For Quick Alerts
ALLOW NOTIFICATIONS  
For Daily Alerts

ಜ್ವರ ಬಂದಾಗ ಈ ಮನೆಮದ್ದುಗಳನ್ನು ಫಾಲೋ ಮಾಡಿದರೆ ಸಾಕು, ಕೂಡಲೇ ಕಡಿಮೆಯಾಗುವುದು

|

98.6 ಡಿಗ್ರಿ ಫ್ಯಾರನ್ ಹೀಟ್ ಗಿಂತಲೂ ದೇಹದ ತಾಪಮಾನ ಹೆಚ್ಚಿದ್ದರೆ ಇದನ್ನು ಜ್ವರ ಎಂದು ಕರೆಯಬಹುದು. ಜ್ವರಕ್ಕೆ ವ್ಯದ್ಯಕೀಯ ಪದ 'ಪೈರೀಕ್ಸಿಯಾ' ಎಂಬುದಾಗಿದೆ. ವಾಸ್ತವವಾಗಿ ಜ್ವರ ಒಂದು ವ್ಯಾಧಿಯಲ್ಲ, ಬದಲಿಗೆ ರೋಗ ನಿರೋಧಕ ವ್ಯವಸ್ಥೆಯ ಒಂದು ವಿಧಾನ. ಅಲ್ಲದೇ ಯಾವುದಾದರೊಂದು ರೋಗ ಆವಸಿಸಲು ಪ್ರಾರಂಭಿಸಿದಾಗ ಇದನ್ನು ಹಿಮ್ಮೆಟ್ಟಿಸಲು ದೇಹ ಕೈಗೊಳ್ಳುವ ಕ್ರಮವೂ ಆಗಿದೆ. ಹಾಗಾಗಿ ಜ್ವರ ಬಂದಿದ್ದರೆ ಮುಂದೆ ಯಾವುದೋ ಕಾಯಿಲೆ ಎದುರಾಗಲಿದೆ ಎಂಬ ಸ್ಪಷ್ಟ ಸೂಚನೆಯಾಗಿದೆ.

ಸಾಮಾನ್ಯವಾಗಿ ಶೀತ ಮತ್ತು ಫ್ಲೂ ಮೊದಲಾದ ಕಾಯಿಲೆಗಳಿಂದ ಸೋಂಕು ಎದುರಾದಾಗ ಇದನ್ನು ಎದುರಿಸಲು ದೇಹ ತಾಪಮಾನವನ್ನು ಹೆಚ್ಚಿಸುತ್ತದೆ. ವಾಸ್ತವವಾಗಿ ಶೀತವಾಗುವುದೂ ರೋಗ ನಿರೋಧಕ ವ್ಯವಸ್ಥೆಯ ಇನ್ನೊಂದು ಕ್ರಮವೇ ಆಗಿದೆ. ರಾಷ್ಟೀಯ ಆರೋಗ್ಯ ವಿದ್ಯಾಲಯಗಳು ನೀಡಿದ ಮಾಹಿತಿಯ ಪ್ರಕಾರ ಮಕ್ಕಳ ದೇಹದ ತಾಪಮಾನ 99.5 ಡಿಗ್ರಿ ಫ್ಯಾರನ್ ಹೀಟ್ ಗೂ ಹೆಚ್ಚಾದರೆ ಇದನ್ನು ಜ್ವರ ಎಂದು ಕರೆಯಬಹುದು.

ಜ್ವರ ಬಂದಾಗ ತಿನ್ನಬೇಕಾದ ಆಹಾರಗಳಿವು

ಆದರೆ ವಯಸ್ಕರಿಗೆ ಈ ತಾಪಮಾನ 99 ರಿಂದ 99.5 ಡಿಗ್ರಿ ಇದ್ದರೆ ಜ್ವರ ಬಂದಿದೆ ಎಂದು ತಿಳಿದುಕೊಳ್ಳಬಹುದು. ಜ್ವರಕ್ಕೆ ಹಲವಾರು ಕಾರಣಗಳಿವೆ. ದೇಹವನ್ನು ಯಾವುದಾದರೊಂದು ಬಗೆಯಲ್ಲಿ ಪ್ರವೇಶಿಸಿದ ವೈರಸ್ಸು ಅಥವಾ ಇತರ ವಿಷಕಾರಿ ಕಣಗಳಿಂದ ದೇಹವನ್ನು ರಕ್ಷಿಸಲು ದೇಹದ ತಾಪಮಾನ ಏರುತ್ತದೆ. ಕೆಲವೊಮ್ಮೆ ಅತಿಯಾಗಿ ಬಿಸಿಲಿನಲ್ಲಿ ಕಾಲ ಕಳೆಯುವ ಅಥವಾ ವಾತಾವರಣದಲ್ಲಿ ಅತೀವ ಬಿಸಿಯಿದ್ದಾಗಲೂ ದೇಹದ ತಾಪಮಾನ ಏರಬಹುದು.

