Latest Updates
-
March 14 Horoscope: ಪ್ರಯಾಣಗಳ ಮಾಡುವ ದಿನವಾಗಲಿದೆ! -
ಸಿಲಿಂಡರ್ 3 ತಿಂಗಳು ಬರಬೇಕೆ? ಇನ್ಮುಂದೆ ಗ್ಯಾಸ್ ಚಿಂತೆ ಬೇಡ.. LPG ಉಳಿಸಲು ಇಲ್ಲಿದೆ 5 ಸ್ಮಾರ್ಟ್ ಟಿಪ್ಸ್ -
ಅಕ್ಕಿ ಬೇಡ, ಉದ್ದಿನಬೇಳೆ ಬೇಡ.. 15 ನಿಮಿಷದ ಹೆಸರು ಬೇಳೆ-ತರಕಾರಿ ಇಡ್ಲಿ! ಉಳಿದ ಇಡ್ಲಿ ಫ್ರೆಶ್ ಆಗಿಡೋದು ಹೇಗೆ? -
ಗ್ಯಾಸ್ ಇಲ್ವಾ? ಚಿಂತೆ ಬೇಡ.. ಒಲೆ ಹಚ್ಚದೇ ಮಾಡುವ 5 ಆರೋಗ್ಯಕರ ಊಟಗಳಿವು! -
ಮಿಕ್ಸಿಯಲ್ಲೇ ಮಾಡಿ ಕಬ್ಬಿನ ಹಾಲು! ಕಬ್ಬು ಇಲ್ಲದೆಯೇ ಶುದ್ಧವಾದ ಹಾಲು ಮಾಡೋದು ಹೇಗೆ? ರಸ್ತೆ ಬದಿಗಿಂತ ರುಚಿ -
ಮಘಾ ನಕ್ಷತ್ರಕ್ಕೆ ಕೇತು.. ಈ ಎಲ್ಲಾ ರಾಶಿಯವರ ಜೀವನದಲ್ಲಿ ಭಾರಿ ಬದಲಾವಣೆ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? -
10 ನಿಮಿಷಗಳ ಅಪ್ಪೆ.. ಹೆಸರುಕಾಳು ಮತ್ತು ಬಟಾಣಿ ಬಳಸಿ ಮಾಡುವ ರೆಸಿಪಿ! ಮೃದುವಾಗಿ ಮಾಡೋದು ಹೇಗೆ ಗೊತ್ತಾ? -
ವಿವಾಹಿತ ದಂಪತಿಗಳಿಗೂ ಈ ದಿನ ಸಂತೋಷದಾಯಕ! ಸಂಗಾತಿ ಮೇಲೆ ಡೌಟ್ ಬೇಡ -
March 13 Horoscope: ಶುಭ ಕಾರ್ಯ ಸಂಬಂಧಿತ ಚರ್ಚೆಗಳಿವೆ -
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ
ಶಿಶ್ನ ಕುಗ್ಗುವಿಕೆಗೆ ಕಾರಣಗಳು, ಚಿಕಿತ್ಸೆ, ಹಾಗೂ ಈ ಸಮಸ್ಯೆಯನ್ನು ನಿಯಂತ್ರಿಸುವ ವಿಧಾನ
ಲೈಂಗಿಕ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುವಂತಹ ಪುರುಷರ ಜನನೇಂದ್ರೀಯವು ಕೆಲವೊಂದು ಸಲ ನಿಮಿರು ದೌರ್ಬಲ್ಯಕ್ಕೆ ಒಳಗಾಗುವ ಬಗ್ಗೆ ಕೇಳಿದ್ದೇವೆ. ಆದರೆ ಇದು ಸಂಕುಚಿತಗೊಳ್ಳುವಂತಹ ಸಮಸ್ಯೆಯು ಪುರುಷರನ್ನು ಕಾಡುವುದು. ಇದು ಕೆಲವೊಂದು ಕಾರಣಗಳಿಂದ ಇರಬಹುದಾದರೂ ಇದರ ಬಗ್ಗೆ ಗಮನಹರಿಸುವುದು ಅತೀ ಅಗತ್ಯವಾಗಿರುವುದು. ಶಿಶ್ನ ಕ್ಷೀಣತೆ ಅಥವಾ ಶಿಶ್ನದ ಸಂಕೋಚನ ಎಂದರೆ ಪುರುಷರ ಜನನೇಂದ್ರೀಯದ ಗಾತ್ರವು ಕಿರಿದಾಗುವುದು. ಪುರುಷನೊಬ್ಬನ ಜನನೇಂದ್ರೀಯದ ಉದ್ದವು ಕೆಲವು ಇಂಚುಗಳ ತನಕ ಕುಗ್ಗುವುದು, ಇದಕ್ಕೆ ಹಲವಾರು ಕಾರಣಗಳು ಇರಬಹುದು. ಜನನೇಂದ್ರೀಯದ ಗಾತ್ರ ಅಥವಾ ಸುತ್ತಳತೆಯಲ್ಲಿ ಕುಗ್ಗುವುದು. ಜನನೇಂದ್ರೀಯದ ಅಂಗಾಂಶಗಳಲ್ಲಿ ಅತಿಯಾದ ನಷ್ಟದಿಂದ ಹೀಗೆ ಆಗುವುದು.
