ಆರೋಗ್ಯ ಟಿಪ್ಸ್: ಬೆನ್ನು ನೋವಿಗೆ ಮನೆಯಲ್ಲೇ ಇದೆ ಸರಳ ಪರಿಹಾರ

By Manu
Subscribe to Boldsky

ವೈದ್ಯರನ್ನು ಭೇಟಿಯಾಗಲು ಹಲವಾರು ಕಾರಣಗಳಿರಬಹುದು. ಆದರೆ ಅಧ್ಯಯನಗಳ ಪ್ರಕಾರ ಶೇ. 80ರಷ್ಟು ಜನರು ಬೆನ್ನಿನ ಕೆಳಭಾಗದ ನೋವಿಗೆ ಚಿಕಿತ್ಸೆ ಪಡೆಯಲು ವೈದ್ಯರ ಭೇಟಿಯಾಗುತ್ತಾರೆ. ಇದನ್ನು ಎದುರಿಸಿ!. ನಾವೆಲ್ಲರೂ ಮನುಷ್ಯರು ಮತ್ತು ದೇಹದ ಪ್ರತಿಯೊಂದು ಭಾಗದಲ್ಲಿ ನೋವು ಇದ್ದೇ ಇರುತ್ತದೆ. ಕಾರಣ ಹಲವು ಇರಬಹುದು ಮತ್ತು ನೋವಿಗೆ ಕಾರಣಗಳು ಕೂಡ ವಿಭಿನ್ನವಾಗಿರಬಹುದು. ತಜ್ಞ ವೈದ್ಯರ ಪ್ರಕಾರ ಒತ್ತಡ ಇದಕ್ಕೆ ಪ್ರಮುಖ ಕಾರಣ.

ಅಸಮರ್ಪಕ ಭಂಗಿ, ಕೆಟ್ಟ ದಕ್ಷತೆ ಮತ್ತು ಕಡಿಮೆ ನಿದ್ದೆ ಅಭ್ಯಾಸ ಇತರ ಕಾರಣಗಳು. ಬೆನ್ನು ನೋವನ್ನು ಗುಣಪಡಿಸಲು ತುಂಬಾ ಕಾಳಜಿ ಬೇಕಾಗುತ್ತದೆ. ಬೆನ್ನು ನೋವನ್ನು ಸಾಂಪ್ರದಾಯಿಕವಾಗಿ ಗುಣಪಡಿಸಬಹುದು ಎಂದು ತಜ್ಞರು ಹೇಳುತ್ತಾರೆ. ಇದು ಒಳ್ಳೆಯ ಸುದ್ದಿಯಲ್ಲವೇ? ವಯಸ್ಸಾಗುತ್ತಿರುವಂತೆ ಅಂಗಾಂಶಗಳು ಹರಿಯುವುದರಿಂದ ಬೆನ್ನು ನೋವು ಪ್ರಾರಂಭವಾಗಹುದು. ಬೆನ್ನು ನೋವನ್ನು ತುಂಬಾ ಸರಳ ಮತ್ತು ಹೆಚ್ಚು ಪರಿಶ್ರಮವಿಲ್ಲದೆ ನಿವಾರಿಸಬಹುದು. ಈ ಸರಳ ತಂತ್ರಗಳನ್ನು ಅಳವಡಿಸಲು ಸಮಯ ತೆಗೆದುಕೊಳ್ಳಿ ಮತ್ತು ಬೆನ್ನು ನೋವಿನಿಂದ ಉಪಶಮನ ಪಡೆಯಿರಿ.