ಜ್ವರದ ಪರಿಣಾಮವಾಗಿ ಸಂಧಿವಾತ, ವಾಕರಿಕೆ, ಗಂಟಲ ಬೇನೆ, ಕಾರ್ಯಕ್ಷಮತೆ ಕುಂದುವುದು, ತಲೆ ತಿರುಗುವುದು, ತಲೆನೋವು, ನಿರ್ಜಲೀಕರಣ, ಅತಿಯಾಗಿ ಬೆವರುವುದು ಹಾಗೂ ಕಿರಿಕಿರಿ ಮೊದಲಾದವು ಎದುರಾಗುತ್ತವೆ. ಹಾಗಾಗಿ ಜ್ವರವನ್ನು ಕಡಿಮೆಗೊಳಿಸ ಬೇಕಾದರೆ ಇದಕ್ಕೆ ಕಾರಣವಾದ ಕ್ರಿಮಿಗಳನ್ನು ಕೊಂದು ಕಲ್ಮಶರಹಿತವಾಗಿಸಬೇಕಾಗುತ್ತದೆ. ಈ ಕೆಲಸವನ್ನು ಕೆಲವು ಮನೆಮದ್ದುಗಳು ಸಮರ್ಥವಾಗಿ ನಿಭಾಯಿಸುತ್ತವೆ. ಬನ್ನಿ, ಈ ವಿಧಾನಗಳು ಯಾವುವು ಎಂದು ನೋಡೋಣ...

ತುಳಸಿ

ತುಳಸಿ

ಜ್ವರವನ್ನು ಇಳಿಸಲು ತುಳಸಿ ಅತಿ ಉತ್ತಮವಾದ ಆಯ್ಕೆಯಾಗಿದೆ. ಇದರ ಗುಣಪಡಿಸುವ ಗುಣ ಜ್ವರವನ್ನು ಶೀಘ್ರವಾಗಿ ಇಳಿಸಲು ನೆರವಾಗುತ್ತದೆ. ಇದಕ್ಕಾಗಿ ಸುಮಾರು ಇಪ್ಪತ್ತು ತುಳಸಿ ಎಲೆಗಳನ್ನು ಒಂದು ಚಿಕ್ಕ ಚಮಚ ಚಿಕ್ಕದಾಗಿ ತುರಿದ ಶುಂಠಿಯನ್ನು ಒಂದು ಕಪ್ ನೀರಿನಲ್ಲಿ ಕುದಿಸಿ. ಬಳಿಕ ಕೊಂಚ ಜೇನು ಬೆರೆಸಿ ಈ ನೀರನ್ನು ದಿನಕ್ಕೆ ಎರಡರಿಂದ ಮೂರು ಬಾರಿ ಸೇವಿಸಿ.

ಸೇಬಿನ ಶಿರ್ಕಾ (Apple Cider Vinegar)

ಸೇಬಿನ ಶಿರ್ಕಾ (Apple Cider Vinegar)

