Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಆರೋಗ್ಯವೃದ್ಧಿಗೆ ದಿನನಿತ್ಯ ಕುಡಿಯಿರಿ, ಒಂದು ಗ್ಲಾಸ್ ಮಜ್ಜಿಗೆ
ಮಾರ್ಚ್ ಬಂತೆಂದರೆ ಮಕ್ಕಳ ಪರೀಕ್ಷೆಯ ಜೊತೆಗೇ ಬೇಸಿಗೆಯೂ ಕಾಲಿಡುತ್ತದೆ. ಇದುವರೆಗೆ ತಂಪಾಗಿದ್ದು ಚಳಿ ಅನ್ನಿಸುತ್ತಿದ್ದ ದಿನಗಳೆಲ್ಲಾ ಭಗ ಭಗ ಎನಿಸಲಿವೆ. ಹಗಲಿನ ತಾಪಮಾನ ಏರುತ್ತಿದ್ದಂತೆಯೇ ಸುಡುವ ಬಿಸಿಲು, ಬೆವರು, ಧೂಳು ಎಲ್ಲವೂ ಬಿಸಿಲಿನಲ್ಲಿ ಹೊರಗೆ ನಡೆಯುವುದನ್ನು ತ್ರಾಸದಾಯಕವಾಗಿಸುತ್ತವೆ. ಈ ಕ್ಷಣಕ್ಕೆ ತಂಪಾದ ಐಸ್ ಕ್ರೀಂ, ಲಸ್ಸಿ, ಬುರುಗು ಬರುವ ತಂಪುಪಾನೀಯ ಮೊದಲಾದವುಗಳ ಮಾರಾಟ ಗಗನಕ್ಕೇರುತ್ತದೆ.
ಅದರಲ್ಲೂ ಫ್ರಿಜ್ಜಿನಲ್ಲಿಟ್ಟಿದ್ದ ಅತಿ ತಂಪಾದ ಅಂದರೆ ಚಿಲ್ಡ್ ಎಂದು ಸರಿಸುಮಾರು ಮಂಜುಗಡ್ಡೆಯಾಗುವಷ್ಟು ತಣ್ಣಗಾಗಿಸಿದ ಸೋಡಾ ಆಧಾರಿತ ಲಘು ಪಾನೀಯಗಳು ಹೆಚ್ಚು ಮಾರಾಟವಾಗುತ್ತವೆ. ಆದರೆ ಐಸ್ ಕ್ರೀಂ ಲಸ್ಸಿಗಳು ಅಗತ್ಯಕ್ಕೂ ಹೆಚ್ಚಿನ ಕ್ಯಾಲೋರಿ, ಕೊಬ್ಬುಗಳನ್ನು ನೀಡುವ ಮೂಲಕ ಆರೋಗ್ಯ ಕೆಡಿಸಿದರೆ ಈ ಬುರುಗು ಬರುವ ತಂಪು ಪಾನೀಯಗಳು ಹಲವು ರೀತಿಯಲ್ಲಿ ಆರೋಗ್ಯವನ್ನು ಕೆಡಿಸುತ್ತವೆ. ವಾವ್..ದೇಹಕ್ಕೆ ತಂಪುಣಿಸುವ ಮಜ್ಜಿಗೆ ಸಾ೦ಬಾರ್ ರೆಸಿಪಿ!
