Latest Updates
-
ಯುಗಾದಿ ಮಂತ್ರಗಳು: ಹಬ್ಬದಲ್ಲಿ ಈ ಮಂತ್ರ ಪಠಿಸಿದ್ರೆ ಕಷ್ಟಗಳು ದೂರಾಗುತ್ತೆ, ಅದೃಷ್ಟ ನಿಮ್ಮದಾಗುತ್ತೆ! -
ಯುಗಾದಿ ಹಬ್ಬದಲ್ಲಿ ಸಿಹಿಯೊಂದಿಗೆ ಬೇಬಿ ಕಾರ್ನ್ 65 ಸಹ ಮಾಡಿ! ಅದ್ಭುತ ರುಚಿಯ ತಿಂಡಿ ಇದು! -
Ugadi 2026: ಬೇವಿನ ಕಹಿ ಇರಲಿ, ಬೆಲ್ಲದ ಸಿಹಿ ಇರಲಿ! ನಿಮ್ಮ ಆತ್ಮೀಯರಿಗೆ ಈ ರೀತಿ ವಿಶೇಷ ಶುಭಾಶಯ ಕಳಿಸಿ -
ರವೆ ಮತ್ತು ತುಪ್ಪ ಬಳಸಿ ಸ್ಪಂಜಿನಂಥ ಕೇಕ್ ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ.. ಓವನ್ ಇಲ್ಲದೆ ಮಾಡಬಹುದು -
ಯುಗಾದಿ ಭವಿಷ್ಯ: ಹಬ್ಬದ ಬಳಿಕ ಈ ರಾಶಿಯವರಿಗೆ ಲಕ್ಷ್ಮಿ ಆಶೀರ್ವಾದ, ಆರ್ಥಿಕ ಲಾಭ! -
ಮುದ್ದೆ, ಗಂಜಿ ಬಿಡಿ.. ರಾಗಿ ಬಳಸಿ ಈ ರೆಸಿಪಿಗಳನ್ನು ಮಾಡಿ! ಆರೋಗ್ಯಕ್ಕೆ ಸೂಪರ್, ರುಚಿಯೂ ಮಿಸ್ ಆಗಲ್ಲ -
ಯುಗಾದಿ ಸ್ಪೆಷಲ್: ವಿಭಿನ್ನ ರುಚಿ ನೀಡುವ ತೊಗರಿ ಬೇಳೆ ಹೋಳಿಗೆ! -
ಗುರು ಮನೆಯಲ್ಲಿ ಸೂರ್ಯನ ಅಬ್ಬರ! ವೃಷಭ ಸೇರಿ ಈ ರಾಶಿಗಳಿಗೆ ಶುಭ ಫಲ.. ಯಾರಿಗೆ ಲಾಭ? ಯಾರಿಗೆ ನಷ್ಟ? -
ಯುಗಾದಿ ಯಾವಾಗ ಆಚರಿಸುತ್ತಾರೆ? ಇಲ್ಲಿದೆ ದಿನಾಂಕ, ಶುಭ ಮುಹೂರ್ತ, ಸಮಯದ ಕುರಿತ ಸಂಪೂರ್ಣ ಮಾಹಿತಿ -
10 ರೂಪಾಯಿಯಲ್ಲಿ ಬಾಯಿ ಚಪ್ಪರಿಸಿ ಸವಿಯು ಚಟ್ನಿ ಮಾಡಿ! ಇಲ್ಲಿದೆ ಹೊಸ ಬಗೆಯ ರೆಸಿಪಿ!
ಇದೇ ಕಾರಣಕ್ಕೆ ಪುರುಷರಿಗೆ ವೀರ್ಯದಲ್ಲಿ ರಕ್ತ ಕಾಣಿಸಿಕೊಳ್ಳುವುದು!!
ಹೆಮಾಟೋಸ್ಪೆರ್ಮಿಯಾ ಎನ್ನುವುದು ವೀರ್ಯದಲ್ಲಿ ರಕ್ತವು ಕಾಣಿಸಿಕೊಳ್ಳುವುದು. ಸಾಮಾನ್ಯವಾಗಿ ಇಂತಹ ಸಮಸ್ಯೆ ಕಂಡುಬರಲು, ಜನನೇಂದ್ರೀಯದ ಬಯಾಸ್ಪಿ ಮಾಡುವುದರಿಂದ ಹೀಗೆ ಆಗುವುದು. ಅಲ್ಲದೆ ಕೆಲವೊಮ್ಮೆ ಸೋಂಕು, ಮೂತ್ರಕೋಶದಲ್ಲಿ ಉರಿಯೂತ, ಗಡ್ಡೆ, ಕಲ್ಲು, ಅಂಗರಚನೆ ಅಸಹಜತೆ ಇತ್ಯಾದಿಗಳಿಂದಲೂ ಇದು ಬರಬಹುದು.
ಆದರೆ ವೀರ್ಯದಲ್ಲಿ ರಕ್ತ ಕಂಡುಬರುವುದು ಗಂಭೀರ ಆರೋಗ್ಯ ಸಮಸ್ಯೆಯೇನಲ್ಲ. 40ರ ಕೆಳಹರೆಯದ ಪುರುಷರ ವೀರ್ಯದಲ್ಲಿ ಕಂಡುಬರುವಂತಹ ರಕ್ತವು ಅದಾಗಿಯೇ ಮಾಯವಾಗುವುದು. ಆದರೆ 40ರ ಹರೆಯ ಮೇಲ್ಪಟ್ಟಿರುವ ಪುರುಷರು ಇದರ ಬಗ್ಗೆ ಅಗತ್ಯವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು.
ವೀರ್ಯದಲ್ಲಿ ರಕ್ತ ಕಾಣಿಸಿಕೊಳ್ಳುತ್ತಿದ್ದರೆ...
ಮೂತ್ರ ಮಾಡುವಾಗ ಅಥವಾ ಸ್ಖಲನದ ವೇಳೆ ರಕ್ತವು ಕಾಣಿಸಿಕೊಳ್ಳುತ್ತಿದ್ದರೆ. ನೀವು ಕ್ಯಾನ್ಸರ್, ರಕ್ತದ ಕಾಯಿಲೆಗಳು ಇತ್ಯಾದಿಗೆ ಗುರಿಯಾಗಿರಬಹುದು. ಹೆಮಾಟೋಸ್ಪೆರ್ಮಿಯಾಕ್ಕೆ ಕಾರಣಗಳು ಏನು? ಮುಂದೆ ಓದಿ

