For Quick Alerts
ALLOW NOTIFICATIONS  
For Daily Alerts

ಸೇಬು ಹಣ್ಣು: ಆರೋಗ್ಯಕರ ಪ್ರಯೋಜನಗಳು, ಅಪಾಯದ ಸಾಧ್ಯತೆಗಳು ಮತ್ತು ರೆಸಿಪಿ

|

"ದಿನಕ್ಕೊಂದು ಸೇಬು ವೈದ್ಯರನ್ನು ದೂರವಿರಿಸುವುದು" ಎಂಬ ನಾಣ್ಣುಡಿ ನಮಗೆಲ್ಲಾ ಚಿರಪರಿಚಿತವಾಗಿದೆ. ಸೇಬಿನಲ್ಲಿ ಹಲವಾರು ಆರೋಗ್ಯಕರ ಪ್ರಯೋಜನಗಳಿದ್ದು ಈ ಕಾರಣದಿಂದಲೇ ವಿಶ್ವದಲ್ಲಿಯೇ ಅತಿ ಹೆಚ್ಚು ಸೇವಿಸಲ್ಪಡುವ ಫಲವಾಗಿದೆ. ಸೇಬಿನಲ್ಲಿ ಅಧಿಕ ಪ್ರಮಾಣದ ಆಂಟಿಆಕ್ಸಿಡೆಂಟುಗಳು, ಫ್ಲೇವನಾಯ್ಡುಗಳು ಹಾಗೂ ಪೋಷಕಾಂಶಗಳಿದ್ದು ಕ್ಯಾನ್ಸರ್ ಅಭಿವೃದ್ದಿಕೊಳ್ಳುವ, ಹೃದಯದ ಕಾಯಿಲೆ ಹಾಗೂ ಮಧುಮೇಹ ಆವರಿಸುವ ಸಾಧ್ಯತೆಯನ್ನು ತಗ್ಗಿಸುತ್ತದೆ.

Apples

ಸೇಬಿನಲ್ಲಿರುವ ಪೋಷಕಾಂಶಗಳ ವಿವರ
*ಪ್ರತಿ ನೂರು ಗ್ರಾಂ ಸೇಬುಹಣ್ಣಿನಲ್ಲಿ 54 ಕಿಲೋಕ್ಯಾಲೋರಿ ಶಕ್ತಿ ಇದೆ. ಉಳಿದಂತೆ ಇದರಲ್ಲಿರುವ ಇತರ ಪೋಷಕಾಂಶಗಳೆಂದರೆ:
*0.41 ಗ್ರಾಂ ಪ್ರೋಟೀನ್
*14.05 ಗ್ರಾಂ ಕಾರ್ಬೋಹೈಡ್ರೇಟ್
*2.1 ಗ್ರಾಂ ಕರಗುವ ನಾರು
*10.33 ಗ್ರಾಂ ಸಕ್ಕರೆ
*8 ಮಿಲಿಗ್ರಾಮ್ ಸಕ್ಕರೆ
*0.15 ಮಿಲಿಗ್ರಾಂ ಕಬ್ಬಿಣ
*107 ಮಿಲಿಗ್ರಾಂ ಪೊಟ್ಯಾಶಿಯಂ
*2.0 ಮಿಲಿಗ್ರಾಂ ವಿಟಮಿನ್ ಸಿ
*41ಐಯು ವಿಟಮಿನ್ ಎ
ಸೇಬುಗಳ ಆರೋಗ್ಯಕರ ಪ್ರಯೋಜನಗಳು

ಹೃದಯದ ಆರೋಗ್ಯ ವೃದ್ಧಿಸುತ್ತದೆ
ಸೇಬು ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ತಗ್ಗಿಸಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸುವ ಮೂಲಕ ಹೃದಯದ ಕಾಯಿಲೆ ಆವರಿಸುವ ಸಾಧ್ಯತೆಯನ್ನು ತಗ್ಗಿಸುತ್ತದೆ. ಅಲ್ಲದೇ ಸೇಬಿನಲ್ಲಿ ಉತ್ತಮ ಪ್ರಮಾಣದ ಕರಗುವ ನಾರು ಮತ್ತು ಪಾಲಿಫೆನಾಲ್ ಅಂಟಿ ಆಕ್ಸಿಡೆಂಟುಗಳಿದ್ದು ಹೃದಯದ ಆರೋಗ್ಯ ವೃದ್ದಿಸುತ್ತದೆ ಹಾಗೂ ರಕ್ತದ ಒತ್ತಡವನ್ನು ಕಡಿಮೆಗೊಳಿಸುತ್ತದೆ. ಒಂದು ಅಧ್ಯಯನದ ಪ್ರಕಾರ ಸೇಬಿನ ಸೇವನೆಯಿಂದ ಹೃದಯದ ಸ್ತಂಭನದ ಸಾಧ್ಯತೆ ತಗ್ಗುತ್ತದೆ.

