For Quick Alerts
ALLOW NOTIFICATIONS  
For Daily Alerts

ಬಿಸಿಲಿಗೆ ಮೈ ಸುಡುವುದರಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ನಿಮ್ಮ ಪಥ್ಯದಲ್ಲಿರಲಿ ಈ 9 ಆಹಾರಗಳು

By Sushma Chathra
|

ಬೇಸಗೆ ಕಾಲ ಆರಂಭವಾಯ್ತು ಅಂದರೆ ಸೂರ್ಯನ ಶಾಖದಿಂದ ಚರ್ಮ ಸುಡುವ ಸಮಸ್ಯೆ ತನ್ನಿಂದ ತಾನೆ ಆರಂಭವಾಗಿ ಬಿಡುತ್ತೆ. ಸನ್ ಕ್ರೀಮ್ ಬಳಸಿ ಎಷ್ಟೇ ಚರ್ಮವನ್ನು ರಕ್ಷಿಸಿಕೊಳ್ಳಬೇಕು ಎಂದು ಜನರು ಪ್ರಯತ್ನಿಸಿದರೂ ಅದು ಸಾಧ್ಯವಾಗುವುದಿಲ್ಲ.

ಆದರೆ ತಮ್ಮ ಆಹಾರದಲ್ಲಿ ಈ 9 ಆಹಾರಗಳನ್ನು ತಿನ್ನಲು ಆರಂಭಿಸಿದರೆ ನೈಸರ್ಗಿಕವಾಗಿ ತಮ್ಮನ್ನು ತಾವು ಸೂರ್ಯನ ಶಾಖದಿಂದ ತಪ್ಪಿಸಿಕೊಂಡು ಚರ್ಮದ ರಕ್ಷಣೆ ಮಾಡಿಕೊಳ್ಳಬಹುದು. ಗ್ರೀನ್ ಟೀ, ಟೊಮೆಟೋ, ಸ್ಟ್ರಾಬೆರಿಗಳು, ಚಾಕಲೇಟ್ಸ್, ಹಸಿರು ತರಕಾರಿಗಳು,ಸೌತೆಕಾಯಿ, ಕಲ್ಲಂಗಡಿ ಹಣ್ಣು, ಕ್ಯಾರೆಟ್, ಒಮೆಗಾ 3 ಅಂಶಗಳನ್ನು ಒಳಗೊಂಡಿರುವ ಆಹಾರಗಳಾದ ಫಿಶ್ ಆಯಿಲ್, ಲೆಟ್ಯೂಸ್ ಗಳು, ಎಳ್ಳು ಇವುಗಳ ಸೇವನೆ ಬಹಳ ಒಳ್ಳೆಯದು.

ಚಳಿಗಾಲದ ನಂತ್ರ, ನಮ್ಮನ್ನು ಸುಡುಬೇಸಿಗೆ ಕಾಲ ಹೈರಾಣು ಮಾಡಲು ಸಜ್ಜಾಗಿಬಿಡುತ್ತೆ. ಅದರಲ್ಲೂ ಈಗಿನ ಬೇಸಿಗೆ ನಮ್ಮ ಸೌಂದರ್ಯವನ್ನು ಹಾಳು ಮಾಡಿ ಬಿಡಲು ತುದಿಗಾಲಲ್ಲಿ ನಿಂತಿರುತ್ತೆ.

ಆದರೆ ಬೇಸಿಗೆ ಒಂಥರಾ ಖುಷಿಯ ದಿನಗಳು, ಶಾಲೆಗೆ ರಜೆ, ಮಕ್ಕಳಿಗೆ ಎಂಜಾಯ್ ಮಾಡೋ ಸಮಯ, ಟೂರು, ಟ್ರೀಪ್ ಅಂತ ಸುತ್ತಾಡೋ ಟೈಮಿದು, ಫ್ಯಾಮಿಲಿ ಎಲ್ಲಾ ಸೇರಿ ರಜೆಯ ಮಜಾ ಸವಿಯಲು ಪ್ರವಾಸ ಹೋಗೋದು ಹೀಗೆ ತರತರದ ಆಟಪಾಠಗಳಲ್ಲಿ ತೊಡಗಿಕೊಳ್ಳೋದು ಸರ್ವೇಸಾಮಾನ್ಯ.

