Latest Updates
-
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು? -
ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಕದನ: ನಾಳೆ ದುಬೈನಲ್ಲಿ ಗೆಲ್ಲೋರು ಯಾರು? -
ಜನ್ಮಾಷ್ಟಮಿ ಉಪವಾಸ: ಸುಸ್ತಾಗದೆ, ಆರೋಗ್ಯಕರವಾಗಿ ವ್ರತ ಆಚರಿಸಲು ಇಲ್ಲಿವೆ ಸರಳ ಟಿಪ್ಸ್!
ಬಗೆ ಬಗೆಯ ಬೇಳೆಕಾಳುಗಳು, ಇದುವೇ ಆರೋಗ್ಯದ ಬೇರು
ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ ಎಂದು ತಿಳಿದ ನಮ್ಮ ಹಿರಿಯರು ಹೇಳಿದ್ದು "ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ" ಎಂಬ ಗಾದೆ ಮಾತು. ನಿಜವೇ ನೋಡಿ, ಊಟ ಎನ್ನುವುದು ನಮ್ಮ ಆರೋಗ್ಯ ಪಾಲನೆಯಲ್ಲಿ ಬಹು ಮುಖ್ಯವಾದ ಪಾತ್ರ ವಹಿಸುತ್ತದೆ. ಇದನ್ನು ಅರಿತ ನಮ್ಮ ಭಾರತೀಯರು ಊಟಕ್ಕೆ ಬಹಳಷ್ಟು ಪ್ರಾಮುಖ್ಯತೆ ನೀಡಿದರು.
ನಮ್ಮ ಸಾಂಪ್ರದಾಯಿಕ ಅಡಿಗೆ ನಮ್ಮ ಆರೋಗ್ಯಕ್ಕೆ ಒಂದು ದೊಡ್ಡ ಬಲ. ನಾವು ನಮ್ಮ ಭಾರತೀಯ ಶೈಲಿಯ ಅಡಿಗೆಗೆ ಬಳಸುವ ಎಲ್ಲ ಪದಾರ್ಥಗಳು ಔಷಧೀಯ ಗುಣಗಳನ್ನು ಹೊಂದಿ ಹೊಟ್ಟೆಗೆ ಹಾಗೂ ನಮ್ಮ ದೇಹಕ್ಕೆ ಹಿತವಾದುವು. ನಾವು ನಮ್ಮ ಅಡಿಗೆಯಲ್ಲಿ ಬಹು ಮುಖ್ಯವಾಗಿ ಹಾಗೂ ಸಾಮಾನ್ಯವಾಗಿ ಬಳಸುವ ಬೇಳೆಕಾಳುಗಳ ಬಗ್ಗೆ ಈ ದಿನ ನಾವು ತಿಳಿದುಕೊಳ್ಳೋಣ....

ತೊಗರಿ ಬೇಳೆ - Toor Dal
ತೊಗರಿ ಬೇಳೆಯು ನಾವು ದಿನನಿತ್ಯ ಬಳಸುವ ಮುಖ್ಯವಾದ ಪದಾರ್ಥ. ನಾವು ವಿಧ ವಿಧವಾದ ತರಕಾರಿಗಳನ್ನು ಹಾಕಿ ಮಾಡುವ ಸಾಂಬಾರ್ / ಬೇಳೆಸಾರು ನಮ್ಮ ದೇಹಕ್ಕೆ ಬಹು ಮುಖ್ಯವಾದ "ಪ್ರೊಟೀನ್ಸ್" ಅನ್ನು ನೀಡುತ್ತದೆ. ತೊಗರಿ ಬೇಳೆಯಲ್ಲಿ ಇರುವ "ಫಾಲಿಕ್ ಆಸಿಡ್ " ಎನ್ನುವ ಒಂದು ಪೋಷಕಾಂಶವು ಗರ್ಭಿಣಿಯರಿಗೆ ಬಹಳ ಮುಖ್ಯ. ಇದರಿಂದ ಮಗುವಿನ ಬೌದ್ಧಿಕ ಬೆಳವಣಿಗೆ ಚೆನ್ನಾಗಿರುತ್ತದೆ. ಮಕ್ಕಳ ಆರೋಗ್ಯಕ್ಕಾಗಿ ತೊಗರಿಬೇಳೆ ಸೂಪ್

