Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಆರೋಗ್ಯ ಟಿಪ್ಸ್: ಪುಟ್ಟ ಬೆಳ್ಳುಳ್ಳಿಯ ಚಿನ್ನದಂತಹ ಗುಣಗಳು...
ಒಂದು ವೇಳೆ ಬೆಳ್ಳುಳ್ಳಿಯಲ್ಲಿ ವಾಸನೆಯೇ ಇಲ್ಲದೇ ಇದ್ದರೆ, ಇಂದಿನ ದಿನಗಳಲ್ಲಿ ಇದು ಚಿನ್ನದಂತೆ ಮಾರಾಟವಾಗುತ್ತಿತ್ತು ಎಂದು ಈಗಲೂ ನಮ್ಮ ಕರಾವಳಿಯ ಕಡೆಯ ಹಳ್ಳಿಗಳಲ್ಲಿ ಹೇಳುತ್ತಿರುತ್ತಾರೆ. ಏಕೆಂದರೆ ಬೆಳ್ಳುಳ್ಳಿಯ ಉತ್ತಮ ಗುಣಗಳು ಆರೋಗ್ಯದ ಮಟ್ಟಿಗೆ ಚಿನ್ನದಂತೆಯೇ ಕೆಲಸ ಮಾಡುತ್ತದೆ. ಮಳೆಗಾಲದ ಶೀತ, ಕಫ, ಜ್ವರಕ್ಕೆಲ್ಲಾ-ಬೆಳ್ಳುಳ್ಳಿಯೇ ಸಾಕು
Allium sativum ಎಂಬ ವೈಜ್ಞಾನಿಕ ಹೆಸರು ಹೊಂದಿರುವ ಈ ಸಾಂಬಾರ ಪದಾರ್ಥ ಅತ್ಯುತ್ತಮವಾದ ಆಹಾರವಾಗಿದೆ. ಇದನ್ನು ಆಹಾರಕ್ಕಿಂತಲೂ ಹೆಚ್ಚಾಗಿ ಔಷಧದ ರೂಪದಲ್ಲಿ ಆಯುರ್ವೇದ ಬಳಸುತ್ತಾ ಬಂದಿದೆ. ಬೆಳ್ಳುಳ್ಳಿಯನ್ನು ಆಹಾರದ ಮೂಲಕ ಸೇವಿಸುವ ಮೂಲಕ ಆಹಾರದಲ್ಲಿ ರುಚಿಯ ಜೊತೆಗೇ ಆರೋಗ್ಯವೂ ವೃದ್ಧಿಯಾಗುತ್ತದೆ. ಬನ್ನಿ ಈ ಪುಟ್ಟ ಬೆಳ್ಳುಳ್ಳಿಯ ಇನ್ನಷ್ಟು ಕಾರುಬಾರನ್ನು ಸ್ಲೈಡ್ ಶೋ ಮೂಲಕ ನೋಡೋಣ....
ಬೆಳ್ಳುಳ್ಳಿಯ ಆರೋಗ್ಯಕಾರಿ ಪ್ರಯೋಜನಗಳು

ರಕ್ತದ ಒತ್ತಡದ ನಿಯಂತ್ರಣಕ್ಕೆ
ಬೆಳ್ಳುಳ್ಳಿಯಲ್ಲಿರುವ polysulphide ಎಂಬ ರಾಸಾಯನಿಕಗಳು ದೇಹದಲ್ಲಿ ಪ್ರವೇಶ ಪಡೆದ ಬಳಿಕ ಅನಿಲವಾಗಿ ಪರಿವರ್ತನೆಗೊಂಡು hydrogen sulphide ಎಂಬ ರೂಪ ತಳೆಯುತ್ತವೆ. ಈ ಅನಿಲ ರಕ್ತನಾಳಗಳನ್ನು ಒಳಗಿನಿಂದ ಹಿಗ್ಗಿಸಿ ಹೆಚ್ಚಿನ ರಕ್ತ ಪೂರೈಕೆಗೆ ನೆರವಾಗುತ್ತದೆ. ಪರಿಣಾಮವಾಗಿ ರಕ್ತದ ಒತ್ತಡ ಕಡಿಮೆಯಾಗುತ್ತದೆ. ಹೆಚ್ಚಿನ ರಕ್ತದೊತ್ತಡ ಇರುವ ರೋಗಿಗಳು ತಮ್ಮ ವೈದ್ಯರ ಸಲಹೆ ಪಡೆದು ಬೆಳ್ಳುಳ್ಳಿಯನ್ನು ಔಷಧಿಯಾಗಿ ಸೇವಿಸಬಹುದು.

