ಮೀನು ತಿಂದವರಿಗೆ ಈ ಹತ್ತು ಆರೋಗ್ಯ ಲಾಭಗಳು ಖಚಿತ

Posted By: Lekhaka
Subscribe to Boldsky

ಪ್ರಕೃತಿ ನಮಗೆ ನೀಡಿರುವಂತಹ ಆರೋಗ್ಯಕರ ಆಹಾರಗಳಲ್ಲಿ ಮೀನು ಕೂಡ ಒಂದಾಗಿದೆ. ಮೀನು ಮಾಂಸಹಾರಿಗಳಿಗೆ ತುಂಬಾ ಪ್ರಿಯ ಆಹಾರ. ಅದರಲ್ಲೂ ಕರಾವಳಿ ತೀರದವರಿಗೆ ಮೀನು ಪಂಚಪ್ರಾಣ. ಮೀನು ತುಂಬಾ ಆರೋಗ್ಯಕರ ಆಹಾರ ಮತ್ತು ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳು ದೇಹಕ್ಕೆ ಲಭ್ಯವಾಗುವುದು. ಮೀನಿನಲ್ಲಿ ಪ್ರೋಟೀನ್, ವಿಟಮಿನ್ ಡಿ, ಕ್ಯಾಲ್ಸಿಯಂ, ಫೋಸ್ಫರಸ್ ಲಭ್ಯವಿದೆ. ಮೀನಿನಲ್ಲಿ ಕಬ್ಬಿನ, ಸತು, ಮೆಗ್ನಿಶಿಯಂ, ಐಯೋಡಿನ್ ಮತ್ತು ಪೊಟಾಶಿಯಂನಂತಹ ಖನಿಜಾಂಶಗಳಿವೆ. ಮೀನಿನಲ್ಲಿ ಒಮೆಗಾ-3 ಕೊಬ್ಬಿನಾಮ್ಲವು ಸಮೃದ್ಧವಾಗಿದೆ.

ನಾನ್‌ವೆಜ್ ಪ್ರಿಯರಿಗೆ ಸಿಹಿ ಸುದ್ದಿ: ಮೀನು ತಿನ್ನಿ ಕೊಬ್ಬು ಕರಗಿಸಿ!

ಇದೆಲ್ಲವೂ ನಿಮ್ಮ ದೇಹವನ್ನು ಸಮತೋಲನದ ತೂಕದಲ್ಲಿರಿಸುವುದು. ದೇಹವು ಕೇವಲ ಸೊಂಟದ ಸುತ್ತಲಿನ ಕೊಬ್ಬನ್ನು ಕರಗಿಸುವುದು ಮಾತ್ರವಲ್ಲದೆ ಇತರ ಹಲವಾರು ರೀತಿಯ ಆರೋಗ್ಯ ಲಾಭಗಳು ಅದರಿಂದ ಸಿಗುವುದು. ಯಕೃತ್, ಮೆದುಳು ಇತ್ಯಾದಿಗಳು ಸರಿಯಾಗಿ ಕಾರ್ಯನಿರ್ವಹಿಸಲು ಇದು ನೆರವಾಗುವುದು. ಸರಿಯಾದ ನಿದ್ರೆಗೆ ಇದು ಸಹಕಾರಿ. ದಿನಾಲೂ ಮೀನು ತಿನ್ನುವುದರಿಂದ ಹಲವಾರು ರೀತಿಯ ರೋಗಗಳನ್ನು ತಡೆಯಬಹುದು. ಅದರಲ್ಲೂ ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯಬಹುದು. ಮೀನಿನಿಂದ ನಿಮಗೆ ಸಿಗುವ ಹತ್ತು ಲಾಭಗಳ ಬಗ್ಗೆ ಇಲ್ಲಿ ತಿಳಿಯಿರಿ....