ಆದರೆ ಒಂದು ಮಾತ್ರ ನೆನಪಿಟ್ಟು ಕೊಳ್ಳಿ ಬೆನ್ನುನೋವನ್ನು ಪೂರ್ಣವಾಗಿ ಒಮ್ಮೆಲೇ ಕಡಿಮೆಗೊಳಿಸಲು ಸಾಧ್ಯವಿಲ್ಲ. ಏಕೆಂದರೆ ನಮ್ಮ ಬೆನ್ನುಹುರಿ ಬೆನ್ನುಮೂಳೆಯೊಂದಿಗೇ ಮಿಳಿತವಾಗಿದೆ. ದೇಹದ ಇಡಿಯ ಭಾರ ಬೆನ್ನುಮೂಳೆಯ ಕೆಳಭಾಗದ ತಟ್ಟೆ (disc) ಮೇಲೆ ಅತಿ ಹೆಚ್ಚಾಗಿ ಬೀಳುತ್ತದೆ. ಇದೇ ಕಾರಣದಿಂದ ಬೆನ್ನು ನೋವು ಬೆನ್ನುಮೂಳೆಯ ಅತಿಕೆಳಗಿನ ಭಾಗದಲ್ಲಿಯೇ ಹೆಚ್ಚಾಗಿರುತ್ತದೆ. ಈ ನೋವನ್ನು ಕಡಿಮೆಗೊಳಿಸಲು ಸುಲಭ ಉಪಾಯಗಳಿವೆ.

ಆಯುರ್ವೇದದ ಪ್ರಕಾರ ಬೆನ್ನು ನೋವಿದ್ದರೆ ಆ ಭಾಗಕ್ಕೆ ಆರಾಮ ನೀಡುವ ಬದಲು ಹೆಚ್ಚು ಚಟುವಟಿಕೆ ನೀಡಿ. ಇದರಿಂದಾಗಿ ಇಲ್ಲಿ ಹೆಚ್ಚಿನ ರಕ್ತಸಂಚಾರವಾಗಿ ನೈಸರ್ಗಿಕವಾಗಿ ನೋವು ಕಡಿಮೆಗೊಳ್ಳಲು ಸಾಧ್ಯವಾಗುತ್ತದೆ.ಬೆನ್ನುನೋವಿನ ಕುರಿತು ನಡೆಸಿದ ಸಂಶೋಧನೆಗಳ ಮೂಲಕ ಮೂರು ದಿನಕ್ಕೂ ಹೆಚ್ಚು ಕಾಲ ಚಟುವಟಿಕೆ ಇಲ್ಲದಿದ್ದರೆ ಬೆನ್ನುನೋವು ಅತಿರೇಕಕ್ಕೆ ತಲುಪುವ ಸಾಧ್ಯತೆಗಳಿವೆ! ಈ ನಿಟ್ಟಿನಲ್ಲಿ ತಜ್ಞರು ನೀಡಿರುವ ಸುಲಭ ಉಪಾಯಗಳನ್ನು ಇಲ್ಲಿ ವಿವರಿಸಲಾಗಿದೆ... 

ಬಿಸಿ ನೀರಿನ ಸ್ನಾನ

ಬಿಸಿ ನೀರಿನ ಸ್ನಾನ

ಎಪ್ಸಂ ಉಪ್ಪು ಸೇರಿಸಿರುವ ಬಿಸಿ ನೀರಿನಲ್ಲಿ ಸ್ನಾನ ಮಾಡಿ ಒಂದು ಸುದೀರ್ಘವಾದ ಕೆಲಸದ ದಿನದ ಕೊನೆಯಲ್ಲಿ ನಿಮ್ಮ ಸ್ನಾನದ ನೀರಿಗೆ ಒಂದೆರಡು ಕಪ್ ಎಪ್ಸಂ ಉಪ್ಪನ್ನು ಹಾಕಿ ಸ್ನಾನ ಮಾಡುವುದರಿಂದ ಕೇವಲ ಒತ್ತಡದಿಂದಷ್ಟೇ ಅಲ್ಲದೆ ಸ್ನಾಯುಗಳ ಬಿಗಿತದಿಂದ ಸಹ ಮುಕ್ತಿ ಪಡೆಯಬಹುದು. ಇದು ಬೆನ್ನು ನೋವುಕಾರಕವಾದ ಒತ್ತಡವನ್ನು ಮತ್ತು ಸ್ನಾಯುಗಳ ಬಿಗಿತವನ್ನು ತಪ್ಪಿಸಿ ನಿಮಗೆ ಉಪಯೋಗವನ್ನುಂಟು ಮಾಡುತ್ತದೆ.