ಈ ಸಂಕೋಚನವು ತಾತ್ಕಾಲಿಕ. ಅದಾಗ್ಯೂ, ಕೆಲವೊಂದು ಸಂದರ್ಭದಲ್ಲಿ ಇದು ಶಾಶ್ವತವಾಗಿಯು ಇರಬಹುದು. ಹಲವಾರು ಮಂದಿ ಮೂತ್ರಶಾಸ್ತ್ರಜ್ಞರ ಪ್ರಕಾರ ಈ ರೀತಿಯ ಶಿಶ್ನ ಸಂಕೋಚಲವು ವಿಶ್ವದೆಲ್ಲೆಡೆಯ ಪುರುಷರಲ್ಲಿ ಕಂಡು ಬರುವುದು. ಪುರುಷರ ಜನನೇಂದ್ರೀಯದ ಗಾತ್ರವು ಅನುವಂಶಿಕವಾಗಿ ವಿವಿಧ ಗಾತ್ರ, ಸುತ್ತಳತೆ ಹೊಂದಿರಬಹುದು. ಸಾಮಾನ್ಯ ಶಿಶ್ನದ ಗಾತ್ರವು ಉದ್ರೇಕಗೊಂಡ ಶಿಶ್ನದ ಗಾತ್ರದಷ್ಟೇ ಇರಬೇಕು ಎಂದೇನಿಲ್ಲ. ಅಧ್ಯಯನ ವರದಿಯೊಂದು ಜನನೇಂದ್ರೀಯದ ಗಾತ್ರದ ಬಗ್ಗೆ ಪ್ರಕಟಿಸಿರುವಂತಹ ವರದಿಯ ಪ್ರಕಾರ, ಸಾಮಾನ್ಯ ಶಿಶ್ನದ ಗಾತ್ರವು 8.8 ಸೆ.ಮೀ.(3.5ಇಂಚು), ಸರಾಸರಿ ನಿಮಿರದ ಶಿಶ್ನವು 12.9 ಮತ್ತು 15 ಸೆ.ಮೀ.(5-6 ಇಂಚು) ಇರುತ್ತದೆ. ಸರಾಸರಿ ನಿಮಿರಿದ ಶಿಶ್ನವು 12.3 ಸೆ.ಮೀ.(4.75 ಇಂಚು) ಇರುವುದು. ಜನನೇಂದ್ರೀಯದ ಭಾಗಕ್ಕೆ ರಕ್ತಸಂಚಾರವನ್ನು ಅವಲಂಬಿಸಿ, ಶಿಶ್ನದ ಗಾತ್ರವು ಇರುವುದು. ಹೆಚ್ಚು ರಕ್ತಸಂಚಾರವಾದರೆ ಆಗ ಶಿಶ್ನದ ಗಾತ್ರವು ದೊಡ್ಡದಾಗಿರುವುದು, ಅದೇ ರೀತಿ ರಕ್ತ ಸಂಚಾರ ಕಡಿಮೆ ಇದ್ದರೆ ಗಾತ್ರವು ಕಿರಿದಾಗಿರುವುದು. ಅತಿಯಾದ ಶೀತ ವಾತಾವರಣ, ಆತಂಕ, ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳೂವಿಕೆಯಿಂದಾಗಿ ಶಿಶ್ನವು ಸಂಕೋಚನಗೊಳ್ಳಬಹುದು. ಇದೆಲ್ಲವೂ ರಕ್ತಸಂಚಾರವನ್ನು ಅಲವಂಬಿಸಿದೆ.

