For Quick Alerts
ALLOW NOTIFICATIONS  
For Daily Alerts

48 ಗಂಟೆಯಲ್ಲಿ ಹೊಟ್ಟೆಯ ಕೊಬ್ಬನ್ನು ಕರಗಿಸುವ ಆಹಾರಗಳು!

By Divya Pandith
|

ನಾವು ಸೇವಿಸುವ ಆಹಾರದಲ್ಲಿ ಪ್ರೋಟೀನ್ ಅತಿಮುಖ್ಯವಾದ ಪಾತ್ರವಹಿಸುತ್ತದೆ. ಸೇವಿಸುವ ಆಹಾರದಲ್ಲಿ ಪ್ರೋಟೀನ್ ಹೆಚ್ಚು ಪ್ರಮಾಣದಲ್ಲಿದ್ದರೆ 48 ಗಂಟೆಯೊಳಗೆ ಕೊಬ್ಬಿನಾಂಶವನ್ನು ಕರಗಿಸಬಹುದು ಎಂದು ತಜ್ಞರು ಹೇಳುತ್ತಾರೆ. ಧಾನ್ಯಗಳು, ಗೋಧಿ, ಓಟ್ಸ್, ಕಂದು ಅಕ್ಕಿ ಮೊದಲಾದವುಗಳನ್ನು ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಬಹುದಾದ ಅತ್ಯುತ್ತಮ ಪ್ರೋಟೀನ್‌ಯುಕ್ತ ಆಹಾರಗಳು.

ಈ ಆಹಾರಗಳು ಕೇವಲ ಪ್ರೋಟೀನ್ ಅಂಶಗಳನ್ನು ಮಾತ್ರ ಹೊಂದಿಲ್ಲ. ಜೊತೆಗೆ ಸಮೃದ್ಧವಾದ ನಾರಿನಂಶವು ಇರುತ್ತದೆ. ಹಾಗಾಗಿ ಇವುಗಳನ್ನು ಸೇವಿಸುವುದರಿಂದ ತೂಕದಲ್ಲಿ ಗಣನೀಯವಾದ ಇಳಿಕೆ ಹಾಗೂ ದೇಹಕ್ಕೆ ಸೂಕ್ತರೀತಿಯ ಪೋಷಕಾಂಶ ದೊರೆಯುತ್ತದೆ. ಧಾನ್ಯಗಳನ್ನು ಸೇವಿಸಿದಾಗ ಹೆಚ್ಚು ನೀರನ್ನು ಸೇವಿಸಬೇಕು. ನೀರು ಆಹಾರದ ಜೀರ್ಣಕ್ರಿಯೆಗೆ ಸಹಾಯ ಮಾಡುವುದರ ಜೊತೆಗೆ ಅನಗತ್ಯ ಕೊಬ್ಬುಗಳು ಕರಗುವಂತೆ ಮಾಡುತ್ತದೆ ಎಂದು ಹೇಳಲಾಗುತ್ತದೆ.

ನಿಜ, ಹೊಟ್ಟೆ ಭಾಗದ ಕೊಬ್ಬನ್ನು ಕರಗಿಸಬೇಕು ಎಂದರೆ ಅನೇಕ ಹರಸಾಹಸ ಮಾಡಬೇಕು. ಕೆಲವೊಮ್ಮೆ ಎಷ್ಟೇ ಪ್ರಯತ್ನ ಪಟ್ಟರೂ ಯಾವುದೇ ವ್ಯತ್ಯಾಸಗಳು ಕಂಡುಬರುವುದಿಲ್ಲ. ಅದಕ್ಕಾಗಿ ವಿವಿಧ ಬಗೆಯಲ್ಲಿ ದೇಹವನ್ನು ದಂಡಿಸುವುದನ್ನು ನಾವು ಕಾಣಬಹುದು. ಆದರೆ ನಾವಿಲ್ಲಿ ಹೇಳುತ್ತಿರುವುದು ಸುಲಭವಾದ ಆಹಾರ ಸೇವನೆ ಹಾಗೂ ಬಹು ಬೇಗ ಕೊಬ್ಬು ಕರಗುವ ವಿಧಾನ. ನಿಮಗೂ ಈ ವಿಚಾರದ ಬಗ್ಗೆ ಇನ್ನಷ್ಟು ಮಾಹಿತಿ ಪಡೆದುಕೊಳ್ಳಬೇಕು ಎಂದೆನಿಸಿದರೆ ಲೇಖನದ ಮುಂದಿನ ಭಾಗವನ್ನು ಓದಿ...