ಕುಳಿತು ಕೆಲಸ ಮಾಡುವಾಗ 30 ರಿಂದ 60 ನಿಮಿಷ ವಿಶ್ರಾಂತಿ ಪಡೆಯಿರಿ

ಕುಳಿತು ಕೆಲಸ ಮಾಡುವಾಗ 30 ರಿಂದ 60 ನಿಮಿಷ ವಿಶ್ರಾಂತಿ ಪಡೆಯಿರಿ

*ಒಂದು ವೇಳೆ ನೀವು ಕಛೇರಿಯಲ್ಲಿ ಕುಳಿತು ಕೆಲಸ ಮಾಡುತ್ತಿದ್ದಲ್ಲಿ ಅಥವಾ ಕಂಪ್ಯೂಟರಿನ ಮುಂದೆ ಗಂಟೆಗಟ್ಟಲೆ ಕುಳಿತು ಕೆಲಸ ಮಾಡುತ್ತಿದ್ದಲ್ಲಿ, ಆಗಿಂದಾಗೆ ನಡುವೆ ನಿಯಮಿತವಾಗಿ ವಿಶ್ರಾಂತಿ ಪಡೆಯಿರಿ. ಇದು ನಿಮ್ಮ ದೇಹಕ್ಕೆ ಅತ್ಯಗತ್ಯ ಎಂಬುದನ್ನು ಮರೆಯಬೇಡಿ. ಯಥೇಚ್ಛವಾಗಿ ನೀರನ್ನು ಸೇವಿಸಿ. ಆಗ ನೀವು ನಿಯಮಿತವಾಗಿ ಶೌಚಾಲಯಕ್ಕೆ ಹೋಗುವ ಸಲುವಾಗಿಯಾದರು ಎದ್ದು ಓಡಾಡುತ್ತೀರಿ.

*ಆಗ ನಿಮ್ಮ ದೇಹವನ್ನು ಸಡಿಲ ಮಾಡುವ ಕೆಲವಚಟುವಟಿಕೆಗಳನ್ನು ಮಾಡಿ. ಮಧ್ಯಾಹ್ನದ ಊಟವಾದ ನಂತರ ಒಂದು ಸಣ್ಣ ನಡಿಗೆಯನ್ನು ಕೈಗೊಳ್ಳಿ. ನಿಮ್ಮ ಕಛೇರಿಯ ಮತ್ತೊಂದು ವಿಭಾಗದಲ್ಲಿರುವ ನಿಮ್ಮ ಸ್ನೇಹಿತನನ್ನು ಭೇಟಿಯಾಗಿ. ಒಂದು ವೇಳೆ ನೀವು ಮನೆಯಿಂದ ಕೆಲಸ ಮಾಡುತ್ತಿದ್ದರೆ , ಸಣ್ಣ ಮಟ್ಟದ ವಿಶ್ರಾಂತಿಯನ್ನು ಪಡೆಯಿರಿ. ಆದರೆ ಇದು ನಿಯಮಿತವಾಗಿ ಇರಲಿ. ಈ ಬಿಡುವಲ್ಲಿ ಗಿಡಗಳನ್ನು ಬೆಳೆಸಿ, ಅವುಗಳ ಆರೈಕೆ ಮಾಡುತ್ತ, ನಿಮ್ಮ ಕೋಣೆಯನ್ನು ಸ್ವಚ್ಛಗೊಳಿಸುತ್ತ ಮತ್ತು ಇತ್ಯಾದಿ ಕೆಲಸ ಮಾಡುತ್ತ ನೀವು ಬಿಡುವನ್ನು ಸದುಪಯೋಗ ಮಾಡಿಕೊಳ್ಳಬಹುದು.

