ಸಂಧಿವಾತಕ್ಕೆ ಮನೆಮದ್ದು ಇರುವಾಗ, ವೈದ್ಯರ ಹಂಗೇಕೆ?

By: Arshad
Subscribe to Boldsky

ಸಾಮಾನ್ಯವಾಗಿ ಮೂಳೆಗಳು ಕೂಡುವ ಸಂಧಿಯಲ್ಲಿ ಸೋಂಕು ಉಂಟಾದರೆ ಇಲ್ಲಿ ಅಪಾರ ನೋವು, ಚರ್ಮ ಕೆಂಪಗಾಗುವುದು ಮತ್ತು ಊದಿಕೊಳ್ಳುವುದು ಮೊದಲಾದ ತೊಂದರೆಗಳು ಎದುರಾಗುತ್ತವೆ. ಪ್ರಾರಂಭದಲ್ಲಿ ನಿಧಾನವಾಗಿ ನೋವು ಪ್ರಾರಂಭವಾಗುತ್ತದೆ. ಇದನ್ನು ಕಡೆಗಣಿಸಿದರೆ ಭೀಕರ ರೂಪ ಪಡೆಯಬಹುದು. ಬೆರಳುಗಳನ್ನು ಮುಟ್ಟಲೂ ಆಗದಷ್ಟು ನೋವು ಆವರಿಸಬಹುದು. ವಿಶೇಷವಾಗಿ ಕಾಲುಬೆರಳು, ಕೈಬೆರಳು, ಹಿಮ್ಮಡಿ, ಮಂಡಿಯ ಸಂಧಿಗಳಲ್ಲಿ ಈ ತೊಂದರೆ ಅತಿ ಹೆಚ್ಚಾಗಿ ಕಾಣಬರುತ್ತದೆ, ಇವೆಲ್ಲವೂ ಸಂಧಿವಾತದ ಲಕ್ಷಣವಾಗಿದೆ.

One Drink That Helps Cure Gout Pain
 

ಸಂಧಿವಾತಕ್ಕೆ ರಕ್ತದಲ್ಲಿ ಯೂರಿಕ್ ಆಮ್ಲದ ಹೆಚ್ಚಳ ಪ್ರಮುಖ ಕಾರಣವಾಗಿದೆ. ಮೂಳೆಗಳ ಸಂಧಿಯಲ್ಲಿ ಎರಡು ಮೂಳೆಗಳು ಕೀಲಿನ ರೂಪದಲ್ಲಿ ಚಲಿಸಲು ಜಾರುಕದಂತಹ ದ್ರವವಿದೆ. ಯೂರಿಕ್ ಆಮ್ಲದ ಪ್ರಮಾಣ ಹೆಚ್ಚಾದರೆ ಇದು ಚಿಕ್ಕ ಹರಳುಗಳ ರೂಪ ಪಡೆಯುತ್ತದೆ. ಈ ಹರಳುಗಳು ಮೂಳೆಗಳ ಸಂದುಗಳಲ್ಲಿ ಸೇರಿಕೊಂಡು ನಯವಾದ ಮೂಳೆಗಳ ಮೇಲ್ಮೈಯನ್ನು ಸವೆಸುತ್ತವೆ. ಅಲ್ಲದೇ ಸೋಂಕು ಉಂಟಾಗಿ ಜಾರುಕದ ಪ್ರಮಾಣವೂ ಕಡಿಮೆಯಾಗುತ್ತದೆ. ಆಗ ನರಾಗ್ರಗಳಿಗೆ ತೀವ್ರ ಸಂವೇದನೆ ದೊರೆತು ಅಪಾರ ನೋವು ಪ್ರಾರಂಭವಾಗುತ್ತದೆ.        ಸಂಧಿವಾತ ಸಮಸ್ಯೆಯ ಲಕ್ಷಣ ಮತ್ತು ಕಾರಣ

