For Quick Alerts
ALLOW NOTIFICATIONS  
For Daily Alerts

ಮಿಲನಕ್ಕೂ ಮುನ್ನ, ಅಪ್ಪಿತಪ್ಪಿಯೂ ಇಂತಹ ಆಹಾರಗಳನ್ನು ಸೇವಿಸಬೇಡಿ

By Arshad
|

ಸುಖಮಯ ದಾಂಪತ್ಯ ಜೀವನಕ್ಕೆ ಆರೋಗ್ಯಕರ ಲೈಂಗಿಕ ಚಟುವಟಿಕೆಯೂ ಅಗತ್ಯ. ಈ ಚಟುವಟಿಕೆಗೆ ಕೆಲವೊಂದು ಹಾರ್ಮೋನುಗಳು ಸ್ರವಿಸುವುದು ಅಗತ್ಯವಾಗಿದ್ದು ಕೆಲವು ಆಹಾರಗಳ ಸೇವನೆ ಈ ಕೆಲಸಕ್ಕೆ ಅಡ್ಡಿಪಡಿಸುತ್ತವೆ. ಆದ್ದರಿಂದ ಒಂದು ವೇಳೆ ಈ ರಾತ್ರಿ ದಾಂಪತ್ಯ ಸುಖವನ್ನು ಅನುಭವಿಸುವ ಇರಾದೆ ಇದ್ದರೆ ಇಂದಿನ ದಿನದಲ್ಲಿ ಕೆಳಗೆ ವಿವರಿಸಿರುವ ಯಾವುದೇ ಆಹಾರಗಳನ್ನು ಸೇವಿಸದಿರಿ.

ಈ ಆಹಾರಗಳು ನಿಮ್ಮ ಜೀರ್ಣಕ್ರಿಯೆಯನ್ನು ಕೊಂಚ ಕಲಸುಮೇಲೋಗರ ಮಾಡುವುದು ಮಾತ್ರವಲ್ಲ, ರಸದೂತಗಳ ಸಮತೋಲನವನ್ನೂ ಏರುಪೇರಾಗಿಸುತ್ತವೆ. ಬದಲಿಗೆ ಕಾಮೋತ್ತೇಜಕ ಗುಣಗಳಿರುವ ಆಹಾರಗಳನ್ನು ಸೇವಿಸಬೇಕು. ಆದರೆ ಕಾಮೋತ್ಸಾಹವನ್ನೇ ಉಡುಗಿಸುವ ಈ ಆಹಾರಗಳಿಂದ ದೂರವಿರಿ.

ಪುರುಷರ ಲೈಂಗಿಕ ಶಕ್ತಿಯನ್ನು ಹೆಚ್ಚಿಸುವ ಎಂಟು ಆಹಾರ ಪದಾರ್ಥಗಳು

ಈ ಆಹಾರಗಳು ಕಾಮೋತ್ತೇಜಕವನ್ನು ಅತಿಯಾಗಿ ಹೆಚ್ಚಿಸಬಹುದು ಅಥವಾ ಅತಿಯಾಗಿ ಕುಗ್ಗಿಸಬಹುದು. ಎಲ್ಲಾ ಅಹಾರಗಳು ಎಲ್ಲರಲ್ಲಿಯೂ ಏಕಪ್ರಕಾರವಾಗಿ ಪರಿಣಾಮ ಉಂಟುಮಾಡದೇ ಇರಬಹುದು. ಏಕೆಂದರೆ ಕಾಮಾಸಕ್ತಿ ಅಪ್ಪಟವಾಗಿ ಮೆದುಳನ್ನು ಆಧರಿಸಿದ್ದು ಮೆದುಳಿಗೆ ತಲುಪುವ ಸೂಚನೆಗಳು ಅಥವಾ ಮೆದುಳಿನಿಂದ ಹೊರಟ ಸೂಚನೆಗಳು ಜನನೇಂದ್ರಿಯಗಳಿಗೆ ತಲುಪುವುದನ್ನು ಅಡ್ಡಪಡಿಸುವ ಮೂಲಕವೇ ಈ ಆಹಾರಗಳು ಕಾಮಾಸಕ್ತಿಯನ್ನು ಕುಗ್ಗಿಸುತ್ತವೆ.


