Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸುಟ್ಟಗಾಯ ನಿವಾರಣೆಗೆ ಈ ವಿಧಾನಗಳನ್ನು ಅನುಸರಿಸದಿರಿ!
ನೀವು ಯಾವುದಾದರೂ ಸಂದರ್ಭದಲ್ಲಿ ಅಡುಗೆ ಮಾಡುವಾಗ, ಬಿಸಿ ನೀರು ಕಾಯಿಸುವಾಗ, ಒಲೆಯನ್ನು ಉಪಯೋಗಿಸುವಾಗ, ಇಸ್ತ್ರಿ ಮಾಡುವಾಗ ಒಮ್ಮೆಯಾದರೂ ನಿಮ್ಮ ಕೈಗಳು ಅಥವಾ ದೇಹದ ಭಾಗವನ್ನು ಸುಟ್ಟುಕೊಂಡಿರುತ್ತೀರ. ಇದೊಂದು ಸಾಮಾನ್ಯ ಪ್ರಕ್ರಿಯೆ. ಇದರಲ್ಲಿ ಆಶ್ಚರ್ಯಪಡುವಂತದ್ದು ಏನೂ ಇಲ್ಲ. ಆಯಾ ಸಂದರ್ಭಗಳಿಗೆ ಅನುಗುಣವಾಗಿ ಸಣ್ಣ ಕಣ್ತಪ್ಪಿನಿಂದ ಈ ಅಚಾತುರ್ಯ ನಡೆದಿರುತ್ತದೆ. ಇದಕ್ಕೆ ಪಶ್ಚಾತ್ತಾಪ ಪಡುವ ಅಗತ್ಯವಿಲ್ಲ. ಸರಿಯಾದ ಪರಿಹಾರವನ್ನು ಹುಡುಕಿ ಬಳಸಿದರೆ ಸಾಕು. ಸುಟ್ಟಗಾಯ ವಾಸಿಯಾಗುತ್ತದೆ. ಚರ್ಮ ಸುಟ್ಟ ಸಂದರ್ಭದಲ್ಲಿ ಕೆಲವರು ಕೂಡಲೇ ಮಂಜುಗಡ್ಡೆಯನ್ನು ಇಟ್ಟು ಒತ್ತುತ್ತಾರೆ. ಇದೊಂದು ಸಂಪೂರ್ಣವಾದ ತಪ್ಪು ಭಾವನೆ. ಸುಟ್ಟ ಗಾಯಗಳಿಗೆ ಕೆಲವು ಮನೆಮದ್ದು
ಆದರೆ ಮಂಜುಗಡ್ಡೆಯಿಂದ ಸುಟ್ಟಗಾಯ ವಾಸಿಯಾಗುವ ಬದಲು ನಿಮ್ಮ ಚರ್ಮದ ಟಿಶ್ಯೂ ಅನ್ನು ಹೆಚ್ಚು ಹಾನಿಮಾಡುತ್ತದೆ. ಇದು ಅನೇಕರಿಗೆ ತಿಳಿಯದ ಸಂಗತಿ. ಆದ್ದರಿಂದ ಸುಟ್ಟಗಾಯವನ್ನು ಶೀಘ್ರವಾಗಿ ನಿವಾರಿಸುವ ಆತುರದಲ್ಲಿ ಅನುಸರಿಸುವ ಕೆಲ ತಪ್ಪು ಅಭ್ಯಾಸಗಳ ಸಂಗತಿಗಳನ್ನು ನಿಮಗಾಗಿ ಈ ಲೇಖನದಲ್ಲಿ ನೀಡಲಾಗಿದೆ. ಇವುಗಳನ್ನು ಬಳಸಿ ನಿಮ್ಮ ಗಾಯವನ್ನು ಇನ್ನೂ ಹೆಚ್ಚು ಉಲ್ಬಣಗೊಳಿಸಿಕೊಳ್ಳದಿರಿ, ಎಚ್ಚರ...