ಗಡ್ಡೆ
ವೀರ್ಯದಲ್ಲಿ ರಕ್ತ ಕಂಡುಬಂದ 900 ಪುರುಷರಲ್ಲಿ ಕೇವಲ 3.5 ಶೇ.ಪುರುಷರಲ್ಲಿ ಮಾತ್ರ ಗಡ್ಡೆ ಕಂಡುಬಂದಿದೆ. ಹೆಚ್ಚಿನ ಪುರಷರಲ್ಲಿ ಇದು ಜನನೇಂದ್ರಿಯದ ಗಡ್ಡೆಯಿಂದಾಗಿ ಬರುವುದು. ಇದು ವೃಷಣದ ಕ್ಯಾನ್ಸರ್, ಮೂತ್ರನಾಳದ ಕ್ಯಾನ್ಸರ್ ಅಥವಾ ಸಂತಾನೋತ್ಪತ್ತಿ ಅಂಗದಲ್ಲಿರುವ ಕ್ಯಾನ್ಸರ್ ನ ಲಕ್ಷಣವಾಗಿರಬಹುದು.
ನೆನಪಿಡಿ: ಒಂದು ವೇಳೆ ಮೂತ್ರವಿಸರ್ಜಿಸುವಾಗ ತೀವ್ರತರದ ಉರಿ ಅಥವಾ ಬಿಸಿಯಾಗುತ್ತಿರುವಂತೆ ಅನ್ನಿಸಿದರೆ ಪ್ರಾಸ್ಟೇಟ್ ಕ್ಯಾನ್ಸರ್ ಆವರಿಸುತ್ತಿರುವ ಸೂಚನೆ ಕೂಡ ಆಗಿರಬಹುದು. ಕೆಲವೊಮ್ಮೆ ಇಂತಹ ಸಮಸ್ಯೆ ಆದರೆ ಎಳನೀರು ಕುಡಿದಾಕ್ಷಣ ಉರಿಮೂತ್ರ ಕಡಿಮೆಯಾದರೂ ವೈದ್ಯರಲ್ಲಿ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯವಾಗಿದೆ. ಅಂತೆಯೇ ವೀರ್ಯದಲ್ಲಿ ರಕ್ತ ಮಿಶ್ರಣವಾಗಿರುವುದು ಕೂಡ ಪ್ರಾಸ್ಟೇಟ್ ಕ್ಯಾನ್ಸರ್‌ನ ಲಕ್ಷಣವಾಗಿದೆ.