ಶೀಘ್ರಸ್ಖಲನಕ್ಕೆ ಶಾಶ್ವತ ಪರಿಹಾರ; ಇವನ್ನು ಸೇವಿಸಿ

ಕೆಲವರಿಗೆ ಈ ಆಹಾರಗಳು ಒಗ್ಗಿಕೊಂಡು ಯಾವುದೇ ಪರಿಣಾಮ ಬೀರದೇ ಇರಲೂಬಹುದು. ಕೆಲವು ಆಹಾರಗಳು ವಾಯುಪ್ರಕೋಪದಿಂದ ಹೊಟ್ಟೆಯುಬ್ಬರಿಸಿದರೆ ಕೆಲವು ನಿದ್ದೆ ಮಾಡಲು ಬಿಡದೇ ಕಾಡುತ್ತವೆ. ಬನ್ನಿ, ಸಮಾಗಮಕ್ಕೂ ಮುನ್ನ ಸೇವಿಸಲೇಬಾರದ ಆಹಾರಗಳು ಯಾವುವು ಎಂಬುದನ್ನು ನೋಡೋಣ...

ಬೀನ್ಸ್ (ಬೇಯಿಸಿದ ಅವರೆ ಕಾಳು)

ಬೀನ್ಸ್ (ಬೇಯಿಸಿದ ಅವರೆ ಕಾಳು)

ಸಕ್ಕರೆಯಾಗಿದ್ದು ಇವು ನಮ್ಮ ಕರುಳುಗಳಲ್ಲಿ ಗಡ್ಡೆಗಡ್ಡೆಯಾಗಿ ಆಹಾರದ ಚಲನೆಗೆ ಅಡ್ಡಿಪಡಿಸುತ್ತದೆ ಹಾಗೂ ವಿಪರೀತ ಎನ್ನುವಷ್ಟು ಅಪಾನವಾಯುವನ್ನು ಉತ್ಪಾದಿಸುತ್ತದೆ. ಈ ಅನಗತ್ಯವಾದ ಹೊರೆಯನ್ನು ಹೊರಹಾಕಲು ನಮ್ಮ ಮೆದುಳು ಜೀರ್ಣಾಂಗಗಳಿಗೆ ಸರಿಯಾದ ಸೂಚನೆಗಳನ್ನು ನೀಡುತ್ತಾ ಇರಬೇಕಾಗುತ್ತದೆ ಹಾಗೂ ಸಮಾಗಮದ ಸಮಯದಲ್ಲಿ ಪೂರ್ಣವಾಗಿ ಮಗ್ನಗೊಳ್ಳಲು ಸಾಧ್ಯವಾಗುವುದಿಲ್ಲ.

ಕೋಸಿನ ಜಾತಿಯ ತರಕಾರಿಗಳು

ಕೋಸಿನ ಜಾತಿಯ ತರಕಾರಿಗಳು

ಎಲೆಕೋಸು, ಹೂಕೋಸು, ಬ್ರೋಕೋಲಿ, ಬ್ರಸೆಲ್ಸ್ ಮೊಳಕೆ ಮೊದಲಾದ ತರಕಾರಿಗಳನ್ನು ಒಟ್ಟಾರೆಯಾಗಿ Cruciferous vegetables ಎಂದು ಕರೆಯಲಾಗುತ್ತದೆ. ಈ ತರಕಾರಿಗಳಲ್ಲಿರುವ ರಾಫಿನೋಸ್ (raffinose) ಹಾಗೂ ಸಲ್ಫೇಟುಗಳು ಜೀರ್ಣಾಂಗಗಳಲ್ಲಿ ವಾಯು ಪ್ರಕೋಪಕ್ಕೆ ಕಾರಣವಾಗುತ್ತವೆ. ಈ ವಾಯು ಜೀರ್ಣಾಂಗಗಳಲ್ಲಿ ತುಂಬಿಕೊಂಡು ಗುಡುಗುಡು ಸದ್ದು ಮಾಡುತ್ತಾ ಕಿರಿಕಿರಿ ಮಾಡುವುದು ಮಾತ್ರವಲ್ಲದೇ ಕೆಳಹೊಟ್ಟೆಯಲ್ಲಿ ನೋವನ್ನೂ ಉಂಟುಮಾಡುವ ಮೂಲಕ ಸಮಾಗಮಕ್ಕೆ ಅಡ್ಡಿಪಡಿಸುತ್ತವೆ.

