For Quick Alerts
ALLOW NOTIFICATIONS  
For Daily Alerts

ಮುಟ್ಟಿನ ನೋವು, ಎಂಬ ಮಹಿಳೆಯರ ಕೊರಗು....

By hemanth
|

ಛೇ! ನಾನು ಹೆಣ್ಣಾಗಿ ಹುಟ್ಟಿದ್ದೆ ತಪ್ಪು. ಇಂತಹ ನೋವನ್ನು ಸಹಿಸಿಕೊಳ್ಳುವುದು ತುಂಬಾ ಕಷ್ಟ. ಈ ಯಾತನೆ ಯಾರಿಗೂ ಬರದಿರಲಿ. ಮುಂದಿನ ಜನ್ಮದಲ್ಲಿ ನನ್ನನ್ನು ಹೆಣ್ಣಾಗಿ ಹುಟ್ಟಿಸಬೇಡ ದೇವರೇ ಎಂದು ಕೈ ಮುಗಿಯುವುದು ಪ್ರತೀ ತಿಂಗಳ ಮುಟ್ಟಿನ ವೇಳೆ ಕೆಲವು ಹುಡುಗಿಯರು ನೋವನ್ನು ಅನುಭವಿಸುವಾಗ. ಇಂತಹ ನೋವು ಅನುಭವಿಸಿದವರಿಗೆ ಗೊತ್ತು. ಹೊಟ್ಟೆಯ ಕೆಳಭಾಗದಲ್ಲಿ ಕಾಣಿಸಿಕೊಳ್ಳುವಂತಹ ತಿಂಗಳ ಮುಟ್ಟಿನ ವೇಳೆಯ ನೋವು ಹುಡುಗಿಯರನ್ನು ದೈನಂದಿನ ಯಾವುದೇ ಕೆಲಸಗಳು ಮಾಡದಂತೆ ತಡೆಯುತ್ತದೆ. ಮುಟ್ಟಿನ ಹೊಟ್ಟೆ ನೋವಿನಿಂದ ಮುಕ್ತಿ ಹೇಗೆ?

Try This Home Remedy To Reduce Menstrual Cramps In A Day!

ಮುಟ್ಟಿನ ವೇಳೆ ಹುಡುಗಿಯರು ನೋವು ಗರ್ಭಕೋಶದಲ್ಲಿನ ಸ್ನಾಯುಗಳ ಸೆಳೆದಿಂದಾಗಿ ಉಂಟಾಗುತ್ತದೆ. ಈ ಸ್ನಾಯುಗಳು ಹತ್ತಿರದ ರಕ್ತನಾಳಗಳಿಗೆ ಆಮ್ಲಜನಕ ಪೂರೈಕೆಯನ್ನು ನಿಲ್ಲಿಸುವುದರಿಂದ ನೋವು ಕಾಣಿಸಿಕೊಳ್ಳುವುದು. ಸ್ನಾಯು ಸೆಳೆತದ ಅವಧಿ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಆದರೆ ನೋವಿನ ಪ್ರಮಾಣ ಮಾತ್ರ ಅದೇ ಆಗಿರುತ್ತದೆ. ಸಹಿಸಲು ಅಸಾಧ್ಯವಾಗಿರುವ ನೋವನ್ನು ಕಡಿಮೆ ಮಾಡಿಕೊಳ್ಳಲು ನೋವು ನಿವಾರಕ ಔಷಧಿಗಳನ್ನು ತೆಗೆದುಕೊಳ್ಳಬಹುದು. ಆದರೆ ಇದರಿಂದ ಅಡ್ಡಪರಿಣಾಮಗಳು ಜಾಸ್ತಿ. ಇದಕ್ಕಾಗಿ ಮನೆಮದ್ದನ್ನು ಉಪಯೋಗಿಸಿಕೊಂಡು ನೋವನ್ನು ನಿವಾರಿಸಬಹುದು. ನೋವನ್ನು ನಿವಾರಿಸಲು ಯಾವ ಮದ್ದನ್ನು ಬಳಸಿಕೊಳ್ಳಬೇಕು ಎಂದು ತಿಳಿದುಕೊಳ್ಳಿ.