ಉರಿಯೂತ ಮತ್ತು ಸೋಂಕು
ವೀರ್ಯ ಉತ್ಪಾದನೆ ಮಾಡುವಂತಹ ಯಾವುದೇ ಅಂಗದಲ್ಲಿ ಸೋಂಕು ಅಥವಾ ಉರಿಯೂತ ಕಂಡುಬಂದರೆ ಇದರಿಂದ ವೀರ್ಯದಲ್ಲಿ ರಕ್ತ ಕಾಣಿಸಿಕೊಳ್ಳಬಹುದು.

ವೈದ್ಯಕೀಯ ಪ್ರಕ್ರಿಯೆ
ಸಂತಾನಹರಣ, ಮೂತ್ರಕೋಶಕ್ಕೆ ಸಂಬಂಧಿಸಿದ ಶಸ್ತ್ರಚಿಕಿತ್ಸೆ, ಹೆಮೊರೊಯಿಡ್ಸ್, ವಿಕಿರಣ ಚಿಕಿತ್ಸೆ ಅಥವಾ ಜನನೇಂದ್ರಿಯದ ಬಯಾಸ್ಪಿ ಮಾಡಿದ್ದರೆ ಆಗ ವೀರ್ಯದಲ್ಲಿ ರಕ್ತ ಕಂಡುಬರುವಂತಹ ಸಾಧ್ಯತೆಗಳು ಹೆಚ್ಚಾಗಿರುವುದು. ಈ ಪರಿಸ್ಥಿತಿಯು ತಾತ್ಕಾಲಿಕವಾಗಿರುವುದು ಮತ್ತು ಕೆಲವು ಸಮಯದ ಬಳಿಕ
ನಿವಾರಣೆಯಾಗುವುದು.

ಯಾವುದೇ ರೀತಿಯ ತಡೆ ಉಂಟಾಗಿದ್ದರೆ
ಸಂತಾನೋತ್ಪತ್ತಿ ಅಂಗಗಳಲ್ಲಿ ಯಾವುದೇ ರೀತಿಯ ತಡೆ ಉಂಟಾಗಿದ್ದರೆ ಆಗ ರಕ್ತನಾಳಗಳು ಸ್ವಲ್ಪ ಬಿರುಕು ಕಾಣಿಸಿಕೊಂಡು ರಕ್ತ ಬರಬಹುದು.

ರಕ್ತನಾಳದಲ್ಲಿ ಸಮಸ್ಯೆ
ರಕ್ತನಾಳಗಳಿಗೆ ಆಗಿರುವಂತಹ ಯಾವುದೇ ರೀತಿಯ ಸಮಸ್ಯೆಯು ಸ್ಖಲನ ವೇಳೆ ಪ್ರಮುಖ ಪಾತ್ರ ವಹಿಸಬಹುದು ಅಥವಾ ವೀರ್ಯವನ್ನು ಸಾಗಿಸುವಂತಹ ತೆಳುವಾದ ನಾಳಗಲು ವೀರ್ಯದಲ್ಲಿ ರಕ್ತಕಾಣಿಸಿಕೊಳ್ಳಲು ಕಾರಣವಾಗಬಹುದು.

