ಹಾವು ಕಚ್ಚಿದರೆ, ಕೂಡಲೇ ಈ ಟಿಪ್ಸ್ ಅನುಸರಿಸಿ ವ್ಯಕ್ತಿಯ ಪ್ರಾಣ ಉಳಿಸಿ

Posted By: Deepu
Subscribe to Boldsky

ಹಿಂದೆ ಹಳ್ಳಿಗಳಲ್ಲಿ ವೈದ್ಯರು ಹಾಗೂ ಆಸ್ಪತ್ರೆಯ ಪ್ರಮಾಣ ತುಂಬಾ ಕಡಿಮೆಯಿತ್ತು. ಇಂತಹ ಕಠಿಣ ಸಮಯದಲ್ಲೂ ಯಾವುದಾದರೂ ವಿಷಜಂತುಗಳು ಕಚ್ಚಿದರೆ ಅದಕ್ಕೆ ಹಳ್ಳಿಯಲ್ಲೇ ಮದ್ದು ತಯಾರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆಯುರ್ವೇದಲ್ಲಿ ಸೂಚಿಸಿರುವಂತಹ ಕೆಲವೊಂದು ಮನೆಮದ್ದುಗಳು ವಿಷಕಾರಿ ಹಾವುಗಳ ಕಡಿತಕ್ಕೆ ತುಂಬಾ ಪರಿಣಾಮಕಾರಿಯಾಗಿದೆ.  ಹಾವಿನ ಕನಸ್ಸು ಬಿದ್ದರೆ ಏನಂತ ಅರ್ಥ?

ಆದರೆ ಕೆಲವೊಂದು ಹಾವುಗಳ ವಿಷವು ಅಧಿಕವಾಗಿರುವ ಕಾರಣದಿಂದ ತಕ್ಷಣ ಸಾವು ಸಂಭವಿಸುತ್ತದೆ. ಯಾವ ಹಾವು ಕಚ್ಚಿದೆ ಎಂದು ಸರಿಯಾಗಿ ತಿಳಿದಿದ್ದರೆ ಈ ಮದ್ದನ್ನು ಬಳಸಬಹುದು. ಹಾವು ಕಡಿದಾಗ ಪ್ರಥಮ ಚಿಕಿತ್ಸೆ ಅಗತ್ಯವಾಗಿ ಬೇಕೇಬೇಕು. ಯಾವ ಚಿಕಿತ್ಸೆ ಮಾಡಬಹುದು ಎಂದು ಈ ಲೇಖನದ ಮೂಲಕ ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ... ಮುಂದೆ ಓದಿ

ಹಾವು ಕಚ್ಚಿದ ಸಂದರ್ಭದಲ್ಲಿ ಮೊದಲು ಮಾಡುವ ಕೆಲಸ

ಹಾವು ಕಚ್ಚಿದ ಸಂದರ್ಭದಲ್ಲಿ ಮೊದಲು ಮಾಡುವ ಕೆಲಸ

ಹಾವು ಕಚ್ಚಿದ ಸಂದರ್ಭದಲ್ಲಿ ಕಚ್ಚಿದ ಜಾಗಕ್ಕೆ ಯಾವುದಾದರೂ ಚಾಕುವಿಂದ ಸ್ವಲ್ಪ ಗಾಯವನ್ನು ದೊಡ್ಡದು ಮಾಡಿ ವಿಷವನ್ನು ಹೊಂದಿರುವ ರಕ್ತವನ್ನು ಹೊರಹಾಕಬೇಕು. ಇದರ ಬಳಿಕ ಪೊಟಾಶಿಯಂ ಪಾರಾಗ್ನೆಟ್ ಹುಡಿಯನ್ನು ಹಾಕಿಕೊಳ್ಳಿ.

ಹಿಂದಿನ ಕಾಲದಲ್ಲಿ

ಹಿಂದಿನ ಕಾಲದಲ್ಲಿ

ಹಿಂದಿನ ಕಾಲದಲ್ಲಿ ಹಾವು ಕಚ್ಚಿದಾಗ ಗಾಯಕ್ಕೆ ಬಾಯಿ ಹಾಕಿ ವಿಷವನ್ನು ಹೀರಿ ತೆಗೆಯಲಾಗುತ್ತಾ ಇತ್ತು. ಆದರೆ ವಿಷ ಹೀರುವವರಿಗೆ ಇದು ಅಪಾಯಕಾರಿ. ಬೆಟ್ಟ ಪ್ರದೇಶದಲ್ಲಿರುವ ಕೆಲವು ತಜ್ಞರು ಈಗಲೂ ಇದೇ ತಂತ್ರವನ್ನು ಅನುಸರಿಸುತ್ತಾರೆ.

