Latest Updates
-
ಸೂರ್ಯಗ್ರಹಣದ ಗೊಂದಲ: ಹಿರಿಯರ ನಂಬಿಕೆಗಳ ನಡುವೆ ಯುವ ದಂಪತಿಗಳು ಶಾಂತಿ ಕಾಪಾಡುವುದು ಹೇಗೆ? -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ನಿಮ್ಮ ಬಾಲ್ಕನಿಯಲ್ಲಿಯೇ ಸೃಷ್ಟಿಸಿ ಹಸಿರು ಸ್ವರ್ಗ! -
ಕೇರಳದ ಉಚಿತ ಓಣಂ ಕಿಟ್: ದಿನಸಿ ಪದಾರ್ಥಗಳು ಹಾಳಾಗದಂತೆ ಇಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಆಗಸ್ಟ್ ಕ್ರಾಂತಿ ದಿನ: ಸೋಶಿಯಲ್ ಮೀಡಿಯಾದಲ್ಲಿ ದೇಶಭಕ್ತಿ ಮೆರೆಯಲು ಇಲ್ಲಿದೆ ಬೆಸ್ಟ್ ಐಡಿಯಾಸ್! -
ಮಳೆಗಾಲದ ಓಟದ ನಂತರ ಕಾಲು ನೋವೇ? ಕೀಲುಗಳ ರಕ್ಷಣೆಗೆ ಈ 12 ನಿಮಿಷದ ಸರಳ ವ್ಯಾಯಾಮಗಳು -
ಶ್ರಾವಣ ಶಿವರಾತ್ರಿ 2026: ಮಳೆಗಾಲದಲ್ಲಿ ಜಾಗರಣೆ ಮಾಡುವಾಗ ಈ ಮುನ್ನೆಚ್ಚರಿಕೆ ಮರೆಯದಿರಿ, ಪೂಜೆ ಸುಗಮವಾಗಲಿ! -
ಬೆಂಗಳೂರಿನ ಹೈ-ಎಂಡ್ ಹೋಟೆಲ್ಗಳಲ್ಲಿ ಕೊಳೆತ ಆಹಾರ: ನೀವು ತಿನ್ನುವ ಊಟ ನಿಜಕ್ಕೂ ಸುರಕ್ಷಿತವೇ? -
2026ರ ಫ್ರೀಡಂ ಸೇಲ್: ಆನ್ಲೈನ್ ಶಾಪಿಂಗ್ನಲ್ಲಿ ಹಣ ಉಳಿಸಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದಲ್ಲಿ ಟಾಟಾ ಮುಂಬೈ ಮ್ಯಾರಥಾನ್ 2027 ತಯಾರಿ: ಸುರಕ್ಷಿತವಾಗಿ ಓಡಲು 14 ನಿಮಿಷಗಳ ಬೆಸ್ಟ್ ವರ್ಕೌಟ್ ಟಿಪ್ಸ್ -
ಬೆಕ್ಕು ಸಾಕುವ ದಂಪತಿಗಳೇ ಎಚ್ಚರ! ಜಗಳ ತಪ್ಪಿಸಲು ಈ 'ಪೆಟ್-ಕೇರ್ ಒಪ್ಪಂದ' ಕಡ್ಡಾಯ
ಹೆಚ್ಚಿನ ಪ್ರಮಾಣದಲ್ಲಿ ಅಯೋಡೀನ್ ಹೊಂದಿರುವ ಆರೋಗ್ಯಕಾರಿ ಆಹಾರಗಳು
ಮನುಷ್ಯನ ದಿನನಿತ್ಯದ ಕಾರ್ಯನಿರ್ವಹಣಾ ಚಟುವಟಿಕೆಗೆ ಅಗತ್ಯವಿರುವ ಪೋಷಕಾಂಶಗಳಲ್ಲಿ ಅಯೋಡೀನ್ ಖನಿಜಾಂಶ ಕೂಡ ಒಂದು. ಅಯೋಡೀನ್ ಥೈರಾಯಿಡ್ ಗ್ರಂಥಿಗೆ ಸಹಾಯಕವಾಗಿರುವುದಲ್ಲದೆ ದೇಹದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡುವಂತಹ ಮಹತ್ತರ ಪಾತ್ರ ವಹಿಸುತ್ತದೆ . ಆರೋಗ್ಯಕರವಾದ ಮೆಟಬೋಲಿಸಂ ಜೊತೆಗೆ ಮಹಾಮಾರಿಯಾದ ಕ್ಯಾನ್ಸರ್ ರೋಗವನ್ನು ತಡೆಗಟ್ಟುವಲ್ಲೂ ಕೂಡ ಇದು ಒಳ್ಳೆಯ ಅಂಶವಾಗಿ ಕೆಲಸ ಮಾಡುತ್ತದೆ . ಥೈರಾಯಿಡ್ ಗ್ರಂಥಿಯಲ್ಲಿ ಹಾರ್ಮೋನ್ ಉತ್ಪತ್ತಿಯೂ ಇದರಿಂದಲೇ ನಡೆಯುತ್ತದೆ . ಒಬ್ಬ ಆರೋಗ್ಯಕರ ಪುರುಷನಿಗೆ ಸರಿಸುಮಾರು 150 ಮಿಲಿಗ್ರಾಮ್ ನಷ್ಟು ಅಯೋಡೀನ್ ಅವಶ್ಯಕವಿದ್ದರೆ ಮಹಿಳೆಗೆ ಸುಮಾರು 220 ಮಿಲಿಗ್ರಾಮ್ ನಷ್ಟು ಮತ್ತು ಅದೇ ಒಬ್ಬ ಬಾಣಂತಿಗೆ 290 ಮಿಲಿಗ್ರಾಮ್ ನಷ್ಟು ಅಯೋಡೀನ್ ಪ್ರತಿನಿತ್ಯ ಅತ್ಯವಶ್ಯಕವಾಗಿದೆ .