ನಿಮ್ಮ ಲ್ಯಾಪ್‍ಟಾಪ್‍ ಅನ್ನು ಎತ್ತರದ ಸ್ಥಳದಲ್ಲಿಡಿ

ನಿಮ್ಮ ಲ್ಯಾಪ್‍ಟಾಪ್‍ ಅನ್ನು ಎತ್ತರದ ಸ್ಥಳದಲ್ಲಿಡಿ

ನಿಮ್ಮ ಲ್ಯಾಪ್‍ಟಾಪ್ ಕೆಳಗೆ ಪುಸ್ತಕಗಳನ್ನು ಜೋಡಿಸಿ ಇಡುವುದರಿಂದ ಅದು ನಿಮ್ಮ ಕತ್ತಿನ ಮಟ್ಟಕ್ಕೆ ಬರುತ್ತದೆ. ಹೀಗೆ ಮಾಡುವುದರಿಂದ ನೀವು ಬಾಗಿ ಕೆಲಸ ಮಾಡುವ ಪ್ರಯಾಸ ತಪ್ಪುತ್ತದೆ. ಅಲ್ಲದೆ ಕುಳಿತು ಕೆಲಸ ಮಾಡಲು ಹಾಗು ನೇರವಾಗಿ ಕುಳಿತುಕೊಳ್ಳುವ ಅಭ್ಯಾಸವನ್ನು ಅಳವಡಿಸಿಕೊಳ್ಳಲು ಸಹಕಾರಿಯಾಗುತ್ತದೆ.

ಧೂಮಪಾನ ಬಿಟ್ಟುಬಿಡಿ

ಧೂಮಪಾನ ಬಿಟ್ಟುಬಿಡಿ

ಧೂಮಪಾನ ಆರೋಗ್ಯಕ್ಕೆ ಹಾನಿಕರ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿದೆ. ಬೆನ್ನು ನೋವಿನ ಉಪಶಮನಕ್ಕೆ ಧೂಮಪಾನ ಬಿಟ್ಟುಬಿಡಿ. ಧೂಮಪಾನದಿಂದ ಇತರ ರೋಗಗಳಾದ ಶ್ವಾಸಕೋಶದ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆ, ಅಧಿಕ ರಕ್ತದೊತ್ತಡ ಇತ್ಯಾದಿಗಳು ಬರಬಹುದು. ಧೂಮಪಾನ ಮಾಡದವರಿಗಿಂತ ಧೂಮಪಾನ ಮಾಡುವವರು ಹೆಚ್ಚಾಗಿ ಬೆನ್ನುನೋವಿನ ಸಮಸ್ಯೆಗೆ ಒಳಗಾಗುತ್ತಾರೆ ಎಂದು ಅಧ್ಯಯನಗಳು ಹೇಳಿವೆ. ಸಿಗರೇಟ್ ನಲ್ಲಿರುವ ನಿಕೋಟಿನ್ ಬೆನ್ನುನೋವಿಗೆ ಪ್ರಮಖು ಕಾರಣವೆಂದು ಪತ್ತೆಯಾಗಿದೆ. ಬೆನ್ನುನೋವಿನ ಉಪಶಮನಕ್ಕೆ ಧೂಮಪಾನದ ಅಭ್ಯಾಸವನ್ನು ಬಿಟ್ಟುಬಿಡಿ.