ಮನೆಮದ್ದು ಮಾಡಲು ಬೇಕಾಗುವ ಸಾಮಗ್ರಿಗಳು
*ಜೀರಿಗೆ-2 ಚಮಚ
*ಜೇನು-1 ಚಮಚ
*ಅರಿಶಿನ-1 ಚಮಚ ಮುಟ್ಟಿನ ನೋವು ನಿವಾರಣೆಗೆ 13 ಮನೆಮದ್ದು

*ಜೀರಿಗೆಯಲ್ಲಿ ಸ್ನಾಯು ಸೆಳೆತವನ್ನು ನಿವಾರಿಸುವಂತಹ ಗುಣಗಳು ಅಪಾರವಾಗಿದೆ. ಇದನ್ನು ಪುರಾತನ ಕಾಲದಿಂದಲೂ ಸ್ನಾಯು ಸೆಳೆತದ ಔಷಧಿಗಳಲ್ಲಿ ಬಳಸಲಾಗುತ್ತಿತ್ತು. ಜೀರಿಗೆಯು ರಕ್ತನಾಳಗಳಿಗೆ ಸರಿಯಾಗಿ ರಕ್ತ ಹಾಗೂ ಆಮ್ಲಜನಕದ ಸಂಚಾರವಾಗುವಂತೆ ನೋಡಿಕೊಳ್ಳುತ್ತದೆ. ಇದರಿಂದ ಗರ್ಭಕೋಶದಲ್ಲಿನ ಸ್ನಾಯುಗಳ ಸೆಳೆತ ಕಡಿಮೆಯಾಗಿ ಮುಟ್ಟಿನ ವೇಳೆ ಉಂಟಾಗುವ ನೋವು ಕಡಿಮೆಯಾಗುವುದು.

*ಅರಿಶಿನ ಮತ್ತು ಜೇನುತುಪ್ಪದಲ್ಲಿ ಉರಿಯೂತ ಶಮನಕಾರಿ ಗುಣಗಳು ಇವೆ. ಈ ಗುಣಗಳಿಂದ ಈ ಎರಡು ಸಾಮಗ್ರಿಗಳು ಮುಟ್ಟಿನ ವೇಳೆ ಉಂಟಾಗುವ ನೋವನ್ನು ಕಡಿಮೆ ಮಾಡುವುದು. ಮುಟ್ಟಿನ ವೇಳೆ ಹೊಟ್ಟೆ ಉಬ್ಬರವಾಗುವುದನ್ನು ಜೀರಿಗೆ, ಜೇನುತುಪ್ಪ ಮತ್ತು ಅರಿಶಿನ ಕಡಿಮೆ ಮಾಡುತ್ತದೆ.

ಮನೆಮದ್ದನ್ನು ಮಾಡುವ ವಿಧಾನ
*ಸ್ವಲ್ಪ ನೀರನ್ನು ಒಂದು ಸಣ್ಣ ಬಾಣಲೆಯಲ್ಲಿ ಬಿಸಿ ಮಾಡಿ. ಹೇಳಿರುವ ಸಾಮಗ್ರಿಗಳನ್ನು ಅಷ್ಟೇ ಪ್ರಮಾಣದಲ್ಲಿ ಬಾಣಲೆಗೆ ಹಾಕಿ.
*ನೀರು ಬಿಸಿಯಾಗುತ್ತಿರುವಂತೆ ಈ ಸಾಮಗ್ರಿಗಳು ನೀರಿನೊಂದಿಗೆ ಕುದಿಯಲು ಬಿಡಿ. ಬಳಿಕ ಇದನ್ನು ಒಂದು ಕಪ್‌ಗೆ ಹಾಕಿ. ಸ್ವಲ್ಪ ತಣ್ಣಗಾದಾಗ ಇದನ್ನು ಕುಡಿಯಿರಿ. ನೀರನ್ನು ಸೋಸಬೇಡಿ. ದಿನದಲ್ಲಿ ಎರಡರಿಂದ ಮೂರು ಸಲ ಇದನ್ನು ಕುಡಿದರೆ ನೋವು ಕಡಿಮೆಯಾಗುವುದು. ಮುಟ್ಟಿನ ನೋವು ನಿವಾರಣೆಗೆ 13 ಮನೆಮದ್ದು

English summary

Try This Home Remedy To Reduce Menstrual Cramps In A Day!

Ladies! Haven't we all had those painful days, during "that time of the month", when we wished that we should never have been born as a woman? Well, given the intensity of the pain menstrual cramps cause, it only is fair for us, women folk, to feel that way. Period pain, usually occurs in the lower abdominal region of a woman's body; and it can be quite excruciating, preventing her from getting through her daily activities with ease
X
Desktop Bottom Promotion