For Quick Alerts
ALLOW NOTIFICATIONS  
For Daily Alerts

ಮೂತ್ರನಾಳದ ಸೋಂಕಿಗೆ, ಒಂದು ಗ್ಲಾಸ್ ಕ್ರ್ಯಾನ್ಬೆರಿ ಜ್ಯೂಸ್ ಕುಡಿಯಿರಿ

By Manu
|

ಸಾಮಾನ್ಯವಾಗಿ ಕೆಲವರಿಗೆ ನಡುವಯಸ್ಸು ದಾಟುತ್ತಿದ್ದಂತೆ ಉರಿಮೂತ್ರದ ಸಮಸ್ಯೆ ಆವರಿಸಿಕೊಳ್ಳುತ್ತದೆ. ಇದಕ್ಕೆ ಪ್ರಮುಖ ಕಾರಣ ಮೂತ್ರನಾಳದಲ್ಲಿ ಸೋಂಕು (urinary tract infection). ಮೂತ್ರ ಹೊರಹರಿಯುತ್ತಿರುವಾಗ ಒಳಗಿನಿಂದ ಉರಿ, ಪದೇ ಪದೇ ಕಡಿಮೆ ಪ್ರಮಾಣದಲ್ಲಿ ಮೂತ್ರವಾಗುತ್ತಿರುವುದು, ಅನೈಚ್ಛಿಕವಾಗಿ ಮೂತ್ರ ಹೊರಹೋಗುವುದು, ಮೂತ್ರಹೊರಹರಿಸಲು ಹೆಚ್ಚಿನ ಒತ್ತಡ ಬೇಕಾಗುವುದು ಮತ್ತು ನೋವು ಕಾಣಿಸಿಕೊಳ್ಳುವುದು ಈ ಸೋಂಕಿನ ಲಕ್ಷಣಗಳು. ಮೂತ್ರನಾಳದ ಇನ್‌ಫೆಕ್ಷನ್‌ಗೆ ಫಲಪ್ರದ ಮನೆ ಮದ್ದುಗಳು

This Juice Can Prevent Urinary Infection

ಅದರಲ್ಲೂ ಮಹಿಳೆಯರಿಗೆ ಹೆಚ್ಚಾಗಿ ಕಾಡುವ ತೊಂದರೆ ಎಂದರೆ ಮೂತ್ರನಾಳದ ಸೋಂಕು. ಹಾಗಾಗಿ ಇದನ್ನು ತಡೆಗಟ್ಟಲು ನಿಯಮಿತವಾಗಿ ಕ್ರ್ಯಾನ್ಬೆರಿ ಹಣ್ಣಿನ ರಸ ಕುಡಿದರೆ ಸಾಕು ಎಂದು ಇತ್ತೀಚಿನ ಸಂಶೋಧನೆಯೊಂದರಲ್ಲಿ ಕಂಡುಕೊಳ್ಳಲಾಗಿದೆ. ಅಲ್ಲದೇ ಪದೇ ಪದೇ ಮೂತ್ರಕೋಶ, ಮೂತ್ರನಾಳದ ಸೋಂಕಿಗೆ ಒಳಗಾಗುವ ಮಹಿಳೆಯರು ಇದಕ್ಕಾಗಿ ಆಂಟಿಬಯೋಟಿಕ್ ಔಷಧಿಗಳನ್ನು ಸೇವಿಸುವುದನ್ನು ಕಡಿಮೆ ಮಾಡಲೂ ಸಾಧ್ಯ ಎಂದು ತಿಳಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಳು ಈ ಕೆಳಗಿನಂತಿವೆ:


