For Quick Alerts
ALLOW NOTIFICATIONS  
For Daily Alerts

ಕಪ್ಪು ಜೀರಿಗೆಯಲ್ಲಿದೆ ಊಹೆಗೂ ನಿಲುಕದ ಪ್ರಯೋಜನಗಳು..

By Arshad
|

ಕಾಲಾಜೀರಾ (Nigella seeds) ಅಥವಾ ಕಲೋಂಜಿ ಎಂದೂ ಕರೆಯಲ್ಪಡುವ ಕಪ್ಪು ಜೀರಿಗೆ ಅಡುಗೆಯ ರುಚಿ ಹೆಚ್ಚಿಸುವಲ್ಲಿ ತನ್ನದೇ ಆದ ಪಾತ್ರವನ್ನು ವಹಿಸುತ್ತದೆ. ಅಡುಗೆಗೆ ವಿಶಿಷ್ಟ ಪರಿಮಳ ಹಾಗೂ ರುಚಿ ನೀಡುವ ಕರಿಜೀರಿಗೆಯನ್ನು ತರಕಾರಿ ಸಾರು, ಧಾಲ್ ಹಾಗೂ ಇತರ ಮಸಾಲೆಯುಕ್ತ ಖಾದ್ಯಗಳಲ್ಲಿ ಬಳಸಲಾಗುತ್ತದೆ.

ಇದರ ಪರಿಮಳ ಮತ್ತು ರುಚಿಯ ಹೊರತಾಗಿ ಕಪ್ಪು ಜೀರಿಗೆಯಲ್ಲಿ ಹಲವಾರು ಆರೋಗ್ಯಕರ ಪ್ರಯೋಜನಗಳೂ ಇವೆ. ಈ ಪುಟ್ಟ ಕಾಳುಗಳಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ನುಗಳು, ಪ್ರೋಟೀನುಗಳು, ಕರಗದ ನಾರು, ಕಬ್ಬಿಣ, ಸೋಡಿಯಂ, ಪೊಟ್ಯಾಶಿಯಂ ಹಾಗೂ ಕ್ಯಾಲ್ಸಿಯಂ ಇವೆ. ಆಯುರ್ವೇದದಲ್ಲಿ ಕಪ್ಪು ಜೀರಿಗೆಯನ್ನು ಔಷಧಿಯ ರೂಪದಲ್ಲಿ ನೂರಾರು ವರ್ಷಗಳಿಂದ ಬಳಸಲಾಗುತ್ತಿದೆ. ಇದರ ಆಂಟಿ ಆಕ್ಸಿಡೆಂಟು ಗುಣ ದೇಹದೊಳಗೆ ಹಾಗೂ ಚರ್ಮದ ಮೇಲೆ ಉಂಟಾಗಿರುವ ಉರಿಯೂತವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಬನ್ನಿ, ಈ ಪುಟ್ಟ ಕಾಳುಗಳು ಯಾವ ರೀತಿಯಲ್ಲಿ ನಮ್ಮ ಆರೋಗ್ಯಕ್ಕೆ ನೆರವಾಗುತ್ತವೆ ಎಂದು ನೋಡೋಣ....

ಅಸ್ತಮಾ ಮತ್ತು ಅಲರ್ಜಿಯಿಂದ ಪರಿಹಾರ ಒದಗಿಸುತ್ತದೆ

ಅಸ್ತಮಾ ಮತ್ತು ಅಲರ್ಜಿಯಿಂದ ಪರಿಹಾರ ಒದಗಿಸುತ್ತದೆ

ಅಸ್ತಮಾ ಹಾಗೂ ಇತರ ಶ್ವಾಸನಾಳಗಳಿಗೆ ಸಂಬಂಧಿಸಿದ ಅಲರ್ಜಿಗಳ ಹಾಗೂ ಇತರ ತೊಂದರೆಗಳಿಂದ ರಕ್ಷಿಸಲು ಕಪ್ಪು ಜೀರಿಗೆ ನೆರವಾಗುತ್ತದೆ. ಅಲ್ಲದೇ ಉಸಿರಾಟದ ತೊಂದರೆ ಹಾಗೂ ಕಟ್ಟಿಕೊಂಡಿರುವ ಎದೆಯನ್ನು ನಿರಾಳಗೊಳಿಸಲೂ ನೆರವಾಗುತ್ತದೆ.