ಇದರಲ್ಲಿ ಸಾಮಾನ್ಯಕ್ಕಿಂತಲೂ ಏಳು ಪಟ್ಟು ಹೆಚ್ಚು ಸಕ್ಕರೆ ಇರುವುದರಿಂದ ಈ ಆಗಾಧ ಪ್ರಮಾಣ ನಮ್ಮ ಸೂಕ್ಷ್ಮ ಅಂಗಗಳ ಮೇಲೆ ಥಟ್ಟನೇ ಅಲ್ಲದಿದ್ದರೂ ಕ್ರಮೇಣವಾಗಿ ಪ್ರಭಾವ ಬೀರಲು ತೊಡಗುತ್ತವೆ. ಇದರ ಬದಲಿಗೆ ಬೆವರಿನ ಧಗೆಯಿಂದ ಆರಾಮ ಪಡೆಯಲು ನಿಸರ್ಗ ನೀಡಿದ ತಂಪು ಪಾನೀಯಗಳೇ ಆರೋಗ್ಯಕರ ಮತ್ತು ಸೂಕ್ತ. ಎಳನೀರು, ಮಜ್ಜಿಗೆ, ಲಿಂಬು ಪಾನಿ, ಬೆಲ್ಲ ಮತ್ತು ತಣ್ಣೀರು, ತಾಜಾ ಹಣ್ಣುಗಳ ರಸ, ತಾಜಾ ಹಣ್ಣುಗಳ ತಿರುಳು ಇತ್ಯಾದಿಗಳನ್ನು ಆಯ್ಕೆ ಮಾಡಿಕೊಳ್ಳುವುದು ಜಾಣತನವಾಗಿದೆ. ಮಜ್ಜಿಗೆ ಮತ್ತು ಲಸ್ಸಿ: ಇವೆರಡರಲ್ಲಿ ಆರೋಗ್ಯಕ್ಕೆ ಯಾರು ಹಿತವರು?
ಆಯುರ್ವೇದದಲ್ಲಿ ಸಾತ್ವಿಕ ಆಹಾರ ಎಂದು ಪರಿಗಣಿಸಲ್ಪಟ್ಟ ಮಜ್ಜಿಗೆ ಬೇಸಿಗೆಯ ದಣಿವನ್ನು ಆರಿಸಲು ಉತ್ತಮವಾಗಿದೆ. ಮಜ್ಜಿಗೆ ಎಂದರೆ ವಾಸ್ತವವಾಗಿ ಮೊಸರಿನಿಂದ ಬೆಣ್ಣೆಯನ್ನು ಕಡೆದು ತೆಗೆದ ಬಳಿಕ ಉಳಿದ ನೀರು. ಆದರೆ ಇದು ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗಲು ಸಾಧ್ಯವಿಲ್ಲ. ಆದ್ದರಿಂದ ಮೊಸರಿಗೆ ಕೊಂಚ ನೀರು ಸೇರಿಸಿ ತೆಳ್ಳಗಾಗಿಸಿ, ಇದಕ್ಕೆ ಹಸಿಮೆಣಸು, ಉಪ್ಪು, ಇಂಗು, ಜೀರಿಗೆ ಪುಡಿ, ಚಾಟ್ ಮಸಾಲಾ, ಕೊತ್ತಂಬರಿ ಸೊಪ್ಪು, ಶುಂಠಿ, ಬೇವಿನ ಸೊಪ್ಪು, ಬೆಳ್ಳುಳ್ಳಿ ಮೊದಲಾದವುಗಳನ್ನು ಕೊಂಚ ಕೊಂಚವಾಗಿ ಸೇರಿಸಿ ಮಿಕ್ಸಿಯಲ್ಲಿ ಗೊಟಾಯಿಸಿ ಕುಡಿದರೆ ಬೇಸಿಗೆಗೆ ಇದಕ್ಕಿಂತ ಉತ್ತಮವಾದ ಪೇಯ ಇನ್ನೊಂದಿಲ್ಲ. ಈ ಸಾಮಾಗ್ರಿಗಳಲ್ಲಿ ಕೊಂಚ ಅತ್ತಿತ್ತ ಮಾಡಿ ಭಾರತದ ವಿವಿಧ ಕಡೆಗಳಲ್ಲಿ ವಿವಿಧ ಹೆಸರುಗಳಿಂದ ಉಪಯೋಗಿಸಲಾಗುತ್ತದೆ.
