For Quick Alerts
ALLOW NOTIFICATIONS  
For Daily Alerts

ಮೆದುಳಿನ ಕ್ಷಮತೆ ಹಾಗೂ ಸ್ಮರಣಶಕ್ತಿ ಹೆಚ್ಚಿಸುವ ಆಹಾರಗಳು

By Arshad
|

ವಯಸ್ಸಿನೊಂದಿಗೇ ಮೆದುಳಿನ ಕ್ಷಮತೆಯೂ ಉಡುಗುತ್ತದೆ. ಇದಕ್ಕೆ ಮೆದುಳಿನ ಜೀವಕೋಶಗಳು ನಾಶವಾಗಿ ಇದರ ಬದಲಾಗಿ ಹೊಸ ಜೀವಕೋಶಗಳು ಹುಟ್ಟದಿರುವುದು ಪ್ರಮುಖ ಕಾರಣ. ಈ ತೊಂದರೆಯನ್ನು ಸರಿಪಡಿಸಲು ಜಗತ್ತಿನಲ್ಲಿ ಯಾವುದೇ ಔಷಧಿ ಲಭ್ಯವಿಲ್ಲ. ಆದರೆ ಇರುವ ಜೀವಕೋಶಗಳನ್ನು ಆರೋಗ್ಯವಾಗಿರಿಸಿಕೊಂಡು ಕ್ಷಮತೆಯನ್ನು ಸಾಕಷ್ಟು ಹೆಚ್ಚು ಕಾಲ ಉಳಿಸಿಕೊಳ್ಳಲು ಸಾಧ್ಯ.

ಇದಕ್ಕೆ ಮೆದುಳಿಗೆ ಪೂರಕವಾದ ಆಹಾರಗಳನ್ನು ಸೇವಿಸಬೇಕು ಹಾಗೂ ನಮ್ಮ ಆಹಾರ ಸೇವನಾ ಕ್ರಮ ಮತ್ತು ಅಭ್ಯಾಸಗಳನ್ನೂ ಬದಲಿಸಿಕೊಳ್ಳಬೇಕು. ಈ ಬಗ್ಗೆ ನಡೆಸಿದ ಕೆಲವಾರು ಸಂಶೋಧನೆಗಳ ಬಳಿಕ ಮೆದುಳಿನ ಕ್ಷಮತೆಯನ್ನು ಹೆಚ್ಚಿಸುವ, ಅಂದರೆ ಘಾಸಿಗೊಳ್ಳುವ ಗತಿಯನ್ನು ನಿಧಾನಗೊಳಿಸಲು ಕೆಲವು ಆಹಾರಗಳು ಪೂರಕ ಎಂದು ಕಂಡುಬಂದಿದೆ.

ನೆನಪಿನ ಶಕ್ತಿ ಹೆಚ್ಚಿಸಬೇಕೆ? ಹಾಗಾದರೆ ಇಂತಹ ಆಹಾರಗಳನ್ನು ಸೇವಿಸಿ

ದೈಹಿಕವಾಗಿ ಅಥವಾ ಮಾನಸಿಕವಾಗಿ ನಾವು ದಣಿದಾಗ ನಮ್ಮ ದೇಹದಲ್ಲಿ ಸೈಟೋಕೈನ್ಸ್ ಎಂಬ ಉರಿಯೂತಕ್ಕೆ ಕಾರಣವಾಗುವ ಕಣಗಳು ಬಿಡುಗಡೆಯಾಗುತ್ತವೆ. ಈ ಕಣಗಳು ದೇಹದ ರೋಗ ನಿರೋಧಕ ವ್ಯವಸ್ಥೆಯನ್ನು ಪ್ರಚೋದಿಸಿ ದಣಿವಿನ ವಿರುದ್ದ ಕಾರ್ಯನಿರತವಾಗುವಂತೆ ಮಾಡುತ್ತವೆ. ಇದರಿಂದ ನಮ್ಮ ರೋಗ ನಿರೋಧಕ ವ್ಯವಸ್ಥೆ ಹಾಗೂ ಉರಿಯೂತದ ಪ್ರಚೋದನೆಗೆ ದೇಹ ಸ್ಪಂದಿಸುವ ಕ್ರಮವನ್ನು ನಿಯಂತ್ರಣದಲ್ಲಿರಿಸಲು ಸಾಧ್ಯವಾಗುತ್ತದೆ.