ಸಂಪೂರ್ಣ ಧಾನ್ಯಗಳು

ಸಂಪೂರ್ಣ ಧಾನ್ಯಗಳು

ಸಂಪೂರ್ಣ ಧಾನ್ಯಗಳು ದೇಹವನ್ನು ಸಂಪೂರ್ಣ ಶಕ್ತಿಯೊಂದಿಗೆ ಒದಗಿಸುತ್ತವೆ. ನೀವು ಧಾನ್ಯಗಳನ್ನು ಒಳಗೊಂಡಿರುವ ಆಹಾರವನ್ನು ಸೇವಿಸಿದಾಗ, ದೇಹವು ಚಯಾಪಚಯ ಹೆಚ್ಚಾಗುತ್ತದೆ ಮತ್ತು ಕೆಲಸ ಮಾಡುವಾಗ ನೀವು ತುಂಬಾ ಹಗುರವಾಗಿ ಕಾಣುತ್ತೀರಿ.

ಸೌರ್ಕ್ರಾಟ್

ಸೌರ್ಕ್ರಾಟ್

ಇದು ನಿಮ್ಮ ಕರುಳಿನಲ್ಲಿನ ಬ್ಯಾಕ್ಟೀರಿಯಾವು ನಿಮ್ಮ ಮೆಟಾಬಾಲಿಸಮ್‪ಗೆ ಪರಿಣಾಮ ಬೀರುವುದು. ನಿಮ್ಮ ದಿನನಿತ್ಯದ ಸೇವನೆಗೆ ಸೌರ್ಕ್ರಾಟ್ ಅನ್ನು ಸೇರಿಸಿದರೆ, ನೀವು ನಿಮ್ಮ ಸ್ವಯಂಚಾಲಿತ ತೂಕವನ್ನು ಕಳೆದುಕೊಳ್ಳುತ್ತೀರಿ.

ಕಂದು ಅಕ್ಕಿ

ಕಂದು ಅಕ್ಕಿ

ಬಿಳಿ ಅಕ್ಕಿಗಿಂತ ಕಂದು ಅನ್ನವು ನಿಮಗೆ ವಿಟಮಿನ್ ಇ ಮತ್ತು ಫೈಬರ್ ಹೆಚ್ಚಿನ ಪ್ರಾಮಾಣದಲ್ಲಿಇರುತ್ತದೆ. ಅದು ಹೊಟ್ಟೆಯ ಕೊಬ್ಬನ್ನು ಕತ್ತರಿಸಲು ಸಹಾಯವಾಗುತ್ತದೆ. ನೀವು ತೂಕವನ್ನು ವೇಗವಾಗಿ ಕಳೆದುಕೊಳ್ಳಲು ಬಯಸಿದರೆ, ಬಿಳಿ ಅಕ್ಕಿಯ ಬದಲು ಕಂದು ಅಕ್ಕಿಯನ್ನು ಬಳಸಿ.

ಓಟ್ಸ್

ಓಟ್ಸ್

ಓಟ್ಸ್ ಆಹಾರವು ಹೊಟ್ಟೆ ಭಾಗದ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಬೆಳಗಿನ ಉಪಹಾರಕ್ಕೆ ಕೇವಲ ಒಂದು ಕಪ್ ಓಟ್ಸ್ ಸೇವಿಸಬೇಕು. ಆಗ ಬಹು ಬೇಗ ತೂಕವನ್ನು ಕಳೆದುಕೊಳ್ಳಬಹುದು.

