ಹುಷಾರು, ಇವುಗಳ ತಂಟೆಗೆ ಮಾತ್ರ ಹೋಗಬೇಡಿ..!!

By: manu
Subscribe to Boldsky

ವಿಶ್ವವು ನಾವು ಬದುಕಲು ಹೇಳಿ ಮಾಡಿಸಿದಂತಹ ಜಾಗ. ಇಲ್ಲಿ ಮನುಷ್ಯರು ಬದುಕಲು ಬೇಕಾದ ಸಕಲ ಸೌಕರ್ಯಗಳನ್ನು ಪ್ರಕೃತಿ ನೀಡಿದೆ. ಹಾಗೆಂದು ಇಲ್ಲಿ ಕೇವಲ ಮನುಷ್ಯರು ಮಾತ್ರವೇ ಬದುಕಬೇಕು ಎಂದೇನೂ ಇಲ್ಲವಲ್ಲ. ಮನುಷ್ಯರನ್ನು ಸಹ ಅಪಾಯಕ್ಕೆ ದೂಡುವ, ಕನಸಲ್ಲಿ ಸಹ ಅವರಲ್ಲಿ ನಡುಕವನ್ನು ಉಂಟು ಮಾಡುವ ಹಲವಾರು ಜೀವಿಗಳು ಈ ಭೂಮಿಯಲ್ಲಿವೆ. ಅಂತಹದರಲ್ಲಿ ವಿಷಕಾರಿ ಹುಳುಗಳು ಮತ್ತು ಹಾವುಗಳಿಗೆ ಅಗ್ರಸ್ಥಾನ ನೀಡಬೇಕು. ಇವುಗಳ ಹೆಸರು ಹೇಳಿದರೆ ಸಾಕು ಜನ ನಿಂತ ಜಾಗದಲ್ಲಿಯೇ ಹೆದರಿಕೊಂಡು ಪಕ್ಕಕ್ಕೆ ಸರಿಯುತ್ತಾರೆ.

ಹಾವುಗಳು, ಚೇಳುಗಳು, ವಿಷಪೂರಿತ ಕೀಟ, ಮೀನುಗಳು ಹೀಗೆ ಭೂಮಿ ಮೇಲೆ ಮತ್ತು ಸಾಗರದಲ್ಲಿ ಸಹ ಇವುಗಳು ಮನುಷ್ಯನನ್ನು ನಡುಗಿಸುವ ಮತ್ತು ಅದೇ ಸಮಯಕ್ಕೆ ಸಾಯಿಸುವ ಸಾಮರ್ಥ್ಯವನ್ನು ಸಹ ತಮ್ಮಲ್ಲಿ ಹೊಂದಿವೆ. ವಿಶ್ವದಲ್ಲಿರುವ ಎಲ್ಲಾ ಹಾವು, ಕೀಟಗಳು ವಿಷಪೂರಿತವಲ್ಲ, ಆದರೆ ವಿಷಪೂರಿತವಾಗಿರುವುದು ಇವೆ. ಅಪಾಯ ಯಾವಾಗ ಬರುತ್ತದೆ ಎಂದು ಹೇಳಲಾಗದು. ಅದಕ್ಕಾಗಿ ವಿಷಪೂರಿತ ಹಾವು, ಕೀಟ ಮತ್ತು ಮೀನುಗಳ ಕುರಿತಾಗಿ ಜ್ಞಾನವನ್ನು ಪಡೆಯುವುದು ಒಳ್ಳೆಯದು. ಏಕೆಂದರೆ ಕೆಲವು ಪ್ರಾಣಕ್ಕೆ ಅಪಾಯವನ್ನು ನೀಡಿದರೆ, ಇನ್ನೂ ಕೆಲವು ಮನುಷ್ಯನನ್ನು ಮೂರ್ಚೆಗೊಳಿಸಬಹುದು. ಬನ್ನಿ ಆ ಅಪಾಯಕಾರಿ ಕಡಿತಗಳು ಯಾವುವು ಎಂದು ನೋಡಿಕೊಂಡು ಬರೋಣ... 