ಇತರ ವೈದ್ಯಕೀಯ ಕಾರಣಗಳು
ಅಧಿಕ ರಕ್ತದೊತ್ತಡ, ಎಚ್ ಐವಿ, ಯಕೃತ್ ಕಾಯಿಲೆ ಇತ್ಯಾದಿಗಳಿಂದ ವೀರ್ಯದಲ್ಲಿ ರಕ್ತ ಕಾಣಿಸಿಕೊಳ್ಳಬಹುದು.

ಇತರ ಸಮಸ್ಯೆಗಳು
ಗಡಸು ಲೈಂಗಿಕ ಕ್ರಿಯೆ ಅಥವಾ ಹಸ್ತಮೈಥುನ, ಜನನೇಂದ್ರಿಯಗಳಿಗೆ ಆಗಿರುವ ಆಘಾತ ಇತ್ಯಾದಿಗಳು ಕೂಡ ವೀರ್ಯದಲ್ಲಿ ರಕ್ತ ಕಂಡುಬರಲು ಕಾರಣವಾಗಿದೆ.

ಹೆಮಾಟೋಸ್ಪೆರ್ಮಿಯಾದ ಲಕ್ಷಣಗಳು
ಹೆಮಾಟೋಸ್ಪೆರ್ಮಿಯಾದ ಕೆಲವೊಂದು ಸಾಮಾನ್ಯ ಲಕ್ಷಣಗಳು ಈ ರೀತಿಯಾಗಿ ಇರುವುದು.ಮೂತ್ರ ವಿಸರ್ಜನೆ ವೇಳೆ ನೋವು ಅಥವಾ ಉರಿಯೂತ. ಮೂತ್ರದಲ್ಲಿ ರಕ್ತ. ಪೂರ್ಣ ಪ್ರಮಾಣದಲ್ಲಿ ಮೂತ್ರ ವಿಸರ್ಜನೆ ಮಾಡಲು ಅಸಾಧ್ಯವಾಗುವುದು. ಸ್ಖಲನ ವೇಳೆ ನೋವು.ನೋವಿನೊಂದಿಗೆ ಮೂತ್ರನಾಳವು ಊದಿಕೊಂಡಿರುವುದು. ಅಧಿಕ ರಕ್ತದೊತ್ತಡದೊಂದಿಗೆ ಜ್ವರ ಕೂಡ ಕಾಣಿಸಿಕೊಳ್ಳುವುದು.ಪುರುಷರ ಜನನೇಂದ್ರಿಯದಿಂದ ವಿಸರ್ಜನೆ ಅಥವಾ ಬೇರೆ ಲೈಂಗಿಕ ರೋಗಗಳ ಲಕ್ಷಣಗಳು. ಸಂತಾನೋತ್ಪತ್ತಿ ಅಂಗಗಳಲ್ಲಿ ನೋವು ಅಥವಾ ಊತ ಕಾಣಿಸಿಕೊಳ್ಳುವುದು.

