Latest Updates
-
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು!
ಊಟಕ್ಕೆ ಮೊದಲು ಖಾರ, ಆಮೇಲೆ ಸಿಹಿ! ಯಾಕೆ ಹೀಗೆ?
ಪ್ರಾರಂಭದಲ್ಲಿ ಖಾರವನ್ನೂ ಅಂತಿಮವಾಗಿ ಸಿಹಿಯನ್ನೂ ತಿನ್ನುವುದು ನಮ್ಮ ಹಿರಿಯರು ನಡೆಸಿಕೊಂಡು ಬಂದ ಪರಂಪರೆಯಾಗಿರುವುದು ತಿಳಿಯುತ್ತದೆ.ಹಿರಿಯರೇನೋ ಹೇಳಿದರು ಸರಿ, ಆದರೆ ಇದಕ್ಕೆ ಕಾರಣವೇನು?
ಶುಭಕಾರ್ಯಕ್ಕಾಗಿ ಆಗಮಿಸಿದ ಅತಿಥಿಗಳಿಗೆ ಒಳ್ಳೆಯ ಊಟ ಹಾಕಿಸುವುದು ನಮ್ಮ ಪರಂಪರೆಯ ಒಂದು ಅಂಗವಾಗಿದೆ. ಮದುವೆ, ಹಬ್ಬ, ಹರಿದಿನ ಮೊದಲಾದ ಸಂದರ್ಭಗಳಲ್ಲಿ ಅತಿಥಿಗಳು ಹೊಟ್ಟೆ ತುಂಬಾ ಊಟ ಮಾಡಿದರೆ ಮಾತ್ರ ಸತ್ಕಾರ ಪೂರ್ಣವಾದಂತೆ. ಒಳ್ಳೆಯ ಊಟ ಎಂದರೆ ಹೇಗಿರಬೇಕು?

ಅನ್ನ, ಸಾಂಬಾರ್, ಚಪಾತಿ, ಹಲವು ತರಕಾರಿಗಳ ಪಲ್ಯಗಳು, ಉಪ್ಪಿನಕಾಯಿ, ಮೊಸರು, ಮಜ್ಜಿಗೆಯಿಂದ ಪೂರ್ಣವಾದ ಬಳಿಕ ಕೊಂಚ ಸಿಹಿ ತಿಂದು ಊಟವನ್ನು ಸಂಪನ್ನಗೊಳಿಸುವುದು ಒಳ್ಳೆಯ ಊಟ ಎನ್ನಿಸಿಕೊಳ್ಳುತ್ತದೆ. ಕೊಂಚ ಗಮನಿಸಿದರೆ ಪ್ರಾರಂಭದಲ್ಲಿ ಖಾರವನ್ನೂ ಅಂತಿಮವಾಗಿ ಸಿಹಿಯನ್ನೂ ತಿನ್ನುವುದು ನಮ್ಮ ಹಿರಿಯರು ನಡೆಸಿಕೊಂಡು ಬಂದ ಪರಂಪರೆಯಾಗಿರುವುದು ತಿಳಿಯುತ್ತದೆ.
ಹಿರಿಯರೇನೋ ಹೇಳಿದರು ಸರಿ, ಆದರೆ ಇದಕ್ಕೆ ಕಾರಣ ಕೇಳದೇ ಅವರನ್ನೇ ಅನುಸರಿಸುವುದು ಹೇಗೆ. ಕೊಂಚ ಬದಲಾವಣೆಗಾಗಿ ಮೊದಲೇ ಸಿಹಿಯನ್ನು ತಿಂದು ಬಳಿಕ ಖಾರವಾದ ಪದಾರ್ಥಗಳನ್ನು ತಿಂದರೆ ಹೇಗೆ?