* ಮೂತ್ರಕೋಶ, ಮೂತ್ರ ನಾಳ, ಮೂತ್ರಪಿಂಡಗಳಲ್ಲಿ ಸೋಂಕು ಉಂಟಾದರೆ ಇದು ಮೂತ್ರದಲ್ಲಿ ಉರಿ ತರಿಸಬಹುದು. ಇದಕ್ಕೆ ಪ್ರಮುಖ ಕಾರಣ ಇ ಕೊಲೈ ಎಂಬ ಬ್ಯಾಕ್ಟೀರಿಯಾವಾಗಿದ್ದು ಮಹಿಳೆಯರಲ್ಲಿ ವಿಶೇಷವಾಗಿ ನೈರ್ಮಲ್ಯದ ಕೊರತೆಯಿಂದ ಕಾಣಬರುತ್ತದೆ. ಇದರ ಹೊರತಾಗಿ ಹೆಚ್ಚು ಹೊತ್ತು ಮೂತ್ರ ತಡೆದುಕೊಳ್ಳುವುದು, ಹಾರ್ಮೋನುಗಳ ಏರುಪೇರು, ಆಹಾರದಲ್ಲಿರುವ ವಿಷಕಾರಿ ವಸ್ತುಗಳ ಮೂಲಕವೂ ಎದುರಾಗಬಹುದು. ಉರಿ ಮೂತ್ರದ ಸೋಂಕಿಗೆ ಮೊಸರೆಂಬ ಖರ್ಚಿಲ್ಲದ ಪರಿಹಾರ
* ಒಂದು ಸಮೀಕ್ಷೆಯ ಪ್ರಕಾರ ಪ್ರತಿದಿನ 250ಮಿಲೀ ಕ್ರ್ಯಾನ್ಬೆರಿ ಹಣ್ಣಿನ ರಸ ಕುಡಿದರೆ ಈ ಸೋಂಕಿನ ಸಾಧ್ಯತೆಯನ್ನು 40%ದಷ್ಟು ಕಡಿಮೆ ಮಾಡಬಹುದು.
* ಪ್ರತಿದಿನ 250ಮಿಲೀ ಕ್ರ್ಯಾನ್ಬೆರಿ ಹಣ್ಣಿನ ರಸ ಕುಡಿಯುವ ಮೂಲಕ ಮಹಿಳೆಯರಲ್ಲಿ ಮೂತ್ರನಾಳದ ಸೋಂಕು ತಡೆಯಲು ವೈದ್ಯರು ನೀಡುವ ಆಂಟಿ ಬಯಾಟಿಕ್ ಔಷಧಿಗಳಿಂದ ದೂರವಿರಬಹುದು.
* ಮೂತ್ರನಾಳದ ಸೋಂಕಿನ ಉರಿಯನ್ನು ತಡೆಗಟ್ಟಲು ಸಹಾಯ ಮಾಡುವ ಈ ಆಂಟಿ ಬಯಾಟಿಕ್‌ಗಳ ಸತತ ಬಳಕೆಯಿಂದ ಹಲವು ಪರೋಕ್ಷ ಅಪಾಯಗಳಿವೆ. ವಿಶ್ವದಲ್ಲಿ ಬಹುತೇಕ ಮಹಿಳೆಯರು ಈ ತೊಂದರೆಯಿಂದ ಬಳಲುತ್ತಿದ್ದಾರೆ.
* ಆಂಟಿ ಬಯೋಟಿಕ್‌ಗಳ ಸತತ ಬಳಕೆಯಿಂದ ದೇಹ ಅತಿಸೂಕ್ಷ್ಮ ಕ್ರಿಮಿಗಳ ಧಾಳಿಯನ್ನು ಎದುರಿಸುವ ಕ್ಷಮತೆಯನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ.
* ಕ್ರ್ಯಾನ್ಬೆರಿ ಹಣ್ಣಿನ ರಸದಲ್ಲಿ ಉತ್ತಮ ಆಂಟಿ ಆಕ್ಸಿಡೆಂಟುಗಳು, ವಿಟಮಿನ್ ಸಿ ಮತ್ತಿತರ ಪೋಷಕಾಂಶಗಳಿದ್ದು ವಿವಿಧ ಬ್ಯಾಕ್ಟೀರಿಯಾಗಳ ಸೋಂಕು ತಡೆಯಬಲ್ಲ ಕ್ಷಮತೆ ಹೊಂದಿದೆ. ಅಲ್ಲದೇ ಇ ಕೊಲೈ ಬ್ಯಾಕ್ಟ್ರೀರಿಯಾಕ್ಕೆ ತಕ್ಕ ಮದ್ದು ಈ ರಸದಲ್ಲಿದೆ.
* ಈ ನಿಟ್ಟಿನಲ್ಲಿ ಮೂತ್ರಕೋಶದ ಸೋಂಕು ಇರುವ ಮುನ್ನೂರೈವತ್ತಕ್ಕೂ ಹೆಚ್ಚು ಮಹಿಳೆಯರಿಗೆ ಕ್ರ್ಯಾನ್ಬೆರಿ ಹಣ್ಣಿನ ರಸ ಕುಡಿಸಿ ಅವರ ಆರೋಗ್ಯದ ಅಂಕಿ ಅಂಶಗಳನ್ನು ಕಲೆಹಾಕಿದ ಸಂಶೋಧಕರು ಇದು ನಿಜಕ್ಕೂ ಕೆಲಸ ಮಾಡುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
* ಉತ್ತಮ ಪರಿಣಾಮಕ್ಕಾಗಿ ಪ್ರತಿದಿನ ಬೆಳಿಗ್ಗೆ ಒಂದು ಲೋಟ ಕ್ರ್ಯಾನ್ಬೆರಿ ಹಣ್ಣಿನ ರಸವನ್ನು ಕುಡಿಯಬೇಕು. ಉರಿ ಮೂತ್ರದ ಸೋಂಕಿಗೆ ಮೊಸರೆಂಬ ಖರ್ಚಿಲ್ಲದ ಪರಿಹಾರ
English summary

This Juice Can Prevent Urinary Infection

A new study says that drinking cranberry juice regularly can prevent urinary infections in women. Also, this juice is said to minimise the necessity of the usage of antibiotics...
X
Desktop Bottom Promotion