ಬೆನ್ನಿಗೆ ಮಸಾಜ್

ಬೆನ್ನಿಗೆ ಮಸಾಜ್

ಬೆನ್ನಿಗೆ ಸರಿಯಾದ ಮಸಾಜ್ ಮಾಡುವುದರಿಂದ ನಿಮ್ಮ ಬೆನ್ನುನೋವು ಶಮನವಾಗಿ ಆರಾಮವನ್ನುಂಟುಮಾಡಬಹುದು. ಇದಕ್ಕಾಗಿ ಸ್ವಲ್ಪ ಹಣ ಖರ್ಚು ಮಾಡಬೇಕಾಗುತ್ತದೆ. ಮೊದಲು ನಿಮ್ಮ ಪಾಕೆಟ್ ನಲ್ಲಿ ಹಣ ತುಂಬಿಸಿ. ಮಸಾಜ್ ಮಾಡಿಸಿಕೊಳ್ಳುವಷ್ಟು ಹಣವಿಲ್ಲದಿದ್ದರೆ ಟೆನಿಸ್ ಬಾಲ್ ನಿಂದ ಬೆನ್ನಿನ ನೋವಿಗೆ ವಿರುದ್ಧವಾಗಿ ಮಸಾಜ್ ಮಾಡಿ. ಆಗ ನಿಮಗೆ ಬೆನ್ನು ನೋವು ಉಪಶಮನವಾಗುವುದು ತಿಳಿಯುತ್ತದೆ. ಮೇಲಿನ ಟಿಪ್ಸ್ ಗಳನ್ನು ಪಾಲಿಸಿ ಮತ್ತು ಬೆನ್ನು ನೋವಿನಿಂದ ಮುಕ್ತರಾಗಿ.

ಒಂದಕ್ಕಿಂತ ಹೆಚ್ಚಿನ ತಲೆದಿಂಬನ್ನು ಬಳಸಿ

ಒಂದಕ್ಕಿಂತ ಹೆಚ್ಚಿನ ತಲೆದಿಂಬನ್ನು ಬಳಸಿ

ಭವಿಷ್ಯದಲ್ಲಿ ಬರುವ ಯಾವುದೇ ರೀತಿಯ ಬೆನ್ನು ನೋವನ್ನು ನಿಯಂತ್ರಿಸಲು ಮಲಗುವಾಗ ಒಂದಕ್ಕಿಂತ ಹೆಚ್ಚು ತಲೆದಿಂಬನ್ನು ಬಳಸಿ. ಒಂದು ನಿಮ್ಮ ತಲೆಗೆ ಆರಾಮವನ್ನು ಒದಗಿಸಿದರೆ, ಇನ್ನೊಂದು ನಿಮ್ಮ ಬೆನ್ನು ಮತ್ತು ಸೊಂಟಕ್ಕೆ ಆರಾಮವನ್ನು ಒದಗಿಸುತ್ತದೆ. ಒಂದು ವೇಳೆ ನೀವು ಮಗ್ಗುಲಾಗಿ ಮಲಗುವ ಅಭ್ಯಾಸವನ್ನು ಹೊಂದಿದ್ದರೆ, ಸಾಧಾರಣವಾದ ತಲೆದಿಂಬನ್ನು ನಿಮ್ಮ ಕಾಲುಗಳ ನಡುವೆ ಇಡಿ. ಒಂದು ವೇಳೆ ನೀವು ಬೋರಲಾಗಿ ಮಲಗುವ ಅಭ್ಯಾಸವನ್ನು ಹೊಂದಿದ್ದರೆ, ತಲೆದಿಂಬನ್ನು ನಿಮ್ಮ ಸೊಂಟದ ಭಾಗದಲ್ಲಿ ಇಟ್ಟು ಮಲಗಿ.