ಈ ಪ್ರಯೋಗ ಮಾಡುವ ಬದಲು ಹಿರಿಯರು ಅನುಸರಿಸಿಕೊಂಡು ಬರುತ್ತಿರುವ ಈ ವಿಧಾನದ ಬಗ್ಗೆ ವಿಜ್ಞಾನ ಏನು ಹೇಳುತ್ತದೆ ಎಂದು ತಿಳಿಯುವುದು ಉತ್ತಮ.ಈ ಪ್ರಶ್ನೆಯನ್ನು ಆಯುರ್ವೇದ ತಜ್ಞರಲ್ಲಿ ಕೇಳಿದಾಗ ಅವರು ತಮ್ಮ ಅಪಾರ ಅನುಭವದ ಮೂಲಕ ತಿಳಿಸಿದ ವಿಷಯದ ಸಾರವನ್ನು ಈ ಲೇಖನದಲ್ಲಿ ನೀಡಲಾಗಿದೆ, ಮುಂದೆ ಓದಿ... ಊಟದ ನಂತರ ಸ್ನಾನ, ತೊಂದರೆಗೆ ಆಹ್ವಾನ!
ನಮ್ಮ ಜಠರದಲ್ಲಿ ಆಹಾರ ಧಾವಿಸಲು ಆರಂಭವಾದ ತಕ್ಷಣದಿಂದ ಇದನ್ನು ಅರಗಿಸಿಕೊಳ್ಳಲು ಕೆಲವಾರು ಜೀರ್ಣರಸಗಳು ಜಠರದಲ್ಲಿ ಸ್ರವಿಸುತ್ತವೆ. ಇವು ಆಹಾರವನ್ನು ಒಡೆಯಲು ಅಥವಾ ಜೀರ್ಣಿಸಲು ಪ್ರಾರಂಭಿಸುತ್ತವೆ. ಈ ಜೀರ್ಣರಸಗಳನ್ನು ಹೆಚ್ಚು ಸ್ರವಿಸುವಂತೆ ಮಾಡಲು ಸಿಹಿ ಪದಾರ್ಥಗಳಿಗಿಂತ ಖಾರವಾದ ಪದಾರ್ಥಗಳೇ ಉತ್ತಮ.
ಏಕೆಂದರೆ ಈ ಖಾರ ಜಠರದ ಒಳಗೋಡೆಗಳಲ್ಲಿ ಪ್ರಚೋದನೆ ಉಂಟುಮಾಡಿ ಜಠರರಸಗಳು ಹೆಚ್ಚು ಸ್ರವಿಸಲು ಕಾರಣವಾಗುತ್ತದೆ. ಬದಲಿಗೆ ಪ್ರಾರಂಭದಲ್ಲಿಯೇ ಸಿಹಿ ತಿಂದರೆ ಇದರಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಸಕ್ಕರೆ ಮತ್ತು ಕಾರ್ಬೋಹೈಡ್ರೇಟುಗಳು ಜೀರ್ಣರಸಗಳನ್ನು ಪ್ರಚೋದಿಸುವುದಿಲ್ಲ ಬದಲಿಗೆ ಜೀರ್ಣಶಕ್ತಿಗೇ ಹೆಚ್ಚಿನ ಭಾರವಾಗಿಬಿಡುತ್ತವೆ. ಜೀರ್ಣಕ್ರಿಯೆ ಸರಿಯಾಗಿ ನಡೆಯಲು ಟಾಪ್ 20 ಟಿಪ್ಸ್
ಸಿಹಿ ತಿಂದರೆ ಆಹಾರದಲ್ಲಿನ ಟ್ರಿಪ್ಟೋಫ್ಯಾನ್ ಎಂಬ ಅಮೈನೋ ಆಮ್ಲವನ್ನು ಹೆಚ್ಚು ಹೀರಿಕೊಳ್ಳಲು ನೆರವಾಗುತ್ತದೆ. ರಕ್ತದಲ್ಲಿ ಟ್ರಿಪ್ಟೋಫ್ಯಾನ್ ಮಟ್ಟ ಹೆಚ್ಚುತ್ತಿದ್ದಂತೆಯೇ ರಕ್ತದಲ್ಲಿ ಸೆರೋಟೋನಿನ್ ಎಂಬ ರಾಸಾಯನಿಕದ ಪ್ರಮಾಣವೂ ಹೆಚ್ಚುತ್ತದೆ. ಈ ಸೆರೋಟೋನಿನ್ ಒಂದು ನ್ಯೂರೋ ಟ್ರಾನ್ಸ್ಮಿಟರ್ ಅಥವಾ ನರಗಳ ಮೂಲಕ ಸೂಚನೆಗಳನ್ನು ಕಳುಹಿಸುವ ಮಾಧ್ಯಮವಾಗಿದ್ದು ಮೆದುಳಿನಲ್ಲಿ ಒಳ್ಳೆಯ ಅಥವಾ ಸುಖಕರ ಭಾವನೆಯನ್ನು ಮೂಡಿಸಲು ನೆರವಾಗುತ್ತದೆ.