Most Read: ಸೇಬು ಹಣ್ಣಿನಲ್ಲಿರುವ ಅತ್ಯದ್ಭುತ ಪ್ರಯೋಜನಗಳು

ತೂಕ ಕಳೆದುಕೊಳ್ಳಲು ನೆರವಾಗುತ್ತದೆ
ಸೇಬಿನಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಇರುವ ಕಾರಣ ಹೆಚ್ಚು ಹೊತ್ತಿನವರೆಗೆ ಹೊಟ್ಟೆ ತುಂಬಿದ ಭಾವನೆ ಮೂಡಿಸಿ ಅನಗತ್ಯ ಆಹಾರ ಸೇವನೆಯಿಂದ ತಡೆಯುತ್ತದೆ. ಒಂದು ಅಧ್ಯಯನದಲ್ಲಿ ಕಂಡುಕೊಂಡ ಪ್ರಕಾರ ಊಟಕ್ಕೂ ಮೊದಲು ಕೆಲವು ಸೇಬಿನ ತುಂಡುಗಳನ್ನು ಸೇವಿಸಿದ ವ್ಯಕ್ತಿಗಳು ಊಟಕ್ಕೂ ಮೊದಲು ಸೇಬಿನ ಸಾಸ್ ಅಥವಾ ಸೇಬಿನ ರಸವನ್ನು ಸೇವಿಸಿದಕ್ಕಿಂತಲೂ ಹೆಚ್ಚಾಗಿ ಹೊಟ್ಟೆ ತುಂಬಿದ್ದ ಭಾವನೆ ಪಡೆದಿದ್ದೇವೆ ಎಂದು ತಿಳಿಸಿದ್ದಾರೆ. ಇನ್ನೊಂದು ಅಧ್ಯಯನದ ಪ್ರಕಾರ ಐವತ್ತು ಸ್ಥೂಲದೇಹಿ ಮಹಿಳೆಯರಲ್ಲಿ ಸೇಬನ್ನು ಮತ್ತು ಕಡಿಮೆ ಕ್ಯಾಲೋರಿಗಳನ್ನು ಸೇವಿಸಿದವರು ಓಟ್ಸ್ ಕುಕ್ಕೀಸ್ ಸೇವಿಸಿದ ಮಹಿಳೆಯರಿಗಿಂತಲೂ ಸರಾಸರಿ ಒಂದು ಕೇಜಿ ತೂಕ ಕಳೆದುಕೊಂಡಿದ್ದಾರೆ.

ಮಧುಮೇಹದ ಸಾಧ್ಯತೆ ತಗ್ಗಿಸುತ್ತದೆ
ಸೇಬಿನಲ್ಲಿರುವ ಪಾಲಿಫೆನಾಲ್ ಆಂಟಿ ಆಕ್ಸಿಡೆಂಟುಗಳು ಮಧುಮೇಹ ಆವರಿಸುವ ಸಾಧ್ಯತೆಯನ್ನು ತಗ್ಗಿಸುತ್ತವೆ. ಮೇದೋಜೀರಕ ಗ್ರಂಥಿಯಲ್ಲಿರುವ ಬೀಟಾ ಜೀವಕೋಶಗಳ ನಷ್ಟವಾಗುವಿಕೆಯನ್ನು ಈ ಆಂಟಿ ಆಕ್ಸಿಡೆಂಟುಗಳು ತಡೆಯುತ್ತವೆ. ಮೇದೋಜೀರಕ ಗ್ರಂಥಿಯಲ್ಲಿ ಇನ್ಸುಲಿನ್ ಉತ್ಪಾದಿಸುವುದು ಈ ಜೀವಕೋಶಗಳ ಮುಖ್ಯ ಕಾರ್ಯವಾಗಿದೆ. ಸಾಮಾನ್ಯವಾಗಿ ಟೈಪ್2 ಮಧುಮೇಹವಿರುವ ವ್ಯಕ್ತಿಗಳಲ್ಲಿ ಈ ಜೀವಕೋಶಗಳು ಸಾಮಾನ್ಯವಾಗಿ ಘಾಸಿಗೊಂಡಿರುತ್ತವೆ.