ಶಿಶ್ನ ಸಂಕೋಚನದ ವಿಧಗಳು
ಶಿಶ್ನ ಸಂಕೋಚನವನ್ನು ಎರಡು ವಿಧಗಳಾಗಿ ವಿಂಗಡಿಸಲಾಗಿದೆ.
ತೀವ್ರ ಸಂಕೋಚನ
ತೀವ್ರ ಸಂಕೋಚನವು ಒಂದು ವಿಧದ ಶಿಶ್ನ ಸಂಕೋಚನವಾಗಿದ್ದು, ಇದು ಸಣ್ಣ ಅವಧಿಯ ತನಕ ಮಾತ್ರ ಇರುವುದು ಮತ್ತು ಇದು ತಾತ್ಕಾಲಿಕವಾಗಿರುವುದು.

ಸುದೀರ್ಘ ಸಂಕೋಚನ
ಈ ರೀತಿಯ ಸಂಕೋಚನವು ದೀರ್ಘ ಕಾಲದ ತನಕ ಇರುವುದು ಮತ್ತು ಇದು ಶಾಶ್ವತವಾಗಿ ಉಳಿಯಬಹುದು.
ಶಿಶ್ನ ಸಂಕೋಚನಕ್ಕೆ ಕಾರಣಗಳು ಏನು?
ಶಿಶ್ನ ಸಂಕೋಚನದ ವಿಧಗಳಿಗೆ ಅನುಗುಣವಾಗಿ ಅದರ ಕಾರಣಗಳನ್ನು ಕೂಡ ವಿಂಗಡಿಸಲಾಗಿದೆ.

ತೀವ್ರ ಸಂಕೋಚನ
ಮಾನಸಿಕ ಸ್ಥಿತಿ
ಒಬ್ಬ ವ್ಯಕ್ತಿಯು ತುಂಬಾ ಆತಂಕಕ್ಕೆ ಒಳಗಾದಾಗ ಅಥವಾ ಧೈರ್ಯ ಕಳೆದುಕೊಂಡ ವೇಳೆ ಈ ರೀತಿ ಆಗುವುದು. ಈ ವೇಳೆ ಜಗಳದ ಹಾರ್ಮೊನು ಆಂಡ್ರಿನಾಲಿನ್ ದೇಹದಲ್ಲಿ ಬಿಡುಗಡೆ ಆಗುವುದು. ಈ ಹಾರ್ಮೋನು ವ್ಯಾಸೊಕಾನ್ಸ್ಟ್ರಿಕ್ಟರ್ ಆಗಿ ಕಾರ್ಯನಿರ್ವಹಿಸುವುದು. ಇದರಿಂದಾಗಿ ಶಿಶ್ನವು ಸಂಕುಚಿತಗೊಳ್ಳುವುದು.

ತಾಪಮಾನ
ಶಿಶ್ನ ಸಂಕೋಚಿತಗೊಳ್ಳಲು ಇದು ಪ್ರಮುಖ ಕಾರಣ ಎಂದು ಹೇಳಲಾಗುತ್ತದೆ. ನೀವು ತುಂಬಾ ತಂಪಾದ ತಾಪಮಾನಕ್ಕೆ ಒಗ್ಗಿಕೊಂಡರೆ, ಆಗ ರಕ್ತನಾಳಗಳು ಕುಗ್ಗುವುದು ಮತ್ತು ದೇಹದಲ್ಲಿ ರಕ್ತಸಂಚಾರವು ಸರಿಯಾದ ರೀತಿಯಲ್ಲಿ ಆಗದೆ ಇರಬಹುದು. ಜನನೇಂದ್ರೀಯದ ಭಾಗದಲ್ಲಿ ರಕ್ತಸಂಚಾರ ಮತ್ತು ದೇಹದ ತಾಪಮಾನ ಕಾಪಾಡುವುದು ಅಗತ್ಯವಾಗಿದೆ. ತಂಪು ಯಾವುದೇ ಊತ ಮತ್ತು ಉರಿಯೂತ ತಗ್ಗಿಸುವುದು. ಅದೇ ರೀತಿಯಲ್ಲಿ ಶಿಶ್ನದ ಸಂಕೋಚನವನ್ನು ಕೂಡ.