ಬ್ರೆಜಿಲಿಯನ್ ವಂಡರಿಂಗ್ ಸ್ಪೈಡರ್

ಬ್ರೆಜಿಲಿಯನ್ ವಂಡರಿಂಗ್ ಸ್ಪೈಡರ್

ಈ ಜೇಡವನ್ನು ಬನಾನ ಸ್ಪೈಡರ್ ಎಂದು ಸಹ ಕರೆಯುತ್ತಾರೆ. ಏಕೆಂದರೆ ಇವುಗಳು ಬಾಳೆಹಣ್ಣಿನ ಎಲೆಯಲ್ಲಿ ಹೆಚ್ಚು ಕಂಡು ಬರುತ್ತವೆ. ಮನುಷ್ಯನನ್ನು ಕೊಲ್ಲುವಷ್ಟು ವಿಷವನ್ನು ಇವು ಹೊಂದಿರುತ್ತವೆ. ಕಚ್ಚಿದರೆ ಆತನ ಗತಿ ಅಷ್ಟೇ!

Image courtesy

ಕ್ಯಾಂಡಿರು ಫಿಶ್

ಕ್ಯಾಂಡಿರು ಫಿಶ್

ಈ ಮೀನು ಎಷ್ಟು ಭಯಾನಕ ಎಂದರೆ ಮಾನವನ ಜನಾನಂಗದ ಮೂಲಕ ಅವನ ದೇಹ ಸೇರಿ, ಮಾನವನ ರಕ್ತದ ಕಣಗಳನ್ನು ಸೇವಿಸಿ ಬಲಿಯಲು ಆರಂಭಿಸುತ್ತದೆ. ಶಸ್ತ್ರಚಿಕಿತ್ಸೆಯಲ್ಲದೆ ಬೇರೆ ಮಾರ್ಗದಿಂದ ಇದನ್ನು ಹೊರತೆಗೆಯುವುದು ಕಷ್ಟ. ಮನುಷ್ಯನ ಮೇಲೆ ಈ ರೀತಿ ಭಯಾನಕವಾಗಿ ದಾಳಿ ಮಾಡುವ ಏಕೈಕ ಮೀನು ಇದು!, ಕೇಳಿದರೆ ಬೆಚ್ಚಿ ಬೀಳುವಂತಾಗುತ್ತದೆಯಲ್ಲವೇ?

Image courtesy

ಆರಿಜೋನಾ ಬಾರ್ಕ್ ಚೇಳು

ಆರಿಜೋನಾ ಬಾರ್ಕ್ ಚೇಳು

ಈ ವಿಷಪೂರಿತ ಚೇಳುಗಳು ಉತ್ತರ ಅಮೆರಿಕಾದಲ್ಲಿ ಕಂಡು ಬರುತ್ತವೆ. ಇದು ಮನುಷ್ಯನನ್ನು ಕಚ್ಚಿದರೆ ಆತನಿಗೆ ಸ್ನಾಯು ಸೆಳೆತ ಮತ್ತು ಬಾಯಿಯಲ್ಲಿ ನೊರೆ ಕಾಣಿಸಿಕೊಳ್ಳುವುದರ ಜೊತೆಗೆ ವಿಪರೀತ ನೋವು ಸಹ ಕಾಡುತ್ತದೆ. ಭಯ ಭೀತಿಯಿಂದ ಮನುಷ್ಯ ಬೇಗ ಸಾಯುತ್ತಾನೆ. Image courtesy

ವೈಪರ್ ಹಾವು

ವೈಪರ್ ಹಾವು

ವಿಶ್ವದ ಅತ್ಯಂತ ನೋವು ನೀಡುವ ಕಡಿತಗಳಲ್ಲಿ ವೈಪರ್ ಕಡಿತವು ಸಹ ಒಂದು. ಇದು ಕಚ್ಚಿದರೆ ಕೆಲವೇ ಸಮಯದಲ್ಲಿ ಮನುಷ್ಯ ಸಾಯುತ್ತಾನೆ, ಆ ಮಟ್ಟಿಗೆ ಇದರ ವಿಷ ತೀಕ್ಷ್ಣತೆಯಿಂದ ಕೂಡಿರುತ್ತದೆ. Image courtesy