ಮಂಜುಗಡ್ಡೆ
ಸುಟ್ಟ ಗಾಯದ ಮೇಲೆ ಮಂಜುಗಡ್ಡೆಯನ್ನು ಯಾವುದೇ ಕಾರಣಕ್ಕೂ ಇಟ್ಟುಕೊಳ್ಳದಿರಿ. ಮಂಜುಗಡ್ಡೆಯು ರಕ್ತಸಂಚಾರವನ್ನು ನಿಲ್ಲಿಸಿ ನಿಮ್ಮ ಚರ್ಮದ ಟಿಶ್ಯೂವನ್ನು ಹಾನಿಮಾಡುತ್ತದೆ. ಇದರ ಬದಲು ತಂಪಾದ ಹರಿಯುವ ನೀರಿಗೆ ನಿಮ್ಮ ಗಾಯವನ್ನು ಒಡ್ಡಿ.

ಬೆಣ್ಣೆ
ಕೆಲವರು ಬೆಣ್ಣೆಯನ್ನು ಸುಟ್ಟಗಾಯಕ್ಕೆ ಉಪಯೋಗಿಸುತ್ತಾರೆ. ಇದೂ ಸಹ ತಪ್ಪು ಕಲ್ಪನೆ. ಬೆಣ್ಣೆ ಹಚ್ಚುವುದರಿಂದ ನಿಮ್ಮ ಗಾಯದ ಮೇಲೆ ಬ್ಯಾಕ್ಟೀರಿಯಾಗಳು ಉಂಟಾಗಿ ಸೋಂಕು ಇನ್ನೂ ಹೆಚ್ಚಾಗುತ್ತದೆ.

ಟೂತ್ ಪೇಸ್ಟ್
ಟೂತ್ ಪೇಸ್ಟ್ ಬಳಸುವುದೂ ಸಹ ಒಳ್ಳೆಯ ಅಭ್ಯಾಸವಲ್ಲ. ಇದರಿಂದ ಕೇವಲ ಹಿತಕರ ಅನುಭವವುಂಟಾಗುವುದೇ ಹೊರತು ಗಾಯವನ್ನು ವಾಸಿ ಮಾಡುವ ಶಕ್ತಿ ಇದರಲ್ಲಿ ಅಡಗಿಲ್ಲ. ಇದರಲ್ಲಿನ ಕ್ಯಾಲ್ಷಿಯಂ ಸತ್ವದಿಂದ ನಿಮ್ಮ ಗಾಯದ ಸೋಂಕು ಹೆಚ್ಚಾಗಲು ಕಾರಣವಾಗುತ್ತದೆ.

ಹೈಡ್ರೋಜೆನ್ ಪೆರಾಕ್ಸೈಡ್
ಸೌಮ್ಯವಾದ ನಂಜುನಿರೋಧಕವಾದ ಹೈಡ್ರೋಜೆನ್ ಪೆರಾಕ್ಸೈಡ್ ಅನ್ನು ಸಾಮಾನ್ಯವಾಗಿ ಸುಟ್ಟ ಗಾಯಕ್ಕೆ ಬಳಸಲಾಗುತ್ತದೆ. ಇದು ಸ್ವಾಭಾವಿಕವಾಗಿ ವಿನಾಶಕಾರಿಯಾಗಿದ್ದರೂ ಸಹ ಇದರ ಬಳಕೆಯಿಂದ ನೋವು ಮತ್ತು ಉರಿಯೂತ ಹೆಚ್ಚಾಗುತ್ತದೆ.

ಲಿಂಬೆ
ಸುಟ್ಟಗಾಯವನ್ನು ಹಿತಗೊಳಿಸಲು ಲಿಂಬೆಯನ್ನು ಕೆಲವರು ಬಳಸುತ್ತಾರೆ. ಲಿಂಬೆಯನ್ನು ನೇರವಾಗಿ ಚರ್ಮಕ್ಕೆ ಬಳಸುವುದರಿಂದ ನಿಮ್ಮ ಗಾಯವು ಉಲ್ಪಣಗೊಳ್ಳುವುದಲ್ಲದೇ ನಿಮ್ಮ ಚರ್ಮಕ್ಕೆ ಹಾನಿಯುಂಟಾಗುವ ಸಂಭವ ಜಾಸ್ತಿ ಇರುತ್ತದೆ.



Click it and Unblock the Notifications