ಕ್ಯಾನ್ಸರ್ ನಿಂದ ರಕ್ಷಿಸುತ್ತದೆ
ಸೇಬಿನಲ್ಲಿರುವ ರಕ್ಷಣಾರಾಸಾಯನಿಕಗಳು ಅಥವಾ ಫೈಟೋ ಕೆಮಿಕಲ್ಸ್ ಕ್ಯಾನ್ಸರ್ ಉಂಟಾಗುವ ಸಾಧ್ಯತೆಯನ್ನು ತಗ್ಗಿಸುತ್ತವೆ. ಒಂದು ಸಂಶೋಧನೆಯಲ್ಲಿ ನಿತ್ಯವೂ ಸೇಬನ್ನು ಸೇವಿಸುವ ಮಹಿಳೆಯರ ಆರೋಗ್ಯದ ಮಾಹಿತಿಗಳನ್ನು ವಿಶ್ಲೇಷಿಸಿ ಇವರಲ್ಲಿ ಕ್ಯಾನ್ಸರ್ ನಿಂದ ಸಾವಿಗೀಡಾದವರ ಸಂಖ್ಯೆ ಕಡಿಮೆಯಿದೆ ಎಂದು ವಿವರಿಸಲಾಗಿದೆ. ಇನ್ನೊಂದು ಅಧ್ಯಯನದಲ್ಲಿ ನಿತ್ಯವೂ ಕನಿಷ್ಟ ಒಂದು ಸೇಬು ಸೇವಿಸಿದ ಮಹಿಳೆಯರಲ್ಲಿ ಸ್ತನ ಮತ್ತು ಕರುಳಿನ ಕ್ಯಾನ್ಸರ್ ಆವರಿಸುವ ಸಾಧ್ಯತೆ ಕ್ರಮವಾಗಿ 18% ಮತ್ತು 20% ರಷ್ಟು ತಗ್ಗಿರುವುದನ್ನು ಗಮನಿಸಲಾಗಿದೆ.

Most Read: ಗರ್ಭಿಣಿಯರೇ ದಿನಕ್ಕೊಂದು ಸೇಬು ತಪ್ಪದೇ ತಿನ್ನಿ! ಯಾಕೆ ಗೊತ್ತೇ?

ಮೆದುಳಿನ ಆರೋಗ್ಯವನ್ನು ವೃದ್ಧಿಸುತ್ತದೆ
ಸೇಬಿನಲ್ಲಿರುವ ಆಂಟಿ ಆಕ್ಸಿಡೆಂಟುಗಳಲ್ಲಿ ಒಂದಾದ ಕ್ವೆರ್ಸಟಿನ್ (Quercetin) ನ್ಯೂರಾನ್ ಗಳಲ್ಲಿ ಉರಿಯೂತ ಮತ್ತು ಆಕ್ಸಿಡೀಕರಣ (oxidation) ದಿಂದ ಎದುರಾಗುವ ಜೀವಕೋಶಗಳ ಸಾವನ್ನು ಕಡಿಮೆಗೊಳಿಸುತ್ತದೆ. ಸೇಬಿನ ರಸವನ್ನು ಸೇವಿಸುವ ಮೂಲಕ ಮೆದುಳಿನಲ್ಲಿ ಅಸಿಟೈಲ್ ಕೋಲೈನ್ ಎಂಬ ನ್ಯೂರೋಟ್ರಾನ್ಸ್ಮಿಟರ್ ಅಥವಾ ನರಪ್ರೇಕ್ಷಕದ ಉತ್ಪಾದನೆ ಹೆಚ್ಚುತ್ತದೆ, ತನ್ಮೂಲಕ ಸ್ಮರಣಶಕ್ತಿ ಹೆಚ್ಚುತ್ತದೆ ಹಾಗೂ ಅಲ್ಜೀಮರ್ಸ್ ಕಾಯಿಲೆಯ ಸಾಧ್ಯತೆಯನ್ನು ತಗ್ಗಿಸುತ್ತದೆ.