ಅಯೋಡೀನ್ ಅಂಶ ದೇಹದಲ್ಲಿ ಕಡಿಮೆಯಾದರೆ ಏನಾಗುತ್ತದೆ ?
ಮನುಷ್ಯನ ದೇಹದಲ್ಲಿ ಅಯೋಡೀನ್ ಅಂಶ ಇಷ್ಟೆಲ್ಲಾ ಸಹಕಾರಿಯಾಗಿದೆ ಎಂದು ಅದನ್ನು ದೇಹಕ್ಕೆ ಅಯೋಡೀನ್ ಯುಕ್ತ ಆಹಾರದ ಮೂಲಕ ಹೆಚ್ಚಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ . ತೀರಾ ಕಡಿಮೆ ಕೂಡ ಮಾಡುವ ಹಾಗಿಲ್ಲ . ಎರಡೂ ಅಪಾಯಕಾರಿಯೇ . ಅಯೋಡೀನ್ ಕಡಿಮೆ ಮತ್ತು ಜಾಸ್ತಿ ಆದರೆ ಥೈರಾಯಿಡ್ ಗ್ರಂಥಿಯಿಂದ ಉತ್ಪತ್ತಿಯಾಗುವ ಥೈರಾಯಿಡ್ ಹಾರ್ಮೋನ್ ನ ಮೇಲೆ ಪ್ರತಿಕೂಲ ಪರಿಣಾಮ ಬೀರಿ ಅದರ ಪ್ರತಿಕ್ಷಣದ ಕೆಲಸಕ್ಕೆ ಅಡಚಣೆ ಉಂಟು ಮಾಡುತ್ತದೆ . ಇದರಿಂದ ಹೈಪೋ ಥೈರಾಯಿಡಿಸಂ , ರೋಗ ನಿರೋಧಕ ಶಕ್ತಿಯ ಕೊರತೆ , ಗಾಯ್ಟರ್ ಮತ್ತು ಮಕ್ಕಳಲ್ಲಿ ಮಂದಬುದ್ಧಿಯ ಲಕ್ಷಣ ತಲೆ ದೋರುವಂತೆ ಮಾಡುತ್ತದೆ .

ಅಯೋಡೀನ್ ಅಂಶ ದೇಹದಲ್ಲಿ ಕಡಿಮೆಯಾದರೆ ಏನಾಗುತ್ತದೆ ?
ಮೊದಲೇ ಹೇಳಿದಂತೆ ಥೈರಾಯಿಡ್ ಹಾರ್ಮೋನ್ ನಿಯಂತ್ರಣ ಮಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ . ನಮ್ಮ ಪ್ರತಿದಿನದ ಆಹಾರದಲ್ಲೇನಾದರೂ ಅಯೋಡೀನ್ ಅಂಶದ ಕೊರತೆ ಕಂಡುಬಂದರೆ ದೇಹದ ತೂಕ ಹೆಚ್ಚು ಕಡಿಮೆಯಾಗಬಹುದು , ಹಾರ್ಮೋನ್ ಅಸಮತೋಲನ ಉಂಟಾಗಬಹುದು , ಜ್ಞಾಪಕ ಶಕ್ತಿ ಕುಂಠಿತಗೊಳ್ಳಬಹುದು ಮತ್ತು ಸದಾ ಆಯಾಸವಾದಂತೆಯೇ ಕಾಣಬಹುದು.ಹಾಗಾದರೆ ಅಯೋಡೀನ್ ಅಂಶ ಮತ್ತು ಪ್ರಮಾಣ ಹೊಂದಿರುವ ಆಹಾರಗಳ ಬಗ್ಗೆ ಒಮ್ಮೆ ಕಣ್ಣಾಡಿಸೋಣವೇ !!!

