Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಗಂಟಲು ನೋವಿಗೆ ಸಾಂತ್ವನ ನೀಡುವ ಮನೆಮದ್ದು
ರೋಗಗಳು ಮನುಷ್ಯನಿಗೆ ಬರದೇ ಮರಕ್ಕೆ ಬರುತ್ತದೆಯೇ ಎಂಬ ಮಾತುಗಳನ್ನು ಹಿರಿಯರು ಹೇಳಿರುವುದನ್ನು ನೀವು ಕೇಳಿರುತ್ತೀರಿ. ಯಾವುದೇ ಕಾಯಿಲೆ ಬಂದರೂ ಅದನ್ನು ಎದುರಿಸುವ ತಾಕತ್ತು ನಮ್ಮಲ್ಲಿರಬೇಕು ಎಂಬುದು ಈ ಮಾತಿನ ಒಳಾರ್ಥವಾಗಿದೆ. ಆಧುನಿಕ ಪದ್ಧತಿಗೆ ನಾವು ಒಳಗೊಳ್ಳುವಂತೆ ಹೆಚ್ಚು ರೋಗಗಳಿಗೂ ಆಹಾರವಾಗುತ್ತಿದ್ದೇವೆ. ವಾತಾವರಣದ ಕಲುಷಿತ ಸ್ಥಿತಿ, ಸೇವಿಸುವ ಆಹಾರದಲ್ಲಿರುವ ವಿಷ, ಉಸಿರಾಡುವ ಗಾಳಿಯಲ್ಲಿರುವ ಸೋಂಕುಗಳು, ಕುಡಿಯುವ ನೀರಿನಲ್ಲಿರುವ ಅಸ್ವಚ್ಛತೆ ಹೀಗೆ ಪ್ರತಿಯೊಂದನ್ನು ಭೂತಕನ್ನಡಿ ಹಿಡಿದು ಜಾಲಾಡುವ ಸ್ಥಿತಿ ನಮಗೆ ಬಂದೊದಗಿದೆ.
ಎಲ್ಲಾ ರೋಗಕ್ಕೂ ಔಷಧವಿದೆ ಎಂಬಂತೆ ಇಂದಿನ ವೈಜ್ಞಾನಿಕ ಜಗತ್ತು ಹೊಸ ಹೊಸ ರೋಗಗಳು ಪತ್ತೆಯಾದಂತೆಲ್ಲಾ ಅದಕ್ಕಾಗಿ ಹೊಸ ಹೊಸ ಔಷಧಗಳನ್ನು ಕಂಡುಹಿಡಿಯುತ್ತಿದೆ. ಕೆಲವೊಂದು ಸಣ್ಣ ಪುಟ್ಟ ಕಾಯಿಲೆಗಳಿಗೆ ಔಷಧಗಳನ್ನು ನಾವೇ ಕಂಡುಕೊಳ್ಳಬಹುದಾಗಿದ್ದು ಅದು ಆದಷ್ಟು ರಾಸಾಯನಿಕ ವಿಮುಕ್ತವಾಗಿರಬೇಕು. ಶೀತ, ಕೆಮ್ಮು, ತಲೆನೋವು ಮೊದಲಾದ ಸರ್ವೇ ಸಾಮಾನ್ಯ ರೋಗಗಳು ಸಣ್ಣದಾಗಿದ್ದರೂ ಅವುಗಳ ಕೀರ್ತಿ ದೊಡ್ಡದು. ಹೆಚ್ಚು ಕಿರಿಕಿರಿಯನ್ನುಂಟು ಮಾಡುವ ಈ ಕಾಯಿಲೆಗಳಿಗೆ ಪರಿಣಾತ್ಮಕ ಮನೆಮದ್ದುಗಳನ್ನು ನಾವೇ ಮಾಡಬೇಕಾಗುತ್ತದೆ. ಇನ್ನು ಗಂಟಲು ನೋವಿಗೆ ವೈದ್ಯರ ಬಳಿ ಓಡಬೇಡಿ...!
ಬದಲಾಗುತ್ತಿರುವ ಕಾಲಮಾನವು ನಮ್ಮ ದೇಹದಲ್ಲಿ ಅನೇಕ ಬದಲಾವಣೆಗಳನ್ನು ಉಂಟುಮಾಡುತ್ತಿದ್ದು ಶೀತ ಕೆಮ್ಮು ಗಂಟಲು ನೋವಿಗೆ ದೇಹ ಬೇಗ ಒಳಗಾಗುತ್ತದೆ. ಕೆಲವೊಂದು ಮಾತ್ರೆಗಳನ್ನು ಸೇವಿಸುವುದು, ಗಂಟಲಿಗೆ ಬಾಮ್ ಹಚ್ಚುವುದು ಇದು ಮಾತ್ರವೇ ಪರಿಣಾಮವನ್ನು ಬೀರದೇ ಕೆಲವೊಂದು ಪ್ರಮುಖ ಮದ್ದುಗಳನ್ನು ನೀವು ಮಾಡಬೇಕಾಗುತ್ತದೆ. ಶೀತದಲ್ಲಿ ಗಂಟಲು ನೋವು ಸಾಮಾನ್ಯವಾಗಿದ್ದು ಹೆಚ್ಚು ಕಿರಿಕಿರಿಯ ಕಾಯಿಲೆ ಇದು ಎಂದೆನಿಸಿದೆ. ನೋಯುತ್ತಿರುವ ಗಂಟಲು ಶೀಘ್ರದಲ್ಲಿ ಉಪಶಮನವಾಗುವುದಿಲ್ಲ ಆದರೆ ಮನೆಮದ್ದುಗಳ ಪಾಲನೆಯನ್ನು ನೀವು ಮಾಡಿದರೆ ಇದಕ್ಕೆ ಪರಿಹಾರ ಖಂಡಿತ. ಇಂದಿನ ಲೇಖನದಲ್ಲಿ ಕೆಲವೊಂದು ಮನೆಮದ್ದುಗಳ ಪರಿಚಯವನ್ನು ನಾವು ನಿಮಗೆ ಮಾಡಿಕೊಡುತ್ತಿದ್ದು ನೋಯುತ್ತಿರುವ ಗಂಟಲಿಗೆ ಪರಿಹಾರವನ್ನು ಕಂಡುಕೊಳ್ಳಿ...