ನಿಮ್ಮ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವ 18 ಅದ್ಭುತ ಆಹಾರಗಳು

ಮೆದುಳಿನ ಕ್ಷಮತೆಯನ್ನು ಹೆಚ್ಚಿಸುವ ಆಹಾರಗಳಲ್ಲಿ ಹೆಚ್ಚಿನ ಆಂಟಿ ಆಕ್ಸಿಡೆಂಟುಗಳು, ಆರೋಗ್ಯಕರ ಕೊಬ್ಬು, ವಿಟಮಿನ್ನುಗಳು, ಖನಿಜಗಳು ಹಾಗೂ ಇತರ ಪೋಷಕಾಂಶಗಳಿದ್ದು ನಮ್ಮ ಮೆದುಳನ್ನು ಕೆಲವಾರು ಅನಾರೋಗ್ಯಗಳಿಂದ ಕಾಪಾಡುತ್ತವೆ. ಈ ಕಾರ್ಯದಲ್ಲಿ ಕೆಲವು ಆಹಾರಗಳು ಉಳಿದ ಆಹಾರಗಳಿಗಿಂತ ಹೆಚ್ಚು ಉತ್ತಮವಾಗಿವೆ. ಇಂತಹ ಕೆಲವು ಪ್ರಮುಖ ಆಹಾರಗಳನ್ನು ಇಂದು ಸಂಗ್ರಹಿಸಲಾಗಿದ್ದು ಮೆದುಳಿನ ಕ್ಷಮತೆಯನ್ನು ಹೆಚ್ಚಿಸಲು ನಿಯಮಿತವಾಗಿ ಸೇವಿಸುವುದು ಅನಿವಾರ್ಯವಾಗಿದೆ. ಬನ್ನಿ, ಈ ಆಹಾರಗಳು ಯಾವುವು ಎಂಬುದನ್ನು ನೋಡೋಣ....

 ಆಲಿವ್ ಎಣ್ಣೆ

ಆಲಿವ್ ಎಣ್ಣೆ

ಇದರಲ್ಲಿ ಅತಿ ಹೆಚ್ಚಿನ ಪ್ರಮಾಣದ ಪಾಲಿಫಿನಾಲುಗಳಿವೆ. ಇವು ರಕ್ಷಣಾತ್ಮಕ ಆಂಟಿ ಆಕ್ಸಿಡೆಂಟುಗಳಂತೆ ವರ್ತಿಸಿ ಮೆದುಳಿನ ಕಾಯಿಲೆಗಳಿಂದ ರಕ್ಷಿಸುತ್ತದೆ.