ಉಪಯೋಗಿಸುವ ವಿಧಾನ
*ಪ್ರತಿ ಊಟದಲ್ಲಿ ಬೆಳ್ಳುಳ್ಳಿಯ ಹಸಿ ಎಸಳುಗಳನ್ನು ಊಟದ ನಡುವೆ ತಿನ್ನಿರಿ.
*ಪ್ರತಿ ಊಟದಲ್ಲಿ ನಾಲ್ಲ್ಕೈದು ಎಸಳುಗಳು ಸಾಕು.
*ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಒಂದು ಅಥವಾ ಎರಡು ಚಿಕ್ಕ ಎಸಳುಗಳನ್ನು ತಿನ್ನುವುದೂ ಫಲಕಾರಿಯಾಗಿದೆ. (ಯಾವುದಕ್ಕೂ ಮೊದಲು ವೈದ್ಯರ ಸಲಹೆ ಪಡೆಯಿರಿ)

ಹಲ್ಲುನೋವಿನ ಶಮನಕ್ಕೆ
ಹಲ್ಲುನೋವನ್ನು ನಿವಾರಿಸಿಕೊಳ್ಳಲೂ ಕೂಡಾ ಬೆಳ್ಳುಳ್ಳಿಯನ್ನು ಬಳಸಿಕೊಳ್ಳಬಹುದು. ಇದಕ್ಕೆ ನೀವು ಮಾಡಬೇಕಾದುದಿಷ್ಟೇ.....ನೋವು೦ಟು ಮಾಡುತ್ತಿರುವ ಹಲ್ಲಿನ ಮೇಲೆ ಬೆಳ್ಳುಳ್ಳಿಯ ಸಣ್ಣ ಚೂರೊ೦ದನ್ನು ಇರಿಸಿಕೊಳ್ಳಿರಿ.

ಮೂಲವ್ಯಾಧಿ ಹಾಗೂ ಮಲಬದ್ಧತೆಗೆ
ಒ೦ದಿಷ್ಟು ನೀರನ್ನು ಕುದಿಸಿ ಅದಕ್ಕೆ ಸಾಕಷ್ಟು ಬೆಳ್ಳುಳ್ಳಿಯನ್ನು ಸೇರಿಸಿಕೊ೦ಡು ಸೇವಿಸಿದಲ್ಲಿ ಮೂಲವ್ಯಾಧಿ ಹಾಗೂ ಮಲಬದ್ಧತೆಗೆ ಸಾಂತ್ವನ ನೀಡುತ್ತದೆ

ಪಚನಕ್ರಿಯೆಗೆ ಸಹಕಾರಿ
ಬೆಳ್ಳುಳ್ಳಿಯು ಸರಿಯಾದ ಪಚನಕ್ರಿಯೆಯನ್ನೂ ಹಾಗೂ ಒಳ್ಳೆಯ ಹಸಿವನ್ನೂ ಉದ್ಧೀಪಿಸುತ್ತದೆ. ಜೊತೆಗೆ ಬೆಳ್ಳುಳ್ಳಿಯು ಮಾನಸಿಕ ಒತ್ತಡವನ್ನು ನಿಯ೦ತ್ರಿಸಲೂ ಕೂಡ ನೆರವಾಗುತ್ತದೆ ಹಾಗೂ ತನ್ಮೂಲಕ ನೀವು ಒತ್ತಡಕ್ಕೊಳಗಾದಾಗಲೆಲ್ಲಾ ನಿಮ್ಮ ಶರೀರವು ಉತ್ಪತ್ತಿ ಮಾಡುವ ಜಠರರಸದ ಉತ್ಪತ್ತಿಯನ್ನು ಹತ್ತಿಕ್ಕುತ್ತದೆ.

ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ
ಬೆಳ್ಳುಳ್ಳಿಯಲ್ಲಿ ಆಲೈಸಿನ್ (Allicin) ಎಂಬ ಇನ್ನೊಂದು ಪೋಷಕಾಂಶವಿದ್ದು ಇದು ರಕ್ತದಲ್ಲಿ ಟ್ರೈಗ್ಲಿಸರೈಡ್ ಪ್ರಮಾಣವನ್ನು ನಿಯಂತ್ರಿಸುವ ಗುಣ ಹೊಂದಿದೆ. ಇದು ಒಟ್ಟು ಕೊಲೆಸ್ಟ್ರಾಲ್ ಮಟ್ಟದ ಮೇಲೆ ಪ್ರಭಾವ ಬೀರುವ ಮೂಲಕ ಕೆಟ್ಟ ಕೊಲೆಸ್ಟ್ರಾಲ್ ನ ಪ್ರಭಾವವನ್ನು ಕಡಿಮೆಗೊಳಿಸುತ್ತದೆ.



Click it and Unblock the Notifications