ಬಟ್ಟೆ ಬೇಗನೆ ಒಣಗುತ್ತೆ ಅನ್ನೋದು ಹೊರತು ಪಡಿಸಿದರೆ ಬೇಸಿಗೆ ನಮಗೆ ಇನ್ನೇನನ್ನು ಹೆಚ್ಚು ಕೊಡುತ್ತದೆ ಹೇಳಿ. ಹಪ್ಪಳ, ಸಂಡಿಗೆ ಮಾಡಿಟ್ಟುಕೊಳ್ಳೋಕೆ ಬೇಸಿಗೆ ಅನುಕೂಲ ಅಷ್ಟೇ. ಆದರೆ ಬೇಸಿಗೆಯ ದಿನಗಳನ್ನು ಹೇಗೆ ಕಳೆಯಬೇಕು, ಆರೋಗ್ಯದ ದೃಷ್ಟಿಯಿಂದ ಬೇಸಿಗೆಯಲ್ಲಿ ನಾವು ಹೇಗಿರಬೇಕು ಅಂತ ಯಾವುದೇ ಟಿವಿ ಕಾರ್ಯಕ್ರಮಗಳಾಗಲಿ, ಚಲನಚಿತ್ರಗಳಾಗಲಿ ವಿವರಿಸುವುದಿಲ್ಲ.

ಬೇಸಿಗೆಯ ರಜೆಯ ಮಜವನ್ನು, ಬೇಸಿಗೆಯ ಸುಂದರ ದಿನಗಳನ್ನು ಕರಾಳಗೊಳಿಸುವುದು ಮತ್ತು ನಮ್ಮ ಸೌಂದರ್ಯಕ್ಕೆ ಕೊಡಲಿಪೆಟ್ಟು ಕೊಡುವುದು ಬೇಸಿಗೆಯ ಸೂರ್ಯನ ಶಾಖದಿಂದ ಹೈರಾಣಾಗುವ ನಮ್ಮ ಚರ್ಮದ ಬಣ್ಣ ಅರ್ಥಾತ್ ಸನ್ ಬರ್ನ್.

ಮನುಷ್ಯನ ಚರ್ಮದ ಮೇಲೆ ಬೀಳುವ ಸೂರ್ಯನ ಕಿರಣಗಳು ನಮ್ಮ ಚರ್ಮವನ್ನು ಕಪ್ಪು ಬಣ್ಣಕ್ಕೆ ತಿರುಗುವಂತೆ ಮಾಡುವ ಪ್ರಕ್ರಿಯೆಯಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಹೆಚ್ಚಿನವರು ಬಳಸುವುದು ಒಂದು ಸುಲಭ ಮಾರ್ಗವೆಂದರೆ ಸನ್ ಕ್ರೀಮ್ ಹಚ್ಚಿಕೊಳ್ಳುವುದು.

ಅದೇ ಕಾರಣಕ್ಕೆ ಕೆಮಿಕಲ್ ಮಿಶ್ರಿತ ಸನ್ ಕ್ರೀಮ್ ಕಂಪೆನಿಯವರು ಬೇಸಿಗೆಯಲ್ಲಿ ಹೆಚ್ಚಾಗಿ ಹಣ ಸಂಪಾದಿಸಿಕೊಂಡು ಬಿಡುತ್ತಾರೆ.ಆದರೆ ನೆನಪಿರಲಿ ಇದು ನಿಮಗೆ ಶಾಶ್ವತ ಪರಿಹಾರವಲ್ಲ. ಹೀಗೆ ಹಚ್ಚಿಕೊಳ್ಳುವ ಕ್ರೀಮ್ ಗಳು ಅಡ್ಡಪರಿಣಾಮಗಳನ್ನು ಮಾಡುವ ಸಾಧ್ಯತೆಗಳಿರುತ್ತೆ.

ಅದಕ್ಕಾಗಿ ನೀವು ಬೇರೆಯದ್ದೇ ನೈಸರ್ಗಿಕ ಮಾರ್ಗಗಳನ್ನು ಅನುಸರಿಸುವುದು ಸೂಕ್ತ. ನೈಸರ್ಗಿಕ ಮಾರ್ಗವೆಂದರೆ ಸರಿಯಾದ ಆಹಾರ ಕ್ರಮ ಅಳವಡಿಕೆ. ಹಾಗಾದ್ರೆ ಯಾವ ಆಹಾರಗಳನ್ನು ಸೇವಿಸಿದ್ರೆ ನೀವು ಸೂರ್ಯನ ಕಿರಣಗಳು ಉಂಟುಮಾಡುವ ಪರಿಣಾಮಗಳನ್ನು ತಡೆದುಕೊಂಡು ಸುಂದರವಾಗಿರಬಹುದು ಎಂದು ತಿಳಿದುಕೊಳ್ಳಲು ಈ ಕೆಳಗಿನ ವಿವರಗಳನ್ನು ಓದಿ.

1. ಗ್ರೀನ್ ಟೀ

1. ಗ್ರೀನ್ ಟೀ

ಹೆಚ್ಚಿನವರು ಗ್ರೀನ್ ಟೀ ಬಗ್ಗೆ ತಿಳಿದುಕೊಂಡಿರುತ್ತೀರಿ. ಪ್ರಮುಖವಾಗಿ ತೂಕ ಕಡಿಮೆಗೊಳಿಸಲು ಗ್ರೀನ್ ಟೀ ಸಹಕಾರಿ ಅನ್ನುವ ವಿಚಾರ ನಿಮಗೆಲ್ಲ ತಿಳಿದೇ ಇರುತ್ತೆ. ಆದ್ರೆ ಇದೊಂದೇ ಉಪಯೋಗವೆಂದು ಭಾವಿಸಬೇಡಿ.

ಗ್ರೀನ್ ಟೀ ಸೇವನೆಯಿಂದ ಉಂಟಾಗುವ ಮತ್ತೊಂದು ಪ್ರಮುಖ ಉಪಯೋಗವೆಂದರೆ ಹೃದಯದ ಸಮಸ್ಯೆಯಿಂದ ನಮ್ಮನ್ನು ದೂರವಿಡುವುದು. ಕಣ್ಣಿನ ಸಮಸ್ಯೆಯಿಂದ ಕೂಡ ನಮ್ಮನ್ನು ರಕ್ಷಿಸಲು ಗ್ರೀನ್ ಟೀ ಸಹಾಯ ಮಾಡುತ್ತೆ.

ಗ್ರೀನ್ ಟೀ ಸೇವನೆಯಿಂದ ಸೂರ್ಯನಿಂದ ಬಿಡುಗಡೆಗೊಳ್ಳುವ ನೇರಳಾತೀತ ಕಿರಣಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಸಾಧ್ಯವಿದೆ. ಗ್ರೀನ್ ಟೀಯಲ್ಲಿ ಆಂಟಿ ಆಕ್ಸಿಡೆಂಟ್(ANTI OXIDANT) EGCGಯನ್ನು ಒಳಗೊಂಡಿರುತ್ತೆ.

ಇದು ಒಂದು ರೀತಿಯ ಶುದ್ಧೀಕರಣ ದ್ರವವಾಗಿದ್ದು ಅದನ್ನು ಟೆನ್ನಿಸ್ ಎಂದು ಕರೆಯಲಾಗುತ್ತೆ. ಇದರಿಂದ ಹಲವು ರೀತಿಯ ಉಪಯೋಗಗಳಿದ್ದು ಅವುಗಳಲ್ಲಿ ಪ್ರಮುಖವಾದದ್ದು ಸೂರ್ಯನ ನೇರಳಾತೀತ ಕಿರಣಗಳಿಂದ ಉಂಟಾಗುವ ಚರ್ಮದ ಸಮಸ್ಯೆಯನ್ನು ಆಗದಂತೆ ತಡೆಯುವುದು.

ಚರ್ಮದ ಜೀವಕೋಶಗಳಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುವ ಸಾಮರ್ಥ್ಯ ಇದಕ್ಕಿದೆ.