ವ್ಯಾಯಾಮ
ಅತಿಯಾಗಿ ವ್ಯಾಯಾಮ ಮಾಡುವ ಕಾರಣದಿಂದಾಗಿ ಜನನೇಂದ್ರೀಯದ ಭಾಗಕ್ಕೆ ರಕ್ತಸಂಚಾರವು ಸರಿಯಾಗಿ ಆಗದೆ ಇರಬಹುದು. ವ್ಯಾಯಾಮದ ವೇಳೆ ಅತಿಯಾಗಿ ಆಮ್ಲಜನಕವು ಕರಗುವ ಕಾರಣದಿಂದಾಗಿ ಜನನೇಂದ್ರೀಯ ಭಾಗಕ್ಕೆ ಸರಿಯಾಗಿ ರಕ್ತಸಂಚಾರವಾಗದೆ ಇರಬಹುದು ಮತ್ತು ಶ್ವಾಸಕೋಶದ ಭಾಗಕ್ಕೆ ರಕ್ತಸಂಚಾರವು ಹೆಚ್ಚಾಗಬಹುದು. ಇದರಿಂದಾಗಿ ಶಿಶ್ನವು ಸಂಕುಚಿತವಾಗಬಹುದು.

ದೀರ್ಘ ಸಂಕೋಚನ
ನಿಯಮಿತವಾಗಿ ಇಲ್ಲದ ಲೈಂಗಿಕ ಚಟುವಟಿಕೆ
ದೇಹದ ಯಾವುದೇ ಭಾಗವಾದರೂ ಅದು ಹೃದಯವೇ ಆಗಿರಲಿ ಅಥವಾ ಜನನೇಂದ್ರೀಯವೇ ಆಗಿರಲಿ, ಸಂಪೂರ್ಣ ಆರೋಗ್ಯವನ್ನು ಕಾಪಾಡಿಕೊಳ್ಳಲು ಇವುಗಳು ನಿಯಮಿತವಾಗಿ ಕೆಲಸ ಮಾಡುವುದು ಅತೀ ಅಗತ್ಯವಾಗಿರುವುದು. ನಿಯಮಿತವಾಗಿ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳದೆ ಇದ್ದರೆ ಆಗ ಶಿಶ್ನದ ಗಾತ್ರವು ಕುಗ್ಗುವುದು. ಮೃಧುವಾದ ಸ್ನಾಯುಗಳು, ಎಲಾಸ್ಟಿನ್ ಮತ್ತು ಇತರ ಕೆಲವು ಅಂಗಾಂಶಗಳ ಮೇಲೆ ಇದು ಪರಿಣಾಮ ಬೀರಬಹುದು. ಇದರಿಂದಾಗಿ ಶಿಶ್ನದ ಗಾತ್ರದ ಮೇಲೆ ಪರಿಣಾಮವಾಗಬಹುದು ಮತ್ತು ನಿಮಿರುವಿಕೆ ಇದರಿಂದ ಸಾಧ್ಯವಾಗದೆ ಇರಬಹುದು.