ಬಾರ್ಲಿ

ಬಾರ್ಲಿ

ಬಾರ್ಲಿಯು 96 ಕ್ಯಾಲರಿಗಳನ್ನು, 22 ಗ್ರಾಂ ಕಾರ್ಬೋಹೈಡ್ರೇಟ್‌ಗಳನ್ನು ಮತ್ತು 3 ಗ್ರಾಂ ಫೈಬರ್ ಅನ್ನು ಹೊಂದಿದೆ. ಹಾಗಾಗಿ 48 ಗಂಟೆಗಳಲ್ಲಿ ಹೊಟ್ಟೆ ಕೊಬ್ಬನ್ನು ಕಳೆದುಕೊಳ್ಳಬಹುದು. ಅದಕ್ಕಾಗಿಯೇ ನಿಮ್ಮ ಆಹಾರದಲ್ಲಿ ಬಹುಬೇಗ ಸೇರಿಸಿಕೊಳ್ಳಿ.

 ಬಾದಾಮಿ

ಬಾದಾಮಿ

ನೆನೆಸಿದ ಬಾದಾಮಿ ಅಥವಾ ಒಣ ಬಾದಾಮಿಯನ್ನು ಸೇವಿಸಿ ಒಂದು ಗ್ಲಾಸ್ ಹಾಲು ಕುಡಿಯಬೇಕು. ಇದು ಹೊಟ್ಟೆಯಲ್ಲಿರುವ ಕ್ಯಾಲೋರಿಯನ್ನು ಕರಗಿಸುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಹೆಚ್ಚು ಪೌಷ್ಟಿಕಾಂಶವು ದೇಹಕ್ಕೆ ದೊರೆಯುತ್ತದೆ. ಜೊತೆಗೆ ಅನಗತ್ಯ ಕೊಬ್ಬು ಬಹು ಬೇಗ ಕರಗುತ್ತದೆ.

ಕ್ವಿನೋ

ಕ್ವಿನೋ

ಕ್ವಿನೋ ಸಂಪೂರ್ಣ ಪ್ರೋಟೀನ್, ಕಬ್ಬಿಣ, ಮೆಗ್ನೀಸಿಯಮ್, ಬಿ-ವಿಟಮಿನ್ಸ್ ಮತ್ತು ಫೈಬರ್ ಗಳು ಹೆಚ್ಚಿನ ಪ್ರಮಾಣದಲ್ಲಿವೆ. ಇದನ್ನು ನಮ್ಮ ಆಹಾರ ಕ್ರಮದಲ್ಲಿ ಅಳವಡಿಸಿಕೊಂಡರೆ ಬಹುಬೇಗ ತೂಕ ನಷ್ಟವನ್ನು ಹೊಂದಬಹುದು.

ಚಿಕನ್

ಚಿಕನ್

ಚಿಕನ್ ಮತ್ತು ಮೀನು ಮಾಂಸಹಾರಗಳು. ಆದರೆ ಇವು ತೂಕ ನಷ್ಟಕ್ಕೆ ಹೆಚ್ಚು ಸಹಕಲಾರಿಯಾಗಿವೆ ಎನ್ನುವುದನ್ನು ನಾವು ಮರೆಯುವಂತಿಲ್ಲ. ಎರಡು ದಿನಗಳಕಾಲ ಚಿಕನ್ ಮತ್ತು ಮೀನಿನಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಸೇವಿಸಿದರೆ, ಅಸಹ್ಯವಾದ ಹೊಟ್ಟೆಯ ಕೊಬ್ಬು ಗಣನೀಯ ಪ್ರಮಾಣದಲ್ಲಿ ಕರಗುತ್ತದೆ.


English summary

Foods That Will Banish Belly Fat In 48 Hours

Protein is the most important macronutrient, when it comes to weight loss, which is why health experts state that if you add more of protein foods to your diet, there is a positive chance of you losing weight in less than 48 hours. Protein foods like whole grains, wheat, oats, brown rice, etc, are some of the foods that you should add to your daily meal. These foods not only contain protein, but they also have a good amount of fibre that is beneficial for the tummy
X
Desktop Bottom Promotion