ಸರಿಯಾದ ವ್ಯಾಯಮ

ಸರಿಯಾದ ವ್ಯಾಯಮ

ಬೆನ್ನು ನೋವು ನಿವಾರಿಸಲು ಫಿಟ್ ಆಗಿರುವುದು ತುಂಬಾ ಮುಖ್ಯ. ದುರ್ಬಲ ಹೊಟ್ಟೆ ಮತ್ತು ಹಿಂಬದಿಯ ಸ್ನಾಯುಗಳು ನೋವನ್ನು ಉಂಟುಮಾಡುತ್ತದೆ. ಫಿಟ್ ಆಗಿರಲು ಪ್ರತೀ ದಿನ ವ್ಯಾಯಮ ಮಾಡಿ ಮತ್ತು ಯೋಗ ಅಭ್ಯಾಸ ಮಾಡಿ. ವ್ಯಾಯಾಮದಿಂದ ಸ್ನಾಯುಗಳು ಹೆಚ್ಚಿನ ಪ್ರಮಾಣದಲ್ಲಿ ಹಿಗ್ಗಿಸಲು ಮತ್ತು ಸಡಿಲಗೊಳಿಸಲು ಸಹಾಯಮಾಡುತ್ತದೆ. ಗಾರ್ಡ್‌ನಲ್ಲಿ ಕೆಲವು ನಿಮಿಷಗಳ ಕಾಲ ನಡೆದಾಡಿ ಅಥವಾ ಏರೋಬಿಕ್ಸ್ ಮಾಡಿದರೆ ಬೆನ್ನು ನೋವು ನಿವಾರಿಸಬಹುದು. ಇದು ನಿಮ್ಮ ಮನಸ್ಸಿಗೂ ಆರಾಮ ನೀಡುತ್ತದೆ.

ಕುಳಿತುಕೊಳ್ಳುವ ಭಂಗಿ

ಕುಳಿತುಕೊಳ್ಳುವ ಭಂಗಿ

ಸಾಮಾನ್ಯವಾಗಿ ನಾವು ಆರಾಮವಾಗಿ ಕುಳಿತುಕೊಳ್ಳುವ ಭರದಲ್ಲಿ ಬೆನ್ನು ಮೂಳೆಯನ್ನು ಕಮಾನಿನಂತೆ ಬಾಗಿಸುತ್ತೇವೆ. ಚಿಕ್ಕವಯಸ್ಸಿನಲ್ಲಿ ಈ ಪರಿ ಹೆಚ್ಚಿನ ಪರಿಣಾಮವನ್ನು ಬೀರದೇ ಇದ್ದರೂ ಕ್ರಮೇಣ ಬೆನ್ನುಮೂಳೆಯ ಕೆಳಗಿನ ತಟ್ಟೆಗಳು ಜಖಂಗೊಂಡು ಬೆನ್ನುನೋವು ನೀಡುತ್ತವೆ. ಇದಕ್ಕೆ ಸುಲಭ ಉಪಾಯವೆಂದರೆ ನೆಟ್ಟಗೆ ಕುಳಿತುಕೊಳ್ಳುವುದು. ಕುರ್ಚಿಯಲ್ಲಿ ನೆಟ್ಟಗೆ ಕುಳಿತುಕೊಳ್ಳುವುದು ಕೊಂಚ ಕಷ್ಟಕರವಾದುದರಿಂದ ಚಿಕ್ಕ ದಿಂಬೊಂದನ್ನು ಕುರ್ಚಿಯ ಬೆನ್ನಿನ ಕೆಳಭಾಗದಲ್ಲಿರಿಸುವ ಮೂಲಕ ಬೆನ್ನುಮೂಳೆ ನೆಟ್ಟಗಿರುವ ಭಂಗಿಯನ್ನು ಪಡೆಯಬಹುದು. ಇತ್ತೀಚಿನ ಕುರ್ಚಿಗಳು ಈ ಭಂಗಿಯನ್ನು ಅನುಸರಿಸುವಂತೆಯೇ ವಿನ್ಯಾಸಗೊಳಿಸಲಾಗುತ್ತಿದೆ. ಸಾಧ್ಯವಾದರೆ ಉತ್ತಮ ಗುಣಮಟ್ಟದ ಕುರ್ಚಿಯನ್ನು ನಿತ್ಯದ ಕೆಲಸಗಳಿಗಾಗಿ ಬದಲಿಸಬಹುದು.