ಛಾಸ್, ಛಾಂಛ್, ತಾಕಾಮೃತ್, ಮಾಠಾ ಮೊದಲಾದ ಹೆಸರುಗಳಿಂದ ಕರೆಯಲಾಗುತ್ತದೆ. ಆಯಾ ಪ್ರದೇಶಕ್ಕೆ ಅನುಸರಿಸಿ ಇದನ್ನು ತಯಾರಿಸುವ ವಿಧಾನವೂ ಭಿನ್ನವಾಗಿದೆ. ಆದರೆ ಪೋಷಕಾಂಶ ಮತ್ತು ಪ್ರಯೋಜನಗಳ ವಿಷಯ ಬಂದರೆ ಹೆಚ್ಚೂ ಕಡಿಮೆ ಎಲ್ಲಾ ರಾಜ್ಯದ ಮಜ್ಜಿಗೆಯೂ ಒಂದೇ. ಬನ್ನಿ, ಈ ಬೇಸಿಗೆಯಲ್ಲಿ ನಮ್ಮ ದೇಶದ್ದೇ ಆದ ಆರೋಗ್ಯಕರ, ಸಾಂಪ್ರಾದಾಯಿಕ ಪೇಯವನ್ನೇ ಕುಡಿಯೋಣ, ನಮ್ಮತನವನ್ನೇ ಮೆರೆಯೋಣ...

ದೇಹದ ತಾಪಮಾನವನ್ನು ತಣಿಸುತ್ತದೆ
ಬೇಸಿಗೆಯ ಬಿಸಿಯಲ್ಲಿ ದೇಹವೂ ಬಿಸಿಯಾಗತೊಡಗುತ್ತದೆ. ಇದನ್ನು ತಣಿಸಲು ಅತಿ ಹೆಚ್ಚಿನ ಪ್ರಮಾಣದಲ್ಲಿ ಬೆವರು ಹರಿಯಬೇಕಾಗುತ್ತದೆ. ಆಗ ದೇಹದಿಂದ ನಷ್ಟವಾಗುವ ನೀರನ್ನು ಬೇಗನೇ ಭರ್ತಿಮಾಡಿಕೊಳ್ಳದೇ ಇದ್ದರೆ ದ್ರವದ ಪ್ರಮಾಣ ಕಡಿಮೆಯಾಗಿ ದೇಹ ಹೆಚ್ಚು ಬಿಸಿಯಾಗಲು ಕಾರಣವಾಗುತ್ತದೆ. ಮಜ್ಜಿಗೆಯ ಸೇವನೆ ಈ ತೊಂದರೆಯಿಂದ ತಡೆಯುತ್ತದೆ ಹಾಗೂ ದೇಹವನ್ನು ತಂಪಾಗಿಡಲು ನೆರವಾಗುತ್ತದೆ. ಅಲ್ಲದೇ ರಜೋನಿವೃತ್ತಿ ಸಮಯ ಹತ್ತಿರಾಗುತ್ತಿರುವ ಮಹಿಳೆಯರಿಗೆ ಈ ದಿನಗಳ ಮುನ್ನ ಮತ್ತು ಹಿಂದಿನ ದಿನಗಳಲ್ಲಿ ಎದುರಾಗುವ ಸ್ರಾವದಿಂದಲೂ ಮಜ್ಜಿಗೆ ಉಪಶಮನ ನೀಡುತ್ತದೆ.

ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ
ಮಜ್ಜಿಗೆಯಲ್ಲಿ ಮೊಸರು ಮುಖ್ಯವಾಗಿರುವ ಕಾರಣ ಮೊಸರಿನ ಗುಣಗಳೆಲ್ಲವೂ ಇದೆ. ಇದರಲ್ಲಿರುವ ಪ್ರೋಬಯೋಟಿಕ್ಸ್ ಅಥವಾ ಜೀರ್ಣಕ್ರಿಯೆಗೆ ಸಹಕರಿಸುವ ಪೋಷಕಾಂಶಗಳು ಜೀರ್ಣಾಂಗಗಳ ಹೊರೆಯನ್ನು ಕಡಿಮೆ ಮಾಡುತ್ತವೆ. ಅಲ್ಲದೇ ಮಜ್ಜಿಗೆಯಲ್ಲಿ ಸೇರಿಸಿರುವ ಜೀರಿಗೆ ಪುಡಿ ಮೊದಲಾದ ಮಸಾಲೆ ಪದಾರ್ಥಗಳು ಜೀರ್ಣಕ್ರಿಯೆಗೆ ಇನ್ನಷ್ಟು ಸಹಕರಿಸಿ ಜೀರ್ಣಕ್ರಿಯೆಯನ್ನು ಸುಲಭ ಮತ್ತು ಪರಿಪೂರ್ಣಗೊಳಿಸುತ್ತವೆ. ಅಲ್ಲದೇ ಬೆಳ್ಳುಳ್ಳಿ ಮೊದಲಾದವು ಕರುಳಿನ ತೊಂದರೆಗಳನ್ನು ನಿವಾರಿಸುತ್ತದೆ. ಒಟ್ಟಾರೆ ಜೀರ್ಣವ್ಯವಸ್ಥೆಯನ್ನು ಸುಲಭಗೊಳಿಸುತ್ತದೆ.