ಹೊಟ್ಟೆಯ ತೊಂದರೆಯನ್ನು ಸರಿಪಡಿಸುತ್ತದೆ

ಹೊಟ್ಟೆಯ ತೊಂದರೆಯನ್ನು ಸರಿಪಡಿಸುತ್ತದೆ

ಒಂದು ವೇಳೆ ಅಜೀರ್ಣ ಅಥವಾ ಇನ್ನಾವುದೋ ಕಾರಣದಿಂದ ಹೊಟ್ಟೆ ಕೆಟ್ಟಿದ್ದರೆ ತಕ್ಷಣವೇ ಕೊಂಚ ಕಪ್ಪು ಜೀರಿಗೆಯನ್ನು ಜಗಿದು ನುಂಗುವ ಮೂಲಕ ಉತ್ತಮ ಪರಿಹಾರ ದೊರಕುತ್ತದೆ. ಹೊಟ್ಟೆಯ ಸೆಳೆತ, ವಾಯುಪ್ರಕೋಪ ಹಾಗೂ ಹೊಟ್ಟೆಯುಬ್ಬರಿಕೆ ಮೊದಲಾದ ತೊಂದರೆಗಳಿಂದಲೂ ಕಪ್ಪು ಜೀರಿಗೆ ಪರಿಹಾರ ಒದಗಿಸುತ್ತದೆ.

ಕ್ಯಾನ್ಸರ್ ಬರುವುದರಿಂದ ತಡೆಯುತ್ತದೆ

ಕ್ಯಾನ್ಸರ್ ಬರುವುದರಿಂದ ತಡೆಯುತ್ತದೆ

ಕಪ್ಪು ಜೀರಿಗೆಯ ಸೇವನೆಯಿಂದ ವಿಶೇಷವಾಗಿ ಸ್ತನ ಕ್ಯಾನ್ಸರ್ ನ ಜೀವಕೋಶಗಳ ಬೆಳವಣಿಗೆಯನ್ನು ನಿಗ್ರಹಿಸುವ ಮೂಲಕ ಕ್ಯಾನ್ಸರ್ ಚಿಕಿತ್ಸೆಗೆ ನೆರವಾಗುತ್ತದೆ. ಅಲ್ಲದೇ ಬಾಯಿಯ ಕ್ಯಾನ್ಸರ್, ಕರುಳು ಹಾಗೂ ಗರ್ಭಕಂಠದ ಕ್ಯಾನ್ಸರ್ ಬರುವುದರಿಂದಲೂ ರಕ್ಷಿಸುತ್ತದೆ.

ಯಕೃತ್ ನ ಆರೋಗ್ಯ ವೃದ್ಧಿಸುತ್ತದೆ

ಯಕೃತ್ ನ ಆರೋಗ್ಯ ವೃದ್ಧಿಸುತ್ತದೆ

ಒಂದು ವೇಳೆ ನಿಮ್ಮ ಯಕೃತ್ ನ ಕ್ಷಮತೆ ಕಡಿಮೆಯಾಗಿದ್ದರೆ ಇಂದಿನಿಂದಲೇ ನಿಯಮಿತವಾಗಿ ಕಪ್ಪು ಜೀರಿಗೆಯನ್ನು ಸೇವಿಸಲು ತೊಡಗಿ. ಇದು ಯಕೃತ್ ನ ಜೀವಕೋಶಗಳು ಮತ್ತೆ ತಮ್ಮ ಮೂಲ ಕ್ಷಮತೆಯನ್ನು ಪಡೆಯುತ್ತವೆ ಹಾಗೂ ಶೀಘ್ರವೇ ಯಕೃತ್ ತನ್ನ ಮೊದಲಿನ ಆರೋಗ್ಯ ಪಡೆಯಲು ನೆರವಾಗುತ್ತದೆ.

