For Quick Alerts
ALLOW NOTIFICATIONS  
For Daily Alerts

ಹಸಿವು ಹೆಚ್ಚಿಸುವ ಆಹಾರಗಳಿವು! ತಿನ್ನುವ ಮೊದಲು ಸ್ವಲ್ಪ ಯೋಚಿಸಿ!

ಕೆಲವರಿಗೆ ಎಷ್ಟು ತಿಂದರೂ ಸಾಕಾಗದು. ಯಾಕೆಂದರೆ ಅವರು ತಿನ್ನುವಂತಹ ಆಹಾರದಲ್ಲಿ ದೇಹಕ್ಕೆ ಬೇಕಾಗುವಂತಹ ಕೆಲವೊಂದು ಅಂಶಗಳು ಇರುವುದೇ ಇಲ್ಲ. ಇದರಿಂದಾಗಿ ತಿಂದ ಮರುಕ್ಷಣವೇ ಹಸಿವಾಗುತ್ತದೆ.

By Hemanth
|

ಆತ ಎಷ್ಟು ತಿನ್ನುತ್ತಾ ಇರುತ್ತಾನೆ. ಪದೇ ಪದೇ ಆತನಿಗೆ ತಿನ್ನಲು ಏನಾದರೂ ಬೇಕೇ ಬೇಕು ಎಂದು ಹೇಳುವುದನ್ನು ಕೇಳಿದ್ದೇವೆ. ಕೆಲವರಿಗೆ ಎಷ್ಟು ತಿಂದರೂ ಸಾಕಾಗದು. ಯಾಕೆಂದರೆ ಅವರು ತಿನ್ನುವಂತಹ ಆಹಾರದಲ್ಲಿ ದೇಹಕ್ಕೆ ಬೇಕಾಗುವಂತಹ ಕೆಲವೊಂದು ಅಂಶಗಳು ಇರುವುದೇ ಇಲ್ಲ. ಇದರಿಂದಾಗಿ ತಿಂದ ಮರುಕ್ಷಣವೇ ಹಸಿವಾಗುತ್ತದೆ. ಹಸಿವು ನೀಗಿಸಲು ಆರೋಗ್ಯಕರ ತಿಂಡಿಗಳು

hungry

ನಾವು ತಿನ್ನುವಂತಹ ಆಹಾರದಲ್ಲಿ ನಾರಿನಾಂಶ, ಪ್ರೋಟೀನ್ ಮತ್ತು ಕೊಬ್ಬಿನಾಂಶ ಇಲ್ಲದೆ ಇದ್ದರೆ ಊಟ ಮಾಡಿದ ಕೆಲವೇ ಹೊತ್ತಿನಲ್ಲಿ ನಮಗೆ ಹಸಿವು ಕಾಣಿಸಿಕೊಳ್ಳುತ್ತದೆ. ಮತ್ತೆ ಏನಾದರೂ ತಿನ್ನಬೇಕು ಎಂದನಿಸುತ್ತದೆ. ಇದರಿಂದ ದೇಹದ ತೂಕ ಹೆಚ್ಚಳವಾಗುತ್ತದೆ. ಇಂತಹ ಕೆಲವೊಂದು ಆಹಾರಗಳ ಬಗ್ಗೆ ಈ ಲೇಖನಗಳಲ್ಲಿ ತಿಳಿಸಲಾಗಿದೆ ಮುಂದೆ ಓದಿ...

ಗೋಧಿಯ ಬ್ರೆಡ್

ಗೋಧಿಯ ಬ್ರೆಡ್‌ನಲ್ಲಿ ನಾರಿನಾಂಶವಿದೆ. ಆದರೆ ದೇಹಕ್ಕೆ ತೃಪ್ತಿ ನೀಡಬಲ್ಲ ಪ್ರೋಟೀನ್ ಮತ್ತು ಕೊಬ್ಬಿನ ಕೊರತೆಯಿದೆ. ಹೆಚ್ಚಿನ ತೃಪ್ತಿ ನೀಡಬೇಕೆಂದರೆ ಬ್ರೆಡ್ ಗೆ ಜಾಮ್ ಅಥವಾ ಆರೋಗ್ಯಕರ ಕೊಬ್ಬನ್ನು ಹೊಂದಿರುವ ನೆಲಕಡಲೆ ಬೆಣ್ಣೆಯನ್ನು ಹಚ್ಚಿಕೊಂಡು ತಿನ್ನಿ. ನೀವು ತಿನ್ನುವಂತಹ ಬ್ರೆಡ್‌ನ ಪ್ರಮಾಣದ ಬಗ್ಗೆ ಗಮನವಿರಲಿ. ಎಚ್ಚರ: ನೀವು ಅಂದುಕೊಂಡಷ್ಟು, ಬ್ರೆಡ್ ಆರೋಗ್ಯಕರವಲ್ಲ!

ಮೊಟ್ಟೆಯ ಬಿಳಿಭಾಗ

ಮೊಟ್ಟೆಯ ಬಿಳಿಯ ಭಾಗದಲ್ಲಿ ಹೆಚ್ಚಿನ ಮಟ್ಟದ ಪ್ರೋಟೀನ್ ಇದೆ. ಆದರೆ ಇದರಲ್ಲಿ ಕ್ಯಾಲರಿ ಹಾಗೂ ಕೊಬ್ಬು ತುಂಬಾ ಕಡಿಮೆ ಇದೆ. ಕೇವಲ ಮೊಟ್ಟೆಯ ಬಿಳಿಭಾಗವನ್ನು ಮಾತ್ರ ತಿನ್ನುವುದರಿಂದ ನಿಮಗೆ ಹೊಟ್ಟೆ ತುಂಬಿದ ತೃಪ್ತಿ ಇರುವುದಿಲ್ಲ. ಮೊಟ್ಟೆಯ ಹಳದಿ ಭಾಗವನ್ನು ಕೂಡ ತಿನ್ನುವುದರಿಂದ ನಿಮಗೆ ಹೊಟ್ಟೆ ತುಂಬಿದ ತೃಪ್ತಿ ಬರುವುದು. ಮೊಟ್ಟೆಯ ಬಿಳಿಭಾಗದ ಚಿಕಿತ್ಸೆ-ಮುಖದ ನೆರಿಗೆ ಮಂಗಮಾಯ!

ಕೊಬ್ಬು ರಹಿತ ಹಾಲಿನ ಉತ್ಪನ್ನಗಳು
ಕೊಬ್ಬು ರಹಿತವಾಗಿರುವ ಮೊಸರು ಹಾಗೂ ಹಾಲಿನಲ್ಲಿ ಕಡಿಮೆ ಕ್ಯಾಲರಿ ಇರುತ್ತದೆ. ಆದರೆ ಇದರ ಸೇವನೆಯಿಂದ ಹೊಟ್ಟೆ ತುಂಬಿದ ತೃಪ್ತಿ ಸಿಗುವುದಿಲ್ಲ. ಇದರಲ್ಲಿ ಕೊಬ್ಬು ರಹಿತವಾಗಿರುವುದರಿಂದ ಲ್ಯಾಕ್ಟೋಸ್ ವಿಘಟನೆ ನಿಧಾನವಾಗುತ್ತದೆ ಮತ್ತು ಬೇಗನೆ ಸುಡುವುದು. ಇದರಿಂದಾಗಿ ಕೆನೆರಹಿತ ಹಾಲಿನ ಬದಲು ಹಾಲಿನ ಉತ್ಪನ್ನಗಳನ್ನು ಸೇವನೆ ಮಾಡುತ್ತೇವೆ.

ಉಪ್ಪಿನಕಾಯಿ ಮತ್ತು ಉಪ್ಪಿನಾಂಶವಿರುವ ತಿನಿಸುಗಳು
ಈ ಆಹಾರಗಳಲ್ಲಿ ಹೆಚ್ಚಿನ ಮಟ್ಟದ ಉಪ್ಪಿನಾಂಶವಿರುತ್ತದೆ. ಸೋಡಿಯಂನಿಂದಾಗಿ ನಿಮಗೆ ಹೆಚ್ಚು ಬಾಯಾರಿಕೆಯಾಗಬಹುದು. ಇದರಿಂದ ಹಸಿವು ಹೆಚ್ಚಾಗುತ್ತದೆ ಮತ್ತು ಹೊಟ್ಟೆ ತುಂಬಿದ ತೃಪ್ತಿ ಕಡಿಮೆಯಾಗುವುದು. ಇಂತಹ ತಿಂಡಿಗಳನ್ನು ಕಡಿಮೆ ಮಾಡಿ. ಬಾಯಾರಿಕೆಯಾದರೆ ಹೆಚ್ಚು ನೀರು ಕುಡಿಯಿರಿ. ಇದರಿಂದ ಹಸಿವು ಕಡಿಮೆಯಾಗುವುದು. ಹೊಟ್ಟೆ ತುಂಬಾ ತಿಂದರೂ, ಮತ್ತೆ ಹಸಿವು! ಕಾರಣವೇನು?

ಕಾಳಿನ ಕ್ರ್ಯಾಕರ್ಸ್
ಇದರಿಂದ ಹೃದಯಕ್ಕೆ ಆರೋಗ್ಯಕರ ನಾರಿನಾಂಶ ಸಿಗುವುದು. ಆದರೆ ಇದರಲ್ಲಿ ಪ್ರೋಟೀನ್ ಮತ್ತು ಕೊಬ್ಬು ಇಲ್ಲದೆ ಹೆಚ್ಚಿನ ಮಟ್ಟದ ಕಾರ್ಬೋಹೈಡ್ರೇಟ್ ಇದೆ. ಇದಕ್ಕೆ ನೆಲಕಡಲೆ ಬೆಣ್ಣೆಯನ್ನು ಹಾಕಿಕೊಂಡು ತಿನ್ನುವುದರಿಂದ ನಿಮಗೆ ಬೇಗನೆ ಹಸಿವಾಗುವುದು ತಪ್ಪುತ್ತದೆ.

ಬಿಳಿ ಅನ್ನ
ಬಿಳಿ ಅನ್ನವನ್ನು ತಿನ್ನುವುದರಿಂದ ಅದರಲ್ಲಿರುವ ಪಿಷ್ಠವು ದೇಹದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಿ ಬೇಗನೆ ಹಸಿವಾಗುವಂತೆ ಮಾಡುತ್ತದೆ. ಬಿಳಿ ಅನ್ನಕ್ಕೆ ಬದಲು ಕಂದು ಅನ್ನವನ್ನು ಬಳಸಿ. ಇದರಲ್ಲಿ ನಾರಿನಾಂಶವಿದೆ ಮತ್ತು ಕಂದು ಅನ್ನದೊಂದಿಗೆ ದಾಲ್ ತಿನ್ನುವುದರಿಂದ ಹೊಟ್ಟೆಗೆ ತೃಪ್ತಿ ಸಿಗುವುದು. ಮುತ್ತಿನಂತಿರುವ ಬಿಳಿ ಅಕ್ಕಿಯ ಪ್ರಯೋಜನ ಒಂದೇ ಎರಡೇ..?

English summary

These foods actually make you hungrier

Snacking on any food can satiate you for some time but how full you get and for how long the food can keep you satisfied may vary. Fibre, protein and fat can help you stay satiated, but foods without these components are likely to leave you indulging in your next meal in no time. According to nutritionist Priya Kathpal, here are some of these foods.
Story first published: Monday, November 21, 2016, 18:32 [IST]
X
Desktop Bottom Promotion