ಮಸಾಲೆಯುಕ್ತ ಆಹಾರದ ಉರಿಯನ್ನು ತಗ್ಗಿಸುತ್ತದೆ
ಭಾರತೀಯ ಅಡುಗೆಗಳನ್ನು ಮಸಾಲೆಗಳಿಲ್ಲದೇ ಊಹಿಸಲೂ ಸಾಧ್ಯವಿಲ್ಲ. ಈ ರುಚಿಗೆ ಮನಸೋತವರು ಕೊಂಚ ಹೆಚ್ಚಿನ ಪ್ರಮಾಣವನ್ನು ಹೊಟ್ಟೆಗಿಳಿಸುತ್ತಾರೆ. ಭಾರತೀಯ ಸಂಸ್ಕೃತಿಯಲ್ಲಿಯೂ ಅತಿಥಿಗಳು ಹೆಚ್ಚು ಉಂಡಷ್ಟೂ ಹೆಚ್ಚು ಸಂತೋಷಪಡುವುದರಿಂದ ಅತಿಥಿಗಳಿಗೆ ಬೇಡ ಬೇಡ ಎಂದರೂ ಇನ್ನೂ ಕೊಂಚ ಬಡಿಸುತ್ತೇವೆ. ಕಾರಣವಾಗಿ ಹೆಚ್ಚಿನ ಪ್ರಮಾಣದ ಮಸಾಲೆ ಹೊಟ್ಟೆ ಸೇರುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮಸಾಲೆಯುಕ್ತ ಆಹಾರದ ಉರಿಯನ್ನು ತಗ್ಗಿಸುತ್ತದೆ
ಇವು ಹೊಟ್ಟೆಯಲ್ಲಿ ಉರಿ, ಆಮ್ಲೀಯತೆ ಮೊದಲಾದ ತೊಂದರೆಗಳನ್ನು ಉಂಟುಮಾಡಬಹುದು. ಆದರೆ ಹಾಲಿನಲ್ಲಿರುವ ಪ್ರೋಟೀನುಗಳು ಮಜ್ಜಿಗೆಯಲ್ಲಿಯೂ ಇದ್ದು ಈ ಉರಿ ತರಿಸುವ ಮಸಾಲೆಗಳನ್ನು ತಟಸ್ಥವಾಗಿಸುತ್ತವೆ. ಆದ್ದರಿಂದ ಊಟದ ಕಡೆಯ ಆಹಾರವಾಗಿ ಮಜ್ಜಿಗೆಯನ್ನು ಸೇವಿಸುವ ಮೂಲಕ ಮಸಾಲೆಗಳ ಕಾರಣ ಎದುರಾಗಬಹುದಾಗಿದ್ದ ಉರಿ, ಆಮ್ಲೀಯತೆ, ಹೊಟ್ಟೆ ಉಬ್ಬರಿಕೆ ಮೊದಲಾದವು ಇಲ್ಲವಾಗುತ್ತವೆ.