ಈರುಳ್ಳಿ/ಬೆಳ್ಳುಳ್ಳಿ

ಈರುಳ್ಳಿ/ಬೆಳ್ಳುಳ್ಳಿ

ಈ ತರಕಾರಿಗಳಲ್ಲಿರುವ ಪೋಷಕಾಂಶಗಳು ಕೊಂಚ ಕಟುವಾಸನೆಯನ್ನು ಹೊಂದಿದ್ದು ನಿಮ್ಮ ದೇಹದ ವಾಸನೆಯನ್ನೂ ಅಸಹ್ಯವಾಗಿಸಬಹುದು. ಸಮಾಗಮದ ಸಮಯದಲ್ಲಿ ಈ ಅಸಹ್ಯ ವಾಸನೆ ಪರಸ್ಪರ ಆಕರ್ಷಣೆಗೆ ವಿರುದ್ಧವಾಗಿ ಕೆಲಸ ಮಾಡಬಹುದು. ಆದ್ದರಿಂದ ರಾತ್ರಿಯ ವೇಳೆಯ ಸದ್ಭಳಕೆ ಮಾಡಬಯಸುವ ದಂಪತಿಗಳು ಈ ಹಸಿ ತರಕಾರಿಗಳನ್ನು ಸೇವಿಸಲೇಬಾರದು.

ಸಾವಯವ ಪದ್ಧತಿಯಲ್ಲಿ ಬೆಳೆದಿರದ ಸೋಯಾ ಉತ್ಪನ್ನಗಳು

ಸಾವಯವ ಪದ್ಧತಿಯಲ್ಲಿ ಬೆಳೆದಿರದ ಸೋಯಾ ಉತ್ಪನ್ನಗಳು

ಒಂದು ವೇಳೆ ಕೃತಕ ಗೊಬ್ಬರ ಆಧಾರಿತ ಸೋಯಾ ಉತ್ಪನ್ನಗಳನ್ನು ಸೇವಿಸಿದರೆ ಇದರಲ್ಲಿರುವ ಫೈಟೋ ಈಸ್ಟ್ರೋಜೆನ್ ಎಂಬ ಐಸೋಫ್ಲೇವೋನ್ ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಒಂದು ವೇಳೆ ಈ ಪೋಷಕಾಂಶದ ಪ್ರಮಾಣ ಹೆಚ್ಚಾದರೆ ಇದು ದೇಹದ ಹಾರ್ಮೋನುಗಳ ಸಮತೋಲನವನ್ನು ಏರುಪೇರುಗೊಳಿಸಿ ಪುರುಷರಲ್ಲಿಯೂ ಮಹಿಳೆಯರಲ್ಲಿಯೂ ಸಮಾನವಾದ ಲೈಂಗಿಕ ನಿರಾಸಕ್ತಿಗೆ ಕಾರಣವಾಗಬಹುದು.

ಬಿಯರ್

ಬಿಯರ್

ಬಿಯರ್ ಸೇವನೆಯ ಬಳಿಕ ಮೆದುಳಿನ ಕ್ಷಮತೆ ಉಡುಗುತ್ತದೆ. ಇದನ್ನೇ ಜನರು ಮತ್ತು ಎಂದು ತಪ್ಪಾಗಿ ಅರ್ಥೈಸಿಕೊಂಡು ಹೆಚ್ಚು ಹೆಚ್ಚಾಗಿ ಸೇವಿಸುತ್ತಾರೆ. ಆದರೆ ಬಿಯರ್ ಸೇವನೆಯಿಂದ ಮೆದುಳಿನ ಕ್ಷಮತೆ ಉಡುಗುವುದು ಮಾತ್ರವಲ್ಲ ಲೈಂಗಿಕ ಶಕ್ತಿಯೂ ಕುಂದುತ್ತದೆ. ಇದರಲ್ಲಿರುವ ಫೈಟೋ ಈಸ್ಟ್ರೋಜೆನ್ ಪೋಷಕಾಂಶಗಳು ದೇಹದ ಹಾರ್ಮೋನುಗಳ ಸಮತೋಲನವನ್ನು ಏರುಪೇರುಗೊಳಿಸಿ ಲೈಂಗಿಕಾಸಕ್ತಿಯನ್ನೂ ಲೈಂಗಿಕ ಸಮಯಕ್ಕೆ ಅಗತ್ಯವಾದ ಶಕ್ತಿಯನ್ನೂ ಉಡುಗಿಸಿಬಿಡುತ್ತದೆ.

