Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ತೂಕ ಇಳಿಸುವ ಯೋಚನೆಯೇ? ಈ ತರಕಾರಿಗಳನ್ನು ದೂರವಿರಿಸಿ!
ಕೆಲವು ತರಕಾರಿಗಳಲ್ಲಿ ಅತಿ ಹೆಚ್ಚಿನ ಪೋಷಕಾಂಶಗಳಿದ್ದು ಸ್ನಾಯುಗಳನ್ನು ಬೆಳೆಸಲು ಮತ್ತು ಕೊಬ್ಬನ್ನು ಸಂಗ್ರಹಿಸಲು ನೆರವಾಗುತ್ತವೆ. ಆದ್ದರಿಂದ ತೂಕ ಇಳಿಸುವ ಹುಮ್ಮಸ್ಸಿನಲ್ಲಿರುವವರು ಈ ತರಕಾರಿಗಳನ್ನು ಆದಷ್ಟೂ ಸೇವಿಸಬಾರದು.
ಸಾಮಾನ್ಯವಾಗಿ ತೂಕ ಇಳಿಸಬೇಕಾದರೆ ಮಾಂಸಾಹಾರ ಕಡಿಮೆ ಮಾಡಿ, ತರಕಾರಿ ಹೆಚ್ಚು ತಿನ್ನಿ ಎಂದೇ ಹೆಚ್ಚಿನವರು ತಿಳಿಸುತ್ತಾರೆ. ಆದರೆ ವ್ಯತಿರಿಕ್ತವಾಗಿ ಕೆಲವು ತರಕಾರಿಗಳ ಸೇವನೆಯಿಂದ ತೂಕ ಹೆಚ್ಚುತ್ತದೆ! ಕೇಳಿ ಅಚ್ಚರಿಯಾಯಿತೇ, ಆದರೆ ಇದು ನಿಜ.
ಕೆಲವು ತರಕಾರಿಗಳಲ್ಲಿ ಅತಿ ಹೆಚ್ಚಿನ ಪೋಷಕಾಂಶಗಳಿದ್ದು ಸ್ನಾಯುಗಳನ್ನು ಬೆಳೆಸಲು ಮತ್ತು ಕೊಬ್ಬನ್ನು ಸಂಗ್ರಹಿಸಲು ನೆರವಾಗುತ್ತವೆ. ಆದ್ದರಿಂದ ತೂಕ ಇಳಿಸುವ ಹುಮ್ಮಸ್ಸಿನಲ್ಲಿರುವವರು ಈ ತರಕಾರಿಗಳನ್ನು ಆದಷ್ಟೂ ಸೇವಿಸಬಾರದು. ಬನ್ನಿ, ಈ ತರಕಾರಿಗಳು ಯಾವುವು ಎಂಬುದನ್ನು ನೋಡೋಣ.....

ಆಲೂಗಡ್ಡೆ
ಆಲೂಗಡ್ಡೆಯ ಬಹುತೇಕ ಭಾಗ ಪಿಷ್ಟವೇ ಆಗಿದೆ. ಕೆಲವು ತುಂಡು ತಿಂದರೆ ಪರವಾಗಿಲ್ಲ. ಆದರೆ ಈ ಪ್ರಮಾಣ ಹೆಚ್ಚಾದರೆ ಮಾತ್ರ ಪಿಷ್ಠ ಕೊಬ್ಬಿನಲ್ಲಿ ಬದಲಾಗುವ ಕಾರಣ ಕೊಲೆಸ್ಟ್ರಾಲ್ ಸಹಾ ಹೆಚ್ಚುತ್ತದೆ. ಅಲ್ಲದೇ ಬೇಯಿಸಿದ ಆಲೂಗಡ್ಡೆಗಿಂತಲೂ ಕರಿದ ಮತ್ತು ಹುರಿದ ಆಲುಗಡ್ಡೆ ಹೆಚ್ಚು ಅಪಾಯಕಾರಿಯಾಗಿದೆ. ಆಲೂಗಡ್ಡೆ ಆರೋಗ್ಯಕ್ಕೆ ಮಾತ್ರವಲ್ಲ, ಸೌಂದರ್ಯಕ್ಕೂ ಬೇಕು!