ಸ್ಟೋನ್ ಫಿಶ್

ಸ್ಟೋನ್ ಫಿಶ್

ಬೀಚಿನಲ್ಲಿ ಆರಾಮವಾಗಿ ನಡೆಯುವಾಗ ಅಪ್ಪಿ-ತಪ್ಪಿ ಈ ಮೀನಿನ ಮೇಲೆ ಕಾಲಿಟ್ಟರೆ ನಿಮ್ಮ ಕತೆ ಮುಗಿಯಿತು ಎಂದೇ ಭಾವಿಸಿ. ತನ್ನ ಒಡಲೊಳಗೆ ಅತಿ ಹೆಚ್ಚು ವಿಷವನ್ನು ಇರಿಸಿಕೊಂಡಿರುವ ಈ ಮೀನು, ತನ್ನ ಕಡಿತದಿಂದ ಮನುಷ್ಯನಿಗೆ ಸಾವು ತರುವುದಕ್ಕೆ ಕುಖ್ಯಾತಿ ಪಡೆದಿದೆ. Image courtesy

ಬ್ಲಾಕ್ ವಿಡೋ

ಬ್ಲಾಕ್ ವಿಡೋ

ಇದು ಒಂದು ಕುಖ್ಯಾತ ಜೇಡ. ಎಲ್ಲಾ ಜೇಡಗಳು ಸಣ್ಣದಾಗಿರುತ್ತವೆ, ಆದರೆ ಮನುಷ್ಯನ ದುರದೃಷ್ಟಕ್ಕೆ ಈ ಜೇಡಗಳು ದಪ್ಪಕ್ಕೆ ಸಹ ಇರುತ್ತವೆ. ಅಂತ್ಯವಿಲ್ಲದ ನೋವು ಹೇಗೆ ಇರುತ್ತದೆ ಎಂಬ ಅನುಭವ ನಿಮಗಾಗಬೇಕು ಎಂದರೆ ಇದರ ಕೈಯಲ್ಲಿ ಕಚ್ಚಿಸಿಕೊಳ್ಳಬೇಕು!, ಕಚ್ಚಿಸಿಕೊಂಡವರು ಅನುಭವ ಹೇಳಲು ಬದುಕುವುದು ಕಷ್ಟ. Image courtesy

ಸಿಹಿ ಜೇನು

ಸಿಹಿ ಜೇನು

ಹೆಸರು ಮಾತ್ರ ಸ್ವೀಟ್ ಬೀ, ಆದರೆ ಕಚ್ಚಿದರೆ ಕಹಿ ಅನುಭವ ಕಂಡಿತ. ಅದರಲ್ಲೂ ಗುಂಪಾಗಿ ಮನುಷ್ಯನ ಮೇಲೆ ದಾಳಿ ಮಾಡಿದರೆ, ಅವನ ಹೆಣವನ್ನು ಸಹ ನೋಡಲು ಜನ ಹೆದರುವಷ್ಟು ಭಯಂಕರವಾಗಿರುತ್ತದೆ ಸಾವು. ಆದರೆ ಒಂದು ಎರಡೂ ಕಚ್ಚಿದರೂ ನೋವು ತಡೆಯಲು ಆಗದಷ್ಟು ಯಾತನೆ ನೀಡುತ್ತವೆ. ಎಂತಹ ನೋವು ನಿವಾರಕ ಇಂಜೆಕ್ಷನ್ ಸಹ ಈ ನೋವನ್ನು ಮಾಯಿಸಲು ಹೆಣಗಬೇಕಾಗುತ್ತದೆ. Image courtesy