ಕಾಯಿಲೆ ಮತ್ತು ಚಿಕಿತ್ಸೆ
ಕೆಲವೊಂದು ಕಾಯಿಲೆಗಳು ಮತ್ತು ಚಿಕಿತ್ಸೆಗಳಿಂದಲೂ ಶಿಶ್ನದ ಗಾತ್ರವು ಕುಗ್ಗುವುದು. ಪ್ರಾಸ್ಟೇಟ್ ಕ್ಯಾನ್ಸರ್ ಗೆ ಮಾಡುವಂತಹ ರ್ಯಾಡಿಕಲ್ ಪ್ರಾಸ್ಟೇಟೆಕ್ಟಮಿ ಚಿಕಿತ್ಸೆಯಲ್ಲಿ ಪ್ರಾಸ್ಟೇಟ್ ನ ಶಸ್ತ್ರಚಿಕಿತ್ಸೆ ಮೂಲಕ ತೆಗೆಯಬೇಕಾಗುತ್ತದೆ. ಇದರಿಂದಾಗಿ ಕುಗ್ಗುವಿಕೆ ಉಂಟಾಗುವುದು. ಪ್ರಾಸ್ಟೇಟ್ ಶಸ್ತ್ರಚಿಕಿತ್ಸೆ ವೇಳೆ ಶೇ.70ರಷ್ಟು ಪುರುಷರಲ್ಲಿ ಸಾಮಾನ್ಯದಿಂದ ಮಧ್ಯಮದ ತನಕ ಶಿಶ್ನದ ಕುಗ್ಗುವಿಕೆಯು ಉಂಟಾಗುವುದು ಎಂದು ಅಧ್ಯಯನ ವರದಿಗಳು ಹೇಳಿವೆ. ಅಸಾಮಾನ್ಯ ಸ್ನಾಯುಗಳು ಸಂಕೋಚನವು ಶಿಶ್ನವನ್ನು ಮತ್ತಷ್ಟು ದೇಹದೊಳಗೆ ಎಳೆದುಕೊಳ್ಳುವುದು.
ಶಿಶ್ನ ಸಂಕೋಚನಕ್ಕೆ ಮತ್ತೊಂದು ಕಾರಣವೆಂದರೆ ಶಿಶ್ನದಲ್ಲಿ ತೀವ್ರವಾದ ವಕ್ರತೆಯನ್ನು ಉಂಟು ಮಾಡುವುದು. ಇದರ ಪರಿಣಾಮವಾಗಿ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಕಠಿಣವಾಗುವುದು. ಈ ಕಾಯಿಲೆಯಿಂದಾಗಿ ಶಿಶ್ನದ ಗಾತ್ರವು ಕುಸಿಯಬಹುದು. ಶಿಶ್ನದ ಗಾತ್ರವು ಕುಗ್ಗಲು ಮತ್ತೊಂದು ಪ್ರಮುಖ ಕಾರಣವೆಂದರೆ ವಯಸ್ಸಾಗುವುದು ಮತ್ತು ಬೊಜ್ಜು. ವಯಸ್ಸಾಗುತ್ತಾ ಹೋದಂತೆ ಶಿಶ್ನ ಮತ್ತು ವೃಷಣದ ಗಾತ್ರವು ಸಣ್ಣದಾಗುವುದು. ರಕ್ತನಾಳಗಳಲ್ಲಿ ಉತ್ಪತ್ತಿಯಾಗುವಂತಹ ಕೊಬ್ಬಿನಿಂದಾಗಿ ಶಿಶ್ನಗಳಿಗೆ ರಕ್ತಸಂಚಾರವು ಕಡಿಮೆ ಆಗುವುದು. ಇದರಿಂದ ನಿಮಿರುವ ಅಂಗಾಂಶಗಳಲ್ಲಿ ಇರುವಂತಹ ಸ್ಪಾಂಜ್ ನಂತಹ ಟ್ಯೂಬ್ ನ ಸ್ನಾಯುಗಳ ಕೋಶಗಳಿಗೆ ಹಾನಿ ಆಗುವುದು. ಇದರ ಹೊರತಾಗಿ ಬೊಜ್ಜು ಶಿಶ್ನದ ಸಂಕೋಚನಕ್ಕೆ ಪ್ರಮುಖ ಕಾರಣವಾಗಿದೆ. ಹೊಟ್ಟೆಯ ಭಾಗದಲ್ಲಿ ಹೆಚ್ಚು ತೂಕವಿರುವ ಕಾರಣದಿಂದಾಗಿ ಶಿಶ್ನದ ಗಾತ್ರವು ತುಂಬಾ ಸಣ್ಣದಾಗಿ ಕಾಣಿಸ ಬಹುದು. ಹೊಟ್ಟೆಯ ಭಾಗದಲ್ಲಿ ತುಂಬಿಕೊಂಡಿರುವಂತಹ ಕೊಬ್ಬಿನಿಂದಾಗಿ ಶಿಶ್ನದ ಶಾಫ್ಟ್ ಗಳು ಮುಚ್ಚಿ ಹೋಗಬಹುದು. ಕೆಲವೊಂದು ಚಿಕಿತ್ಸೆಗಳಾಗಿರುವಂತಹ ಆಂಫೆಟಮೈನ್ ಮತ್ತು ಡೆಕ್ಸ್ಟ್ರೋಫೆಟಾಮೈನ್ ಮಿಶ್ರಣದ ಉಪ್ಪು, ಖಿನ್ನತೆ ವಿರೋಧಿ ಮತ್ತು ಆ್ಯಂಟಿ ಸೈಕೋಟಿಕ್ಸ್ ಔಷಧಿಗಳು ಶಿಶ್ನದ ಗಾತ್ರವು ಕುಗ್ಗಲು ಕಾರಣವಾಗಬಹುದು. ಪ್ರಾಸ್ಟ್ರೇಟ್ ಹಿಗ್ಗಿರುವುದನ್ನು ಕುಗ್ಗಿಸಲು ನೀಡುವಂತಹ ಔಷಧಿಯು ಶಿಶ್ನದ ಕುಗ್ಗುವಿಕೆಗೆ ಕಾರಣವಾಗುವುದು. ನಿರಂತರವಾಗಿ ದೀರ್ಘಕಾಲದ ತನಕ ಧೂಮಪಾನಮಾಡುತ್ತಲಿದ್ದರೆ ಆಗ ಶಿಶ್ನದ ಗಾತ್ರವು ಕುಗ್ಗಬಹುದು. ಸಿಗರೇಟಿನಲ್ಲಿ ಇರುವಂತಹ ರಾಸಾಯನಿಕಗಳು ಶಿಶ್ನದಲ್ಲಿ ಇರುವ ರಕ್ತನಾಳಗಳಿಗೆ ಹಾನಿ ಉಂಟು ಮಾಡಲಿದೆ ಮತ್ತು ಶಿಶ್ನಕ್ಕೆ ರಕ್ತ ಸಂಚಾರ ವಾಗುವುದು ಮತ್ತು ಅದು ಹಿಗ್ಗುವುದನ್ನು ತಡೆಯುವುದು.

ವೈದ್ಯರನ್ನು ಯಾವಾಗ ಭೇಟಿ ಮಾಡಬೇಕು?
ಶಿಶ್ನದಲ್ಲಿ ಊತ ಮತ್ತು ನೋವಿನ ಜತೆಗೆ ವಕ್ರತೆಯು ಕಂಡು ಬಂದರೆ ಆಗ ನೀವು ವೈದ್ಯರನ್ನು ತಕ್ಷಣವೇ ಭೇಟಿ ಮಾಡಬೇಕು. ಇದು ಶಿಶ್ನ ಸಂಕೋಚನ ಕಾಯಿಲೆಯ ಲಕ್ಷಣ ಆಗಿರಬಹುದು. ಶಿಶ್ನ ಸಂಕೋಚನಕ್ಕೆ ಇರುವ ಚಿಕಿತ್ಸೆಗಳು

ಪ್ಲೇಟ್ಲೆಟ್ ರಿಚ್ ಪ್ಲಾಸ್ಮಾ(ಪಿಆರ್ ಪಿ) ಥೆರಪಿ
ದೇಹದ ಅಂಗಾಂಶಗಳನ್ನು ಪುನರ್ಶ್ಚೇತನಗೊಳಿಸಲು ಮತ್ತು ಮರುನಿರ್ಮಿಸಲು ಇದು ತುಂಬಾ ಸುರಕ್ಷಿತ ಮತ್ತು ಪರಿಣಾಮಕಾರಿ ವಿಧಾನ ಎಂದು ಹೇಳಲಾಗುತ್ತದೆ. ಈ ಥೆರಪಿಗೆ ಯಾವುದೇ ಶಸ್ತ್ರಚಿಕಿತ್ಸೆ ಅಥವಾ ಗಾಯವಾಗುವುದಿಲ್ಲ. ಇದು ತುಂಬಾ ನೈಸರ್ಗಿಕ ಮತ್ತು ಶೀಘ್ರ ಪರಿಣಾಮ ವಿಧಾನ. ಇದನ್ನು ಹಲವಾರು ವೃತ್ತಿಪರ ಅಥ್ಲೆಟಿಕ್ ಗಳಿಗೆ ಸೂಚಿಸಲಾಗುತ್ತದೆ. ಯಾಕೆಂದರೆ ಈ ಅಥ್ಲೆಟಿಕ್ ಗಳ ಜೀವನಶೈಲಿಯು ಹೆಚ್ಚಾಗಿ ದೀರ್ಘಕಾಲ ತನಕ ವ್ಯಾಯಾಮದಲ್ಲಿ ಕಳೆದು ಹೋಗುವುದು.