ಕೊಬ್ಬರಿ ಎಣ್ಣೆ

ಕೊಬ್ಬರಿ ಎಣ್ಣೆ

ಮೆದುಳಿನ ಕ್ಷಮತೆಯ ಜೀವಾಳವಾದ ನ್ಯೂರಾನ್ ಗಳು ಶಕ್ತಿಯನ್ನು ಗರಿಷ್ಟ ಮಟ್ಟದಲ್ಲಿ ಬಳಸಿಕೊಳ್ಳಲು ಕೊಬ್ಬರಿ ಎಣ್ಣೆಯಲ್ಲಿರುವ ಪೋಷಕಾಂಶಗಳು ನೆರವಾಗುತ್ತವೆ. ಅಲ್ಲದೇ ಮೆದುಳಿಗೆ ಮಾರಕವಾದ ಫ್ರೀ ರ್‍ಯಾಡಿಕಲ್ ಎಂಬ ಕ್ಯಾನ್ಸರ್ ಕಾರಕ ಕಣಗಳ ವಿರುದ್ದವೂ ರಕ್ಷಣೆ ಒದಗಿಸುತ್ತದೆ. ಕೊಬ್ಬರಿ ಎಣ್ಣೆಯಲ್ಲಿರುವ ಆರ್ದ್ರಿತ ಕೊಬ್ಬು (saturated fat) ಮೆದುಳಿನ ಜೀವಕೋಶಗಳು ನಾಶಗೊಳ್ಳುವ ಗತಿಯನ್ನು ನಿಧಾನಗೊಳಿಸಿ ಹೆಚ್ಚಿನ ಏಕಾಗ್ರತೆ ಪಡೆಯಲು ನೆರವಾಗುತ್ತದೆ.

ಬೆಣ್ಣೆಹಣ್ಣು

ಬೆಣ್ಣೆಹಣ್ಣು

ಇದರಲ್ಲಿರುವ ವಿಟಮಿನ್ ಕೆ ಹಾಗೂ ಫೋಲೇಟ್ ಗಳು ಮೆದುಳಿನಲ್ಲಿ ರಕ್ತಹೆಪ್ಪುಗಟ್ಟುವುದನ್ನು ತಡೆಯಲು ನೆರವಾಗುತ್ತವೆ ಹಾಗೂ ಹೃದಯ ಸ್ತಂಭನದ ಸಾಧ್ಯತೆಯನ್ನೂ ಕಡಿಮೆ ಮಾಡುತ್ತವೆ. ಅಲ್ಲದೇ ಮೆದುಳಿನ ಅರಿವು ಪಡೆಯುವ ಸಾಮರ್ಥ್ಯವನ್ನೂ ಹೆಚ್ಚಿಸುತ್ತದೆ.

 ಸಾಲ್ಮನ್ ಮೀನು

ಸಾಲ್ಮನ್ ಮೀನು

ಈ ಮೀನಿನಲ್ಲಿ DHA ಎಂಬ ಒಮೆಗಾ ೩ ಕೊಬ್ಬಿನ ಎಣ್ಣೆ ಹೆಚ್ಚಿನ ಪ್ರಮಾಣದಲ್ಲಿದೆ. ಈ ಎಣ್ಣೆಗೆ ಮೆದುಳಿನ ಜೀವಕೋಶಗಳ ಆರೋಗ್ಯವನ್ನು ಕಾಪಾಡಿಕೊಳ್ಳುವ ಕ್ಷಮತೆ ಇದುವ ಕಾರಣ ಮೆದುಳಿನ ಕ್ಷಮತೆಯನ್ನು ಹೆಚ್ಚಿಸಲು ಉತ್ತಮವಾದ ಆಹಾರವಾಗಿದೆ.

ಬ್ಲೂಬೆರಿ ಹಣ್ಣುಗಳು

ಬ್ಲೂಬೆರಿ ಹಣ್ಣುಗಳು

ಈ ಹಣ್ಣಿನಲ್ಲಿರುವ ಆಂಟಿ ಆಕ್ಸಿಡೆಂಟುಗಳು ಮೆದುಳಿನ ಮೇಲೆ ಆಗುವ ಘಾಸಿಯನ್ನು ತಡೆಯುವ ಶಕ್ತಿ ಹೊಂದಿವೆ. ಅಲ್ಲದೇ ಇವು ಮೆದುಳಿನ ಜೀವಕೋಶಗಳು ನಷ್ಟವಾಗಲು ಕಾರಣವಾಗುವ ಉರಿಯೂತವನ್ನು ಕಡಿಮೆಗೊಳಿಸುವ ಮೂಲಕ ಮೆದುಳು ಹೆಚ್ಚಿನ ಕಾಲ ಉತ್ತಮ ಕ್ಷಮತೆ ಹೊಂದಿರಲು ನೆರವಾಗುತ್ತದೆ.