 2. ಟೋಮೆಟೋ

2. ಟೋಮೆಟೋ

ಲೈಕೋಪೆನ್ ಅನ್ನೋ ಆಂಟಿಆಕ್ಸಿಡೆಂಟ್ ಗಳನ್ನು ಟೆಮೆಟೋಗಳು ಒಳಗೊಂಡಿರುತ್ತೆ. ಲೈಕೋಪೆನ್ ಮತ್ತು ಅದರ ಜೊತೆಗಿರುವ ವಿಟಮಿನ್ ಸಿ ಅಂಶವು ಟೋಮೆಟೋಗೆ ಕೆಂಪು ಬಣ್ಣ ಬರಲು ಕಾರಣವಾಗಿದ್ದು, ಇವುಗಳು ಚರ್ಮವು ಹೊಳಪು ಮತ್ತು ಪಸೆಯಿಂದ ಕೂಡಿರುವಂತೆ ನೋಡಿಕೊಳ್ಳುತ್ತೆ.

ಅದೇ ಕಾರಣಕ್ಕೆ ಸೂರ್ಯನ ಯುವಿ ಕಿರಣಗಳು ಉಂಟು ಮಾಡುವ ಯಾವುದೇ ದುಷ್ಪರಿಣಾಮವೂ ನಮ್ಮ ಚರ್ಮದ ಮೇಲೆ ಆಗದಂತೆ ತಡೆಯುವ ಸಾಮರ್ಥ್ಯ ಟೊಮೆಟೋಗಿದೆ. ಹಾಗಾಗಿ ಬೇಸಿಗೆಯಲ್ಲಿ ಟೊಮೆಟೋ ಬೆಲೆ ಹೆಚ್ಚಿದ್ದರೂ ಕೂಡ ಖರೀದಿಸಿ ಸೇವಿಸುವುದನ್ನು ಮರೆಯಬೇಡಿ.

3. . ಸ್ಟ್ರಾಬೆರಿ

3. . ಸ್ಟ್ರಾಬೆರಿ

ಸ್ವರ್ಗಕ್ಕೆ ಕಿಚ್ಚು ಹಚ್ಚಿಸುವಂತ ರುಚಿ ಮಾತ್ರವಲ್ಲ, ಬದಲಾಗಿ ವಿಟಮಿನ್ ಎ, ಬಿ, ಸಿ ಅಂಶಗಳನ್ನು ಸ್ಟ್ರಾಬೆರಿ ಹೊಂದಿರುತ್ತದೆ. ವಿಟಮಿನ್ ಸಿ ಅಂಶವು ಪ್ರಮುಖವಾಗಿ ನಮ್ಮ ಚರ್ಮ ಕಾಂತಿಯುತವಾಗಿರಲು ಸಹಾಯ ಮಾಡುತ್ತೆ. ಇವುಗಳು ಸೂರ್ಯನ ನೇರಳಾತೀತ ಕಿರಣಗಳನ್ನು ತಡೆಹಿಡಿದು ಚರ್ಮದ ಒಳಗೆ ಪ್ರವೇಶಿಸದಂತೆ ನೋಡಿಕೊಳ್ಳುತ್ತೆ. ಆಂಥೋಸಿಯಾನ್ಸಿಸ್ ಮತ್ತು ಫೈಟೋನ್ಯೂಟ್ರಿಯಂಟ್ಸ್ ಗಳೇ ಈ ಭದ್ರತೆಯನ್ನು ಚರ್ಮಕ್ಕೆ ನೀಡಲು ಕಾರಣವಾಗಿರುತ್ತವೆ. ಆಂಥೋಸಿಯಾನ್ಸಿಸ್ ಗಳಲ್ಲಿ ಆಂಟಿ ಇನ್ಫಮೇಟರಿ ಮತ್ತು ಆಂಟಿಆಕ್ಸಿಡೆಂಟ್ ಗುಣಗಳಿದ್ದು ಇವುಗಳು ಸೂರ್ಯನಿಂದ ನಿಮ್ಮ ಸೌಂದರ್ಯಕ್ಕಾಗುವ ಪೆಟ್ಟನ್ನು ತಪ್ಪಿಸುತ್ತೆ.

4. . ಚಾಕಲೇಟ್ಸ್

4. . ಚಾಕಲೇಟ್ಸ್

ತಮ್ಮ ರುಚಿಯ ಜೀವಕೋಶಗಳಿಗೆ ಅಂದರೆ ನಾಲಗೆಗೆ ಸಿಹಿಸಿಹಿ ಅನುಭವ ನೀಡಿ ವಾವ್ ಅನ್ನಿಸುವ ಟೇಸ್ಟ್ ಕೋಡೋದು ಚಾಕಲೇಟ್ಸ್ ಗಳು.