ಹಾಲು
ನಾವು ಪ್ರತಿನಿತ್ಯ ಉಪಯೋಗಿಸುವ ಡೇರಿ ಪದಾರ್ಥವಾದ ಹಾಲಿನಲ್ಲೂ ಅಯೋಡೀನ್ ಅಂಶ ಹೇರಳವಾಗಿದೆ . ಪ್ರತಿದಿನ ರಾತ್ರಿ ಮಲಗುವ ಮುಂಚೆ ಒಂದು ಲೋಟ ಹಾಲು ಕುಡಿಯುವ ಅಭ್ಯಾಸವಿಟ್ಟುಕೊಂಡರೆ ನಿಮ್ಮ ದೇಹಕ್ಕೆ ಸುಮಾರು 56 ಮೈಕ್ರೋಗ್ರಾಮ್ ನಷ್ಟು ಅಯೋಡೀನ್ ಸೇರಿದಂತೆಯೇ . ಹಾಲಿನಲ್ಲಿ ಅಯೋಡೀನ್ ಅಷ್ಟೇ ಅಲ್ಲದೆ ವಿಟಮಿನ್ ಡಿ , ಕ್ಯಾಲ್ಸಿಯಂ , ಮ್ಯಾಂಗನೀಸ್ , ಫೋಲೇಟ್ , ಫಾಸ್ಫರಸ್ , ಪೊಟ್ಯಾಸಿಯಂ ಮತ್ತು ಮೆಗ್ನೀಷಿಯಂ ಅಂಶಗಳಿರುವುದರಿಂದ ಹಾಲು ಮಹಾನ್ ಖನಿಜಗಳ ತವರಾಗಿದೆ ಮತ್ತು ದೇಹಕ್ಕೆ ಎಲ್ಲಾ ಪೋಷಕಾಂಶಗಳು ಒಂದೇ ಕಡೆ ದೊರಕುತ್ತವೆ.

ಬೇಯಿಸಿದ ಆಲೂಗಡ್ಡೆ
ಬೇಯಿಸಿದ ಆಲೂಗಡ್ಡೆ ಯನ್ನು ಸಾಮಾನ್ಯವಾಗಿ ಎಲ್ಲರೂ ಮಧ್ಯಾಹ್ನದ ಮತ್ತು ರಾತ್ರಿ ಊಟದ ಸಮಯದಲ್ಲಿ ಉಪಯೋಗಿಸುತ್ತಾರೆ . ಒಂದು ಮಧ್ಯಮ ಗಾತ್ರದ ಬೇಯಿಸಿದ ಆಲೂಗಡ್ಡೆಯಲ್ಲಿ 60 ಮೈಕ್ರೋಗ್ರಾಮ್ ನಷ್ಟು ಅಯೋಡೀನ್ ಇದ್ದು ಮನುಷ್ಯನ ದೇಹಕ್ಕೆ ದಿನನಿತ್ಯ ಬೇಕಾದ ಅಯೋಡೀನ್ ನಲ್ಲಿ ಶೇಖಡಾ 40 ರಷ್ಟು ಅಯೋಡೀನ್ ಅಂಶ ಒಂದು ಆಲೂಗಡ್ಡೆಯಲ್ಲೇ ಸಿಕ್ಕಂತಾಗುತ್ತದೆ .ಇದಲ್ಲದೆ ಬೇಯಿಸಿದ ಆಲೂಗಡ್ಡೆಯಲ್ಲಿ ಫೈಬರ್ , ಪೊಟ್ಯಾಸಿಯಂ , ಮಿನರಲ್ ಮತ್ತು ವಿಟಮಿನ್ಗಳು ಅಧಿಕವಾಗಿವೆ .