5-8 ಇಂಚು ಮೇಲಕ್ಕೆ ಹಾಗೂ ಕೆಳಕ್ಕೆ ಬಟ್ಟೆಯಿಂದ ಬಲವಾಗಿ ಕಟ್ಟಿ

5-8 ಇಂಚು ಮೇಲಕ್ಕೆ ಹಾಗೂ ಕೆಳಕ್ಕೆ ಬಟ್ಟೆಯಿಂದ ಬಲವಾಗಿ ಕಟ್ಟಿ

ಹಾವು ಕಡಿದ ಜಾಗದಿಂದ ವಿಷವನ್ನು ತೆಗೆದ ಬಳಿಕ ಕಡಿದ ಜಾಗಕ್ಕಿಂತ 5-8 ಇಂಚು ಮೇಲಕ್ಕೆ ಹಾಗೂ ಕೆಳಕ್ಕೆ ಬಟ್ಟೆ ಅಥವಾ ಹಗ್ಗದಿಂದ ದೇಹದ ಭಾಗವನ್ನು ಬಲವಾಗಿ ಕಟ್ಟಿ. ಇದರಿಂದ ವಿಷವು ದೇಹಕ್ಕೆ ಹರಡುವುದು ತಪ್ಪುತ್ತದೆ.

ಮನೆಯಲ್ಲೇ ತಯಾರಿಸಿದ ಅಪ್ಟಟ ತುಪ್ಪ

ಮನೆಯಲ್ಲೇ ತಯಾರಿಸಿದ ಅಪ್ಟಟ ತುಪ್ಪ

ಮನೆಯಲ್ಲೇ ತಯಾರಿಸಿದ ತುಪ್ಪ, ಬೆಣ್ಣೆ ಅಥವಾ ಫಿಟ್ಕರಿ/ ಅಲಮ್ ಹುಡಿಯನ್ನು ಹಾಕಿದರೆ ವಿಷದ ಪ್ರಭಾವವು ಕಡಿಮೆಯಾಗುವುದು. 50 ಗ್ರಾಂ ದೇಶೀಯ ತುಪ್ಪಕ್ಕೆ 2-3 ಗ್ರಾಂ ಫಿಟ್ಕರಿ ಹುಡಿಯನ್ನು ಬೆರೆಸಿ ಹಾವು ಕಡಿದ ಜಾಗಕ್ಕೆ ಹಚ್ಚಿಕೊಳ್ಳಿ.

ಅಶ್ವತ್ಥ ವೃಕ್ಷದ ಎಲೆಗಳು...

ಅಶ್ವತ್ಥ ವೃಕ್ಷದ ಎಲೆಗಳು...

ಹಾವು ಕಡಿದಿರುವುದಕ್ಕೆ ಚಿಕಿತ್ಸೆ ನೀಡಲು ಅಶ್ವತ್ಥ ಮರವು ತುಂಬಾ ಪರಿಣಾಮಕಾರಿ. 40ರಿಂದ ಅಶ್ವತ್ಥ ವೃಕ್ಷದ ಎಲೆಗಳನ್ನು ತೆಗೆದುಕೊಂಡು ಒಂದರ ಹಿಂದೆ ಒಂದರಂತೆ ನಿಮ್ಮ ಎರಡೂ ಕಿವಿಗೂ ಇಟ್ಟುಕೊಳ್ಳಿ. ಎಲೆಯ ಕಾಂಡವನ್ನು ಹಾವು ಕಚ್ಚಿದ ಜಾಗಕ್ಕೆ ಇಟ್ಟುಬಿಡಿ. ಇದರಿಂದ ವಿಷದ ಪರಿಣಾಮವು ಕಡಿಮೆಯಾಗುವುದು.