ಒಂದು ಅಧ್ಯಯನ ತಿಳಿಸಿರುವಂತೆ ಕೋಕೋಬೀನ್ಸ್ ಅಂದರೆ ಚಾಕಲೇಟ್ ನಲ್ಲಿರುವ ಮೇಲ್ದರ್ಜೆಯ ಪ್ಲೆವೋನಾಯ್ಡ್ಸ್ ಗಳು ಚರ್ಮಕ್ಕಾಗುವ ಕೆಲವು ಸಮಸ್ಯೆಗಳನ್ನು ತಡೆಯುವಲ್ಲಿ ಸಹಕಾರಿ. ಕೇವನ ಸನ್ ಬರ್ನ್ ಮಾತ್ರವಲ್ಲ ಇತರೆ ಚರ್ಮ ಸಂಬಂಧಿ ಕೆಲವು ಸಮಸ್ಯೆಗಳಿಗೂ ಕೂಡ ಇದು ಪರಿಹಾರ ನೀಡುತ್ತೆ. ಆದ್ರೆ ನೆನಪಿರಲಿ ಎಲ್ಲಾ ಚಾಕಲೇಟ್ ನಲ್ಲೂ ಈ ಗುಣಗಳಿರುವುದಿಲ್ಲ. ಬದಲಾಗಿ ಡಾರ್ಕ್ ಚಾಕಲೇಟ್ಸ್ ನಲ್ಲಿ ಮಾತ್ರ ಈ ಗುಣಗಳಿರುತ್ತೆ. ಅತಿಯಾದ್ರೆ ಅಮೃತವೂ ವಿಷವಾಗುತ್ತೆ. ಹಾಗೆ ಅತಿಯಾದ ಪ್ರಮಾಣದ ಕೋಕೋ ಸೇವನೆ ಆರೋಗ್ಯಕ್ಕೆ ಹಾನಿಕರವೇ.

ಕೆಲವು ನಿರ್ದಿಷ್ಟ ಪ್ರಮಾಣದ ಕೋಕೋ ಸೇವನೆಯಿಂದ ಮಾತ್ರ ಚರ್ಮಕ್ಕೆ ಒಳಿತಾಗುತ್ತದೆ. ಅದರ ಆಂಟಿ ಆಕ್ಸಿಡೆಂಟ್ ಗಳು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕಾದರೆ ಪ್ರಮಾಣ ತುಂಬಾ ಮುಖ್ಯವಾಗುತ್ತೆ.

5. ಹಸಿರು ತರಕಾರಿಗಳು

5. ಹಸಿರು ತರಕಾರಿಗಳು

ಇವುಗಳಿಗೆ ಫ್ರೀ ರ್ಯಾಡಿಕಲ್ ಗಳ ಜೊತೆ ಫೈಟ್ ಮಾಡುವ ಆಂಟಿಆಕ್ಸಿಡೆಂಟ್ಗಳನ್ನು ಒಳಗೊಂಡಿದ್ದು ಸೂರ್ಯನ ಕಿರಣಗಳಿಂದ ಉಂಟಾಗುವ ಚರ್ಮದ ಸಮಸ್ಯೆಗೆ ಸೂಕ್ತ ರಕ್ಷಣೆ ನೀಡುವ ಸಾಮರ್ಥ್ಯವಿರುತ್ತೆ.

ಕೊತ್ತುಂಬರಿ, ಪಾಲಕ್, ಪುದೀನಾ ಹೀಗೆ ಎಲ್ಲಾ ಸೊಪ್ಪುಗಳು ಅದರಲ್ಲೂ ಕಡುಹಸಿರು ಬಣ್ಣದಲ್ಲಿರುವ ಸೊಪ್ಪುಗಳಿಂದ ನಿಮಗೆ ಲಾಭ ಹೆಚ್ಚು. ಬೇಸಿಗೆಯಲ್ಲಿ ಚರ್ಮದ ರಕ್ಷಣೆಯ ಹೊಣೆಯನ್ನು ಇವುಗಳು ಹೊತ್ತುಕೊಂಡುಬಿಡುತ್ತೆ. ಹಾಗಾಗಿ ಆಗಾಗ ಸೊಪ್ಪುಗಳನ್ನು ಸೇವಿಸುವುದನ್ನು ಬೇಸಿಗೆಯಲ್ಲಿ ಮರೆಯಬೇಡಿ.