ವೀರ್ಯದಲ್ಲಿ ರಕ್ತ ಪತ್ತೆ ಮಾಡುವುದು ಹೇಗೆ?
ಇತ್ತೀಚಿನ ಲೈಂಗಿಕ ಚಟುವಟಿಕೆಗಳ ಸಹಿತ ವೈದ್ಯರು ರೋಗಿಯ ವೈದ್ಯಕೀಯ ಇತಿಹಾಸವನ್ನು ಕೇಳುವರು. ಯಾವುದೇ ಊತ ಅಥವಾ ಗಡ್ಡೆ ಇದೆಯಾ ಎಂದು ತಿಳಿಯಲು ವೈದ್ಯರು ಶಿಶ್ನವನ್ನು ಪರೀಕ್ಷೆ ಮಾಡುವರು. ಗುದನಾಳದಲ್ಲಿ ಯಾವುದೇ ರೀತಿಯ ಊತ ಇದೆಯಾ ಎಂದು ಪರೀಕ್ಷೆ ಮಾಡಲಾಗುವುದು. ಜನನೇಂದ್ರಿಯವು ಊದಿಕೊಳ್ಳುವುದು ಕೂಡ ಇತರ ಕೆಲವು ಲಕ್ಷಣಗಳು. ಮೂತ್ರ ಪರೀಕ್ಷೆ ಮಾಡಬಹುದು. ಇದರಿಂದ ಸೋಂಕು ಅಥವಾ ವಿಕಲತೆ ಇದ್ದರೆ ತಿಳಿಯುವುದು.
ನೆನಪಿಡಿ-
*ಒಂದು ವೇಳೆ ಮೂತ್ರವಿಸರ್ಜಿಸುವಾಗ ತೀವ್ರತರದ ಉರಿ ಅಥವಾ ಬಿಸಿಯಾಗುತ್ತಿರುವಂತೆ ಅನ್ನಿಸಿದರೆ, ಕೂಡಲೇ ವೈದ್ಯರಲ್ಲಿ ತಪಾಸಣೆ ಮಾಡಿಕೊಳ್ಳಿ
* ಒಂದು ವೇಳೆ ಮಲವಿಸರ್ಜನೆಯ ಹೊತ್ತಿನಲ್ಲಿ ನೋವಾಗದೇ ಇದ್ದರೂ ರಕ್ತದಿಂದ ಆವರಿಸಿಕೊಂಡಿರುವುದು ಕಂಡುಬಂದರೆ ಕೂಡಲೇ ವೈದ್ಯರನ್ನು ಕಾಣಿ.

ಜನನೇಂದ್ರಿಯ ಕ್ಯಾನ್ಸರ್ ನ ಪರೀಕ್ಷೆ
ಕ್ಯಾನ್ಸರ್ ವಯಸ್ಸು, ಲಿಂಗ ಭೇದವಿಲ್ಲದೆ ಯಾರಿಗೂ ಬರಬಹುದು. ಇದನ್ನು ತಡೆಯಲು ಸಾಧ್ಯವಿಲ್ಲ. ಆರೋಗ್ಯಕರ ಜೀವನಶೈಲಿಯಿಂದ ಇದನ್ನು ಬರದಂತೆ ಸ್ವಲ್ಪ ಮಟ್ಟಿಗೆ ತಡೆಯಲು ಸಾಧ್ಯ. ಕ್ಯಾನ್ಸರ್ ನಲ್ಲಿ ಸ್ತನದ ಕ್ಯಾನ್ಸರ್(ಬ್ರೆಸ್ಟ್ ಕ್ಯಾನ್ಸರ್), ಜನನೇಂದ್ರೀಯ ಗ್ರಂಥಿ(ಪ್ರಾಸ್ಟೇಟ್ ಕ್ಯಾನ್ಸರ್), ಮೆದುಳಿನ ಗಡ್ಡೆ, ರಕ್ತದ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್ ಇತ್ಯಾದಿಗಳಿವೆ. ಇದರಲ್ಲಿ ಕೆಲವೊಂದು ವಿಧದ ಕ್ಯಾನ್ಸರ್ ಗಳು ಕೇವಲ ಪುರುಷರು ಅಥವಾ ಮಹಿಳೆಯರಿಗೆ ಮಾತ್ರ ಬರುವುದು. ವಿಶೇಷವಾಗಿ ಸ್ತನ ಕ್ಯಾನ್ಸರ್ ಮಹಿಳೆಯರಿಗೆ ಬಂದರೆ, ಜನನೇಂದ್ರಿಯ ಗ್ರಂಥಿ ಕ್ಯಾನ್ಸರ್ ಪುರುಷರಿಗೆ ಮಾತ್ರ ಬರುವುದು. ಇದರಿಂದ ಪ್ರತಿಯೊಬ್ಬರು ತಮ್ಮ ದೇಹವನ್ನು ಆಗಾಗ ಪರೀಕ್ಷೆ ಮಾಡಿಕೊಂಡು, ಯಾವುದೇ ರೀತಿಯ ಕ್ಯಾನ್ಸರ್ ಅಂತಿಮ ಹಂತಕ್ಕೆ ಹೋಗುವ ಮೊದಲು ಕಂಡುಹಿಡಿದು ಚಿಕಿತ್ಸೆ ಮಾಡಿಕೊಳ್ಳಬಹುದು. ಜನನೇಂದ್ರೀಯ ಕ್ಯಾನ್ಸರ್ ಪುರುಷರಲ್ಲಿ ಸಾಮಾನ್ಯವಾಗಿದ್ದು, ಇದಕ್ಕಾಗಿ ಪ್ರತಿಯೊಬ್ಬ ಪುರುಷನು ಜನನೇಂದ್ರೀಯ ಕ್ಯಾನ್ಸರ್ ಪರೀಕ್ಷೆ ಮಾಡಿಕೊಳ್ಳಬೇಕು. ಇದರಲ್ಲಿ ಜನನೇಂದ್ರಿಯ ಕ್ಯಾನ್ಸರ್ ನ ಪರೀಕ್ಷೆ ಹೀಗಿರುತ್ತದೆ- ಅಲ್ಟ್ರಾಸೌಂಡ್, ಸಿಸ್ಟೊಸ್ಕೋಪಿ, ಎಂಆರ್ ಐ ಮತ್ತು ಸಿಟಿ ಸ್ಕ್ಯಾನ್ ಮಾಡಲಾಗುವುದು. ಇದೇ ವೇಳೆ ಸಂಗಾತಿಯ ಜನನಾಂಗದಿಂದ ರಕ್ತ ಬರುತ್ತಿದೆಯಾ ಎಂದು ತಿಳಿಯಲು ಕಾಂಡೋಮ್ ಪರೀಕ್ಷೆ ಕೂಡ ಮಾಡಲಾಗುತ್ತದೆ. ಇಂತಹ ಸಂದರ್ಭದಲ್ಲಿ ಪುರುಷರು ಕಾಂಡೋಮ್ ಧರಿಸಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಬೇಕು.

