ಪದೇ ಪದೇ ಉರಿ ಮೂತ್ರ ಕಾಡುತ್ತದೆಯೇ? ಹಾಗಿದ್ದರೆ ಈ ಕಷಾಯ ಕುಡಿಯಿರಿ

By: manu
Subscribe to Boldsky

ಕೆಲವು ಆರೋಗ್ಯ ಸಮಸ್ಯೆಗಳು ಮಹಿಳೆಯರನ್ನು ಬಹುಬೇಗ ಆವರಿಸಿಕೊಳ್ಳುತ್ತವೆ. ಅದರಲ್ಲಿ ಮೂತ್ರದ ಸೋಂಕು ಸಹ ಒಂದು. ಮೂತ್ರ ಪಿಂಡದ ಸಮಸ್ಯೆಯಿಂದ, ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದರೆ ಹಾಗೂ ಶುಚಿತ್ವ ಕಾಪಾಡಿಕೊಳ್ಳದಿದ್ದರೆ ಈ ಸಮಸ್ಯೆ ಬಹು ಬೇಗ ಕಾಡುತ್ತದೆ. ಮೂತ್ರದ ಸೋಂಕು ತಗುಲಿದಾಗ ಸಹಿಸಲಾಗದಷ್ಟು ನೋವುಂಟಾಗುವುದು, ಅಲ್ಲದೇ ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗಬೇಕು ಎನ್ನುವ ಸಂವೇದನೆ ಉಂಟಾಗುತ್ತದೆ. ಈ ಸಂದರ್ಭದಲ್ಲಿ ಮೂತ್ರ ಬರದೆ ಅಥವಾ ಸ್ವಲ್ಪ ಮೂತ್ರ ವಿಸರ್ಜನೆಗೊಂಡು ನೋವಿನ ಸೆಳೆತ ಕಾಣಿಸಿಕೊಳ್ಳುತ್ತದೆ.

ಉಷ್ಣಕ್ಕೆ ಕಾಡುವ 'ಮೂತ್ರಕೋಶದ ಸೋಂಕು'! ಇಲ್ಲಿದೆ ನೋಡಿ ಪರಿಹಾರ

ಕೆಲವರಿಗೆ ಇದರ ವಿಪರೀತ ಹೆಚ್ಚಾಗಿ ಮೂತ್ರದಲ್ಲಿ ರಕ್ತಸ್ರಾವ ಆಗುವ ಸಾಧ್ಯತೆಯೂ ಉಂಟು. ಮೂತ್ರದ ಸೋಂಕು ಕಡಿಮೆ ಪ್ರಮಾಣದಲ್ಲಿ ಇದ್ದಾಗ ವಿವಿಧ ಬಗೆಯ ಪಾನೀಯ ಮತ್ತು ನೀರನ್ನು ಸೇವಿಸುವುದರಿಂದ ಗುಣಮುಖ ಹೊಂದಬಹುದು...ಆದರೆ ಆಸ್ಪತ್ರೆಗೆ ಹೋಗುವ ಮುಂಚೆ ಮೂತ್ರದ ಸೋಂಕಿಗೆ ಮನೆಯಲ್ಲೇ ತಯಾರಿಸಿಕೊಳ್ಳಬಹುದಾದ ನೈಸರ್ಗಿಕ ಚಿಕಿತ್ಸೆಯೆಂದರೆ ಪಾರ್ಸ್ಲಿ ಸೊಪ್ಪು. ಪಾರ್ಸ್ಲಿ ಮೂತ್ರದ ಸೋಂಕನ್ನು ನಿವಾರಿಸಿ, ಮೂತ್ರವರ್ಧಕದಂತೆ ಕಾರ್ಯ ನಿರ್ವಹಿಸುತ್ತದೆ. 

Urinary Tract Infection

ಮೂತ್ರ ಪಿಂಡದಲ್ಲಿ ಉತ್ಪತ್ತಿಯಾಗುವ ಸೋಡಿಯಂ ಮತ್ತು ಪೊಟ್ಯಾಸಿಯಂ ಉತ್ಪಾದನೆಯನ್ನು ನಿಧಾನಗೊಳಿಸುತ್ತದೆ. ಹೀಗಾಗಿ ಮೂತ್ರದ ಬ್ಯಾಕ್ಟೀರಿಯಾಗಳು ಚದುರುವಿಕೆಗೆ ಒಳಗಾಗುತ್ತವೆ. ಮೂತ್ರದ ಸೋಂಕು ನಿವಾರಣೆಗೆ ಉತ್ತಮ ಔಷಧವೆಂದರೆ ಪಾರ್ಸ್ಲಿ ಚಹಾ. ಇದನ್ನು ಸುಲಭವಾಗಿ ಹೇಗೆ ಉಪಯೋಗಿಸುವುದು ಎನ್ನುವುದನ್ನು ತಿಳಿಯೋಣ ಬನ್ನಿ. 

parsley leaves

ಬೇಕಾಗುವ ಪದಾರ್ಥಗಳು

1. ನಾಲ್ಕು ಕಪ್ ನೀರು

2. ನಾಲ್ಕು ಚಮಚ ಹೆಚ್ಚಿದ ಪಾರ್ಸ್ಲಿ ಸೊಪ್ಪು

Urinary Tract Infection

ಮಾಡುವ ವಿಧಾನ

1. ಮೊದಲಿಗೆ ನೀರನ್ನು ಒಂದು ಪಾತ್ರೆಯಲ್ಲಿ ಹಾಕಿ, ಚೆನ್ನಾಗಿ ಕುದಿಸಿ.

2. ನೀರು ಚೆನ್ನಾಗಿ ಕುದಿಯಲಾರಂಭಿಸಿದ ಮೇಲೆ ಉರಿಯಿಂದ ಕೆಳಗಿಳಿಸಿ.

3. ಹೆಚ್ಚಿಕೊಂಡ ನಾಲ್ಕು ಚಮಚ ಪಾರ್ಸ್ಲಿ ಸೊಪ್ಪನ್ನು ಬಿಸಿ ನೀರಿಗೆ ಹಾಕಿ, 20 ನಿಮಿಷಗಳ ಕಾಲ ಮುಚ್ಚಿಸಿ.

5. ನಂತರ ಸೊಪ್ಪನ್ನು ನೀರಿನಿಂದ ಸೋಸಿ, ಸವಿಯಿರಿ.

green leaves juice

ಈ ಕಷಾಯ/ಚಹಾವನ್ನು ವಾರದಲ್ಲಿ ಕಡಿಮೆಯೆಂದರೂ ನಾಲ್ಕು ಬಾರಿ ಕುಡಿಯಬೇಕು. ಆಗ ರೋಗ ಲಕ್ಷಣವು ಕೇವಲ ಮೂರು ದಿನದಲ್ಲಿ ಗುಣವಾಗುವುದು. ರೋಗ ಲಕ್ಷಣ ಕಡಿಮೆಯಾಗಿದೆಯೆಂದು ಚಹಾ ಸೇವನೆಯನ್ನು ಬಿಡಬಾರದು, ಮುಂದುವರಿಸಬೇಕು.

English summary

One Plant To Cure Urinary Tract Infection Without Medication

The best natural remedy for urinary tract infection is parsley. Parsley can be effectively used to treat UTI. Parsley also acts as a diuretic that can flush out the bacteria. It helps slow down the sodium and potassium pumps, so that sodium levels will go up.
Subscribe Newsletter