 ದಿನಕ್ಕೊಮ್ಮೆ ಪೂರ್ಣ ಪ್ರಮಾಣದ ನಿದ್ದೆ ಮಾಡಿ

ದಿನಕ್ಕೊಮ್ಮೆ ಪೂರ್ಣ ಪ್ರಮಾಣದ ನಿದ್ದೆ ಮಾಡಿ

ನಮಗೆ ದಿನಕ್ಕೆ ಎಂಟು ಘಂಟೆಗಳ ಕಾಲ ನಿದ್ದೆಯ ಅಗತ್ಯವಿದೆ. ಆದರೆ ಕೆಲಸದ ಭರದಲ್ಲಿ ಈ ನಿದ್ದೆಯನ್ನೂ ಕಡಿಮೆ ಮಾಡಿ ಕೆಲಸವನ್ನು ಹೆಚ್ಚಿಸುವುದು ಅಥವಾ ದಿನಕ್ಕೆರಡು ಹೊತ್ತಿನಲ್ಲಿ ಚಿಕ್ಕ ಚಿಕ್ಕ ನಿದ್ದೆಗಳನ್ನು ಮಾಡುವುದು ಬೆನ್ನುನೋವನ್ನು ಹೆಚ್ಚಿಸಲು ಕಾರಣವಾಗಿವೆ. ಬೆನ್ನುನೋವಿದ್ದರೆ ದಿನಕ್ಕೊಂದು ಪೂರ್ಣಪ್ರಮಾಣದ ನಿದ್ದೆಯನ್ನು ಪಡೆಯಲು ತಜ್ಞರು ಸಲಹೆ ನೀಡುತ್ತಾರೆ. ಇದರಿಂದಾಗಿ ಇಡಿಯ ಶರೀರದ ಸ್ನಾಯುಗಳು ಅಗತ್ಯವಾದ ವಿಶ್ರಾಂತಿ ಪಡೆಯುತ್ತವೆ. ಒಂದು ವೇಳೆ ಬೆನ್ನಿನ ಸ್ನಾಯುಗಳಲ್ಲಿ ಉರಿಯೂತ ಕಂಡುಬಂದಿದ್ದರೆ ಪೂರ್ಣ ಪ್ರಮಾಣದ ವಿಶ್ರಾಂತಿಯಿಂದಲೇ ಇದು ಶಮನಗೊಳ್ಳುತ್ತದೆ. ಕಡಿಮೆ ನಿದ್ದೆಯಲ್ಲಿ ಇದು ಪೂರ್ಣವಾಗಿ ಶಮನವಾಗದೇ ಚಟುವಟಿಕೆ ಪ್ರಾರಂಭವಾಗುತ್ತಿದ್ದಂತೆಯೇ ಉಲ್ಬಣಗೊಳ್ಳುವ ಸಾಧ್ಯತೆಗಳಿವೆ.

