ಕಾಮಾಲೆ ಬಂದಾಗ ಕಾಳಜಿಯಿಂದ ಸೇವಿಸಬಹುದಾದ ಆಹಾರ ಪದಾರ್ಥಗಳು

By: Divya
Subscribe to Boldsky

ಒಂದು ಕಾಲದಲ್ಲಿ ಕಾಮಾಲೆ ರೋಗ ಅಥವಾ ಜಾಂಡಿಸ್‌ ಬಂತೆಂದರೆ ಆ ವ್ಯಕ್ತಿಯ ಜೀವದ ಆಸೆ ಬಿಟ್ಟಂತೆ ಆಗಿತ್ತು. ಆಧುನಿಕ ವಿಜ್ಞಾನ ಹಾಗೂ ಆವಿಷ್ಕಾರದಿಂದ ರೋಗಕ್ಕೆ ಚಿಕಿತ್ಸೆಯಿದೆ. ಬಿಳಿ ಕಾಮಾಲೆ, ಹಳದಿ ಕಾಮಾಲೆ ಎಂಬ ಎರಡು ವಿಧವಿದೆ. ಇವೆರಡು ಕಾಮಾಲೆಯಲ್ಲೂ ಆಹಾರದಲ್ಲಿ ಪಥ್ಯ ಅನುಸರಿಸಬೇಕಾಗುತ್ತದೆ. ಔಷಧಗಳೆಷ್ಟೇ ಇದ್ದರೂ ಆಹಾರದ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿರುವಂತಹ ಯಕೃತ್ (ಲಿವರ್) ಸರಿಯಾಗಿ ಕಾರ್ಯನಿರ್ವಹಿಸದೆ ಇದ್ದಾಗ ಕಾಮಾಲೆ ರೋಗ ಕಾಣಿಸಿಕೊಳ್ಳುತ್ತದೆ. ಕಾಮಾಲೆ ರೋಗ ಕಾಣಿಸಿಕೊಂಡ ವ್ಯಕ್ತಿಯ ರಕ್ತದಲ್ಲಿ ಬಿಲಿರುಬಿನ್ ಮಟ್ಟವು ಏರಿಕೆಯಾಗುತ್ತದೆ. ಇದರಿಂದ ಚರ್ಮವು ಹಳದಿಯಾಗಲು ಆರಂಭವಾಗುತ್ತದೆ. ಈ ರೋಗ ಕಂಡುಬಂದ ತಕ್ಷಣ ಅದಕ್ಕೆ ಸರಿಯಾದ ಚಿಕಿತ್ಸೆ ಅಗತ್ಯವಾಗಿ ನೀಡಲೇಬೇಕು. ಇಲ್ಲವಾದಲ್ಲಿ ಯಕೃತ್ ಕೆಟ್ಟು ಹೋಗಿ ಜೀವಕ್ಕೆ ಅಪಾಯವಾಗಬಹುದು. ಇನ್ನು ಚರ್ಮ ಹಳದಿಯಾಗುವುದು, ಕಣ್ಣುಗಳು ಬಿಳಿಯಾಗುವುದು, ನಿಶ್ಯಕ್ತಿ, ಹೊಟ್ಟೆನೋವು, ತೂಕ ಕಡಿಮೆಯಾಗುವುದು, ವಾಂತಿ ಮತ್ತು ಜ್ವರ ಕಾಮಾಲೆ ರೋಗದ ಲಕ್ಷಣಗಳಾಗಿವೆ. 

ನಾವು ನಿರ್ಲಕ್ಷ್ಯ ಮಾಡುವ ಜಾಂಡೀಸ್ ನ ಲಕ್ಷಣಗಳಿವು!