ಸೇಬಿನ ಶಿರ್ಕಾ ಸಹಾ ಜ್ವರ ಇಳಿಸಲು ನೆರವಾಗುತ್ತದೆ. ಜ್ವರವನ್ನು ಶೀಘ್ರವಾಗಿ ಇಳಿಸಲು ಕಾರಣ ಇದು ತ್ವಚೆಯಿಂದ ಬಿಸಿಯನ್ನು ಶೀಘ್ರವೇ ಹೀರಿಕೊಳ್ಳುವುದಾಗಿದೆ. ಸ್ನಾನದ ತೊಟ್ಟಿಯಲ್ಲಿ ಉಗುರುಬೆಚ್ಚನೆಯ ನೀರನ್ನು ತುಂಬಿಸಿ ಇದರಲ್ಲಿ ಅರ್ಧ ಕಪ್ ಸೇಬಿನ ಶಿರ್ಕಾ ಬೆರೆಸಿ ಈ ನೀರಿನಲ್ಲಿ ದೇಹವನ್ನು ಸುಮಾರು ಹತ್ತು ನಿಮಿಷ ಮುಳುಗಿಸಿ. ಮುಂದಿನ ಹತ್ತು ನಿಮಿಶಗಳಲ್ಲಿಯೇ ಜ್ವರ ಇಳಿಯುವುದನ್ನು ಗಮನಿಸಬಹುದು.

ಒಣದ್ರಾಕ್ಷಿ

ಒಣದ್ರಾಕ್ಷಿ

ಜ್ವರವನ್ನು ಇಳಿಸಲು ಒಣದ್ರಾಕ್ಷಿಯೂ ಉತ್ತಮ ಆಯ್ಕೆಯಾಗಿದೆ. ಇದರಲ್ಲಿ ಫಿನಾಲಿಕ್ ಫೈಟೋನ್ಯೂಟ್ರಿಯೆಂಟು ಎಂಬ ಪೋಷಕಾಂಶಗಳಿದ್ದು ಇವುಗಳಿಗೆ ಬ್ಯಾಕ್ಟೀರಿಯಾನಿವಾರಕ ಹಾಗೂ ಆಂಟಿ ಆಕ್ಸಿಡೆಂಟ್ ಗುಣಗಳಿವೆ. ಇದಕ್ಕಾಗಿ ಸುಮಾರು ಅರ್ಧಕಪ್ ನೀರಿನಲ್ಲಿ ಇಪ್ಪತ್ತೈದು ಒಣದ್ರಾಕ್ಷಿಗಳನ್ನು ಒಂದು ಘಂಟೆ ಕಾಲ ಮುಳುಗಿಸಿಡಿ. ಬಳಿಕ ನೀರಿನಲ್ಲಿ ಈ ದ್ರಾಕ್ಷಿಗಳನ್ನು ಹಿಂಡಿ ರಸವನ್ನು ಕರಗಿಸಿ. ಈ ದ್ರವಕ್ಕೆ ಕೊಂಚ ಜೇನು ಬೆರೆಸಿ. ಈ ನೀರನ್ನು ದಿನಕ್ಕೆರಡು ಬಾರಿ ಸೇವಿಸಿ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಜ್ವರವನ್ನು ಇಳಿಸಲು ಬೆಳ್ಳುಳ್ಳಿಯೂ ನೆರವಾಗುತ್ತದೆ. ಬೆಳ್ಳುಳ್ಳಿಯ ಸೇವನೆಯಿಂದ ದೇಹದಲ್ಲಿ ಕಲ್ಮಶಗಳನ್ನು ನಿವಾರಿಸಲು ನೆರವಾಗುತ್ತದೆ. ಇದಕ್ಕಾಗಿ ಒಂದು ಎಸಳು ಬೆಳ್ಳುಳ್ಳಿಯನ್ನು ಸುಲಿದು ಚಿಕ್ಕದಾಗಿ ಹೆಚ್ಚಿ ಒಂದು ಕಪ್ ಬಿಸಿನೀರಿನಲ್ಲಿ ಬೆರೆಸಿ ಸುಮಾರು ಹತ್ತು ನಿಮಿಷ ಹಾಗೇ ಬಿಡಿ. ಬಳಿಕ ಈ ನೀರನ್ನು ಸೋಸಿ ಈ ನೀರನ್ನು ದಿನಕ್ಕೆರಡು ಬಾರಿ ಸೇವಿಸಿ.

