೊಳ್ಳುತ್ತಾ, ನಿಮ್ಮ ಬಲಗೈಯನ್ನು ಮಡಿಸಿ ಕೆಳ ಬೆನ್ನಿನ ಹಿಂದೆ, ನೇರವಾಗಿ ಮೇಲ್ಮುಖವಾಗಿ ಇಟ್ಟುಕೊಳ್ಳಿ, ಇದೇ ರೀತಿ ಎಡಗೈಯನ್ನು ಮಡಿಸಿ ಚಿತ್ರದಲ್ಲಿರುವಂತೆ ತಲೆಯ ಹಿಂದೆಯಿಂದ ಕೆಳಮುಖವಾಗಿ ಇಡಬೇಕು, ಬೆನ್ನ ಹಿಂದೆ ಸಾಧ್ಯವಾದಷ್ಟು ಎರಡೂ ಕೈಯನ್ನು ಪರಸ್ಪರ ಸ್ಫರ್ಶಿಸಲು ಪ್ರಯತ್ನಿಸಿ. ನಿಧಾನವಾಗಿ ತಲೆಯನ್ನು ನೇರವಾಗಿಟ್ಟುಕೊಳ್ಳಲು ಪ್ರಯತ್ನಿಸಿ, ದೃಷ್ಟಿಯೂ ನೇರವಾಗಿರಲಿ. ಇದೇ ಸ್ಥಿತಿಯಲ್ಲಿ ದೀರ್ಘಕಾಲ ಕುಳಿತುಕೊಳ್ಳಲು ಪ್ರಯತ್ನಿಸಿ. ನಂತರ ಎರಡೂ ಕೈಗಳನ್ನು ನಿಧಾನವಾಗಿ ಸಜಹ ಸ್ಥಿತಿಗೆ ತನ್ನಿ, ಕೈಗಳನ್ನು ತೊಡೆಯ ಮೇಲಿಟ್ಟು ವಿಶ್ರಾಂತಿ ಪಡೆಯಿರಿ.
ಕುರ್ಚಿಯ ಸಹಾಯದಿಂದ ಮಾಡುವ ಈ ಗೋಮುಖಾಸನವು ನಿಮ್ಮ ಭಂಗಿಯನ್ನು ಸುಧಾರಿಸುತ್ತದೆ. ನಿಮ್ಮ ಭುಜ, ಪೃಷ್ಠದ ಭಾಗ ಮತ್ತು ತೊಡೆಯ ಮುಂಭಾಗಗಳ ಸ್ನಾಯುಗಳಿಗೆ ದೀರ್ಘಕಾಲ ಕುಳಿತುಕೊಳ್ಳುವುದರಿಂದ ಉಂಟಾಗುವ ನೋವಿನಿಂದ ಶಮನ ನೀಡುತ್ತದೆ.

ತ್ರಿಯಕ್ ತಾಡಾಸನ
ಕುರ್ಚಿಯಲ್ಲಿ ನೇರವಾಗಿ ಕುಳಿತುಕೊಂಡು ನಿಮ್ಮ ಎರಡೂ ಕೈಗಳನ್ನು ಮೇಲಕ್ಕೆ ಎತ್ತಿ, ಮುಂಗೈ ನೇರವಾಗಿರಲಿ, ತೋಳುಗಳು ಕಿವಿಗೆ ತಾಕುವಂತಿರಲಿ, ಎರಡೂ ಅಂಗೈಗಳನ್ನು ಮೇಲ್ಮುಖವಾಗಿ ಇಂಟರ್ಲಾಕ್ ಮಾಡಿ ನಿಧಾನವಾಗಿ ನಿಮ್ಮ ಬಲ ಬದಿಗೆ ಬಾಗುತ್ತಾ ದೀರ್ಘವಾಗಿ ಉಸಿರಾಡಿ, ಉಸಿರು ಬಿಡುತ್ತಾ ನೇರ ಸ್ಥಿತಿಗೆ ಬನ್ನಿ. ಮತ್ತೆ ಎಡ ಬದಿಗೆ ಬಾಗಿ, ಮರಳಿ ನೇರ ಸ್ಥಿತಿಗೆ ಬನ್ನಿ, ನಿಮ್ಮ ಇದೇ ರೀತಿ ಇನ್ನೊಮ್ಮೆ ಪುನಾರವರ್ತಿಸಿ.
ತ್ರಿಯಕ್ ತಾಡಾಸನ ಬೆನ್ನುಮೂಳೆಯ ಬಿಗಿತವನ್ನು ಸುಧಾರಿಸುತ್ತದೆ. ಇದು ಎತ್ತರವನ್ನು ಹೆಚ್ಚಿಸಲು ಮತ್ತು ಸೊಂಟದ ಸಮಸ್ಯೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಈ ಆಸನವು ಎಲ್ಲಾ ಕಿಬ್ಬೊಟ್ಟೆಯ ಅಂಗಗಳಿಗೆ ಒಳ್ಳೆಯದು ಮತ್ತು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಕೂಡಾ ತುಂಬಾ ಸಹಾಯಕವಾಗಿದೆ.