6. .ಒಮೆಗಾ 3

6. .ಒಮೆಗಾ 3

ಒಮೆಗಾ 3 ಅಂಶಗಳನ್ನು ಒಳಗೊಂಡಿರುವ ಆಹಾರಗಳಾದ ಫಿಶ್ ಆಯಿಲ್, ಲೆಟ್ಯೂಸ್ ಗಳು, ಎಳ್ಳು ಇವುಗಳು ಚರ್ಮದ ಆಕ್ನೆ ಸಮಸ್ಯೆ, ಚರ್ಮ ಜೋತುಬೀಳುವಿಕೆಯ ಸಮಸ್ಯೆಗೆ ಪರಿಹಾರ ನೀಡುತ್ತೆ ಮತ್ತು ಚರ್ಮದ ಕಾಂತಿ ಹೆಚ್ಚಿಸುತ್ತೆ ಅನ್ನುವುದು ನಿಮಗೆ ತಿಳಿದೇ ಇದೆ.

ಆದರೆ ಅದರ ಜೊತೆಗೆ ಸನ್ ಬರ್ನ್ ಸಮಸ್ಯೆಗೂ ಕೂಡ ಪರಿಹಾರ ನೀಡುತ್ತೆ ಅಂದರೆ ನೀವು ನಂಬಲೇಬೇಕು. ಅಷ್ಟೇ ಅಲ್ಲ ಚರ್ಮದ ಕ್ಯಾನ್ಸರ್ ಸಮಸ್ಯೆ ಸೇರಿದಂತೆ ಇನ್ನೂ ಹಲವು ಚರ್ಮದ ಸಮಸ್ಯೆಯ ಪರಿಹಾರಕ್ಕೆ ಇದು ಸಹಕಾರಿಯಾಗಿದೆ. ಸೂರ್ಯನ ಯುವಿ ಕಿರಣಗಳಿಂದಾಗುವ ಪರಿಣಾಮಗಳನ್ನು ನಿಯಂತ್ರಣದಲ್ಲಿಟ್ಟು ಫ್ರೀ ರ್ಯಾಡಿಕಲ್ ಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿದೆ.

7. . ಸೌತೆಕಾಯಿ

7. . ಸೌತೆಕಾಯಿ

ಸೌತೆಕಾಯಿ ತನ್ನ ಹೈಡ್ರೇಟಿಂಗ್ ಗುಣಗಳಿಂದಲೇ ಫೇಮಸ್. ಬೇಸಿಗೆಯ ಕಾಲದಲ್ಲಿ ಇದು ನಮ್ಮ ಚರ್ಮ ಮತ್ತು ದೇಹ ತಣ್ಣಗಿಡಲು ಸಹಕರಿಸುತ್ತೆ. ಬೇಸಿಗೆಯಲ್ಲಿ ಸಹಜವಾಗೇ ವಾತಾವರಣದ ಉಷ್ಣತೆಯಿಂದಾಗಿ ನಮ್ಮ ದೇಹದ ಉಷ್ಣತೆ ಹೆಚ್ಚುತ್ತಲೇ ಇರುತ್ತೆ.

ಅದೆಲ್ಲದಕ್ಕಿಂತ ಹೆಚ್ಚಾಗಿ ಸೌತೆಕಾಯಿಯಲ್ಲಿ ವಿಟಮಿನ್ ಸಿ, ಫ್ಲೆವೋನಾಯ್ಡ್ಸ್, ಮತ್ತು ಇತರೆ ಆಂಟಿ ಆಕ್ಸಿಡೆಂಟ್ ಗಳಿದ್ದು ಇವುಗಳು ನಮ್ಮ ಚರ್ಮವನ್ನು ಸೂರ್ಯನ ನೇರಳಾತೀತ ಕಿರಣಗಳಿಂದ ರಕ್ಷಿಸುತ್ತದೆ.