ಉದ್ದಿನ ಬೇಳೆ - Urad Dal / Black Gram
ಉದ್ದಿನ ಬೇಳೆ ಎನ್ನುವುದು ದೋಸೆ ಹಾಗೂ ಇಡ್ಲಿ ಪ್ರಿಯರಿಗೆ ಇಷ್ಟವಾದ ಬೇಳೆ. ಹಾಗೆಯೇ ಉದ್ದಿನ ವಡೆಯನ್ನು ಮರೆಯುವಂತೆ ಇಲ್ಲ. ಉದ್ದಿನ ಬೇಳೆಯು ಕಪ್ಪಗೆ ಗುಂಡಗೆ ಹಾಗೂ ಅರ್ಧಕ್ಕೆ ಸೀಳಿಯೂ ಮಾರುತ್ತಾರೆ. ಇದು ಜೀರ್ಣಿಸಿಕೊಳಲ್ಲು ಅಷ್ಟು ಸುಲಭವಲ್ಲದೆ ಇದ್ದರೂ, ಹೊಟ್ಟೆಯ ಮೇಲೆ ಹೆಚ್ಚೇನೂ ಒತ್ತಡ ಹಾಕುವುದಿಲ್ಲ. ಉದ್ದಿನ ಬೇಳೆಯು "ವಿಟಮಿನ್ಸ್", "ಮಿನರಲ್ಸ್" ಹಾಗೂ "ಪೊಟಾಸಿಯುಂ" ನ ಬಹು ದೊಡ್ಡ ಆಗರವಾಗಿದೆ. ಇದು ದೇಹದ ಶಕ್ತಿವರ್ಧಕವಾಗಿ, ಹೃದಯದ ಆರೋಗ್ಯಕ್ಕೆ ಪೂರಕವಾಗಿ, ಮಾಂಸಖಂಡ ಬೆಳವಣಿಗೆಗೆ ಹಾಗೂ ಪುರುಷರ ಲೈಂಗಿಕ ಆರೋಗ್ಯಕ್ಕೆ ಬಹಳ ಸಹಕಾರಿ. ಉದ್ದಿನ ಬೇಳೆಯಲ್ಲಿರುವ ಅದ್ಭುತ ಗುಣಗಳು!

ಮಧುಮೇಹ ನಿಯಂತ್ರಿಸುವ ಕಡಲೇ ಬೇಳೆ
ಕಡಲೆ ಬೇಳೆಯು ಉತ್ತಮ ನಾರಿನಂಶ ಹೊಂದಿದ್ದು "ಪ್ರೋಟಿನ್ಸ್" ಹಾಗೂ "ವಿಟಮಿನ್ ಬಿ", "ಮಂಗನೀಸ್", "ಪೊಟಸ್ಸಿಯುಂ", "ಪಾಸ್ಪರಸ್", "ಜ಼ಿಂಕ್ ", "ಕಾಲ್ಸಿಯುಂ" ಹಾಗೂ ಇತರ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಇದು ಹುರಿದು ಪುಡಿ ಮಾಡಿದಾಗ ಬಹಳ ಸುವಾಸನೆಯುಕ್ತವಾಗಿ ಎಷ್ಟೋ ಸಿಹಿ ತಿಂಡಿಗಳ ಬಳಕೆಯಲ್ಲಿ ಹಾಗೂ ಇತರ ಅನೇಕ ಪದಾರ್ಥಗಳಲ್ಲಿ ಬಳಸಲ್ಪಡುತ್ತದೆ. ಇದರ ಬಳಕೆ ಇಂದ ನಾವು ಮಧುಮೇಹವನ್ನು ನಿಯಂತ್ರಣದಲ್ಲಿ ಇಡಬಹುದು.ಮಳೆಯಲಿ ಜೊತೆಯಲಿ : ಕಡಲೆ ಬೇಳೆ ಅಂಬೊಡೆ