 ಅರಿಶಿನ

ಅರಿಶಿನ

ಅರಿಶಿನದ ಸೇವನೆಯಿಂದ ಉರಿಯೂತಕ್ಕೆ ಕಾರಣವಾಗುವ ನಮ್ಮ ಡಿ.ಎನ್. ಎ ಗಳ ಕೆಲವು ಭಾಗಗಳ ಮೇಲೆ ಪ್ರಭಾವ ಬೀರುವ ಮೂಲಕ ಉರಿಯೂತದಿಂದ ರಕ್ಷಿಸುತ್ತದೆ. ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಅರಿಶಿನ ಒಂದು ಉತ್ತಮವಾದ ಆಯ್ಕೆಯಾಗಿದ್ದು ಇದನ್ನು ನಮ್ಮ ಪೂರ್ವಜರು ಸಾವಿರಾರು ವರ್ಷಗಳಿಂದ ಉಪಯೋಗಿಸುತ್ತಾ ಬಂದಿದ್ದಾರೆ.

ಮೊಟ್ಟೆಗಳು

ಮೊಟ್ಟೆಗಳು

ಮೊಟ್ಟೆಯಲ್ಲಿ ಖೋಲೈನ್ ಎಂಬ ಪೋಷಕಾಂಶವಿದೆ. ಇದು ಮೆದುಳಿನ ಸಂದೇಶಗಳನ್ನು ದೇಹದ ಎಲ್ಲೆಡೆ ಕೊಂಡೊಯ್ಯುವ ನ್ಯೂರೋಟ್ರಾನ್ಸ್ ಮಿಟರ್ ಗಳಿಗೆ ಜೀವಾಳವಾಗಿದೆ. ಅಲ್ಲದೇ ಮೆದುಳಿನ ಜೀವಕೋಶಗಳ ಹೊರಪದರದ ದೃಢತೆಗೆ ಅಗತ್ಯವಾದ ಕೊಲೆಸ್ಟ್ರಾಲ್ ಸಹಾ ಮೊಟ್ಟೆಯಲ್ಲಿದೆ. ಅಲ್ಲದೇ ಮೆದುಳನ್ನು ಘಾಸಿಯಿಂದ ಕಾಪಾಡುವ ಆಂಟಿ ಆಕ್ಸಿಡೆಂಟುಗಳು ಸಹಾ ಇವೆ.

ಕಾಡುಸೇವಂತಿಗೆ ಸೊಪ್ಪು (Dandelion Greens)

ಕಾಡುಸೇವಂತಿಗೆ ಸೊಪ್ಪು (Dandelion Greens)

ಈ ಸೊಪ್ಪಿನಲ್ಲಿ ಅತಿ ಹೆಚ್ಚಿನ ಪ್ರಮಾಣದ ಕರಗದ ನಾರು ಹಾಗೂ ಜೀರ್ಣಕ್ರಿಯೆಯನ್ನು ಚುರುಕುಗೊಳಿಸುವ ಪೋಷಕಾಂಶಗಳಿವೆ. ಹೊಟ್ಟೆಯಲ್ಲಿ ಜೀರ್ಣಕ್ರಿಯೆಗೆ ಸಹಕರಿಸುವ ಬ್ಯಾಕ್ಟೀರಿಯಾ ಸಹಾ ಇದರಲ್ಲಿದ್ದು ಇದರ ಪರಿಣಾಮದಿಂದ ಮೆದುಳಿಗೂ ಹೆಚ್ಚಿನ ಪೋಷಣೆ ಲಭಿಸುತ್ತದೆ. ಮೆದುಳಿನ ಕ್ಷಮತೆ ಹೆಚ್ಚಿಸುವ ಆಹಾರಗಳಲ್ಲಿ ಈ ಸೊಪ್ಪು ಪ್ರಮುಖ ಸ್ಥಾನ ಪಡೆಯುತ್ತದೆ.

ಅಕ್ರೋಟು

ಅಕ್ರೋಟು

ಒಡೆದ ಬಳಿಕ ನೋಡಲು ಮೆದುಳಿನಂತೆಯೇ ತೋರುವ ಅಕ್ರೋಟಿನಲ್ಲಿಯೂ ಮೆದುಳಿನ ಆರೋಗ್ಯ ಹೆಚ್ಚಿಸುವ ಹಲವಾರು ಪೋಷಕಾಂಶಗಳಿವೆ. ವಿಟಮಿನ್ ಇ, ಒಮೆಮಾ ೨ ಕೊಬ್ಬಿನ ಆಮ್ಲ, ತಾಮ್ರ, ಮ್ಯಾಂಗನೀಸ್ ಹಾಗೂ ಕರಗುವ ನಾರು ಹೆಚ್ಚಿನ ಪ್ರಮಾಣದಲ್ಲಿದ್ದು ಹೊಟ್ಟೆಯಲ್ಲಿ ಆರೋಗ್ಯಕರ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ನೆರವಾಗುತ್ತವೆ ಹಾಗೂ ಮೆದುಳಿನ ಕ್ಷಮತೆ ಹೆಚ್ಚಿಸಲು ನೆರವಾಗುತ್ತವೆ.

ಶತಾವರಿ

ಶತಾವರಿ

ಈ ಆಹಾರದಲ್ಲಿಯೂ ಜೀರ್ಣಕ್ರಿಯೆಗೆ ಸಹಕರಿಸುವ ಬ್ಯಾಕ್ಟೀರಿಯಾಗಳು ಹೆಚ್ಚಿನ ಪ್ರಮಾಣದಲ್ಲಿದ್ದು ಮೆದುಳಿನ ಕ್ಷಮತೆ ಹೆಚ್ಚಿಸಲು ನೆರವಾಗುತ್ತವೆ. ಅಲ್ಲದೇ ಇದರಲ್ಲಿರುವ ಉರಿಯೂತ ನಿವಾರಕ ಗುಣ ಹಾಗೂ ಫೋಲೇಟ್ ಸಹಾ ಮೆದುಳಿನ ಆರೋಗ್ಯ ವೃದ್ಧಿಸುತ್ತವೆ.

 ಕಿಮ್ಚಿ

ಕಿಮ್ಚಿ

ಕೊರಿಯಾ ದೇಶದಿಂದ ಬಂದಿರುವ ಈ ಆಹಾರ ವಾಸ್ತವವಾಗಿ ಕೊರಿಯಾದ ನಾಪಾ ಕೋಸು ಮತ್ತು ಮೂಲಂಗಿಗಳನ್ನು ಉಪ್ಪು ಹಾಕಿಟ್ಟು ಹುಳಿ ಬರಿಸಿದ ಸಾಂಪ್ರಾದಾಯಿಕ ಆಹಾರವಾಗಿದೆ. ಈ ಆಹಾರವೂ ಹೊಟ್ಟೆಯಲ್ಲಿ ಆರೋಗ್ಯಕರ ಬ್ಯಾಕ್ಟೀರಿಯಾಗಳನ್ನು ಹೆಚ್ಚಿಸುವ ಮೂಲಕ ಮೆದುಳಿನ ಕ್ಷಮತೆ ಹೆಚ್ಚಿಸಲು ನೆರವಾಗುತ್ತದೆ.