ಇನ್ನು ಹಳದಿ ಕಾಮಲೆ ಬಂದರೆ ಚರ್ಮ ಹಾಗೂ ಕಣ್ಣುಗಳ ಭಾಗವೆಲ್ಲಾ ಹಳದಿ ಬಣ್ಣಕ್ಕೆ ತಿರುಗುತ್ತವೆ. ಯಕೃತ್ತಿನ ಅಸಮರ್ಪಕ ಕಾರ್ಯದಿಂದ ಈ ಕಾಯಿಲೆ ಬರುವುದು. ಬಿಲುರುಬಿನ್ ಆರ್ಬಿಸಿಯ ತ್ಯಾಜ್ಯ ಉತ್ಪನ್ನಗಳಿಂದ ರಕ್ತಸ್ರಾವದಲ್ಲಿ ಹಾಗೂ ಅಂಗಾಂಶಗಳಲ್ಲಿ ಕಂಡುಬರುತ್ತದೆ. ಹೆಚ್ಚು ಅಪಾಯಕಾರಿಯಾದ ಕಾಮಲೆ ಸಮಯದಲ್ಲಿ ಅನುಸರಿಸಬಹುದಾದ ಆಹಾರವನ್ನು ತ್ವರಿತವಾಗಿ ಪರಿಶೀಲಿಸೋಣ... 

ಎಳನೀರು

ಎಳನೀರು

ಎಳನೀರನ್ನು ಸೇವಿಸುವುದರಿಂದ ದೇಹದ ಶಾಖವನ್ನು ಕಡಿಮೆಗೊಳಿಸಿ ಮೂತ್ರ ವಿಸರ್ಜನೆ ಸರಾಗವಾಗಿ ಆಗುವಂತೆ ಮಾಡುತ್ತದೆ. ಹಾಗಾಗಿ ಈ ಕಾಯಿಲೆ ಬಂದಾಗ ಎಳನೀರು ಸೇವಿಸಬೇಕು.

ಟೊಮೇಟೊ

ಟೊಮೇಟೊ

ಕಾಮಾಲೆ ರೋಗಿಗಳಿಗೆ ಟೊಮೇಟೊ ಒಂದು ಉತ್ತಮ ಆಹಾರವಾಗಿದೆ. ಇದರಲ್ಲಿರುವ ವಿವಿಧ ಆಂಟಿ ಆಕ್ಸಿಡೆಂಟುಗಳು ಮತ್ತು ಹೇರಳವಾದ ವಿಟಮಿನ್ ಸಿ ರೋಗವನ್ನು ಶೀಘ್ರವೇ ಹತೋಟಿಗೆ ತರಲು ನೆರವಾಗುತ್ತದೆ. ಇದಕ್ಕಾಗಿ ಟೊಮೇಟೊ ಹಣ್ಣಿನ ಸಿಪ್ಪೆ ಮತ್ತು ಬೀಜಗಳನ್ನು ನಿವಾರಿಸಿದ ತಿರುಳನ್ನು ಮಿಕ್ಸಿಯಲ್ಲಿ ಚಿಟಿಕೆ ಉಪ್ಪು ಮತ್ತು ಚಿಟಿಕೆ ಕಾಳುಮೆಣಸಿನ ಪುಡಿ ಹಾಕಿ ಖಾಲಿ ಹೊಟ್ಟೆಯಲ್ಲಿ ಹನ್ನೆರಡು ದಿನ ಸತತವಾಗಿ ಕುಡಿಯುವುದರಿಂದ ಕಾಮಾಲೇ ಶೀಘ್ರವೇ ಹತೋಟಿಗೆ ಬರುತ್ತದೆ.

ಕಬ್ಬಿನ ಹಾಲು

ಕಬ್ಬಿನ ಹಾಲು

ಕಾಮಾಲೆಗೆ ಕಬ್ಬಿನ ಹಾಲು ಸಹಾ ಉತ್ತಮ ಆಹಾರವಾಗಿದೆ. ದಿನಕ್ಕೊಂದು ಲೋಟ ಕಬ್ಬಿನಹಾಲು ಕುಡಿಯುವುದರಿಂದ ಯಕೃತ್ ತನ್ನ ಹಿಂದಿನ ಸ್ಥಿತಿಯನ್ನು ಪಡೆಯಲು ನೆರವಾಗುತ್ತದೆ ಹಾಗೂ ಜೀರ್ಣಕ್ರಿಯೆಯೂ ಉತ್ತಮಗೊಳ್ಳುತ್ತದೆ.