ಲೋಜೆಂಗ್ ಬಳಸಿ
ಓಟಿಸಿ ಮಾತ್ರೆಯಾಗಿರುವ ಲೋಜೆಂಗ್ ಗಂಟಲು ನೋವಿನಿಂದ ಉಪಶಮವನ್ನು ನೀಡುತ್ತದೆ. ಈ ಮಾತ್ರೆಯಲ್ಲಿ ಮೆಂತಲ್ ಇದ್ದು ಇದು ನೋಯುತ್ತಿರುವ ಗಂಟಲನ್ನು ಸರಿಪಡಿಸುತ್ತದೆ. ದಿನಕ್ಕೆ 3-4 ಲೋಜೆಂಗ್ ಮಾತ್ರೆಗಳನ್ನು ಸೇವಿಸಿ.

ಚಹಾದಲ್ಲಿ ಜೇನನ್ನು ಬಳಸಿ
ಸಕ್ಕರೆಯ ಬದಲಿಗೆ ನಿಮ್ಮ ಚಹಾದಲ್ಲಿ ಒಂದು ಚಮಚ ಜೇನನ್ನು ಸೇರಿಸಿ. ನೋಯುತ್ತಿರುವ ಗಂಟಲಿಗೆ ಜೇನು ಉಪಶಮವನ್ನು ನೀಡುತ್ತದೆ. ಕೆಮ್ಮು ನಿಯಂತ್ರಿಸುವ ಉತ್ತಮ ನಿಯಂತ್ರಕ ಜೇನಾಗಿದೆ.

ನೀರು ಕುಡಿಯುತ್ತಿರಿ
ಈ ಸಮಯದಲ್ಲಿ ಹೆಚ್ಚು ನೀರಿನ ಸೇವನೆ ಮಾಡುವುದು ಮತ್ತು ನೀರಿನ ಅಂಶಗಳಿರುವ ಪಾನೀಯಗಳನ್ನು ಸೇವಿಸುವುದು ಉತ್ತಮವಾಗಿದೆ. ಸೀನುವಾಗ ಮತ್ತು ಲೋಳೆಯನ್ನು ಬಿಡುಗಡೆ ಮಾಡುವಾಗ ದೇಹ ನಿರ್ಜಲೀಕರಣಕ್ಕೆ ಒಳಗಾಗುತ್ತದೆ. ಆದ್ದರಿಂದ ಎಂದಿಗಿಂತಲೂ ಹೆಚ್ಚಿನ ನೀರಿನ ಸೇವನೆಯನ್ನು ನೀವು ಮಾಡಬೇಕು.