ಆಹಾರದಲ್ಲಿ ಉಪ್ಪನ್ನು ಸೇರಿಸಬೇಡಿ

ಆಹಾರದಲ್ಲಿ ಉಪ್ಪನ್ನು ಸೇರಿಸಬೇಡಿ

ಸಂಪೂರ್ಣವಾಗಿ ಚೇತರಿಸಿಕೊಳ್ಳುವ ತನಕ ಆಹಾರದಲ್ಲಿ ಉಪ್ಪನ್ನು ಸೇರಿಸಬೇಡಿ. ನಿರ್ಗುಂಡಿ ಹಸಿರು ಎಲೆಯನ್ನು ಹಾವು ಕಡಿದ ಜಾಗಕ್ಕೆ ಇಟ್ಟುಕೊಂಡರೆ ಅದರಿಂದ ಸೋಂಕು ಕಡಿಮೆಯಾಗುವುದು.

ಬೆಟೋನೈಟ್ ಮರಳು

ಬೆಟೋನೈಟ್ ಮರಳು

ಈ ಮರಳು ದೇಹದಿಂದ ವಿಷಯವನ್ನು ತುಂಬಾ ಪರಿಣಾಮಕಾರಿಯಾಗಿ ತೆಗೆಯುತ್ತದೆ ಮತ್ತು ಕಚ್ಚಿದ ನೋವನ್ನು ಕಡಿಮೆ ಮಾಡುವುದು. ಎಕಿನೇಶಿಯಾದ ಹುಡಿ ಮತ್ತು ಮರಳನ್ನು ಸೇರಿಸಿ ಸ್ವಲ್ಪ ಪೇಸ್ಟ್ ರೀತಿ ಮಾಡಿಕೊಂಡು ಗಾಯಕ್ಕೆ ಹಚ್ಚಿಕೊಳ್ಳಿ. ಈ ಮರಳನ್ನು ತಿನ್ನುತ್ತಾ ಇದ್ದರೆ ಸಾಧ್ಯವಾದಷ್ಟು ನೀರು ಕುಡಿಯಿರಿ.

ಕರಿಬೇವಿನ ಎಲೆಗಳು

ಕರಿಬೇವಿನ ಎಲೆಗಳು

ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕರಿಬೇವಿನ ಎಲೆಗಳಿಂದ ಚಿಕಿತ್ಸೆ ಮಾಡಬಹುದು. ಯಾವುದೇ ಆಹಾರದ ರುಚಿಯನ್ನು ಹೆಚ್ಚಿಸುವ ಕರಿಬೇವಿನ ಗಂಜಿಯಿಂದ ವಿಷವನ್ನು ತೆಗೆಯಬಹುದು ಮತ್ತು ಹಾವು ಕಡಿತಕ್ಕೆ ಚಿಕಿತ್ಸೆ ನೀಡಬಹುದು.

ಎಚ್ಚರಿಕೆಯ ಸಲಹೆಗಳು

ಎಚ್ಚರಿಕೆಯ ಸಲಹೆಗಳು

ಹಾವು ಕಚ್ಚಿದಂತಹ ಸಂದರ್ಭದಲ್ಲಿ ಆದಷ್ಟು ಬೇಗ ವೈದ್ಯಕೀಯ ನೆರವನ್ನು ಪಡೆಯಲು ಪ್ರಯತ್ನಿಸಿ. ಇದರಿಂದ ಪ್ರಾಣಾಪಾಯ ಕಡಿಮೆಯಾಗುವುದು. ಆದಷ್ಟು ಬೇಗನೆ ಹಾವು ಕಡಿದ ವ್ಯಕ್ತಿಗೆ ಆಂಟಿವಿನಿನ್ ನೀಡಬೇಕು. ಮೇಲೆ ಸೂಚಿಸಿದ ಚಿಕಿತ್ಸಾ ಕ್ರಮಗಳು ಪ್ರಥಮ ಚಿಕಿತ್ಸೆ ಮತ್ತು ಸ್ವಲ್ಪ ವಿಷವಿರುವ ಹಾವುಗಳು ಕಡಿದಾಗ ಬಳಸಿಕೊಳ್ಳಬಹುದು. ಹೆಚ್ಚು ವಿಷವಿರುವ ಹಾವುಗಳ ಕಡಿತಕ್ಕೆ ಅಲ್ಲ.

 

English summary

Quick Tip: Emergency Alternative Medicine For Snake Bites

Snake bite sometimes very harmful and cause to death. It is depends upon the snake. Some snake has a strong poison and causes immediate death after bite. Snakes are present entire the world with thousands of different species and known as a dangerous creature. A quick and emergency first aid is very necessary in snake bite treatment.