8. ಕಲ್ಲಂಗಡಿ ಹಣ್ಣು

8. ಕಲ್ಲಂಗಡಿ ಹಣ್ಣು

ತನ್ನ ನೀರಿನಂಶ ಮತ್ತು ದೇಹವನ್ನು ಹೈಡ್ರೇಟ್ ಆಗಿಡುವ ಗುಣಗಳಿಂದಲೇ ಫೇಮಸ್ ಆಗಿರುವ ಹಣ್ಣೆಂದರೆ ಅದು ಕಲ್ಲಂಗಡಿ ಹಣ್ಣು.. ಇದರಲ್ಲಿರುವ ಹೆಚ್ಚಿನ ಪ್ರಮಾಣದ ನೀರು ಮತ್ತು ಸಿಹಿಯ ಅಂಶವೇ ಈ ಹಣ್ಣಿನ ಪ್ಲಸ್ ಪಾಯಿಂಟ್.

ಅದರ ಜೊತೆಗೆ ಇದು ಆಂಟಿ ಆಕ್ಸಿಡೆಂಟ್ ಗಳಿಂದ ರಿಚ್ ಆಗಿದೆ ಅದೇ ಕಾರಣಕ್ಕೆ ಸೂರ್ಯನ ಕಿರಣಗಳಿಂದ ರಕ್ಷಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.

9. ಕ್ಯಾರೆಟ್

9. ಕ್ಯಾರೆಟ್

ಕ್ಯಾರೆಟ್ ನಲ್ಲಿ ವಿಟಮಿನ್ ಎ ಅಂಶವು ಅಧಿಕವಾಗಿರುತ್ತೆ. ಅದೇ ಕಾರಣಕ್ಕೆ ಕಣ್ಣಿನ ಆರೋಗ್ಯಕ್ಕೆ ಕ್ಯಾರೆಟ್ ಬಹಳ ಒಳ್ಳೆಯದು ಎಂದು ಹೇಳಲಾಗುತ್ತೆ. ಅದರಲ್ಲಿ ಬೀಟಾಕ್ಯಾರೋಟಿನ್ ಅನ್ನುವ ಅಂಶವಿರುತ್ತೆ.

ಇದೇ ನಮ್ಮ ದೇಹಕ್ಕೆ ವಿಟಮಿನ್ ಎ ಅಂಶವನ್ನು ಒದಗಿಸುವುದು. ಒಂದು ಅಧ್ಯಯನ ತಿಳಿಸಿರುವ ಪ್ರಕಾರ ಈ ಬೀಟಾ ಕ್ಯಾರೋಟಿನ್ ಅಂಶಕ್ಕೂ ಬಿಸಿಲಿನ ಬೇಗೆಯಿಂದ ಉಂಟಾಗುವ ಸನ್ ಬರ್ನ್ ಸಮಸ್ಯೆಯ ನಿಯಂತ್ರಣಕ್ಕೂ ಒಂದಕ್ಕೊಂದು ಲಿಂಕ್ ಇದೆ. ಅಂದರೆ ಈ ಬೀಟಾ ಕ್ಯಾರೋಟಿನ್ ಅಂಶವೂ ನಿಮ್ಮ ಚರ್ಮಕ್ಕಾಗುವ ಸೂರ್ಯನ ಬಿಸಿಲಿನ ತಾಪದಿಂದ ಉಂಟಾಗುವ ಸಮಸ್ಯೆಯಿಂದ ರಕ್ಷಿಸುತ್ತದೆ.

ಇವು ನಮ್ಮ 9 ಆಹಾರಗಳ ಲಿಸ್ಟ್. ಪ್ರಯತ್ನಿಸಿ ನೋಡಿ. ಆದರೆ ಇವುಗಳ ಜೊತೆಗೆ ಸನ್ಸ್ ಕ್ರೀಮ್ ಬಳಕೆ ಕೂಡ ಮಾಡಬೇಕಾಗುತ್ತದೆ.

Read more about: ಆಹಾರ ಸೂರ್ಯ
English summary

ಬಿಸಿಲಿಗೆ ಮೈ ಸುಡುವುದರಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ನಿಮ್ಮ ಪಥ್ಯದಲ್ಲಿರಲಿ ಈ 9 ಆಹಾರಗಳು

Most of us use sunscreens to protect ourselves from the glaring heat the sun emits mercilessly on us fragile humans. This practice should be continued, for most of the part, however, it is also important to note that there are certain food items that we should include in our everyday diet, which will keep us cool from the inside as well as protect our skin from sunburn.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more