ಕ್ಯಾಲ್ಸಿಯಂ ಮತ್ತು ಮೆಗ್ನೀಶಿಯಂ ಸೇವಿಸಿ

ಕ್ಯಾಲ್ಸಿಯಂ ಮತ್ತು ಮೆಗ್ನೀಶಿಯಂ ಸೇವಿಸಿ

ನಿಮ್ಮ ಆಹಾರದಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನೀಶಿಯಂ ಹೇರಳವಾಗಿರುವಂತೆ ನೋಡಿಕೊಳ್ಳಿ. ಇದರಿಂದ ನಿಮ್ಮ ಬೆನ್ನುನೋವು ಶೀಘ್ರವಾಗಿ ಕಡಿಮೆಯಾಗುವುದು. ಹಸಿರು ಸೊಪ್ಪು, ಮೊಟ್ಟೆ, ಹಾಲು, ಬಾಳೆಹಣ್ಣು, ಒಣಫಲಗಳು, ಸೇಬು, ಅಂಜೂರ ಮೊದಲಾದವುಗಳಲ್ಲಿ ಕ್ಯಾಲ್ಸಿಯಂ ಹೇರಳವಾಗಿರುತ್ತದೆ. ಹಾಲಿನಲ್ಲಿರುವ ಕ್ಯಾಲ್ಸಿಯಂ ನಮಗೆ ನೇರವಾಗಿ ಲಭ್ಯವಾಗದೇ ಇರುವುದರಿಂದ ಬಿಸಿಹಾಲಿಗೆ ಕೊಂಚ ಜೇನನ್ನು ಸೇರಿಸಿ ಕುಡಿಯುವುದರಿಂದ ಉತ್ತಮ ಪರಿಣಾಮವನ್ನು ಪಡೆಯಬಹುದು.

ಬಿಸಿ ತಾಗಿಸಿ

ಬಿಸಿ ತಾಗಿಸಿ

ದೇಹಕ್ಕೆ ಬಿಸಿಯನ್ನು ನೀಡುವ ಬಿಸಿನೀರಿನ ಬಾಟಲುಗಳು ಅಥವಾ ಎಲೆಕ್ಟ್ರಿಕ್ ಉಪಕರಣಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇವುಗಳನ್ನು ಉಪಯೋಗಿಸಿ ಬೆನ್ನಿನ ಕೆಳಭಾಗಕ್ಕೆ ಶಾಖ ನೀಡುವುದರಿಂದ ಬೆನ್ನುನೋವು ಶೀಘ್ರ ಶಮನ ಪಡೆಯುತ್ತದೆ. ಸಾಂಪ್ರಾದಾಯಿಕ ವಿಧಾನದಂತೆ ಕಲ್ಲುಪ್ಪನ್ನು ಬಿಸಿಮಾಡಿ ಬಟ್ಟೆಯಲ್ಲಿಟ್ಟು ಶಾಖ ನೀಡುವುದರಿಂದಲೂ ಬೆನ್ನುನೋವು ಶೀಘ್ರ ಕಡಿಮೆಯಾಗುತ್ತದೆ.

ಲಘು ವ್ಯಾಯಾಮಗಳನ್ನು ಮಾಡಿ

ಲಘು ವ್ಯಾಯಾಮಗಳನ್ನು ಮಾಡಿ

ವಿಶ್ರಾಂತಿ ಬೆನ್ನುನೋವಿಗೆ ಮಾರಕ. ಸಾಧ್ಯವಿದ್ದಷ್ಟೂ ಚಟುವಟಿಕೆಯಿಂದಿರಿ. ನಿಮಗೆ ಸಾಧ್ಯವಾದ ವ್ಯಾಯಾಮಗಳನ್ನು ಮಾಡುತ್ತಾ ಇರಿ. ನಡಿಗೆ ಮತ್ತು ಕೈಕಾಲುಗಳನ್ನು ಚಾಚುವುದು ಅತ್ಯುತ್ತಮ ವ್ಯಾಯಾಮಗಳು.ನಿಮಗೆ ಸೂಕ್ತವೆನಿಸಿದ ಇತರ ಯಾವುದೇ ವ್ಯಾಯಾಮವನ್ನು ನಿಯಮಿತವಾಗಿ ಅನುಸರಿಸಿ.

For Quick Alerts
ALLOW NOTIFICATIONS
For Daily Alerts

    English summary

    Highly Effective Treatments For Lower Back Pain

    In today's life almost all people are suffering from backache. This is due to our lifestyle and wrong posture during work. The food we eat is low in calcium and other nutrients that play an important role in strengthening muscles and bones. We sit for a longer period of time at work and are unmindful of the body posture.
    Story first published: Thursday, October 19, 2017, 23:40 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more