ಬುಲ್‍ಹಾರ್ನ್ ಅಕೇಶಿಯಾ ಇರುವೆ

ಬುಲ್‍ಹಾರ್ನ್ ಅಕೇಶಿಯಾ ಇರುವೆ

ನಮ್ಮ ಮನೆಯ ಇರುವೆ, ಅಥವಾ ಮಾವಿನ ಮರದಲ್ಲಿರುವ ಕೆಂಪು ಇರುವೆ, ಹೊಲದಲ್ಲಿ ಇರುವ ದೊಡ್ಡ ಮುಳ್ಳಿನ ಕಪ್ಪು ಇರುವೆಯನ್ನು ಇದರ ಜೊತೆಗೆ ಹೋಲಿಸಬೇಡಿ. ಸಾಮಾನ್ಯವಾಗಿ ಹುಳುಗಳ ಮೇಲೆ ಆಕ್ರಮಣ ಮಾಡುವ ಇವುಗಳ ತಂಟೆಗೆ ಮನುಷ್ಯ ಬಂದರೆ, ಅವನ ಹಣೆಬರಹಕ್ಕೆ ಪೂರ್ಣವಿರಾಮ ಬಿದ್ದು ಬಿಡುತ್ತದೆ. ಆನೆಗಳಂತಹ ಆನೆಗಳೇ ಈ ಇರುವೆಗಳಿರುವ ಅಕೇಶಿಯಾ ಮರದ ತಂಟೆಗೆ ಬರುವುದಿಲ್ಲ ಎಂದರೆ ಇವುಗಳ ಖದರ್ ಕುರಿತು ನೀವೇ ಆಲೋಚಿಸಿ. Image courtesy

ಸಾಮಾನ್ಯ ಜೇನು ನೊಣ

ಸಾಮಾನ್ಯ ಜೇನು ನೊಣ

ಇದರ ಕೈಯಲ್ಲಿ ಈ ಲೇಖನ ಓದುತ್ತಿರುವ ಬಹುತೇಕ ಜನ ಕಚ್ಚಿಸಿಕೊಂಡಿರುತ್ತಾರೆ. ನಮ್ಮನ್ನು ಕಚ್ಚಿದ ನಂತರ ನಂಜಾಗಿ ಸಾಯುವ ಈ ಜೇನು ನೊಣಗಳು, ಸಾಯುವ ಮೊದಲು ನಮಗೆ ನೋವು ನೀಡಿ ಸಾಯುತ್ತವೆ. ಹೃದ್ರೋಗ ಇರುವವರನ್ನು ಈ ಜೇನು ನೊಣಗಳು ಕಚ್ಚಿದರೆ ಅವರಿಗೆ ಸಾವು ಸಹ ಬರಬಹುದು. Image courtesy

ಅಮೆಜಾನ್ ಸಹಸ್ರಪದಿ

ಅಮೆಜಾನ್ ಸಹಸ್ರಪದಿ

ಈ ಮಾಂಸಾಹಾರಿ ಸಹಸ್ರಪದಿಗಳು ಒಂದು ಅಡಿಯಷ್ಟು ಉದ್ದ ಬೆಳೆಯಬಲ್ಲವು. ಇದರ ತೀಕ್ಷ್ಣ ಕಡಿತವು ಹೆಗ್ಗಣ ಮತ್ತು ಬಾವಲಿಗಳಂತಹ ಪ್ರಾಣಿಗಳನ್ನು ಕೊಲ್ಲಬಲ್ಲವು. ಇದೇನಾದರು ನಿಮ್ಮನ್ನು ಕಚ್ಚಿದರೆ ನೋವು ಕನಿಷ್ಠ 12 ಗಂಟೆಗಳವರೆಗೆ ಇರುತ್ತದೆ. ಇವು ನಮ್ಮ ವಿಶ್ವದ ಅತ್ಯಂತ ಭಯಾನಕ ಕಡಿತಗಳು. ಹುಷಾರು ಇವುಗಳ ತಂಟೆಗೆ ಹೋಗಬೇಡಿ!!!!!! Image courtesy

 

English summary

Most Painful Stings & Bites In The World

There are many creatures in the animal kingdom that are venomous and are capable of attacking their prey by injecting venom into it. One needs to have a knowledge of these venomous creatures that can harm and affect you when you are bitten. Take a look at some of the dangerous creatures in the animal kingdom that you need to know about, as their stings and bites can be highly painful or even be a major life threat.
Please Wait while comments are loading...
Subscribe Newsletter