ಶುಂಠಿ

ಶುಂಠಿ

ಶುಂಠಿ ಒಂದು ನೈಸರ್ಗಿಕ ವೈರಸ್ ನಿವಾರಕ ಹಾಗೂ ಬ್ಯಾಕ್ಟೀರಿಯಾನಿವಾರಕವೂ ಆಗಿದೆ. ಇದು ಹಲವು ಕ್ರಿಮಿಗಳ ವಿರುದ್ಧ ಹೋರಾಡುತ್ತದೆ ಹಾಗೂ ರೊಗನಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಒಂದು ಕಪ್ ಬಿಸಿ ನೀರಿನಲ್ಲಿ ಅರ್ಧ ಚಿಕ್ಕಚಮಚದಷ್ಟು ಚಿಕ್ಕದಾಗಿ ತುರಿದು ಜಜ್ಜಿದ ಹಸಿಶುಂಠಿಯನ್ನು ಬೆರೆಸಿ ಕೆಲವು ನಿಮಿಷ ಹಾಗೇ ಬಿಡಿ. ಇದಕ್ಕೆ ಕೊಂಚ ಜೇನು ಬೆರೆಸಿ ದಿನಕ್ಕೆ ಮೂರು ಬಾರಿ ಸೇವಿಸಿ.

ಪುದೀನಾ

ಪುದೀನಾ

ಪುದಿನಾ ಎಲೆಗಳಲ್ಲಿರುವ ತಣ್ಣಗಾಗಿಸುವ ಗುಣ ದೇಹದ ಒಳಗಿನ ತಾಪಮಾನವನ್ನು ಕಡಿಮೆಗೊಳಿಸಲು ನೆರವಾಗುತ್ತದೆ ಹಾಗೂ ಜ್ವರವನ್ನೂ ಇಳಿಸುತ್ತದೆ. ಒಂದು ಕಪ್ ಬಿಸಿನೀರಿನಲ್ಲಿ ಒಂದು ದೊಡ್ಡ ಚಮಚದಷ್ಟು ತಾಜಾ ಪುದಿನಾ ಎಲೆಗಳನ್ನು ಬೆರೆಸಿ ಸುಮಾರು ಹತ್ತು ನಿಮಿಷ ಹಾಗೇ ಬಿಡಿ. ಬಳಿಕ ಈ ನೀರನ್ನು ಸೋಸಿ ಕೊಂಚ ಜೇನು ಬೆರೆಸಿ ದಿನಕ್ಕೆ ಮೂರು ಬಾರಿ ಕುಡಿಯಿರಿ.

 ಪಾದದಡಿ ಹಸಿ ಈರುಳ್ಳಿ ಕಟ್ಟಿ

ಪಾದದಡಿ ಹಸಿ ಈರುಳ್ಳಿ ಕಟ್ಟಿ

ಹಸಿ ಈರುಳ್ಳಿಯನ್ನು ಅಡ್ಡಲಾಗಿ ಕತ್ತರಿಸಿ ಬಿಲ್ಲೆಗಳನ್ನಾಗಿಸಿ. ಎರಡೂ ಪಾದಗಳ ಕೆಳಗೆ ಒಂದೊಂದು ಬಿಲ್ಲೆಗಳನ್ನಿಟ್ಟು ಬೆಚ್ಚಗಿನ ಮಫ್ಲರ್ ಅಥವಾ ಬಟ್ಟೆಯನ್ನು ಸುತ್ತಿ ರಾತ್ರಿ ಮಲಗಿಸಿ. ಬೆಳಿಗ್ಗೆ ಜ್ವರ ಕಡಿಮೆಯಾಗುತ್ತದೆ.

ಶಿರ್ಕಾ ಅದ್ದಿದ ಬಟ್ಟೆಯಿಂದ ಹಣೆಯನ್ನು ಒರೆಸಿ

ಶಿರ್ಕಾ ಅದ್ದಿದ ಬಟ್ಟೆಯಿಂದ ಹಣೆಯನ್ನು ಒರೆಸಿ

ಜ್ವರ ತೀವ್ರವಾಗಿದ್ದರೆ ಉಗುರುಬೆಚ್ಚನೆಯ ನೀರಿಗೆ ಸ್ವಲ್ಪ ಶಿರ್ಕಾ (ವಿನೇಗರ್) ಸೇರಿಸಿ ಸ್ವಚ್ಛವಾದ ಬಟ್ಟೆಯನ್ನು ಮುಳುಗಿಸಿ ಹಿಂಡಿ ಹಣೆಯ ಮೇಲಿಸಿರಿ. ಕೊಂಚ ಹೊತ್ತಿನ ಬಳಿಕ ಹಿಂಡಿ ತೆಗೆದು ಮತ್ತೊಮ್ಮೆ ಮುಳುಗಿಸಿ ಹಣೆಯ ಮೇಲಿರಿಸಿ. ಜ್ವರ ಕಡಿಮೆಯಾಗುವವರೆಗೂ ಈ ವಿಧಾನವನ್ನು ಅನುಸರಿಸುತ್ತಿರಿ.