ಶಸ್ತ್ರಚಿಕಿತ್ಸೆ
ಶಿಶ್ನ ಸಂಕೋಚನ ಕಾಯಿಲೆಗೆ ಗುರಿಯಾದರೆ ಆಗ ಶಸ್ತ್ರಚಿಕಿತ್ಸೆ ಮೂಲಕ ಈ ಭಾಗಕ್ಕೆ ರಕ್ತಸಂಚಾರವನ್ನು ಹೆಚ್ಚಿಸಬಹುದು. ಶಸ್ತ್ರಚಿಕಿತ್ಸೆ ಮತ್ತು ಅಲ್ಟ್ರಾಸೌಂಡ್ ತಂತ್ರಜ್ಞಾನವು ಗಾಯಗೊಂಡ ಅಂಗಾಂಶವನ್ನು ತೆಗೆಯುವುದು. ಆದರೆ ಗಾತ್ರವು ಸಣ್ಣದಾಗಿ ಇರುವುದು. ಅದಾಗ್ಯೂ, ಇದು ಲೈಂಗಿಕ ಚಟುವಟಿಕ ಯನ್ನು ಸುಧಾರಣೆ ಮಾಡುವುದು.

ಶಿಶ್ನ ಸಂಕೋಚನ ತಡೆಯಲು ಏನು ಮಾಡಬೇಕು
ಇದಕ್ಕೆ ಪಾಲಿಸಬೇಕಾದ ಮೊದಲ ಕ್ರಮವೆಂದರೆ ಅದು ಜೀವನ ಶೈಲಿ ಬದಲಾವಣೆ. ಧೂಮಪಾನವನ್ನು ತ್ಯಜಿಸಬೇಕು ಮತ್ತು ಆರೋಗ್ಯಕಾರಿ ಆಹಾರ ಸೇವನೆ ಮಾಡಬೇಕು.
ದೈಹಿಕವಾಗಿ ಚಟುವಟಿಕೆಯಿಂದ ಇರಬೇಕು.
ಧೂಮಪಾನ ಬಿಡಬೇಕು.
ಅತಿಯಾಗಿ ಆಲ್ಕೋಹಾಲ್ ಸೇವನೆ ಮಾಡುವುದನ್ನು ಕಡೆಗಣಿಸಬೇಕು.
ಶೀತ ಮತ್ತು ಒತ್ತಡವನ್ನು ಅರ್ಥ ಮಾಡಿಕೊಳ್ಳಬೇಕು. ಅಥ್ಲೆಟಿಕ್ ಗಳಲ್ಲಿ ತಾತ್ಕಾಲಿಕ ಸಂಕೋಚನವು ಉಂಟಾಗಬಹುದು.
ಕೆಗೆಲ್ ವ್ಯಾಯಾಮದಂತಹ ವ್ಯಾಯಾಮಗಳನ್ನು ಮಾಡಬೇಕು.
ಲೈಂಗಿಕವಾಗಿ ಚಟುವಟಿಕೆಯಿಂದ ಇರಬೇಕು ಮತ್ತು ಸುರಕ್ಷಿತ ಲೈಂಗಿಕತೆ ಅಭ್ಯಾಸ ಮಾಡಿಕೊಳ್ಳಿ.



Click it and Unblock the Notifications