ಹಿಮಾಲಯನ್ ಸಾಲ್ಟ್
ನಾವು ಪ್ರತಿದಿನ ಅಡುಗೆಗೆ ಬಳಸುವ ಟೇಬಲ್ ಸಾಲ್ಟ್ ನ ಬದಲು ಈ ಹಿಮಾಲಯನ್ ಸಾಲ್ಟ್ ಅನ್ನು ಉಪಯೋಗಿಸಬಹುದು . ಇದರಲ್ಲೂ ಸಹ ಐಯೋಡಿನ್ ಅಂಶ ಹೇರಳವಾಗಿದೆ . ಕೇವಲ ಅರ್ಧ ಚಮಚ ಹಿಮಾಲಯನ್ ಸಾಲ್ಟ್ ನಲ್ಲಿ 250 ಮೈಕ್ರೋಗ್ರಾಮ್ ನಷ್ಟು ಐಯೋಡಿನ್ ಅಂಶವಿದೆ . ಮಾನವನ ದೇಹಕ್ಕೆ ಅವಶ್ಯವಿರುವ ಶೇಖಡಾ 150 ರಷ್ಟು ಐಯೋಡಿನ್ ಅನ್ನು ಹಿಮಾಲಯನ್ ಉಪ್ಪು ಒದಗಿಸಬಲ್ಲುದು . ಹಾಗೆಂದು ಉಪ್ಪು ಅತಿಯಾಗಿ ತಿನ್ನಬೇಡಿ . ಸಾಮಾನ್ಯ ಪ್ರಮಾಣದಲ್ಲಿ ಬಳಸಿ .

ಒಣ ದ್ರಾಕ್ಷಿ
ಅಧಿಕ ಕ್ಯಾಲೊರಿ ಹೊಂದಿರುವ ವಸ್ತುವೆಂದರೆ ಅದು ಒಣ ದ್ರಾಕ್ಷಿ . ಇದರಲ್ಲಿ ಫೈಬರ್ , ಮಿನರಲ್ಸ್ , ವಿಟಮಿನ್ಗಳ ಜೊತೆಗೆ 13 ಮೈಕ್ರೋಗ್ರಾಮ್ ನಷ್ಟು ಐಯೋಡಿನ್ ಕೂಡ ಇದೆ . ಒಣ ದ್ರಾಕ್ಷಿಯ ಸೇವನೆ ಆರೋಗ್ಯಕ್ಕೆ ಬಹಳ ರೀತಿಯಲ್ಲಿ ಸಹಾಯಕವಾಗಿದೆ . ಆದರೆ ಇದರಲ್ಲೂ ಸ್ವಲ್ಪ ಮಟ್ಟಿಗೆ ಮಿತಿಯನ್ನು ಕಾಯ್ದುಕೊಳ್ಳುವುದು ಒಳ್ಳೆಯದು .

ಕೋಳಿ ಮೊಟ್ಟೆ
ಸ್ವಲ್ಪ ಸುಸ್ತು ಎಂದು ಹುಷಾರು ತಪ್ಪಿ ಡಾಕ್ಟರ್ ಬಳಿ ಹೋದರೆ , ಮೊದಲು ರಕ್ತ ಪರೀಕ್ಷೆ ಮಾಡಿ ಅಯೋಡೀನ್ ಸ್ವಲ್ಪ ಕಡಿಮೆ ಇದೆ ಎಂದು ವ್ಯದ್ಯರಿಗೆ ತಿಳಿದ ತಕ್ಷಣ ಅವರು ಮೊದಲು ಸೂಚಿಸುವುದೇ ಬೇಯಿಸಿದ ಕೋಳಿ ಮೊಟ್ಟೆಯನ್ನು . ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರಿಗೂ ಕೋಳಿ ಮೊಟ್ಟೆ ಅಯೋಡೀನ್ ಒದಗಿಸುವಲ್ಲಿ ಉಪಯುಕ್ತ . ಅದರಲ್ಲೂ ಮಕ್ಕಳಲ್ಲಿ ಬುದ್ಧಿಶಕ್ತಿ ಮತ್ತು ಜ್ಞಾಪಕಶಕ್ತಿ ಹೆಚ್ಚು ಮಾಡುತ್ತದೆ . ಬೇಯಿಸಿದ ಕೋಳಿ ಮೊಟ್ಟೆಯಲ್ಲಿ 12 ಮೈಕ್ರೋಗ್ರಾಮ್ ನಷ್ಟು ಅಯೋಡೀನ್ ಅಂಶ ವಿದ್ದು ಶೇಕಡಾ 9 ರಷ್ಟು ದೇಹಕ್ಕೆ ಒದಗಿಸುತ್ತದೆ ಎಂದು ವೈದ್ಯಲೋಕ ನಂಬಿದೆ .ಮೊಟ್ಟೆಯನ್ನು ಹಸಿರು ತರಕಾರಿಗಳೊಡನೆ ಸೇವಿಸುವ ಪದ್ಧತಿ ಬೆಳೆಸಿಕೊಂಡರೆ ಬಹಳ ಒಳ್ಳೆಯದು,