ಸೈಲೆಂಟ್ ಕಿಲ್ಲರ್‌ 'ಬಿಯರ್‌'ನ ಹಿಂದಿರುವ ಕರಾಳ ಸತ್ಯ
ವಾಣಿಜ್ಯ ಉದ್ದೇಶದ ಬೇಯಿಸಿದ ಆಹಾರಗಳು

ವಾಣಿಜ್ಯ ಉದ್ದೇಶದ ಬೇಯಿಸಿದ ಆಹಾರಗಳು

ಮಾರುಕಟ್ಟೆಯಲ್ಲಿ ಸಿಗುವ ಬೇಯಿಸಿ ತಣಿಸಿ ಸಿದ್ಧ ರೂಪದಲ್ಲಿ ಪ್ಯಾಕೆಟ್ಟುಗಳಲ್ಲಿ ತುಂಬಿಸಿದ ಆಹಾರಗಳಲ್ಲಿ ಹೆಚ್ಚಿನ ಪ್ರಮಾಣದ ಟ್ರಾನ್ಸ್ ಫ್ಯಾಟ್ ಎಂಬ ಕೊಬ್ಬು ಹಾಗೂ ಹೆಚ್ಚಿನ ಸಕ್ಕರೆ ಇರುತ್ತದೆ. ಈ ಆಹಾರಗಳನ್ನು ಸೇವಿಸಿದಾಗ ದೇಹದಲ್ಲಿ ಅಗತ್ಯಕ್ಕಿಂತಲೂ ಹೆಚ್ಚಿನ ಇನ್ಸುಲಿನ್ ಉತ್ಪತ್ತಿಯಾಗಿ ಹೊಟ್ಟೆಯ ಭಾಗದಲ್ಲಿ ಹೆಚ್ಚು ಹೆಚ್ಚು ಕೊಬ್ಬು ಸಂಗ್ರಹಗೊಳ್ಳಲು ಕಾರಣವಾಗುತ್ತದೆ ಹಾಗೂ ಸ್ನಾಯುಗಳ ಸಾಂದ್ರತೆ ಕಡಿಮೆಯಾಗುತ್ತದೆ. ಪರಿಣಾಮವಾಗಿ ಪುರುಷರಲ್ಲಿ ಟೆಸ್ಟೋಸ್ಟೆರೋನ್ ಎಂಬ ರಸದೂತದ ಪ್ರಮಾಣವೂ ಕಡಿಮೆಯಾಗುತ್ತದೆ. ಲೈಂಗಿಕ ಶಕ್ತಿ ಮತ್ತು ಉತ್ಸಾಹಕ್ಕೆ ಈ ರಸದೂತ ತುಂಬಾ ಅಗತ್ಯವಾಗಿದ್ದು ಈ ಪ್ರಮಾಣ ಕಡಿಮೆಯಾದರೆ ಲೈಂಗಿಕ ಶಕ್ತಿಯೂ ಕಡಿಮೆಯಾಗುತ್ತದೆ.

ಯಷ್ಠಿಮಧು (Licorice)

ಯಷ್ಠಿಮಧು (Licorice)

ಲಿಕೋರಿಶ್ ಎಂದು ಕರೆಯಲ್ಪಡುವ ಯಷ್ಠಿಮಧು ಅಥವಾ ಜೇಷ್ಠಮಧು ಒಂದು ಮೂಲಿಕೆಯಾಗಿದ್ದು ಕೆಲವಾರು ಆಹಾರವಸ್ತುಗಳಲ್ಲಿ ಸೇರಿಸಿರಲಾಗಿರುತ್ತದೆ. ಆದರೆ ಈ ಆಹಾರಗಳಲ್ಲಿರುವ ಗ್ಲೈಸೈರ್ರಿಜಿಕ್ ಆಮ್ಲ ಎಂಬ ಪೋಷಕಾಂಶ ಪುರುಷರಲ್ಲಿರುವ ಟೆಸ್ಟೋಸ್ಟೆರೋನ್ ರಸದೂತ ಉತ್ಪತ್ತಿಯಾಗುವುದಕ್ಕೆ ಅಡ್ಡಿಪಡಿಸುತ್ತದೆ ಹಾಗೂ ಒಂದು ವೇಳೆ ಈ ಅಹಾರಗಳನ್ನು ಸತತವಾಗಿ ಸೇವಿಸುತ್ತಾ ಬಂದರೆ ಪುರುಷರಲ್ಲಿ ಈ ರಸದೂತದ ಪ್ರಮಾಣವೇ ಕಡಿಮೆಯಾಗಿ ಹೋಗಬಹುದು. ಪರಿಣಾಮವಾಗಿ ಲೈಂಗಿಕ ಶಕ್ತಿಯ ಜೊತೆಗೇ ಈ ಹಾರ್ಮೋನು ನಿಯಂತ್ರಿಸುವ ಇನ್ನೂ ಹಲವಾರು ಕಾರ್ಯಗಳಿಗೆ ಅಡ್ಡಿಯಾಗಬಹುದು. ಆದ್ದರಿಂದ ಸಮಾಗಮಕ್ಕೂ ಮುನ್ನ ಈ ಆಹಾರವನ್ನು ಸೇವಿಸದಿರಿ.