ಅಸ್ತಮಾ ವಿರುದ್ಧ ಹೋರಾಡಲು ನೆರವಾಗುತ್ತದೆ
ಸೇಬಿನಲ್ಲಿ ಆಂಟಿ ಆಕ್ಸಿಡೆಂಟುಗಳು ಸಮೃದ್ದವಾಗಿದ್ದು ಅಸ್ತಮಾ ಕಡಿಮೆಗೊಳಿಸುವಲ್ಲಿ ತಮ್ಮ ನೆರವನ್ನು ನೀಡುತ್ತವೆ. ಒಂದು ಅದ್ಯಯನದ ಪ್ರಕಾರ ನಿತ್ಯವೂ ಶೇಖಡಾ ಹದಿನೈದರಷ್ಟು ಒಂದು ದೊಡ್ಡ ಸೇಬು ಹಣ್ಣನ್ನು ಸೇವಿಸುವ ಮೂಲಕ ಅಸ್ತಮಾ ಆವರಿಸುವ ಸಾಧ್ಯತೆಯಲ್ಲಿ ಹತ್ತು ಶೇಖಡಾ ಇಳಿಕೆಯಾಗಿರುವುದು ಕಂಡುಬಂದಿದೆ.

ಮೂಳೆಗಳ ಆರೋಗ್ಯವನ್ನು ವೃದ್ಧಿಸುತ್ತದೆ
ಸಂಶೋಧಕರು ನಂಬುವ ಪ್ರಕಾರ ಸೇಬಿನಲ್ಲಿರುವ ಆಂಟಿ ಆಕ್ಸಿಡೆಂಟ್ ಮತ್ತು ಉರಿಯೂತ ನಿವಾರಕ ಸಂಯುಕ್ತಗಳು ಮೂಳೆಗಳ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತವೆ. ಒಂದು ಅಧ್ಯಯನದ ಪ್ರಕಾರ ತಮ್ಮ ಆಹಾರದಲ್ಲಿ ತಾಜಾ ಸೇಬು, ಸೇಬಿನ ಸಾಸ್, ಸಿಪ್ಪೆ ಸುಲಿದ ಸೇಬುಹಣ್ಣುಗಳನ್ನು ಅಳವಡಿಸಿಕೊಂಡ ಮಹಿಳೆಯರು ಉಳಿದ ಮಹಿಳೆಯರಿಗಿಂತ ತಮ್ಮ ದೇಹದ ಮೂಳೆಗಳಲ್ಲಿ ಕಡಿಮೆ ಕ್ಯಾಲ್ಸಿಯಂ ಕಳೆದುಕೊಳ್ಳುತ್ತಾರೆ.

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ
ಸೇಬಿನಲ್ಲಿ ಪೆಕ್ಟಿನ್ ಎಂಬ ಕರಗುವ ನಾರು ಇದೆ. ಇದು ನಮ್ಮ ಕರುಳುಗಳಲ್ಲಿರುವ ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾಗಳಿಗೆ ಉತ್ತಮವಾಗಿದೆ. ಅಲ್ಲದೇ ಈ ನಾರು ದೊಡ್ಡ ಕರುಳಿನಲ್ಲಿ ಹಾದು ಹೋಗುವಾಗ ಆರೋಗ್ಯಕರ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.