One Drink That Helps Cure Gout Pain
 

ಆದರೆ ಈ ಸ್ಥಿತಿಯಿಂದ ರಕ್ಷಿಸಲು ನಿಸರ್ಗ ಕೆಲವು ಸಾಮಾಗ್ರಿಗಳನ್ನು ಔಷಧಿಯ ರೂಪದಲ್ಲಿ ನೀಡಿದೆ. ಪಪ್ಪಾಯಿ ಕಾಯಿ, ಹಸಿರು ಟೀ ಎಲೆಗಳನ್ನು ನೀರಿನಲ್ಲಿ ಕುದಿಸಿ ತಯಾರಿಸಿದ ಈ ಪೇಯವನ್ನು ಕುಡಿಯುತ್ತಾ ಬಂದರೆ ಸಂಧಿವಾತ ನಿಧಾನವಾಗಿ ಇಲ್ಲವಾಗುತ್ತದೆ. ಪಪ್ಪಾಯಿ ಕಾಯಿಯಲ್ಲಿ ವಿಟಮಿನ್ನುಗಳು, ಪೊಟ್ಯಾಶಿಯಂ, ಮೆಗ್ನೀಶಿಯಂ, ವಿವಿಧ ಕಿಣ್ವಗಳು ಮತ್ತು ಫೈಟೋ ನ್ಯೂಟ್ರಿಯೆಂಟ್ ಮೊದಲಾದ ಪೋಷಕಾಂಶಗಳಿದ್ದು ಜೀರ್ಣಕ್ರಿಯೆಗೆ ನೆರವಾಗುತ್ತವೆ. ಇದಕ್ಕೂ ಮಿಗಿಲಾಗಿ ಪೊಪ್ಪಾಯಿಯಲ್ಲಿರುವ ಪಪಾಯಿನ್ ಎಂಬ ಪೋಷಕಾಂಶ ಉರಿಯೂತ ನಿವಾರಕ ಗುಣ ಹೊಂದಿದ್ದು ವಿಶೇಷವಾಗಿ ಸಂಧಿವಾತ ನಿವಾರಿಸಲು ಸಮರ್ಥವಾಗಿದೆ.    ಕೀಲು ನೋವಿನ ಪರಿಹಾರಕ್ಕೆ ಪೂರಕ ಔಷಧಿ ಯಾವುದು?

ಈ ಅದ್ಭುತ ಪೇಯವನ್ನು ಕುಡಿಯುವುದರಿಂದ ಸಂಧಿವಾತ ಮಾತ್ರವಲ್ಲ, ಕೆಲವು ವಿಧದ ಅಸ್ತಮಾವನ್ನೂ ಗುಣಪಡಿಸುತ್ತದೆ. ಅಲ್ಲದೇ ಕರುಳಿನ ಕಲ್ಮಶಗಳನ್ನು ಹೊರಹಾಕಲು, ವಾಕರಿಕೆ ತಡೆಯಲು, ಮಲಬದ್ಧತೆಯಿಂದಲೂ ರಕ್ಷಿಸುತ್ತದೆ. ವಿಶೇಷವಾಗಿ ಮಹಿಳೆಯರಿಗೆ ಎದುರಾಗುವ ಮೂತ್ರನಾಳದ ಸೋಂಕನ್ನೂ ನಿವಾರಿಸುತ್ತದೆ ಹಾಗೂ ನಿಯಮಿತವಾಗಿ ಸೇವಿಸುವ ಮೂಲಕ ಮತ್ತೆ ಬರದಂತೆ ರಕ್ಷಿಸುತ್ತದೆ. 

One Drink That Helps Cure Gout Pain
 

ಇದರೊಂದಿಗೆ ಬಳಸಲಾಗುವ ಹಸಿರು ಟೀ ಯಲ್ಲಿ ಆಂಟಿ ಆಕ್ಸಿಡೆಂಟುಗಳು ಸಮೃದ್ಧವಾಗಿವೆ. ಇದರಲ್ಲಿ ಪ್ರಮುಖವಾಗಿರುವ ಪಾಲಿಫೆನಾಲ್‌ಗಳು ಸಂಧಿವಾತ ನಿವಾರಿಸುವ ಗುಣ ಹೊಂದಿದ್ದು ನೋವು ನಿವಾರಕವೂ ಆಗಿವೆ. ಈ ಎರಡೂ ಸಾಮಾಗ್ರಿಗಳನ್ನು ಬಳಸಿ ತಯಾರಿಸಿದ ಪೇಯ ಅತ್ಯಂತ ಸುರಕ್ಷಿತವಾಗಿದ್ದು ಇದರಲ್ಲಿ ಯಾವುದೇ ಅಡ್ಡಪರಿಣಾಮವಿರುವುದಿಲ್ಲ.   ಸಂಧಿವಾತ, ಉರಿಯೂತ ನಿವಾರಿಸುವ ಪವರ್ ಫುಲ್ ಜ್ಯೂಸ್