ಹೆಸರು ಕಾಳು / ಹೆಸರು ಬೇಳೆ
ಹೆಸರು ಕಾಳು ಹಸಿರು ಬಣ್ಣದಲ್ಲಿ ಗುಂಡಗೆ ಇದ್ದು, ಇದನ್ನು ಒಡೆದು ಸಿಪ್ಪೆ ತೆಗೆದಾಗ ಹೊಳೆಯುವ ಹಳದಿ ಮಿಶ್ರಿತ ಬಂಗಾರದ ಬಣ್ಣದ ಬೆಳೆಯಾಗುತ್ತದೆ. ಹೆಸರು ಕಾಳಿನಲ್ಲಿ ಕೊಬ್ಬು ಹಾಗೂ ಕ್ಯಾಲೋರಿಗಳು ಕಮ್ಮಿ ಇದ್ದು, ಆರೋಗ್ಯಕ್ಕೆ ಉತ್ತಮವಾದ ಪ್ರೋಟೀನ್ ಹಾಗೂ ನಾರಿನಂಶ ಹೆಚ್ಚಿದೆ.

ಹೆಸರು ಕಾಳು / ಹೆಸರು ಬೇಳೆ
ಇದರಲ್ಲಿ ವಿವಿಧ ರೀತಿಯ ವಿಟಮಿನ್, ಮಿನರಲ್ ಗಳು ಇದ್ದಾವೆ. ಇದು ದೇಹಕ್ಕೆ ಹಾಗೂ ಹೊಟ್ಟೆಗೆ ಬಹಳ ತಂಪಾಗಿದ್ದು, ಸುಲಭವಾಗಿ ಜೀರ್ಣವಾಗುತ್ತದೆ. ಇದರಲ್ಲಿ ಒಳ್ಳೆಯ "ಆಂಟಿ ಆಕ್ಸಿಡೆಂಟ್" ಇದ್ದು ಇದು ಚರ್ಮಕ್ಕೆ ಹೊಳಪು ಹಾಗೂ ಆರೋಗ್ಯ ನೀಡುತ್ತದೆ. ಹೆಸರುಕಾಳಿನಿಂದ ಹೆಚ್ಚಾಗುತ್ತೆ ಕೂದಲು ಮತ್ತು ಚರ್ಮದ ಆರೋಗ್ಯ

ಹುರಳಿ ಕಾಳು - Horse Gram
ಹುರಳಿ ಕಾಳು ದೇಹಕ್ಕೆ ಉಷ್ಣವಾಗಿದ್ದು ಇದನ್ನು ಶೀತ, ಕೆಮ್ಮು, ನೆಗಡಿ ಹಾಗೂ ಇತರ ಸಣ್ಣ ಪುಟ್ಟ ಕಾಯಿಲೆಗಳನ್ನು ಹಿಡಿತದಲ್ಲಿ ಇಡಲು ಬಳಸುತ್ತಾರೆ. ಆಯುರ್ವೇದ ಚಿಕಿತ್ಸೆಯಲ್ಲಿ ಮೂತ್ರಕೋಶದ ಕಲ್ಲಿನ ಸಮಸ್ಯೆ ನಿವಾರಣೆಗೆ ಹುರಳಿ ಒಳ್ಳೆಯದು ಎಂದು ಕೂಡ ಉಲ್ಲೇಖಿಸಿದೆ ಎಂದು ಒಂದು ವಾದ. ಹುರಳಿಯು ಬಹಳ ಶಕ್ತಿವರ್ಧಕ ಎಂದು ಕುದುರೆಗಳಿಗೂ ಆಹಾರವಾಗಿ ನೀಡಲಾಗುತ್ತದೆ. ಇದು ದೇಹದ ತೂಕ ಹಿಡಿತದಲ್ಲಿ ಇಟ್ಟು ದೇಹಕ್ಕೆ ಶಕ್ತಿ ಹಾಗೂ ಆರೋಗ್ಯ ನೀಡುತ್ತದೆ. ಹುರಳಿಯು ಹೊಟ್ಟೆಯಲ್ಲಿನ ಕ್ರಿಮಿ ಹಾಗೂ ಹುಳುವಿನ ನಿವಾರಣೆಗೆ ಒಳ್ಳೆಯದು.



Click it and Unblock the Notifications