ಹೆಮಾಟೋಸ್ಪೆರ್ಮಿಯಾಗೆ ಚಿಕಿತ್ಸೆ ಇದೆಯಾ?
ಇದಕ್ಕೆ ನಿಜವಾದ ಕಾರಣವೇನೆಂದು ತಿಳಿದುಕೊಂಡ ಬಳಿಕ ಸರಿಯಾದ ಚಿಕಿತ್ಸೆ ನೀಡಲಾಗುತ್ತದೆ. ಸೋಂಕು ಅಥವಾ ಉರಿಯೂತದಿಂದಾಗಿ ರಕ್ತ ಬರುತ್ತಲಿದ್ದರೆ ಆಗ ವಿವಿಧ ಔಷಧಿಗಳನ್ನು ನೀಡಲಾಗುತ್ತದೆ. ಕೆಲವೊಂದು ಸಲ ಆ್ಯಂಟಿ ಬಯೋಟಿಕ್ ಕೂಡ ನೀಡಲಾಗುವುದು. ಇದಕ್ಕೆ ಯಾವುದೇ ಲೈಂಗಿಕ ರೋಗ, ಯಕೃತ್ ಕಾಯಿಲೆ ಅಥವಾ ಅಧಿಕ ರಕ್ತದೊತ್ತಡ ಕಾರಣವಾಗಿದ್ದರೆ ಆಗ ಅದಕ್ಕೆ ಚಿಕಿತ್ಸೆ ನೀಡಲಾಗುವುದು.
ಪುರುಷರು ತಮ್ಮ ಶಿಶ್ನಗಳ ಗಾತ್ರವನ್ನು ಹೆಚ್ಚಿಸಿಕೊಳ್ಳಲು ನೈಸರ್ಗಿಕ ಪರಿಹಾರ ಸೂತ್ರಗಳು



Click it and Unblock the Notifications