ತ್ವಚೆ ಮತ್ತು ಕೂದಲ ಆರೋಗ್ಯವನ್ನು ವೃದ್ಧಿಸುತ್ತದೆ
ಸೇಬಿನ ಸೇವನೆಯಿಂದ ತ್ವಚೆ ಕಾಂತಿಯುಕ್ತ ಮತ್ತು ಸಹಜವರ್ಣ ಪಡೆಯುತ್ತದೆ. ಅಲ್ಲದೇ ವೃದ್ದಾಪ್ಯದ ಚಿಹ್ನೆಗಳನ್ನು ತಡವಾಗಿಸುತ್ತದೆ ಮತ್ತು ಇದರಲ್ಲಿರುವ ಹಲವಾರು ಆಂಟಿಆಕ್ಸಿಡೆಂಟುಗಳು ತ್ವಚೆಗೆ ಅಗತ್ಯ ಆರ್ದ್ರತೆಯನ್ನು ಒದಗಿಸುತ್ತವೆ. ಅಲ್ಲದೇ ಕೂದಲ ಉದುರುವಿಕೆಯನ್ನು ನಿಲ್ಲಿಸಿ ಕೂದಲ ಉದ್ದ ಹೆಚ್ಚಲು ನೆರವಾಗುತ್ತದೆ.

Most Read: ಸೇಬು ಹಣ್ಣನ್ನು ಸಿಪ್ಪೆ ಸಹಿತ ತಿನ್ನಿ, ವೈದ್ಯರನ್ನು ದೂರವಿರಿಸಿ

ಸೇಬು ಸೇವನೆಯಿಂದ ಎದುರಾಗುವ ಅಪಾಯಗಳ ಸಾಧ್ಯತೆಗಳು
ಸೇಬಿನ ಬೀಜಗಳಲ್ಲಿ ಸಯನೈಡ್ ಎಂಬ ಪ್ರಬಲ ವಿಷವಿದೆ ಹಾಗೂ ಇದರ ಸೇವನೆ ಮಾರಣಾಂತಿಕವಾಗಿದೆ. ಹಾಗಾಗಿ ಸೇಬನ್ನು ಸೇವಿಸುವಾಗ ಬೀಜಗಳನ್ನು ಕಡ್ಡಾಯವಾಗಿ ವರ್ಜಿಸಬೇಕು. ಕೆಲವರಲ್ಲಿ ಸೇಬಿನ ಸೇವನೆಯಿಂದ ಹೊಟ್ಟೆಯಲ್ಲಿ ಉರಿ, ಅಪಾನವಾಯು, ಹೊಟ್ಟೆಯುಬ್ಬರಿಕೆ ಮತ್ತು ಹೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳಬಹುದು.

ಸೇಬುಗಳನ್ನು ಸೇವಿಸುವ ವಿಧಾನಗಳು
*ಸೇಬನ್ನು ಚೆನ್ನಾಗಿ ತೊಳೆದು ಬೀಜ ನಿವಾರಿಸಿ ಚಿಕ್ಕ ತುಂಡುಗಳನ್ನಾಗಿಸಿ ನಿಮ್ಮ ಹಸಿರು ಸಲಾಡ್ ಅಥವಾ ಹಣ್ಣಿನ ಸಾಲಾಡ್ ನೊಂದಿಗೆ ಸೇವಿಸಿ
*ಸೇಬಿನ ತುಂಡುಗಳನ್ನು ಶೇಂಗಾಬೀಜದ ಬೆಣ್ಣೆಯೊಂದಿಗೆ ಬೆರೆಸಿ ಬೆಳಗ್ಗಿನ ಉಪಾಹಾರದ ರೂಪದಲ್ಲಿ ಸೇವಿಸಬಹುದು.
*ಸಿಹಿಖಾದ್ಯಗಳು, ಉದಾಹರಣೆಗೆ ಮಫಿನ್ಸ್, ಐಸ್ ಕ್ರೀಂ, ಪ್ಯಾನ್ ಕೇಕ್, ಕೇಕ್ ಮೊದಲಾದವುಗಳ ಜೊತೆಗೂ ಸೇವಿಸಬಹುದು. ಅಲ್ಲದೇ ಸೇಬಿನ ಜ್ಯೂಸ್ ಅಥವಾ ಸಾಸ್ ತಯಾರಿಸಿಯೂ ಸೇವಿಸಬಹುದು.

English summary

Apples: Health Benefits, Risks & Recipes

Apples have several health benefits which make it one of the most consumed fruits in the world. They are high in antioxidants and flavonoids which lower the risk of developing cancer, heart disease, diabetes, asthma, help in weight loss, promote brain and bone health, enhance skin and hair health, etc.
X
Desktop Bottom Promotion