ತೇವಗೊಳಿಸುವ ಸಾಧನ ಬಳಸಿ
ಮೂಗಿನ ದ್ವಾರ ಮತ್ತು ಗಂಟಲಿನ ಅಂಗಾಂಶಗಳನ್ನು ಶಮನಗೊಳಿಸಲು ತೇವವಾಗಿರುವ ಗಾಳಿ ಸಹಕಾರಿ. ಮೂಗಿನ ಪ್ರದೇಶದಲ್ಲಿ ಉಂಟಾಗುವ ಶುಷ್ಕತೆ ಮತ್ತು ನೋವಿಗೆ ಶಮನವನ್ನು ನೀಡುತ್ತದೆ.

ಕಫ್ ಸಿರಪ್
ದೊಡ್ಡವರಿಗೆ ಕಫ್ ಸಿರಪ್ ಬೇಕಾಗಿಲ್ಲ ಎಂಬುದು ನಿಮ್ಮ ಅನಿಸಿಕೆಯಾಗಿದ್ದರೆ ಅದು ತಪ್ಪು. ನೋಯುತ್ತಿರುವ ಗಂಟಲಿಗೆ ಉಪಶಮವನ್ನು ಕಫ್ ಸಿರಪ್ ನೀಡುತ್ತದೆ. ಕಿರಿಕಿರಿಯನ್ನು ನಿವಾರಿಸಲು ಇದು ಸಹಕಾರಿಯಾಗಿದೆ.

ಚಿಕನ್ ಸೂಪ್
ಚಿಕನ್ ಅನ್ನು ಇಷ್ಟಪಡುವವರು ಈ ಸೂಪ್ ಅನ್ನು ಸೇವಿಸಿ ಕಿರಿಕಿರಿಯನ್ನುಂಟು ಮಾಡುತ್ತಿರುವ ನೋವಿನ ಗಂಟಲಿಗೆ ಪರಿಹಾರವನ್ನು ಕಂಡುಕೊಳ್ಳಬಹುದು. ನ್ಯೂಟ್ರಿನ್ ಅಂಶಗಳನ್ನು ಚಿಕನ್ ಒಳಗೊಂಡಿದ್ದು ಬಿಸಿ ಬಿಸಿ ಸೂಪ್ಗೆ ಕಾಳುಮೆಣಸಿನ ಹುಡಿಯನ್ನು ಸೇರಿಸಿ ಸೇವಿಸಬಹುದಾಗಿದೆ. ಕೆಮ್ಮನ್ನು ದೂರಮಾಡುವ ತಾಕತ್ತು ಈ ಸೂಪ್ಗೆ ಇದೆ.

ವಿರಾಮ
ಕೊನೆಯ ಅತ್ಯಮೂಲ್ಯ ಸಲಹೆ ಎಂದರೆ ದೇಹಕ್ಕೆ ಸಾಕಷ್ಟು ವಿಶ್ರಾಂತಿಯನ್ನು ನೀಡುವುದು ಈ ಸಮಯದಲ್ಲಿ ನೀವು ಅನುಸರಿಸೇಕಾದ ವಿಧಾನವಾಗಿದೆ. ಸಾಕಷ್ಟು ಸಮಯ ನಿದ್ದೆ ಮಾಡುವುದು ನಿಮಗೆ ಆರಾಮವನ್ನು ನೀಡಿ ವೈರಸ್ ಮತ್ತು ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ದೇಹಕ್ಕೆ ನೀಡುತ್ತದೆ. ನಿರಂತರ ಕೆಮ್ಮಿನಿಂದ ಉಂಟಾಗುವ ಎದೆನೋವನ್ನು ಇದು ನಿಯಂತ್ರಿಸುತ್ತದೆ.



Click it and Unblock the Notifications