ಹೃದಯ ಕಾಯಿಲೆ ಸಮಸ್ಯೆ ಕಡಿಮೆ ಮಾಡುವುದು

ಹೃದಯ ಕಾಯಿಲೆ ಸಮಸ್ಯೆ ಕಡಿಮೆ ಮಾಡುವುದು

ಮೀನನ್ನು ದಿನಾಲೂ ಸೇವಿಸುವುದರಿಂದ ಮಾರಕ ಮತ್ತು ಪರಿಧಮನಿಗೆ ಸಂಬಂಧಿಸಿದ ಕಾಯಿಲೆಗಳ ಅಪಾಯ ಕಡಿಮೆ ಮಾಡಬಹುದು. ಹೃದಯದ ಆರೋಗ್ಯಕ್ಕೆ ನೆರವಾಗುವಂತಹ ಒಮೆಗಾ-3 ಕೊಬ್ಬಿನಾಮ್ಲವು ಮೀನಿನಲ್ಲಿದೆ. ಇದು ಉರಿಯೂತ ಕಡಿಮೆ ಮಾಡುವುದು ಮತ್ತು ಹೃದಯವನ್ನು ರಕ್ಷಿಸುವುದು.

ಅಲ್ಝೈಮರ್ ಕಾಯಿಲೆ ಕುಗ್ಗಿಸುವುದು

ಅಲ್ಝೈಮರ್ ಕಾಯಿಲೆ ಕುಗ್ಗಿಸುವುದು

ಮೆದುಳಿನ ಕ್ರಿಯೆಗಳು ಸರಾಗವಾಗಿ ಸಾಗಲು ಮೀನು ಒಳ್ಳೆಯ ಆಹಾರವಾಗಿದೆ. ದಿನಾಲೂ ಮೀನು ಸೇವಿಸಿದರೆ ಅದರಿಂದ ಅಲ್ಝೆಮರ್ ಕಾಯಿಲೆಯ ಅಪಾಯ ತಗ್ಗಿಸಬಹುದು. ನಿಯಮಿತವಾಗಿ ಸೇವಿಸುವುದರಿಂದ ಮೆದುಳಿನ ಕುಗ್ಗುವಿಕೆ ಮತ್ತು ಕ್ಷೀಣಿಸುವಿಕೆ ಕಡಿಮೆ ಮಾಡಬಹುದು. ಇದರಿಂದ ಮೆದುಳಿಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುವುದು.

ಖಿನ್ನತೆ ಕಡಿಮೆ ಮಾಡುವುದು

ಖಿನ್ನತೆ ಕಡಿಮೆ ಮಾಡುವುದು

ಮೀನನ್ನು ಇಷ್ಟಪಡುವವರಿಗೆ ಇದು ಒಳ್ಳೆಯ ಸುದ್ದಿ. ನಿಮಗೆ ಖಿನ್ನತೆ ಕಾಡುತ್ತಿದೆ ಎಂದು ಅನಿಸಿದರೆ ಸರಿಯಾಗಿ ಮೀನು ತಿನ್ನಲು ಆರಂಭಿಸಿ. ಮೀನು ಮತ್ತು ಮೀನಿನ ಎಣ್ಣೆಯು ಖಿನ್ನತೆ ದೂರ ಮಾಡುವುದು. ಇದು ಖಿನ್ನತೆಯ ಲಕ್ಷಣವನ್ನು ಕಡಿಮೆ ಮಾಡಿ ನಿಮ್ಮ ಮಾನಸಿಕ ಆರೋಗ್ಯ ಸುಧಾರಿಸುವುದು.