ಮಧುಮೇಹ ಬರುವುದರಿಂದ ರಕ್ಷಿಸುತ್ತದೆ

ಮಧುಮೇಹ ಬರುವುದರಿಂದ ರಕ್ಷಿಸುತ್ತದೆ

ಇದು ಪ್ರಾಯಶಃ ಕಪ್ಪು ಜೀರಿಗೆಯ ಅತಿ ಮುಖ್ಯ ಪ್ರಯೋಜನವಾಗಿದೆ. ಕಪ್ಪು ಜೀರಿಗೆಯ ಸೇವನೆಯಿಂದ ದೇಹ ಗ್ಲುಕೋಸ್ ತಾಳುವ ಕ್ಷಮತೆಯನ್ನು ಹೆಚ್ಚಿಸುತ್ತದೆ ಹಾಗೂ ತನ್ಮೂಲಕ ಮಧುಮೇಹ ಆವರಿಸುವ ಸಾಧ್ಯತೆಯನ್ನು ದೂರಾಗಿಸುತ್ತದೆ.

ಮೂತ್ರಪಿಂಡಗಳನ್ನು ರಕ್ಷಿಸುತ್ತದೆ

ಮೂತ್ರಪಿಂಡಗಳನ್ನು ರಕ್ಷಿಸುತ್ತದೆ

ಇಂದು ಮೂತ್ರಪಿಂಡಗಳಲ್ಲಿ ಕಲ್ಲು ಒಂದು ಸಾಮಾನ್ಯವಾಗಿ ಕಂಡುಬರುತ್ತಿರುವ ಕಾಯಿಲೆಯಾಗಿದೆ. ನಿಮ್ಮ ನಿತ್ಯದ ಆಹಾರದಲ್ಲಿ ಕಪ್ಪು ಜೀರಿಗೆಯನ್ನು ಸೇರಿಸಿಕೊಳ್ಳುವ ಮೂಲಕ ಮೂತ್ರಪಿಂಡಗಳಲ್ಲಿ ಕಲ್ಲುಗಳು ಕರಗುವುದು ಮಾತ್ರವಲ್ಲ, ಇದರಿಂದ ಎದುರಾಗಿದ್ದ ಸೋಂಕು ಸಹಾ ಕಡಿಮೆಯಾಗುತ್ತದೆ.

ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ

ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ

ಅಧಿಕ ರಕ್ತದೊತ್ತಡವನ್ನು ಕಡಿಮೆಗೊಳಿಸಲು ಕಪ್ಪು ಜೀರಿಗೆ ಸಮರ್ಥವಾಗಿವೆ. ಅಧಿಕ ರಕ್ತದೊತ್ತಡವಿರುವ ವ್ಯಕ್ತಿಗಳು ನಿಯಮಿತವಾಗಿ ಕಪ್ಪು ಜೀರಿಗೆಯನ್ನು ಸೇವಿಸಿದಾಗ ಅಧಿಕ ರಕ್ತದೊತ್ತಡ ಕಡಿಮೆಯಾಗಿರುವುದು ಕಂಡುಬಂದಿದೆ.

ಸಂಧಿವಾತ ಹಾಗೂ ಮೂಳೆಸಂದುಗಳ ನೋವನ್ನು ಕಡಿಮೆಗೊಳಿಸುತ್ತದೆ

ಸಂಧಿವಾತ ಹಾಗೂ ಮೂಳೆಸಂದುಗಳ ನೋವನ್ನು ಕಡಿಮೆಗೊಳಿಸುತ್ತದೆ

ಕಪ್ಪು ಜೀರಿಗೆಯನ್ನು ನಿಯಮಿತವಾಗಿ ಸೇವಿಸುವ ಮೂಲಕ ಸಂಧಿವಾತ ಹಾಗೂ Rheumatoid Arthritis ಎಂಬ ಮೂಳೆಸಂದುಗಳ ನೋವಿನ ತೊಂದರೆ ಇರುವ ವ್ಯಕ್ತಿಗಳ ನೋವು ಕಡಿಮೆಯಾಗಿರುವುದು ಕಡಿಮೆಯಾಗಿದೆ.

ಅಧಿಕ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸುತ್ತದೆ

ಅಧಿಕ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸುತ್ತದೆ

ಕಪ್ಪು ಜೀರಿಗೆಯ ನಿಯಮಿತ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗಿರುವುದು ಕಂಡುಬಂದಿದೆ. ಇದರಲ್ಲಿ ಆರೋಗ್ಯಕರ ಕೊಬ್ಬಿನ ಆಮ್ಲಗಳಿದ್ದು ದೇಹದಲ್ಲಿ ಒಟ್ಟೆಯ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಮಟ್ಟಗಳು ಸಂತುಲಿತ ಪ್ರಮಾಣದಲ್ಲಿರಲು ನೆರವಾಗುತ್ತದೆ.