ಬಾರ್ಲಿ

ಬಾರ್ಲಿ

ಬಾರ್ಲಿ ನೀರನ್ನು ದಿನನಿತ್ಯ ಕುಡಿಯುವುದಿಂದ ಜೀರ್ಣಾಂಗ ವ್ಯವಸ್ಥೆಯು ಸರಿಯಾದ ರೀತಿಯಲ್ಲಿ ಕೆಲಸ ಮಾಡಲು ನೆರವಾಗುವುದು. 3-4 ಲೀಟರ್ ನೀರಿಗೆ ಒಂದು ಕಪ್ ಬಾರ್ಲಿ ಹಾಕಿಕೊಂಡು ಅದನ್ನು ಮೂರು ಗಂಟೆಗಳ ಕಾಲ ಕುದಿಸಿ. ನಿಯಮಿತವಾಗಿ ಈ ನೀರು ಸೇವಿಸಿದರೆ ಕಾಮಾಲೆ ರೋಗವು ಕಡಿಮೆಯಾಗಿ ದೇಹವು ಮೊದಲಿನ ಸ್ಥಿತಿಗೆ ಬರುವುದು.

ಕಲ್ಲಂಗಡಿಯ ಬೀಜಗಳು

ಕಲ್ಲಂಗಡಿಯ ಬೀಜಗಳು

ಕಲ್ಲಂಗಡಿ ಬೀಜ ಹಣ್ಣು ತಿನ್ನುವಾಗ ಅಥವಾ ರಸ ಸೇವಿಸುವಾಗ ಹೊಟ್ಟೆಗೆ ಹೋದರೆ ಉತ್ತಮವಾದದ್ದು. ಇದು ಉರಿಯೂತವನ್ನು ಕಡಿಮೆ ಮಾಡಿ, ಮೂತ್ರವಿಸರ್ಜನೆಗೆ ಸಹಾಯ ಮಾಡುತ್ತದೆ. ಅಲ್ಲದೆ ಬೈಲಿರುಬಿನ್ ಮಟ್ಟವನ್ನು ಕಡಿಮೆಮಾಡುತ್ತದೆ.

ತಾಜಾ ತರಕಾರಿಗಳು

ತಾಜಾ ತರಕಾರಿಗಳು

ಆಲೂಗಡ್ಡೆ ಕ್ಯಾರೆಟ್, ಸಿಹಿ ಆಲೋಗಡ್ಡೆ, ಬೀಟ್ರೂಟ್ ಸೇರಿದಂತೆ ಇನ್ನಿತರ ತರಕಾರಿಗಳನ್ನು ಬೇಯಿಸಿ, ಹಿಸುಕಿ ಸೇವಿಸಬಹುದು. ಇವುಗಳ ಸೇವನೆಯಿಂದ ದೇಹಕ್ಕೆ ಅಗತ್ಯವಿರುವ ಕಬ್ಬಿಣಾಂಶ, ಪೋಷಕಾಂಶ, ಕೊಬ್ಬಿನಂಶಗಳನ್ನು ನೀಡುತ್ತವೆ.

ನೆಲ್ಲಿಕಾಯಿ ಜ್ಯೂಸ್

ನೆಲ್ಲಿಕಾಯಿ ಜ್ಯೂಸ್

ನೆಲ್ಲಿಕಾಯಿಯಲ್ಲಿಯೂ ಆಂಟಿ ಆಕ್ಸಿಡೆಂಟುಗಳು ಮತ್ತು ವಿಟಮಿನ್ ಸಿ ಪ್ರಮಾಣ ಹೇರಳವಾಗಿದ್ದು ಕಾಮಾಲೆಗೆ ಉತ್ತಮವಾದ ಆಹಾರವಾಗಿದೆ. ಇದಕ್ಕಾಗಿ ಬೀಜ ನಿವಾರಿಸಿ ಕೊಂಚ ನೀರಿನಲ್ಲಿ ಚಿಟಿಕೆ ಉಪ್ಪು ಮತ್ತು ಕಾಳುಮೆಣಸಿನ ಪುಡಿಯನ್ನು ಸೇರಿಸಿ ಮಿಕ್ಸಿಯಲ್ಲಿ ಗೊಟಾಯಿಸಿ ಕುಡಿಯುವುದರಿಂದ ಉತ್ತಮ ಪರಿಣಾಮ ದೊರಕುತ್ತದೆ. ಇದು ಯಕೃತ್‌ನ ಜೀವಕೋಶಗಳನ್ನು ಬೆಳೆಸಿ ಹಳೆಯ ಶಕ್ತಿಯನ್ನು ಪಡೆಯಲು ನೆರವಾಗುತ್ತದೆ.