ವಿಟಮಿನ್ ಡಿ ಮೂಲ

ವಿಟಮಿನ್ ಡಿ ಮೂಲ

ಮೀನಿನಲ್ಲಿ ವಿಟಮಿನ್ ಡಿ ಸಮೃದ್ಧವಾಗಿದೆ ಮತ್ತು ಇದು ದೇಹಕ್ಕೆ ಬೇಕಾಗುವ ಪ್ರಮುಖ ಪೋಷಕಾಂಶಗಳಲ್ಲಿ ಒಂದಾಗಿದೆ. ಮೂಳೆಗಳ ಆರೋಗ್ಯ ಮತ್ತು ಬೆಳವಣಿಗೆಗೆ ಕ್ಯಾಲ್ಸಿಯಂ ಹೀರಿಕೊಳ್ಳಲು ವಿಟಮಿನ್ ಡಿ ಅತೀ ಅಗತ್ಯ. ವಿಟಮಿನ್ ಡಿ ಕೊರತೆ ಕಡಿಮೆ ಮಾಡಬೇಕೆಂದರೆ ನಿಯಮಿತವಾಗಿ ಮೀನು ತಿನ್ನಿ.

ದೃಷ್ಟಿ ಸುಧಾರಣೆ

ದೃಷ್ಟಿ ಸುಧಾರಣೆ

ಮೀನಿನಲ್ಲಿ ಇರುವ ಒಮೆಗಾ-3 ಕೊಬ್ಬಿನಾಮ್ಲವು ಕಣ್ಣಿನ ದೃಷ್ಟಿ ಮತ್ತು ಆರೋಗ್ಯ ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಯಾಕೆಂದರೆ ಮೆದುಳು ಮತ್ತು ಕಣ್ಣುಗಳು ಒಮೆಗಾ-3 ಕೊಬ್ಬಿನಾಮ್ಲಗಳ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿವೆ ಮತ್ತು ಅವುಗಳ ಆರೋಗ್ಯ ಮತ್ತು ಚಟುವಟಿಕೆಗೆ ಈ ಪೋಷಕಾಂಶಗಳು ಅತೀ ಅಗತ್ಯ.

ಸರಿಯಾದ ನಿದ್ರೆಗೆ

ಸರಿಯಾದ ನಿದ್ರೆಗೆ

ನಿಮಗೆ ಮಲಗಿದರೂ ನಿದ್ರೆ ಬರದೆ ಇದ್ದರೆ ಅಥವಾ ಸರಿಯಾಗಿ ನಿದ್ರೆ ಪೂರ್ತಿಯಾಗದಿದ್ದರೆ ನಿಯಮಿತವಾಗಿ ಮೀನು ಸೇವಿಸಿ. ಹೆಚ್ಚು ಮೀನು ಸೇವನೆ ಮಾಡಿದ ಜನರು ಸರಿಯಾಗಿ ನಿದ್ರೆ ಮಾಡಿರುವುದು ಅಧ್ಯಯನಗಳಿಂದ ಕಂಡುಕೊಳ್ಳಲಾಗಿದೆ. ಮೀನಿನಲ್ಲಿ ಇರುವಂತಹ ಉನ್ನತ ಮಟ್ಟದ ವಿಟಮಿನ್ ಡಿ ನಿದ್ರೆ ಸರಾಗವಾಗಿ ಆಗುವಂತೆ ಮಾಡುವುದು.

ಸಂಧಿವಾತ ಕಡಿಮೆ ಮಾಡುವುದು

ಸಂಧಿವಾತ ಕಡಿಮೆ ಮಾಡುವುದು

ನೀವು ಸಂಧಿವಾತದಿಂದ ಬಳಲುತ್ತಿದ್ದರೆ ದಿನನಿತ್ಯ ಮೀನಿನ ಸೇವನೆ ಮಾಡಿ. ಸಂಧಿವಾತವು ಗಂಟುಗಳ ತೀವ್ರವಾದ ಉರಿಯೂತವಾಗಿದ್ದು, ನಿಯಮಿತವಾಗಿ ಮೀನು ಸೇವಿಸಿದರೆ ಅದರಿಂದ ನೋವು ಮತ್ತು ಊತ ಕಡಿಮೆ ಮಾಡಬಹುದು.

