Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಳೆಯಲಿ ಜೊತೆಯಲಿ : ಕಡಲೆ ಬೇಳೆ ಅಂಬೊಡೆ

ಬೇಕಾಗುವ ಸಾಮಗ್ರಿಗಳು:
* ಕಡಲೆಬೇಳೆ ಒಂದು ಕಪ್
* ಹಸಿಮೆಣಸಿನಕಾಯಿ 5-6
* ಒಂದು ಚಕ್ಕೆ ಮತ್ತು ಒಂದು ಲವಂಗ
* ಒಂದು ಇಂಚು ದೊಡ್ಡದಿರುವ ಶುಂಠಿ
* ಸ್ವಲ್ಪ ಕೊತ್ತಂಬರಿ ಸೊಪ್ಪು
* ಸಣ್ಣಗೆ ಹೆಚ್ಚಿದ ಈರುಳ್ಳಿ 2
* ಹೆಚ್ಚಿದ ಸಬ್ಬಸ್ಸಿಗೆ ಸೊಪ್ಪು
* ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
1. ಕಡಲೆ ಬೇಳೆಯನ್ನು 3-4 ಗಂಟೆ ನೆನೆ ಹಾಕಬೇಕು.
2. ನಂತರ ಅದರ ನೀರು ಸೋಸಿಕೊಂಡು ಅದಕ್ಕೆ ಹಸಿಮೆಣಸಿನಕಾಯಿ, ಚೆಕ್ಕೆ, ಲವಂಗ, ಶುಂಠಿ, ಉಪ್ಪು ಮತ್ತು ಕೊತ್ತಂಬರಿಸೊಪ್ಪು ಹಾಕಿ ಗಟ್ಟಿಯಾಗಿ ಮತ್ತು ತರಿತರಿಯಾಗಿ ರುಬ್ಬಿಕೊಳ್ಳಬೇಕು.
3. ಈ ರುಬ್ಬಿದ ಮಿಶ್ರಣಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಹೆಚ್ಚಿದ ಸಬ್ಬಸ್ಸಿಗೆ ಸೊಪ್ಪನ್ನು ಹಾಕಿ ಚೆನ್ನಾಗಿ ಬೆರೆಸಬೇಕು. ರುಬ್ಬಿದ ಮಿಶ್ರಣದ ಜೊತೆ ಈ ಮಿಶ್ರಣಗಳನ್ನು ಹಾಕಿ ಕಲೆಸುವಾಗ ನೀರು ಹಾಕಬಾರದು. ಸೊಪ್ಪಿನಲ್ಲಿ ನೀರಿನ ಅಂಶ ಇರುವುದರಿಂದ ಅದೇ ಸಾಕಾಗುತ್ತದೆ.
4. ಚೆನ್ನಾಗಿ ಕಲೆಸಿದ ಮೇಲೆ ಸಣ್ಣ ಸಣ್ಣ ಉಂಡೆ ಮಾಡಿಕೊಂಡು ಒಂದು ತಟ್ಟೆಯಲ್ಲಿ ಇಡಬೇಕು.
5. ಈಗ ಬಾಣಲೆಯಲ್ಲಿ ಅರ್ಧದಷ್ಟು ಎಣ್ಣೆ ಹಾಕಿ, ಎಣ್ಣೆಯನ್ನು ಕುದಿಸಬೇಕು.
6. ಈಗ ಉಂಡೆಯನ್ನು ಚಪ್ಪಟೆಯಾಗಿ, ದಪ್ಪವಾಗಿ ತಟ್ಟಿಕೊಂಡು ಕುದಿಯುತ್ತಿರುವ ಎಣ್ಣೆಯಲ್ಲಿ ಒಂದೊಂದಾಗಿ ಹಾಕಿ, ಬೇಯಿಸಿ. ಎಣ್ಣೆಗೆ ಹಾಕಿದ ತಕ್ಷಣ ಅಲ್ಲಾಡಿಸಬೇಡಿ. ವಡೆಯ ಬಣ್ಣ ಸ್ವಲ್ಪ ಬದಲಾದ ನಂತರ ತಿರುವಿ ಹಾಕಿ, ವಡೆ ಕಂದು ಬಣ್ಣ ಬರುವವರೆಗೂ ಬೇಯಿಸಿದರೆ ರುಚಿಕರವಾದ ಅಂಬೊಡೆ ರೆಡಿ.
ಇದನ್ನು ಬಿಸಿಬಿಸಿಯಾಗಿ ತಿನ್ನಬಹುದು, ತಣ್ಣಗೆ ಆದ ಮೇಲೂ ತಿನ್ನಬಹುದು. ಆದರೆ ಒಂದು ದಿನದ ಮೇಲೆ ಇಟ್ಟರೆ ವಡೆ ಹಾಳಾಗಬಹುದು. ಆದ್ದರಿಂದ ಎಷ್ಟು ಅಗತ್ಯವಿದೆಯೊ ಅಷ್ಟು ವಡೆ ಮಾತ್ರ ಮಾಡಿಕೊಳ್ಳಬೇಕು.



Click it and Unblock the Notifications