ತಾಡಾಸನ
ಕುರ್ಚಿಯ ಮೇಲೆ ನೇರವಾಗಿ ಕುಳಿತುಕೊಳ್ಳಿ. ಎರಡೂ ಕೈಗಳನ್ನು ನಿಧಾನವಾಗಿ ಮೇಲಕ್ಕೆತ್ತಿ, ಕೈಗಳು ನೇರವಾಗಿರಲಿ, ಅಂಗೈಗಳನ್ನು ಮೇಲ್ಮುಖವಾಗಿ ಇಂಟರ್ಲಾಕ್ ಮಾಡಿ. ಭುಜಗಳನ್ನು ಸಡಿಲಗೊಳಿಸಿ, ನಿಮ್ಮ ಎದೆಯನ್ನು ಅಗಲವಾಗಿಸಿ. ದೀರ್ಘವಾಗಿ ಉಸಿರಾಡುವಾಗ ನಿಮ್ಮ ಹೊಕ್ಕುಳನ್ನು ಒಳಗೆ ಎಳೆದುಕೊಳ್ಳಿ. ನಿಮ್ಮ ಭಂಗಿ ನೇರವಾಗಿರಲಿ. ಕಣ್ಣಿನ ದೃಷ್ಟಿ ನೇರವಾಗಿರಲಿ. ನಂತರ ಸಾಮಾನ್ಯ ಸ್ಥಿತಿಗೆ ಬನ್ನಿ, ವಿಶ್ರಾಂತಿ ಪಡೆಯಿರಿ.
ಈ ತಾಡಾಸನವು ಭಂಗಿಯನ್ನು ಸುಧಾರಿಸುತ್ತದೆ, ಎದೆಯನ್ನು ತೆರೆಯುತ್ತದೆ ಮತ್ತು ಬೆನ್ನುಮೂಳೆಯನ್ನು ಉದ್ದವಾಗಿಸುತ್ತದೆ, ತೊಡೆಗಳು, ಪೃಷ್ಠದ ಮತ್ತು ಕಾಲಿನ ಸ್ನಾಯುಗಳನ್ನು ನಿಧಾನವಾಗಿ ಬಲಪಡಿಸುತ್ತದೆ. ಅರಿವು ಮತ್ತು ಏಕಾಗ್ರತೆಯನ್ನು ಹೆಚ್ಚಿಸುವಲ್ಲಿ ಇದು ಪ್ರಯೋಜನಕಾರಿಯಾಗಿದೆ ಹಾಗೂ ಸಯಾಟಿಕಾ ಸಮಸ್ಯೆಯನ್ನು ನಿವಾರಿಸುತ್ತದೆ.

ಮರಿಚ್ಯಾಸನ
ಕುರ್ಚಿಯ ಎಡಬದಿಯಲ್ಲಿ ನೇರವಾಗಿ ಕುಳಿತುಕೊಳ್ಳಿ. ಆಳವಾದ ಉಸಿರನ್ನು ತೆಗೆದುಕೊಂಡು ಬಲಕ್ಕೆ ತಿರುಗಿ, ನಿಮ್ಮಎರಡೂ ಕೈಗಳನ್ನು ಕುರ್ಚಿಯ ಹಿಂದೆ ಇರುವಹ್ಯಾಂಡಲ್ ಮೇಲೆ ಇಟ್ಟುಕೊಳ್ಳಿ, ನಿಮ್ಮ ಮುಖವು ಗೋಡೆಗೆ ಸಮಾನಾಂತರವಾಗಿರಬೇಕು. ಕುತ್ತಿಗೆ-ಭುಜ ಮತ್ತು ತಲೆ ಒಂದೇ ಸ್ಥಾನದಲ್ಲಿರಬೇಕು. ಅಂದರೆ ನೇರವಾಗಿರಬೇಕು. ಈ ಸ್ಥಿತಿಯಲ್ಲೇ ಆಳವಾದ ಉಸಿರನ್ನು ತೆಗೆದುಕೊಂಡು ಉಸಿರನ್ನು ಬಿಡಿ ಮತ್ತೆ ಉಸಿರನ್ನು ಒಳಗೆಳೆದುಕೊಳ್ಳುವುದರೊಂದಿಗೆ ಸಾಮಾನ್ಯ ಸ್ಥಿತಿಗೆ ಬನ್ನಿ. ಮತ್ತೆ ಇದೇ ರೀತಿ ಬಲ ಬದಿಯಲ್ಲಿ ಕುಳಿತುಕೊಂಡು ಈ ಆಸನವನ್ನು ಪುನರಾವರ್ತಿಸಿ.
ಕುರ್ಚಿಯಲ್ಲಿ ಕುಳಿತು ಮಾಡುವ ಈ ಮರಿಚ್ಯಾಸನವು ನಿಮ್ಮ ಮನಸ್ಸು ಮತ್ತು ದೇಹವನ್ನು ಶಾಂತಗೊಳಿಸುತ್ತದೆ ಮತ್ತು ವಿಶ್ರಾಂತಿ ನೀಡುತ್ತದೆ.ಮರೀಚ್ಯಾಸನವು ನಿಮ್ಮ ಬೆನ್ನುಮೂಳೆ ಮತ್ತು ಭುಜಗಳನ್ನು ಹಿಗ್ಗಿಸಲು ಸಹಾಯ ಮಾಡುತ್ತದೆ.ಈ ಆಸನವನ್ನು ನಿಯಮಿತವಾಗಿ ಮಾಡಿದರೆ ಆಯಾಸವನ್ನು ನಿವಾರಿಸುತ್ತದೆ.ಇದು ಕಿಬ್ಬೊಟ್ಟೆಯ ಅಂಗಗಳಾದ ಯಕೃತ್ತು ಮತ್ತು ಮೂತ್ರಪಿಂಡಗಳನ್ನು ಸಹ ಉತ್ತೇಜಿಸುತ್ತದೆ.

ಮಾರ್ಜರಿ ಆಸನ
ಕುರ್ಚಿಯ ಮೇಲೆ ನೇರವಾಗಿ ಕುಳಿತುಕೊಳ್ಳಿ, ಕಾಲುಗಳು ನೇರವಾಗಿರಲಿ. ನಿಮ್ಮ ಕೈಗಳನ್ನು ನಿಮ್ಮ ಮೊಣಕಾಲುಗಳ ಮೇಲೆ ಅಥವಾ ನಿಮ್ಮ ತೊಡೆಯ ಮೇಲ್ಭಾಗದಲ್ಲಿ ಇಟ್ಟುಕೊಳ್ಳಿ. ದೀರ್ಘವಾಗಿ ಉಸಿರು ತೆಗೆದುಕೊಳ್ಳಿ, ಉಸಿರು ಬಿಡುತ್ತಾ ಬೆನ್ನನ್ನು ಬಾಗಿಸಿ. ಈ ಆಸನದಲ್ಲಿ ನಿಮ್ಮ ಭುಜಗಳು ನಿಮ್ಮ ಬೆನ್ನು ಸಮಾನಾಂತರವಾಗಿರಲಿ. ನಿಮ್ಮ ಗಲ್ಲವನ್ನು ನಿಮ್ಮ ಎದೆಯ ಭಾಗಕ್ಕೆ ತಾಗಿಸಿ, ಮುಂದೆ ನೋಡಿ. ಇದೇ ಸ್ಥಿತಿಯಲ್ಲಿ ಐದು ದೀರ್ಘ ಉಸಿರಾಟ ಮಾಡಿ. ನಂತರ ಸಾಮಾನ್ಯ ಸ್ಥಿತಿಗೆ ಬನ್ನಿ.



Click it and Unblock the Notifications