ಕೊಲೆಸ್ಟ್ರಾಲ್ ತಗ್ಗಿಸುವುದು

ಕೊಲೆಸ್ಟ್ರಾಲ್ ತಗ್ಗಿಸುವುದು

ಮೀನು ದೇಹದಲ್ಲಿರುವ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಮೀನಿನಲ್ಲಿ ಇರುವಂತಹ ಒಮೆಗಾ-3 ಕೊಬ್ಬಿನಾಮ್ಲವು ದೇಹದಲ್ಲಿ ಇರುವಂತಹ ಕೆಟ್ಟ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡುವುದು. ಒಮೆಗಾ-3 ಕೊಬ್ಬಿನಾಮ್ಲವು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವುದು ಮತ್ತು ಇದರಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಜಮೆಯಾಗುವುದು ತಪ್ಪುವುದು.

ಮಧುಮೇಹ ತಗ್ಗಿಸುವುದು

ಮಧುಮೇಹ ತಗ್ಗಿಸುವುದು

ಅಧ್ಯಯನವೊಂದರ ಪ್ರಕಾರ ಕೆಲವೊಂದು ಅಟೋಇಮ್ಯೂನ್ ಕಾಯಿಲೆಗಳಾದ ಟೈಪ್ 1 ಮಧುಮೇಹವನ್ನು ಮೀನು ತಗ್ಗಿಸುವುದು. ಮೀನಿನಲ್ಲಿ ಇರುವಂತಹ ಉನ್ನತ ಮಟ್ಟದ ವಿಟಮಿನ್ ಡಿ ದೇಹದ ಪ್ರತಿರೋಧಕ ಶಕ್ತಿ ಹೆಚ್ಚಿಸಿ ಗ್ಲೂಕೋಸ್ ಚಯಾಪಚಾಯಕ್ಕೆ ನೆರವಾಗುವುದು.

ಋತುಚಕ್ರದ ಮೊದಲಿನ ಸಮಸ್ಯೆ ನಿವಾರಣೆ

ಋತುಚಕ್ರದ ಮೊದಲಿನ ಸಮಸ್ಯೆ ನಿವಾರಣೆ

ಮಹಿಳೆಯರಲ್ಲಿ ಋತುಚಕ್ರದ ಮೊದಲು ಕಾಣಿಸಿಕೊಳ್ಳುವಂತಹ ಕೆಲವೊಂದು ಸಮಸ್ಯೆಗಳನ್ನು ಮೀನಿನಲ್ಲಿರುವ ಅಂಶಗಳು ಪರಿಹರಿಸುವುದು. ಋತುಚಕ್ರದ ಮೊದಲು ಸಮಸ್ಯೆ ಕಾಣಿಸಿಕೊಳ್ಳುವ ಮಹಿಳೆಯರು ನಿಯಮಿತವಾಗಿ ಮೀನಿನ ಸೇವನೆ ಮಾಡಿದರೆ ಸಮಸ್ಯೆ ಕಡಿಮೆಯಾಗುವುದು ಎಂದು ಅಧ್ಯಯನಗಳು ಹೇಳಿವೆ. ಮೀನಿನಲ್ಲಿ ಇರುವಂತಹ ಒಮೆಗಾ-3 ಕೊಬ್ಬಿನಾಮ್ಲವು ಸಮಸ್ಯೆಯು ಮರಕಳಿಸದಂತೆ ತಡೆಯುವುದು.

ಮೀನು ತಿಂದ ಬಳಿಕ ಹಾಲು ಕುಡಿಯಬಾರದೇ? ಇದೆಲ್ಲಾ ನಿಜವೇ?

English summary

Health Benefits Of Eating Fish Daily

Fish is one of the healthiest foods that has potential health benefits. Fish is loaded with important and essential nutrients such as protein, vitamin D, calcium, phosphorous; and it is a great source of minerals such as iron, zinc, iodine, magnesium and potassium. Fish is also one of the best sources of essential nutrients like omega-3 fatty acids. These help to keep your body lean and also help in development of body and improve cognitive functioning Fish not only impacts your waistline, but also helps in other bodily functions including the development of liver, brain, etc., and in regulating your sleep.