ಸಾಸಿವೆ ಕುದಿಸಿದ ನೀರು ಕುಡಿಸಿ

ಸಾಸಿವೆ ಕುದಿಸಿದ ನೀರು ಕುಡಿಸಿ

ಒಂದು ಲೋಟ ಕುದಿಯುವ ನೀರಿಗೆ ಒಂದು ಚಿಕ್ಕ ಚಮಚ ಸಾಸಿವೆ ಸೇರಿಸಿ ಐದು ನಿಮಿಷ ಹಾಗೇ ಬಿಡಿ. ಬಳಿಕ ಸೋಸಿದ ನೀರನ್ನು ಸಾಧ್ಯವಿದ್ದಷ್ಟು ಬಿಸಿಯಾಗಿಯೇ ಕುಡಿಸಿ.

ಶಿರ್ಕಾದಲ್ಲಿ ಮುಳುಗಿಸಿದ ಆಲುಗಡ್ಡೆಯ ಬಿಲ್ಲೆಗಳನ್ನು ಹಣೆಯ ಮೇಲಿರಿಸಿ

ಶಿರ್ಕಾದಲ್ಲಿ ಮುಳುಗಿಸಿದ ಆಲುಗಡ್ಡೆಯ ಬಿಲ್ಲೆಗಳನ್ನು ಹಣೆಯ ಮೇಲಿರಿಸಿ

ಒಂದು ಆಲುಗಡ್ಡೆಯನ್ನು ತೆಳುವಾದ ಬಿಲ್ಲೆಗಳನ್ನಾಗಿಸಿ ಶಿರ್ಕಾ ಸೇರಿಸಿದ ಉಗುರುಬೆಚ್ಚನೆಯ ನೀರಿನಲ್ಲಿ ಹತ್ತು ನಿಮಿಷ ಮುಳುಗಿಸಿ. ಬಳಿಕ ಈ ಬಿಲ್ಲೆಗಳನ್ನು ಹಣೆಯಿಡೀ ಆವರಿಸುವಂತೆ ಹರಡಿ ಇದರ ಮೇಲೊಂದು ಒಣ ಬಟ್ಟೆಯನ್ನು ಹರಡಿ. ಕೇವಲ ಇಪ್ಪತ್ತು ನಿಮಿಷಗಳಲ್ಲಿ ಜ್ವರ ಕಡಿಮೆಯಾಗಿರುವುದು ಗಮನಕ್ಕೆ ಬರುತ್ತದೆ.

ಪಾದದಡಿಯಲ್ಲಿ ಲಿಂಬೆಹಣ್ಣು ಕಟ್ಟಿ

ಪಾದದಡಿಯಲ್ಲಿ ಲಿಂಬೆಹಣ್ಣು ಕಟ್ಟಿ

ಒಂದು ಲಿಂಬೆಹಣ್ಣನ್ನು ಅಡ್ಡಲಾಗಿ ಕತ್ತರಿಸಿ ಪ್ರತಿ ಅರ್ಧಹಣ್ಣನ್ನು ಪಾದದಡಿ ಇಟ್ಟು ಒದ್ದೆಯಾದ ಹತ್ತಿಯ ಕಾಲುಚೀಲಗಳನ್ನು ಧರಿಸಿ. ಇದರ ಮೇಲೆ ಒಣಗಿದ ಉಣ್ಣೆಯ ಬಟ್ಟೆ ಅಥವಾ ಕಾಲುಚೀಲ ಧರಿಸಿ. ಲಿಂಬೆಹಣ್ಣು ಲಭ್ಯವಿಲ್ಲದಿದ್ದರೆ ಒಂದು ಒದ್ದೆಬಟ್ಟೆಯಲ್ಲಿ ಮೊಟ್ಟೆಯ ಬಿಳಿಭಾಗವನ್ನು ಸವರಿ ಮೊಟ್ಟೆ ಸವರಿದ ಭಾಗ ಪಾದಗಳಿಗೆ ತಾಕುವಂತಿಟ್ಟು ಅದರ ಮೇಲೆ ಉಣ್ಣೆಯ ಕಾಲುಚೀಲ ಧರಿಸಿ. ರಾತ್ರಿ ಧರಿಸಿ ಮಲಗಿದ್ದು ಬೆಳಿಗ್ಗೆದ್ದಾಗ ಜ್ವರ ಕಡಿಮೆಯಾಗುತ್ತದೆ.