 ಬ್ರೋಕೋಲಿ

ಬ್ರೋಕೋಲಿ

ಹಸಿರು ಹೂಕೋಸಿನಂತೆ ಕಾಣುವ ಬ್ರೋಕೋಲಿಯಲ್ಲಿ ಸಲ್ಫ್ಯೂರೋಫೇನ್ ಎಂಬ ಪೋಷಕಾಂಶವಿದ್ದು ಇದು ದೇಹದಿಂದ ಕಲ್ಮಶಗಳನ್ನು ಹೊರಹಾಕಲು, ಉರಿಯೂತವನ್ನು ಕಡಿಮೆ ಮಾಡಲು ಹಾಗೂ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ಪ್ರಭಾವವನ್ನು ಕಡಿಮೆ ಮಾಡಲು ನೆರವಾಗುತ್ತವೆ. ಮೆದುಳಿನ ಕ್ಷಮತೆ ಹೆಚ್ಚಿಸಲು ಇದು ಪ್ರಮುಖ ಆಹಾರವಾಗಿದೆ.

ಕೆಂಪು ವೈನ್

ಕೆಂಪು ವೈನ್

ಇದರಲ್ಲಿ ಹೆಚ್ಚಿನ ಪ್ರಮಾಣದ ಪಾಲಿಫಿನಾಲುಗಳಿದ್ದು ಮೆದುಳಿನ ಹರಿಯುವ ರಕ್ತದ ಪ್ರಮಾಣವನ್ನು ಹೆಚ್ಚಿಸಲು ನೆರವಾಗುತ್ತದೆ. ತನ್ಮೂಲಕ ಮೆದುಳಿನ ಕ್ಷಮತೆಯನ್ನು ಹೆಚ್ಚಿಸುವುದು ಮಾತ್ರವಲ್ಲದೇ ಘಾಸಿಗೊಳ್ಳುವುದರಿಂದಲೂ ರಕ್ಷಣೆ ಒದಗಿಸುತ್ತದೆ.

ಪಾಲಕ್ ಸೊಪ್ಪು

ಪಾಲಕ್ ಸೊಪ್ಪು

ಈ ಸೊಪ್ಪಿನಲ್ಲಿಯೂ ಹೆಚ್ಚಿನ ಆಂಟಿ ಆಕ್ಸಿಡೆಂಟುಗಳು, ವಿಟಮಿನ್ ಕೆ, ಫೋಲೇಟ್ ಹಾಗೂ ಲ್ಯೂಟಿನ್ ಇದ್ದು ಇವೆಲ್ಲವೂ ಮೆದುಳಿಗೆ ಹಾನಿ ಎಸಗುವ ಫ್ರೀ ರ್‍ಯಾಡಿಕಲ್ ಕಣಗಳಿಂದ ರಕ್ಷಣೆ ಒದಗಿಸುತ್ತವೆ.

ತರಕಾರಿಗಳು

ತರಕಾರಿಗಳು

ನೀಲಿ, ಕೆಂಪು ಮತ್ತು ಹಸಿರು ತರಕಾರಿಗಳು ನೆನೆಪಿನ ಶಕ್ತಿ ಹೆಚ್ಚಿಸುವುದು. ಮೆದುಳಿನ ಶಕ್ತಿ ಹೆಚ್ಚಿಸಬೇಕೆಂದರೆ ನೀವು ಇಂದಿನಿಂದಲೇ ಬದನೆ ತಿನ್ನಲು ಆರಂಭಿಸಿ. ಬದನೆಯಲ್ಲಿ ಇರುವಂತಹ ನಾಸುನಿನ್ ಎನ್ನುವ ಪೋಷಕಾಂಶವು ಮೆದುಳನ್ನು ಆರೋಗ್ಯವಾಗಿಟ್ಟು ಮೆದುಳಿನ ಕೋಶಗಳಿಗೆ ಪೋಷಕಾಂಶ ಒದಗಿಸುವುದು. ಬೀಟ್ ರೂಟ್ ಮತ್ತು ಈರುಳ್ಳಿಯು ಮೆದುಳಿಗೆ ತುಂಬಾ ಒಳ್ಳೆಯದು. ತುಂಬಾ ಗಾಢ ಹಸಿರು ಬಣ್ಣ ಹೊಂದಿರುವಂತಹ ತರಕಾರಿಗಳಲ್ಲಿ ಫಾಲಿಕ್ ಆಮ್ಲವು ಇರುವುದರಿಂದ ಇದು ಮೆದುಳಿಗೆ ತುಂಬಾ ಒಳ್ಳೆಯದು. ವಿಸ್ಮೃತಿ ರೋಗಿಗಳಿಗೆ ಗಾಢ ಹಸಿರು ಬಣ್ಣದ ತರಕಾರಿಗಳನ್ನು ತಿನ್ನಲು ಸೂಚಿಸಲಾಗುತ್ತದೆ.