ಕೊಬ್ಬು ಕರಗಿಸುತ್ತದೆ
ಬೆಣ್ಣೆಯಿಂದ ಕೊಬ್ಬು ಬರುವುದಾದರೆ ಮೊಸರಿನಲ್ಲಿಯೂ ಕೊಬ್ಬು ಇರಬೇಕಲ್ಲವೇ? ಹೌದು, ಆದರೆ ಬೆಣ್ಣೆಯ ಕೊಬ್ಬಿಗೂ ಮೊಸರಿನ ಅಥವಾ ಮಜ್ಜಿಗೆಯ ಕೊಬ್ಬಿಗೂ ವ್ಯತ್ಯಾಸವಿದೆ. ಬೆಣ್ಣೆಯ ಕೊಬ್ಬು ಸಾಂದ್ರೀಕೃತವಾಗಿದ್ದು ಶರೀರದಲ್ಲಿ ಸಂಗ್ರಹವಾಗಲು ಸಾಧ್ಯವಾಗುತ್ತದೆ. ಆದರೆ ಮಜ್ಜಿಗೆಯ ಕೊಬ್ಬು ಸಂಗ್ರಹಗೊಳ್ಳುವ ಮೊದಲೇ ಜೀರ್ಣವಾಗಿ ಹೋಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕೊಬ್ಬು ಕರಗಿಸುತ್ತದೆ
ಏಕೆಂದರೆ ಈ ಪೋಷಕಾಂಶಗಳು ಆಹಾರದಲ್ಲಿದ್ದ ಎಣ್ಣೆ ಮತ್ತು ಮಸಾಲೆ ಪದಾರ್ಥಗಳನ್ನು ಒಡೆಯಲು ಮತ್ತು ಜೀರ್ಣಿಸಿಕೊಳ್ಳಲು ಉಪಯೋಗವಾಗುವುದರಿಂದ ತೂಕ ಏರದಿರಲು ಸಾಧ್ಯವಾಗುತ್ತದೆ. ಅಲ್ಲದೇ ಹೊಟ್ಟೆ ಮತ್ತು ಜೀರ್ಣಾಂಗಗಳ ಒಳಭಾಗಕ್ಕೆ ಮಸಾಲೆ ಅಥವಾ ಜಿಡ್ಡು ಅಂಟಿಕೊಳ್ಳದಂತೆ ತಡೆಯುವ ಮೂಲಕ ಇದರಿಂದಾಗುವ ತೊಂದರೆಯಾಗುವುದರಿಂದ ರಕ್ಷಿಸುತ್ತದೆ.

ಲ್ಯಾಕ್ಟೋಸ್ ಸಹಿಸದ ವ್ಯಕ್ತಿಗಳಿಗೆ ಕ್ಯಾಲ್ಸಿಯಂ ನೀಡುತ್ತದೆ
ಕೆಲವು ವ್ಯಕ್ತಿಗಳಿಗೆ ಲ್ಯಾಕ್ಟೋಸ್ ಅಂಶ ಅಲರ್ಜಿಕಾರಕವಾಗಿದೆ. ಅಂದರೆ ಇವರ ದೇಹ ಲ್ಯಾಕ್ಟೋಸ್ ಅಂಶವನ್ನು ಸಹಿಸದು. ಸಾಮಾನ್ಯ ಆರೋಗ್ಯದ ವ್ಯಕ್ತಿಯ ಮೂಳೆಗಳನ್ನು ದೃಢವಾಗಿರಿಸಲು ಪ್ರತಿದಿನ 1,000 ರಿಂದ್ 1,200 ಮಿಲಿಗ್ರಾಂ ಕ್ಯಾಲ್ಸಿಯಂ ಅಗತ್ಯವಿದೆ. ಆದರೆ ಈ ಅಗತ್ಯವನ್ನು ಪೂರೈಸುವ ಹಾಲಿನಲ್ಲಿ ಲ್ಯಾಕ್ಟೋಸ್ ಇದ್ದು ಲ್ಯಾಕ್ಟೋಸ್ ಸಹಿಸದ ವ್ಯಕ್ತಿಗಳಿಗೆ ಹಾಲು ಕುಡಿಯಲು ಸಾಧ್ಯವಿಲ್ಲದ ಕಾರಣ ಈ ಪೂರೈಕೆಯಿಂದ ವಂಚಿತರಾಗುತ್ತಾರೆ. ಆದರೆ ಈ ವ್ಯಕ್ತಿಗಳು ಮಜ್ಜಿಗೆಯನ್ನು, ಅದರಲ್ಲೂ ವಿಶೇಷವಾಗಿ ಬೆಣ್ಣೆ ತೆಗೆದ ನೀರನ್ನು ಕುಡಿಯುವ ಮೂಲಕ ಕ್ಯಾಲ್ಸಿಯಂ ಕೊರತೆಯನ್ನು ಪೂರೈಸಿಕೊಳ್ಳಬಹುದು.