ಚರ್ಮ ಮತ್ತು ಕೂದಲನ್ನು ಉತ್ತಮಗೊಳಿಸುತ್ತದೆ

ಚರ್ಮ ಮತ್ತು ಕೂದಲನ್ನು ಉತ್ತಮಗೊಳಿಸುತ್ತದೆ

ಕಪ್ಪು ಜೀರಿಗೆಯಲ್ಲಿ ಕೂದಲು ಹಾಗೂ ಚರ್ಮವನ್ನು ಸೌಮ್ಯಗೊಳಿಸುವ ಗುಣವಿದ್ದು ಕೂದಲ ಬೆಳವಣಿಗೆಯನ್ನು ಸಹಾ ಹೆಚ್ಚಿಸುತ್ತದೆ. ವಿಶೇಷವಾಗಿ ಮುಖದ ಚರ್ಮದ ಬುಡದಲ್ಲಿ ಆರ್ದ್ರತೆಯನ್ನು ಹೆಚ್ಚಿಸುವ ಮೂಲಕ ಚರ್ಮದಲ್ಲಿದ್ದ ಕಲೆಗಳನ್ನು ನಿವಾರಿಸಲೂ ನೆರವಾಗುತ್ತದೆ.

ಹಲ್ಲು ನೋವಿಗೆ

ಹಲ್ಲು ನೋವಿಗೆ

ಇದರ ಉರಿಯೂತ ನಿವಾರಕ ಹಾಗೂ ಬ್ಯಾಕ್ಟೀರಿಯಾ ನಿವಾರಕ ಗುಣಗಳು ಹಲ್ಲುನೋವನ್ನು ಗುಣಪಡಿಸುವ ಕ್ಷಮತೆ ಹೊಂದಿವೆ. ಒಂದು ವೇಳೆ ಹಲ್ಲುನೋವಿದ್ದರೆ ಈ ಎಣ್ಣೆಯಿಂದ ನೋವಿರುವ ಭಾಗವನ್ನು ಬೆರಳಿನಿಂದ ನಯವಾಗಿ ಉಜ್ಜಿಕೊಳ್ಳುವ ಮೂಲಕ ಒಸಡುಗಳಲ್ಲಾಗಿದ್ದ ಸೋಂಕನ್ನು ನಿವಾರಿಸಿ ಹಲ್ಲುನೋವನ್ನು ಹೋಗಲಾಡಿಸಬಹುದು.

ಅಧಿಕ ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ

ಅಧಿಕ ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ

ಸಾಮಾನ್ಯ ಮಟ್ಟಕ್ಕಿಂತ ಕೊಂಚವೇ ಹೆಚ್ಚಿನ ಸಂಕೋಚನ ಹಾಗೂ ವ್ಯಾಕೋಚನದ ಒತ್ತಡವಿದ್ದರೆ ಈ ಜೀರಿಗೆಯ ಸೇವನೆಯಿಂದ ಸಾಮಾನ್ಯ ಸ್ಥಿತಿಗೆ ಬರಲು ಸಾಧ್ಯ ಎಂದು ಕೆಲವು ಸಂಶೋಧನೆಗಳು ಧೃಢಗೊಳಿಸಿವೆ.

ಹೆಪಟೈಟಿಸ್ ರೋಗವನ್ನು ಗುಣಪಡಿಸಲು

ಹೆಪಟೈಟಿಸ್ ರೋಗವನ್ನು ಗುಣಪಡಿಸಲು

ಕರಿಜೀರಿಗೆಯ ತೈಲದ ಪರಿಣಾಮ ಯಕೃತ್‌ನ ತೊಂದರೆಗಳನ್ನು ನಿವಾರಿಸುವಲ್ಲಿ ಅತ್ಯಂತ ಉತ್ತಮವಾಗಿದೆ. ಈ ಮೂಲಕ ಯಕೃತ್‌ಗೆ ಉಂಟಾಗಿರುವ ಘಾಸಿಯನ್ನು ಸರಿಪಡಿಸಲು ಹಾಗೂ ಯಕೃತ್‌ಗೆ ಸಂಬಂಧಿಸಿದ ಕಾಯಿಲೆಗಳನ್ನು ಗುಣಪಡಿಸಲೂ ಸಾಧ್ಯ. ವಿಶೇಷವಾಗಿ ಈ ಮೂಲಕ ಎದುರಾಗುವ ಹೆಪಟೈಟಿಸ್ -ಸಿ ಕಾಯಿಲೆಯ ವಿರುದ್ಧ ಹೋರಾಡಲು ಸಾಧ್ಯವಾಗುತ್ತದೆ. ಇದೇ ಕಾರಣಕ್ಕೆ ಹಲವು ಲಿವರ್ ಟಾನಿಕ್ ಗಳಲ್ಲಿ ಈ ಎಣ್ಣೆಯನ್ನು ಪ್ರಮುಖವಾಗಿ ಬಳಸಲಾಗುತ್ತದೆ.