ಮೀನು

ಮೀನು

ಬಂಗಾಳಿಗಳು ತುಂಬಾ ಬುದ್ಧಿವಂತರಾಗಿರಲು ಅವರು ತಮ್ಮ ಆಹಾರ ಕ್ರಮದಲ್ಲಿ ಮೀನನ್ನು ಹೆಚ್ಚಾಗಿ ಬಳಸುವುದು ಕಾರಣವಂತೆ! ಮೀನಿನಲ್ಲಿ ಇರುವಂತಹ ಒಮೆಗಾ 3 ಆಮ್ಲದಿಂದಾಗಿ ಮೀನು ಮೆದುಳಿಗೆ ಹೇಳಿ ಮಾಡಿಸಿದಂತಹ ಆಹಾರ. ಮೀನಿನ ತೈಲದ ಪೋಷಕಾಂಶಗಳು ದೇಹದಲ್ಲಿ ನೈಸರ್ಗಿಕವಾಗಿ ಉತ್ಪತ್ತಿಯಾಗುವ ಕಾರಣ ಇದರ ಲಾಭಗಳು ಭರಿಸಲಾಗದ್ದು. ಈ ಆಹಾರ ಕ್ರಮ ಪಾಲಿಸಿಕೊಂಡು ನಿಮ್ಮ ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಿ.

ಹಣ್ಣುಗಳು

ಹಣ್ಣುಗಳು

ಕೆಂಪು ಮತ್ತು ನೀಲಿ ಬಣ್ಣವು ನಿಮಗೆ ಹೆಚ್ಚಿನ ಜ್ಞಾಪಕಶಕ್ತಿ ನೀಡಲಿದೆ. ಸೇಬು ಮತ್ತು ನೇರಳೆಹಣ್ಣು ಜ್ಞಾಪಕಶಕ್ತಿ ಹೆಚ್ಚಿಸಲು ಪ್ರಮುಖವಾದ ಹಣ್ಣುಗಳಾಗಿದೆ. ನಿಮಗೆ ನೆನಪಿನ ಶಕ್ತಿ ಕಡಿಮೆಯಾಗುತ್ತಿದೆಯೆಂದು ಅನಿಸಿದರೆ ಸೇಬು ತಿನ್ನಲು ಮರೆಯಬೇಡಿ. ನೀಲಿ ಹಣ್ಣುಗಳು ಮತ್ತು ಬೆರ್ರಿಗಳು ಜ್ಞಾಪಕಶಕ್ತಿ ಹೆಚ್ಚಿಸುವ ಅಂಥೋಸಯಾನಿನ್ ಹೊಂದಿದೆ.

English summary

Foods To Increase Brain Power & Memory

When the brain begins to fail, there is nothing in the pharmaceutical arena that can reverse this situation. There is nothing that we can possibly do about brain degeneration. But if there is something that we can do, then it is to concentrate on our eating habits and foods. But what does the food that we eat have to do with our brain functionalities you ask? Well, several studies have shown that what we eat can take a toll on our brain.This proves that brain foods matter a lot.
X
Desktop Bottom Promotion