ಗಟ್ಟಿ ಮೊಸರು
ಡೇರಿ ಉತ್ಪನ್ನಗಳ ಅತಿ ಮುಖ್ಯ ಮತ್ತು ಅತಿ ಬೇಡಿಕೆಯ ಉತ್ಪನ್ನ ಎಂದರೆ ಅದು ಮೊಸರು . ಪ್ರತಿಯೊಬ್ಬರಿಗೂ ಪ್ರಿಯವಾದುದು . ಬೆಳಗಿನ ಉಪಾಹಾರದಲ್ಲಿ ಮೊಸರನ್ನೊಳಗೊಂಡಿರುವ ಯಾವುದೇ ತಿಂಡಿ ಅಥವಾ ಬೆರ್ರಿ ಹಣ್ಣುಗಳ ಜೊತೆ ಮೊಸರನ್ನು ಸೇವಿಸುವುದನ್ನು ರೂಡಿ ಮಾಡಿಕೊಂಡರೆ ಒಳ್ಳೆಯದು . ಇದರಲ್ಲಿ ಅಧಿಕವಾಗಿ ಅಡಕವಾಗಿರುವ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಅಂಶ ಹೊಟ್ಟೆಗೆ ತಂಪನ್ನೂ ಧಾರೆಯೆರೆಯುವುದರ ಜೊತೆಗೆ 1 ಕಪ್ ಮೊಸರಿನಲ್ಲಿ ಸುಮಾರು 154 ಮೈಕ್ರೋಗ್ರಾಮ್ ನಷ್ಟು ಅಯೋಡೀನ್ ಇರುವುದರಿಂದ ಆರೋಗ್ಯಕ್ಕೂ ಬಹಳವೇ ಪ್ರಯೋಜನಕಾರಿಯಾಗಿದೆ .

ಚೇದ್ದಾರ್ ಚೀಸ್
ನಿಮಗೆ ಚೀಸ್ ತಿನ್ನುವ ಹವ್ಯಾಸವೇನಾದರೂ ಇದ್ದರೆ ಬಹಳ ಒಳ್ಳೆಯದೇ . ನಿಮ್ಮ ಇಷ್ಟವಾದ ಸ್ಯಾಂಡ್ವಿಚ್ ನಲ್ಲಿ ಚೀಸ್ ಉಪಯೋಗಿಸಬಹುದು ಜೊತೆಗೆ ಸಲಾಡ್ನ ಮೇಲೂ ತುರಿದ ಚೀಸ್ ಬಳಸಬಹುದು . ಚೇದ್ದಾರ್ ಚೀಸ್ ನಲ್ಲಿ 12 ಮೈಕ್ರೋಗ್ರಾಮ್ ನಷ್ಟು ಅಯೋಡೀನ್ ಇದ್ದು ಅಧಿಕ ಕ್ಯಾಲೊರಿ ಹೊಂದಿದ ಪದಾರ್ಥವಾಗಿದೆ . ಆದ್ದರಿಂದ ಮಿತವಾಗಿ ಬಳಸಿ .

ಶೃಂಪ್ ಹುಳುಗಳು
ಶೃಂಪ್ ಹುಳುಗಳು ಸಮುದ್ರದಲ್ಲಿ ಸಿಗುವ ಸಮುದ್ರಾಹಾರ . ಇವುಗಳು ಅಯೋಡೀನ್ ಅಂಶಗಳಿಗೆ ಅತ್ಯುತ್ತಮ ಮೂಲದಾಯಕ ಜೀವಿಗಳಾಗಿವೆ . 3 ಔನ್ಸ್ ನಷ್ಟು ಶೃಂಪ್ ಗಳಲ್ಲಿ ಸುಮಾರು 35 ಮೈಕ್ರೋಗ್ರಾಮ್ ನಷ್ಟು ಅಯೋಡೀನ್ ಇದ್ದು ಪ್ರತಿದಿನ ಸೇವಿಸುವ ಹವ್ಯಾಸವಿಟ್ಟುಕೊಂಡಿರುವವರಿಗಂತೂ ಪ್ರೋಟೀನ್ , ಕ್ಯಾಲ್ಸಿಯಂ ಮತ್ತು ಇನ್ನಿತರೆ ಖನಿಜಗಳೂ ಮೈ ಸೇರುತ್ತವೆ . ಬೆಂಕಿಯಲ್ಲಿ ಸುಟ್ಟಿರುವ ಶೃಂಪ್ ಗಳಾದರೆ ತಿನ್ನಲೂ ರುಚಿ ಆರೋಗ್ಯಕ್ಕೂ ಬಹಳ ಒಳ್ಳೆಯದು .



Click it and Unblock the Notifications