ನಿಂಬು

ನಿಂಬು

ಕಾಮಲೆಗೆ ನಿಂಬು ಜ್ಯೂಸ್ ಸೇವನೆ ಉತ್ತಮವಾದದ್ದು. ಪಿತ್ತನಾಳದಲ್ಲಿ ಉಂಟಾದ ಅಡೆತಡೆಗಳನ್ನು ಇದು ನಿವಾರಿಸುತ್ತದೆ. ಜೊತೆಗೆ ಕಾಮಲೆಗೆ ಪರಿಣಾಮಕಾರಿ ಚಿಕಿತ್ಸೆ ನೀಡುತ್ತದೆ.

ಕೊತ್ತಂಬರಿ ಬೀಜದ ನೀರು

ಕೊತ್ತಂಬರಿ ಬೀಜದ ನೀರು

ಕೊತ್ತಂಬರಿ ಬೀಜವನ್ನು ನಾವು ಪ್ರತಿಯೊಂದು ಮನೆಗಳಲ್ಲೂ ಕಾಣುತ್ತೇವೆ. ಇದೇ ಕೊತ್ತಂಬರಿ ಬೀಜದ ನೀರು ಯಕೃತ್ ಅನ್ನು ಶುದ್ಧೀಕರಿಸುವುದು. ಇಷ್ಟು ಮಾತ್ರವಲ್ಲದೆ ರಕ್ತದಲ್ಲಿರುವ ವಿಷಕಾರಿ ಅಂಶ ಹಾಗೂ ಹೆಚ್ಚಿನ ಬಿಲಿರುಬಿನ್ ನ್ನು ತೆಗೆದುಹಾಕುವುದು. ಮೂರು ಕಪ್ ಶುದ್ಧೀಕರಿಸಿದ ನೀರಿನಲ್ಲಿ 2-3 ಚಮಚ ಕೊತ್ತಂಬರಿ ಬೀಜವನ್ನು ರಾತ್ರಿಯಿಡಿ ನೆನೆಯಲು ಹಾಕಿ ಅಥವಾ ಅರ್ಧ ಲೀಟರ್ ನೀರಿನಲ್ಲಿ ಕೊತ್ತಂಬರಿ ಬೀಜವನ್ನು ಕುದಿಸಿ. ಈ ನೀರನ್ನು ದಿನದಲ್ಲಿ ಮೂರು ಸಲ 15 ದಿನಗಳ ಕಾಲ ಕುಡಿದರೆ ಕಾಮಾಲೆ ರೋಗವು ನಿವಾರಣೆಯಾಗುವುದು.

ರಸ ಭರಿತ ಆಹಾರ ಮತ್ತು ಹಣ್ಣು

ರಸ ಭರಿತ ಆಹಾರ ಮತ್ತು ಹಣ್ಣು

ರಸ ಭರಿತ ಹಣ್ಣು ಮತ್ತು ಆಹಾರದಲ್ಲಿ ರೋಗನಿರೋಧಕ ಶಕ್ತಿ ಹಾಗೂ ಮಾನವನ ಜೀರ್ಣಾಂಗ ವ್ಯವಸ್ಥೆಯನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಯಕೃತ್ತಿನ ಕಾರ್ಯ ಸುಲಭವಾಗುವಂತೆ ಮಾಡುತ್ತದೆ.

English summary

What Are The Best Foods To Eat During Jaundice?

Jaundice is related to the yellow colouring of the skin and the white part of the eye (sclarae). This yellow tinge is one of the major symptoms of this illness. This is actually a symptom by itself for some major ailment like cirrhosis, hepatitis or gallstones. If left untreated, jaundice may have a very damaging effect on our body. Now let us quickly check the proper diet to be followed during jaundice.
Subscribe Newsletter