ಈ ಪೇಯವನ್ನು ತಯಾರಿಸುವ ಬಗೆ

1. ಸುಮಾರು ಎರಡು ಲೀಟರ್ ಸ್ವಚ್ಛ ಕುಡಿಯುವ ನೀರನ್ನು ಒಂದು ಪಾತ್ರೆಯಲ್ಲಿ ಕುದಿಸಿ

2. ಒಂದು ಮಧ್ಯಮಗಾತ್ರದ ಹಸಿ ಪಪ್ಪಾಯಿ (ಕಾಯಿ)ಯನ್ನು ಚೆನ್ನಾಗಿ ತೊಳೆದು ಸಿಪ್ಪೆ ಸುಲಿಯಿರಿ.

3. ಪಪ್ಪಾಯಿಯನ್ನು ಕೊಯ್ದು ಬೀಜಗಳನ್ನು ನಿವಾರಿಸಿ ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿ

4. ಈ ತುಂಡುಗಳನ್ನು ನೀರು ಕುದಿಯಲು ಪ್ರಾರಂಭಿಸಿದ ಬಳಿಕ ನೀರಿನಲ್ಲಿ ಹಾಕಿ ಐದು ನಿಮಿಷ ಕುದಿಸಿ. ಉರಿ ಮಧ್ಯಮವಾಗಿರಲಿ.

One Drink That Helps Cure Gout Pain

5. ಬಳಿಕ ಈ ನೀರಿಗೆ ಎರಡು ಚಿಕ್ಕಚಮಚ ಹಸಿರು ಟೀ ಸೇರಿಸಿ ಇನ್ನೂ ನಾಲ್ಕೈದು ನಿಮಿಷ ಕುದಿಸಿ.

6. ಬಳಿಕ ಈ ನೀರನ್ನು ಸೋಸಿ ಇನ್ನೊಂದು ಪಾತ್ರೆಯಲ್ಲಿ ಸಂಗ್ರಹಿಸಿ. ಈ ನೀರನ್ನು ತಣಿಯಲು ಬಿಡಿ.

7. ಈ ನೀರನ್ನು ದಿನವಿಡೀ ಕೊಂಚಕೊಂಚವಾಗಿ ಕುಡಿಯುತ್ತಾ ಬನ್ನಿ. ಅಷ್ಟೂ ನೀರನ್ನು ದಿನದಲ್ಲಿ ಪೂರ್ತಿ ಕುಡಿದು ಖಾಲಿಮಾಡಬೇಕು.

ಕೆಲವು ದಿನಗಳಲ್ಲಿಯೇ ಇದರ ಪರಿಣಾಮ ಕಂಡುಬರುತ್ತದೆ. ನೋವು ಪೂರ್ಣವಾಗಿ ಕಡಿಮೆಯಾಗಿದೆ ಅನ್ನಿಸಿದ ಬಳಿಕವೂ ಒಂದೆರಡು ದಿನ ಮುಂದುವರೆಸಿ ಬಳಿಕ ನಿಲ್ಲಿಸಿ.

English summary

One Drink That Helps Cure Gout Pain

Gout is generally caused when there is a rise in the uric acid level in the blood. When uric acid crystallizes and forms a deposit around the joints, it leads to the formation of what is called gouts. However, there is this one drink that can be prepared using water, unripe papaya and green tea leaves, which has proved exceptionally helpful in curing gout and its related pain
Story first published: Thursday, June 16, 2016, 18:02 [IST]
Please Wait while comments are loading...
Subscribe Newsletter