ಆದ್ದರಿಂದ ತೃಪ್ತಿ ಭಾವನೆ ಪಡೆಯಲು ಊಟದ ಬಳಿಕ ಕಡೆಯದಾಗಿ ಕೊಂಚ ಸಿಹಿ ತಿನ್ನುವ ಮೂಲಕ ಊಟದ ಪೂರ್ಣತೃಪ್ತಿ ಪಡೆಯಲು ಸಾಧ್ಯವಾಗುತ್ತದೆ. ಇದನ್ನು ಕಂಡುಕೊಂಡ ನಮ್ಮ ಹಿರಿಯರು ಊಟದ ಬಳಿಕ ಕೊಂಚ ಸಿಹಿಯನ್ನು ತಿನ್ನುವುದನ್ನು ಅನುಸರಿಸಿಕೊಂಡು ಬಂದಿದ್ದಾರೆ. ರಾತ್ರಿ ಊಟ ಮಾಡಿದ ತಕ್ಷಣ ಮಾಡಬಾರದ 10 ಕಾರ್ಯಗಳು!
ಆದರೆ ಹಿಂದಿನ ದಿನಗಳಲ್ಲಿ ಸಿಹಿಯನ್ನು ಬೆಲ್ಲದಿಂದ ಮಾಡಲಾಗುತ್ತಿತ್ತು. ಇಂದು ಬಿಳಿಯ ಸಕ್ಕರೆಯಿಂದ ಮಾಡಲಾಗುತ್ತಿದ್ದು ಇದು ಅನಾರೋಗ್ಯಕರ ಎಂದು ಕಂಡುಕೊಳ್ಳಲಾಗಿದೆ. ಏಕೆಂದರೆ ಬಿಳಿ ಸಕ್ಕರೆಯಲ್ಲಿ ಸಿಹಿಯಾದ ಶರ್ಕರದ ಅಂಶ ತುಂಬಾ ಹೆಚ್ಚಾಗಿದ್ದು ಇದನ್ನು ಕರಗಿಸಲು ನಮ್ಮ ಜೀರ್ಣಾಂಗಗಳು ಹೆಚ್ಚು ಕಷ್ಟಪಡಬೇಕಾಗುತ್ತದೆ.
ಒಂದು ವೇಳೆ ಸಕ್ಕರೆಯ ಸೇವನೆ ವಿಪರೀತವಾಗಿದ್ದರೆ ಈ ಸಕ್ಕರೆ ಸ್ಥೂಲಕಾಯ ಹೆಚ್ಚಿಸಲು ಕಾರಣವಾಗುತ್ತದೆ. ಪರೋಕ್ಷವಾಗಿ ಸ್ಥೂಲಕಾಯ ಹಲವು ಇತರ ತೊಂದರೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಬಿಳಿ ಸಕ್ಕರೆಯ ಬದಲು ಸಾವಯವ ವಿಧಾನದಿಂದ ತಯಾರಿಸಿದ ಬೆಲ್ಲವೇ ಆರೋಗ್ಯಕ್ಕೆ ಉತ್ತಮವಾಗಿದೆ. ಅಪ್ಪಿತಪ್ಪಿಯೂ ಭರ್ಜರಿ ಊಟದ ಬಳಿಕ ಹಣ್ಣುಗಳನ್ನು ಸೇವಿಸಬೇಡಿ!
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications




