ಅಲಕ್ಷ್ಯ ಮಾಡಬೇಡಿ, ಕಣ್ಣುಗಳೇ ನಮ್ಮ ಅಮೂಲ್ಯ ಸಂಪತ್ತು

By: Hemanth
Subscribe to Boldsky

ದೇಹದಲ್ಲಿ ಕಣ್ಣುಗಳು ಸೂರ್ಯ-ಚಂದ್ರರು ಇದ್ದಂತೆ. ಆಕಾಶದಲ್ಲಿ ಸೂರ್ಯ ಚಂದ್ರರು ಇಲ್ಲದೆ ಭೂಮಿಯ ಮೇಲೆ ಯಾವ ಪರಿಣಾಮ ಬೀರಬಹುದೋ ಅದೇ ಕಣ್ಣುಗಳು ಇಲ್ಲದೆ ದೇಹದ ಮೇಲೆ ಅದೇ ಪರಿಣಾಮ ಉಂಟಾಗಬಹುದು. ಕಣ್ಣುಗಳ ಆರೋಗ್ಯ ಹಾಗೂ ಅವುಗಳ ಆರೈಕೆ ತುಂಬಾ ಮುಖ್ಯವಾಗಿದೆ. ಕಣ್ಣುಗಳಿಗೆ ತೊಂದರೆಯಾದರೆ ಅದರಿಂದ ದೇಹಕ್ಕೆ ದೊಡ್ಡ ಅಡ್ಡಪರಿಣಾಮ ಬೀರಲಿದೆ. ಕಣ್ಣುಗಳೇ ನಮ್ಮ ಅಮೂಲ್ಯ ಸಂಪತ್ತು- ನಿರ್ಲಕ್ಷ್ಯ ಮಾಡದಿರಿ....

ದೃಷ್ಟಿ ಸರಿಯಿಲ್ಲದೆ ಇದ್ದಾಗ ನಮಗೆ ಸುತ್ತಮುತ್ತಲಿನಲ್ಲಿರುವ ವಸ್ತುಗಳನ್ನು ನೋಡಲು ಸಾಧ್ಯವಾಗುತ್ತದೆ. ಇಲ್ಲವೆಂದಾದರೆ ನಮ್ಮ ಕೆಲಸ ಕಾರ್ಯಗಳನ್ನು ಮಾಡಲು ಸಾಧ್ಯವೇ ಇಲ್ಲ. ಇಂದಿನ ದಿನಗಳಲ್ಲಿ ಅತಿಯಾಗಿ ಕಂಪ್ಯೂಟರ್ ಮತ್ತು ಮೊಬೈಲ್ ಅನ್ನು ಬಳಸುವುದರಿಂದ ಕಣ್ಣಿನ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. 

eye care
 

ಹಲವಾರು ಸಮಸ್ಯೆಗಳು ಕಣ್ಣುಗಳನ್ನು ಕಾಡುವುದರಲ್ಲಿ ಸಂಶಯವೇ ಇಲ್ಲ. ಕಣ್ಣು ಒಣಗುವುದು, ಕಣ್ಣು ನೋವು ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಇದಕ್ಕಾಗಿ ಕೆಲವೊಂದು ಮನೆಮದ್ದನ್ನು ಬಳಸಬಹುದು. ಇದು ಯಾವುದೆಂದು ಈ ಲೇಖನದ ಮೂಲಕ ನೀವು ತಿಳಿಯಿರಿ.   ಇಂತಹ ಲಕ್ಷಣಗಳು ಕಂಡುಬಂದರೆ 'ಓದುವ ಕನ್ನಡಕ' ಅತ್ಯವಶ್ಯಕ...

ಮನೆಮದ್ದು ತಯಾರಿಸಲು ಬೇಕಾಗುವ ಸಾಮಗ್ರಿಗಳು

ಕ್ಯಾಮೊಮೈಲ್ ಟೀ ಬ್ಯಾಗ್ -2

ರೋಸ್ ವಾಟರ್ -2 ಚಮಚ   

ಕಂಪ್ಯೂಟರ್ ಹಾಗೂ ಮೊಬೈಲ್‌ನಲ್ಲಿ ಕಡಿಮೆ ಸಮಯ ವ್ಯಯ ಮಾಡಿ, ಕಲುಷಿತ ವಾತಾವರಣಕ್ಕೆ ಕಣ್ಣುಗಳನ್ನು ಬಿಟ್ಟುಕೊಡಬಾರದು. ಹೀಗೆ ಮಾಡಿದಲ್ಲಿ ಈ ನೈಸರ್ಗಿಕ ಮನೆಮದ್ದು ಕಣ್ಣಿನ ಒತ್ತಡ ಕಡಿಮೆ ಮಾಡಿ ಆರೋಗ್ಯ ನೀಡುವಲ್ಲಿ ತುಂಬಾ ಪರಿಣಾಮಕಾರಿಯಾಗಲಿದೆ. 

Eye massage
 

ಕ್ಯಾಮೊಮೈಲ್ ಮತ್ತು ರೋಸ್ ವಾಟರ್ ಕಣ್ಣಿಗೆ ಶಮನ ನೀಡಿ ಒತ್ತಡ ಕಡಿಮೆ ಮಾಡುವುದು. ಇದು ಉರಿಯೂತವನ್ನು ಕಡಿಮೆ ಮಾಡುವುದರಿಂದ ಕಣ್ಣು ಕೆಂಪಾಗುವುದು ಮತ್ತು ಕಣ್ಣು ಒಣಗುವುದನ್ನು ಇದು ತಡೆಯುವುದು. ಈ ಮನೆಮದ್ದನ್ನು ಕೋಶಗಳು ಹೀರಿಕೊಂಡಾಗ ಇದು ದೃಷ್ಟಿಯ ನರಗಳನ್ನು ಬಲಗೊಳಿಸಿ ಕಣ್ಣುಗಳನ್ನು ಆರೋಗ್ಯವಾಗಿಡುತ್ತದೆ. 

tea bag
 

ಮನೆಮದ್ದು ತಯಾರಿಸುವ ಮತ್ತು ಬಳಸುವ ವಿಧಾನ

*ಕ್ಯಾಮೊಮೈಲ್ ಟೀ ಬ್ಯಾಗ್ ಗಳನ್ನು ಬಿಸಿ ನೀರಿನಲ್ಲಿ ಮುಳುಗಿಸಿ.

ಸ್ವಲ್ಪ ಸಮಯ ಹಾಗೆ ಇರಲಿ.

*ಹತ್ತಿಯ ಉಂಡೆಯನ್ನು ರೋಸ್ ವಾಟರ್‌ನಲ್ಲಿ ಅದ್ದಿ ಅದನ್ನು ಕಣ್ಣಿನ ರೆಪ್ಪೆಗಳ ಒಳಭಾಗಕ್ಕೆ ಹಚ್ಚಿಕೊಳ್ಳಿ.

*ಎರಡು ಟೀ ಬ್ಯಾಗ್‌ಗಳನ್ನು ಕಣ್ಣಿನ ಮೇಲಿಡಿ. 

Rose water

*30 ನಿಮಿಷಗಳ ಕಾಲ ಹಾಗೆ ಇರಲಿ. ಕಣ್ಣುಗಳು ಮುಚ್ಚಿರಲಿ. ಒಂದು ತಿಂಗಳ ಕಾಲ ಪ್ರತೀ ದಿನ ಹೀಗೆ ಮಾಡಿ.

English summary

Simple Home Remedy To Reduce Eye Strain

If you have a job that requires you to look at a computer screen all day, or if you are someone who uses phones and other visual electronic gadgets a lot, your eyes are more prone to experience a strain. So, if you want to reduce eye strain and have healthy eyes, then use this home remedy!
Please Wait while comments are loading...
Subscribe Newsletter