ಹಲವು ಖನಿಜ ಮತ್ತು ವಿಟಮಿನ್ನುಗಳನ್ನು ಪೂರೈಸುತ್ತದೆ
ಮಜ್ಜಿಗೆಯಲ್ಲಿ ಕ್ಯಾಲ್ಸಿಯಂ ಹೊರತಾಗಿ ವಿವಿಧ ಪ್ರೋಟೀನುಗಳು, ವಿಟಮಿನ್ ಬಿ, ಪೊಟ್ಯಾಶಿಯಂ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇವೆಲ್ಲವೂ ಆರೋಗ್ಯಕ್ಕೆ ಪೂರಕವಾಗಿವೆ. ಅಲ್ಲದೇ ಸಾಕಷ್ಟು ಪ್ರಮಾಣದಲ್ಲಿ ಲ್ಯಾಕ್ಟಿಕ್ ಆಮ್ಲವಿದ್ದು ಜಠರದಲ್ಲಿರುವ ಪಾಥೋಜೆನ್ ಮತ್ತು ಕೆಟ್ಟ ಬ್ಯಾಕ್ಟೀರಿಯಾಗಳ ನಿವಾರಣೆಗೆ ಸಹಕರಿಸುತ್ತದೆ. ಪರಿಣಾಮವಾಗಿ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ಕ್ಯಾನ್ಸರ್, ಕೊಲೆಸ್ಟ್ರಾಲ್, ರಕ್ತದೊತ್ತಡಕ್ಕೆಲ್ಲಾ ರಾಮಬಾಣ
ಕ್ಯಾನ್ಸರ್ ತಡೆಯಲು, ಕೊಲೆಸ್ಟ್ರಾಲ್ ಕಡಿಮೆಗೊಳಿಸಲು ಮತ್ತು ರಕ್ತದೊತ್ತಡ ನಿಯಂತ್ರಿಸಲು ನೆರವಾಗುತ್ತದೆ. ಹೌದು, ನಿತ್ಯವೂ ಮಜ್ಜಿಗೆಯನ್ನು ಸೇವಿಸುವ ಮೂಲಕ ದೇಹಕ್ಕೆ ಹಲವು ರೀತಿಯ ಲಾಭಗಳಿವೆ. ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸುವುದು, ರಕ್ತದೊತ್ತಡ ಸಮರ್ಪಕವಾಗಿರುವಂತೆ ನೋಡಿಕೊಳ್ಳುವುದು ಮೊದಲಾದವು ನೇರವಾದ ಲಾಭಗಳಾಗಿವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕ್ಯಾನ್ಸರ್, ಕೊಲೆಸ್ಟ್ರಾಲ್, ರಕ್ತದೊತ್ತಡಕ್ಕೆಲ್ಲಾ ರಾಮಬಾಣ
ದೇಹದಲ್ಲಿ ಕ್ಯಾನ್ಸರ್ ಉಂಟುಮಾಡುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ಧ ಹೋರಾಡುವ ಮೂಲಕ ಹಲವು ರೀತಿಯ ಕ್ಯಾನ್ಸರ್ ಬರುವುದರಿಂದಲೂ ತಡೆಯುತ್ತದೆ. ಇದರಲ್ಲಿರುವ ಬಯೋ ಆಕ್ಟಿವ್ ಪ್ರೋಟೀನುಗಳು ಬ್ಯಾಕ್ಟೀರಿಯಾನಿವಾರಕ, ವೈರಸ್ ನಿವಾರಕ, ಕ್ಯಾನ್ಸರ್ ನಿವಾರಕ ಗುಣಗಳನ್ನು ಹೊಂದಿದ್ದು ಆರೋಗ್ಯವನ್ನು ರಕ್ಷಿಸಲು ನೆರವಾಗುತ್ತದೆ.



Click it and Unblock the Notifications