ಕಿವಿನೋವನ್ನು ಶಮನಗೊಳಿಸಲು

ಕಿವಿನೋವನ್ನು ಶಮನಗೊಳಿಸಲು

ಈ ಬೀಜಗಳಲ್ಲಿರುವ ಬ್ಯಾಕ್ಟೀರಿಯಾ ಮತ್ತು ವೈರಸ್ ನಿರೋಧಕ ಗುಣಗಳು ಹಲವು ಸೋಂಕುಗಳಿಂದ ರಕ್ಷಣೆ ನೀಡುತ್ತದೆ. ಇದರ ಉರಿಯೂತ ನಿವಾರಕ ಗುಣದ ಕಾರಣ ಕಿವಿಯಲ್ಲಿ ಸೋಂಕಿನಿಂದ ನೋವು ಉಂಟಾಗಿದ್ದರೆ ಈ ಎಣ್ಣೆಯನ್ನು ಕೆಲವು ತೊಟ್ಟು ಬಿಟ್ಟುಕೊಳ್ಳುವ ಮೂಲಕ ಕಡಿಮೆ ಮಾಡಬಹುದು.

ಮಧುಮೇಹವನ್ನು ಕಡಿಮೆಗೊಳಿಸುತ್ತದೆ

ಮಧುಮೇಹವನ್ನು ಕಡಿಮೆಗೊಳಿಸುತ್ತದೆ

ಈ ಜೀರಿಗೆಯ ಸೇವನೆಯಿಂದ ಟೈಪ್-1 ಹಾಗೂ ಟೈಪ್-2 ಮಧುಮೇಹದಿಂದ ಬಳಲುತ್ತಿರುವ ರೋಗಿಗಳಿಗೆ ಪ್ರಯೋಜನವಾಗುತ್ತದೆ ಎಂದು ಭಾವಿಸಲಾಗಿದೆ. Indian Council of Medical Research ಸಂಸ್ಥೆಯಲ್ಲಿ ನಡೆಸಿದ ಸಂಶೋಧನೆಯಲ್ಲಿ ಕಂಡುಕೊಂಡಂತೆ "ಮೇದೋಜೀರಕದಲ್ಲಿ ಉತ್ಪತ್ತಿಯಾಗುವ ಬೀಟಾ ಜೀವಕೋಶಗಳ ಸಂಖ್ಯೆಯಲ್ಲಿ ಇಳಿಕೆ, ದೇಹದಲ್ಲಿ ಉತ್ಪತ್ತಿಯಾಗುವ ಇನ್ಸುಲಿನ್ ಪ್ರಮಾಣ ಕಡಿಮೆಯಾಗಿದ್ದುದನ್ನು ಹೆಚ್ಚಿಸುವ ಹಾಗೂ ಮೇಲೇರಿರುವ ಗ್ಲುಕೋಸ್ ರಕ್ತಸಾರ (serum)ವನ್ನು ಕಡಿಮೆಗೊಳಿಸುವ ಮೂಲಕ ಮಧುಮೇಹವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ" ಎಂದು ವಿವರಿಸಲಾಗಿದೆ.

English summary

10 Health Benefits Of Black Cumin Seeds

Nigella seeds, most commonly called black cumin seeds, are an important ingredient in any type of cooking. It is an interesting spice that brings out a beautiful aroma to the dishes. It is used for flavouring vegetable curry, dal and other savoury dishes. Apart from the aroma and flavour, black cumin seeds come with a whole lot of health benefits. These seeds are loaded with vitamins, proteins, crude fibre, iron, sodium, potassium, and calcium.
X
Desktop Bottom Promotion