ಆಲಿವ್ ಎಣ್ಣೆ ಮತ್ತು ಬೆಳ್ಳುಳ್ಳಿಯನ್ನು ಪಾದಕ್ಕೆ ಹಚ್ಚಿ

ಆಲಿವ್ ಎಣ್ಣೆ ಮತ್ತು ಬೆಳ್ಳುಳ್ಳಿಯನ್ನು ಪಾದಕ್ಕೆ ಹಚ್ಚಿ

ಎರಡು ದೊಡ್ಡ ಚಮಚ ಆಲಿವ್ ಎಣ್ಣೆಗೆ ಎರಡು ದೊಡ್ಡ ಎಸಳು (ಚಿಕ್ಕದಾದರೆ ನಾಲ್ಕು) ಬೆಳ್ಳುಳ್ಳಿಯನ್ನು ಜಜ್ಜಿ ಸೇರಿಸಿ. ಇದನ್ನು ಚೆನ್ನಾಗಿ ಮಿಶ್ರಣ ಮಾಡಿ ಈ ಮಿಶ್ರಣವನ್ನು ಎರಡೂ ಪಾದದಡಿಗಳಿಗೆ ಸವರಿ. ಇಡಿಯ ಪಾದವನ್ನು ಸವರಿದ ಬಳಿಕ ಪ್ಲಾಸ್ಟಿಕ್ ಹಾಳೆಯೊಂದನ್ನು ಬಳಸಿ ಪಾದಗಳನ್ನು ಆವರಿಸಿ ಕಟ್ಟಿ. ರಾತ್ರಿ ಮಲಗುವ ಮುನ್ನ ಕಟ್ಟಿದ್ದ ಈ ಲೇಪನ ಮರುದಿನ ಬೆಳಿಗ್ಗೆ ಜ್ವರವಿಳಿಸಲು ನೆರವಾಗುತ್ತದೆ.

ಬಿಸಿನೀರಿಗೆ ಒಣದ್ರಾಕ್ಷಿ ಮತ್ತು ಲಿಂಬೆ ಸೇರಿಸಿ ಕುಡಿಯಿರಿ

ಬಿಸಿನೀರಿಗೆ ಒಣದ್ರಾಕ್ಷಿ ಮತ್ತು ಲಿಂಬೆ ಸೇರಿಸಿ ಕುಡಿಯಿರಿ

ಜ್ವರ ಹೆಚ್ಚಿದ್ದರೆ ಅರ್ಧ ಕಪ್ ನೀರಿಗೆ ಸುಮಾರು ಇಪ್ಪತ್ತೈದು ಒಣದ್ರಾಕ್ಷಿಗಳನ್ನು ಹಾಕಿ ಕೊಂಚಕಾಲ ನೆನೆಸಿ. ಬಳಿಕ ಈ ದ್ರಾಕ್ಷಿಗಳನ್ನು ಜಜ್ಜಿ ಅದೇ ನೀರಿನಲ್ಲಿ ಚೆನ್ನಾಗಿ ಕದಡಿ. ಬಳಿಕ ಈ ನೀರನ್ನು ಸೋಸಿ ಅರ್ಧ ಲಿಂಬೆಹಣ್ಣಿನ ರಸ ಸೇರಿಸಿ ದಿನಕ್ಕೆರಡು ಬಾರಿ ಕುಡಿಯುವುದರಿಂದ ಜ್ವರ ಕೂಡಲೇ ಕಡಿಮೆಯಾಗುತ್ತದೆ.

English summary

Home Remedies For Fever That Work Like A Wonder

A fever generally can occur when your body is fighting an infection, such as cold and flu. For an adult, the body temperature exceeds from 99 to 99.5 degrees to show the person is suffering from fever. The symptoms include joint pain, nausea, etc. Natural home remedies for fever include basil, cinnamon, apple cider vinegar, raisins, garlic, ginger, etc.
X
Desktop Bottom Promotion