ಚೀಸ್

ಚೀಸ್

ಚೀಸ್ ಮೊದಲಾದ ಡೈರಿ ಉತ್ಪನ್ನಗಳಲ್ಲಿ ಹಾರ್ಮೋನುಗಳನ್ನು ಏರುಪೇರುಗೊಳಿಸುವ ಆಂಟಿಬಾಡಿ ಎಂಬ ಕಣಗಳಿರುತ್ತವೆ. ಇವು ಜೀರ್ಣಶಕ್ತಿಯನ್ನು ಏರುಪೇರುಗೊಳಿಸುವುವುದು ಮಾತ್ರವಲ್ಲದೇ ಹೊಟ್ಟೆಯುಬ್ಬಿಸಲು ಹಾಗೂ ಹೊಟ್ಟೆಯಲ್ಲಿ ನೋವು ಉಂಟಾಗಲು ಕಾರಣವಾಗುತ್ತವೆ. ಈ ಸಮಯದಲ್ಲಿ ಸಮಾಗಮ ಸಾಧ್ಯವಾಗದೇ ಹೋಗಬಹುದು.

ಶತಾವರಿ (Asparagus)

ಶತಾವರಿ (Asparagus)

ಸಮಾಗಮಕ್ಕೂ ಮುನ್ನ ಈ ತರಕಾರಿಯನ್ನು ಸೇವಿಸದಿರಿ. ಇದರಿಂದ ಲೈಂಗಿಕಾಸಕ್ತಿ ಕಡಿಮೆಯಾಗುವುದು ಮಾತ್ರವಲ್ಲ, ಮೂತ್ರದಲ್ಲಿ ಒಂದು ರೀತಿಯ ವಾಸನೆಯನ್ನೂ ಮೂಡಿಸುತ್ತದೆ.

ಸಂಸ್ಕರಿಸಿದ ಮಾಂಸ

ಸಂಸ್ಕರಿಸಿದ ಮಾಂಸ

ಸುಪರ್ ಮಾರ್ಕೆಟ್‌ಗಳಲ್ಲಿ ಲಭ್ಯವಿರುವ ಸಿದ್ಧರೂಪದ ಮಾಂಸದ ಉತ್ಪನ್ನಗಳನ್ನು ಸಾಮಾನ್ಯವಾಗಿ ಪ್ಲಾಸ್ಟಿಕ್ ಹಾಳೆಗಳಲ್ಲಿ ಸಂಗ್ರಹಿಸಿರುತ್ತಾರೆ. ಈ ಪ್ಲಾಸ್ಟಿಕ್ ಅಪ್ಪಟ ಪಿವಿಸಿ (ಪಾಲಿ ವಿನೈಲ್ ಕ್ಲೋರೈಡ್) ಎಂಬ ರಾಸಾಯನಿಕವಾಗಿದ್ದು ಈ ಕಣಗಳು ಮಾಂಸದಲ್ಲಿರುವ ಕೊಬ್ಬಿನ ಆಮ್ಲದೊಳಗೆ ಕರಗಿಬಿಡುತ್ತವೆ. ಈ ಕೊಬ್ಬನ್ನು ಸೇವಿಸಿದಾಗ ದೇಹದ ಹಾರ್ಮೋನುಗಳ ಸಮತೋಲನ ಏರುಪೇರಾಗುತ್ತದೆ. ಅಷ್ಟೇ ಅಲ್ಲ, ಈ ಉತ್ಪನ್ನಗಳನ್ನು ಸಂರಕ್ಷಿಸಲು ಬಳಸಲಾಗುವ ಸಂರಕ್ಷಕಗಳು ಹಾಗೂ ಆಹಾರದಲ್ಲಿರುವ ಪ್ರತಿಜೀವಕ ಮತ್ತು ಕೆಲವು ರಸದೂತಗಳು ದೇಹದ ರಸದೂತಗಳ ಸಮತೋಲನವನ್ನು ಏರುಪೇರುಗೊಳಿಸಬಹುದು. ಆದ್ದರಿಂದ ಈ ಉತ್ಪನ್ನಗಳನ್ನು ಸೇವಿಸದಿರುವುದೇ ಉತ್ತಮ.

English summary

Foods You Should Never Eat Before An Intercourse

The food we eat can affect our sex drive in both positive and negative ways. We are not really sure of which foods we must avoid. The brain is the most powerful sexual organ and the food choices that you opt for can either make or break your night. Some foods that you eat can make you feel gassy, bloated and you might be struggling to stay awake. So, read on further to know more about the foods to avoid before having an intercourse.
X
Desktop Bottom Promotion