ಹೂಕೋಸು
ಹೂಕೋಸಿನಲ್ಲಿ ಕೆಲವು ಪೋಷಕಾಂಶಗಳಿದ್ದು ಇವು ಉಪ್ಪು ಮತ್ತು ಇತರ ಆಹಾರಗಳ ಮೂಲಕ ಸೇವಿಸಿದ್ದ ಅಯೋಡಿನ್ ಅನ್ನು ಹೀರಿಕೊಳ್ಳದಂತೆ ತಡೆಯುತ್ತವೆ. ಪರಿಣಾಮವಾಗಿ ಜೀವರಾಸಾಯನಿಕ ಕ್ರಿಯೆ ಕುಂಠಿತಗೊಳ್ಳುತ್ತದೆ.

ಹೂಕೋಸು
ಇದರಿಂದ ಕೊಬ್ಬು ಬಳಸಲ್ಪಡದೇ ತೂಕ ಹೆಚ್ಚುತ್ತದೆ. ಆದ್ದರಿಂದ ಹೂಕೋಸನ್ನೂ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬಾರದು. ಹೂಕೋಸು ಎಂದಾಕ್ಷಣ ಮುಖ ಸಿಂಡರಿಸಬೇಡಿ ಪ್ಲೀಸ್!

ಒಣ ಬಟಾಣಿ
ಒಣಗಿಸಿದ ಬಟಾಣಿಯನ್ನು ನೀರಿನಲ್ಲಿ ನೆನೆಸಿಟ್ಟು ಮತ್ತೆ ಹಸಿಯಾಗಿಸಿ ಬೇಯಿಸಿ ತಿನ್ನುವುದು ಎಲ್ಲರಿಗೂ ಇಷ್ಟ. ಆದರೆ ಸಾಮಾನ್ಯವಾಗಿ ಈ ಬಟಾಣಿ ಕಾಳುಗಳು ಬೇಗನೇ ಒಣಗುವಂತೆ ಮಾಡಲು ಕೃತಕ ವಿಧಾನ, ಕೃತಕ ಬಣ್ಣ ಮತ್ತು ವಿಶೇಷವಾಗಿ ಹೆಚ್ಚಿನ ಸೋಡಿಯಂ ಲವಣಗಳನ್ನು ಬಳಸಿರುತ್ತಾರೆ. ಈ ಲವಣಗಳು ಆಹಾರದ ಮೂಲಕ ಸೇವಿಸಲ್ಪಟ್ಟಾಗ ತೂಕ ಹೆಚ್ಚಲು ಕಾರಣವಾಗುತ್ತವೆ. ಇವುಗಳ ಬದಲಿಗೆ ಹಸಿಯಾದ, ಸುಲಿದ ಬಟಾಣಿಗಳನ್ನೇ ಬಳಸಿ.

ಮೆಕ್ಕೆ ಜೋಳ
ಮೆಕ್ಕೆ ಜೋಳದಲ್ಲಿ ಫ್ರುಕ್ಟೋಸ್ ಸಕ್ಕರೆ ಅತಿ ಹೆಚ್ಚಾಗಿದೆ. ಇದು ದೇಹದ ತೂಕವನ್ನು ಹೆಚ್ಚಿಸಲು ನೆರವಾಗುತ್ತದೆ. ಆದ್ದರಿಂದ ಮೆಕ್ಕೆಜೋಳವನ್ನು ಹುರಿದ ಭುಟ್ಟಾ, ಪಾಪ್ ಕಾರ್ನ್ ಮೊದಲಾದವುಗಳನ್ನು ಸೇವಿಸಬೇಡಿ. ಮೆಕ್ಕೆ ಜೋಳದ ತೆನೆ ಇದುವೇ ಆರೋಗ್ಯದ ಗೊನೆ



Click it and Unblock the Notifications
