Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ತೂಕ ಇಳಿಸಿಕೊಳ್ಳಬೇಕೇ? ಬೆಳಿಗ್ಗೆದ್ದ ತಕ್ಷಣ ಈ ಜ್ಯೂಸ್ ಕುಡಿಯಿರಿ
ಅತೀಯಾದ ದೇಹದ ತೂಕ ಹಲವಾರು ಆರೋಗ್ಯ ಸಂಬಂಧಿ ತೊಂದರೆಗಳಿಗೆ ಕಾರಣವಾಗುತ್ತದೆ. ಅಷ್ಟೇ ಅಲ್ಲ, ವ್ಯಕ್ತಿಯ ಸೌಂದರ್ಯವನ್ನೂ, ಆತ್ಮವಿಶ್ವಾಸವನ್ನೂ ಬಾಧಿಸಬಲ್ಲುದು. ತೂಕ ಹೆಚ್ಚುತ್ತಿದ್ದಂತೆಯೇ ಹೃದಯ ಸಂಬಂಧಿ ಕಾಯಿಲೆಗಳು, ರಕ್ತದೊತ್ತಡ, ಸಂಧಿವಾತ, ಕೊಲೆಸ್ಟ್ರಾಲ್ ಮೊದಲಾದ ತೊಂದರೆಗಳೂ ಬೇಡದ ಅತಿಥಿಯಂತೆ ದೇಹದಲ್ಲಿ ಸ್ಥಾನ ಪಡೆದುಕೊಳ್ಳುತ್ತವೆ. ತೂಕ ಇಳಿಸಿಕೊಳ್ಳಲು ಒಂದು ಚಮಚದಷ್ಟು ಜೇನು ಸಾಕು!
ಈ ಎಲ್ಲಾ ತೊಂದರೆಗಳಿಗೆ ಕಡಿವಾಣ ಹಾಕಬೇಕೆಂದರೆ ಮೊತ್ತ ಮೊದಲು ದೇಹದ ತೂಕ ಹೆಚ್ಚಾಗಲು ಕಾರಣವಾಗಿರುವ ಸ್ಥೂಲಕಾಯದಿಂದ ಹೊರಬರಲು ಗಟ್ಟಿಮನಸ್ಸು ಮಾಡಬೇಕು. ಉಳಿದಂತೆ ಕೊಂಚ ವ್ಯಾಯಮ, ಕೊಂಚ ಆಹಾರದಲ್ಲಿ ಕಟ್ಟುನಿಟ್ಟು ಅನುಸರಿಸಿದರೆ ಸಾಕು.
ನಿಮ್ಮ ಪ್ರಯತ್ನಗಳು ಮಾತ್ರ ಸತತವಾಗಿರಬೇಕು ಹಾಗೂ ಯಾವುದೇ ಕಾರಣಕ್ಕೂ ತೂಕ ಹೆಚ್ಚಿಸುವ ಆಹಾರಗಳತ್ತ ಒಲವು ತೋರಬಾರದು. ತೂಕವನ್ನು ಇಳಿಸುವಲ್ಲಿ ಬೆಳಗ್ಗಿನ ಪ್ರಥಮ ಆಹಾರ ಅಪಾರವಾದ ಪ್ರಭಾವ ಬೀರುತ್ತದೆ.

ಒಂದು ವೇಳೆ ನೀವು ಇಂದಿಗೂ ನಿಮ್ಮ ಪ್ರಥಮ ಆಹಾರವಾಗಿ ಹೆಚ್ಚಿನ ಕೊಬ್ಬು ಇರುವ ಆಹಾರಗಳನ್ನು ಸೇವಿಸುತ್ತಿದ್ದರೆ ಈಗ ಇದನ್ನು ಬದಲಿಸಲು ಸಕಾಲವಾಗಿದೆ. ಕೆಳಗಿನ ಸುಲಭ ವಿಧಾನದ ಆಹಾರವನ್ನು ಸೇವಿಸುವ ಮೂಲಕ ಕೆಲವೇ ದಿನಗಳಲ್ಲಿ ತೂಕ ಇಳಿಕೆಯ ಕ್ರಮದತ್ತ ಸಾಗುವುದನ್ನು ಕಾಣಬಹುದು. ಊಟ ಕಡಿಮೆ ಮಾಡಿದರೆ, ತೂಕ ಕಡಿಮೆಯಾಗುವುದಿಲ್ಲ!
ಅಗತ್ಯವಿರುವ ಸಾಮಾಗ್ರಿಗಳು:
*ಲಿಂಬೆಹಣ್ಣಿನ ರಸ- ಎರಡು ಚಿಕ್ಕ ಚಮಚ
*ಸೇಬಿನ ಶಿರ್ಕಾ (apple cider vinegar)-ಎರಡು ದೊಡ್ಡ ಚಮಚ
*ಜೇನು-ಎರಡು ದೊಡ್ಡ ಚಮಚ
*ಹಸಿಶುಂಠಿ-ಸುಮಾರು ಒಂದು ಇಂಚು (ರಸ ಎರಡು ಚಿಕ್ಕ ಚಮಚ ಬರುವಷ್ಟು)
ವಿಧಾನ:
* ಶುಂಠಿಯನ್ನು ತುರಿದು ಮಿಕ್ಸಿಯಲ್ಲಿ ಕಡೆದು ರಸ ಹಿಂಡಿ ತೆಗೆಯಿರಿ
* ಒಂದು ಬೋಗುಣಿಯಲ್ಲಿ ಎರಡು ಕಪ್ ಉಗುರುಬೆಚ್ಚನೆಯ ನೀರು ಸುರಿಯಿರಿ
* ಇದಕ್ಕೆ ಮೇಲಿನ ಎಲ್ಲಾ ಪರಿಕರಗಳನ್ನು ಸೇರಿಸಿ ಚೆನ್ನಾಗಿ ಕಲಕಿ.
* ಈ ಜ್ಯೂಸ್ ಅನ್ನು ಬೆಳಿಗ್ಗೆದ್ದ ಬಳಿಕ ಪ್ರಥಮ ಆಹಾರವಾಗಿ ನಿತ್ಯವೂ ಸೇವಿಸುತ್ತಾ ಬನ್ನಿ. ಬಳಿಕ ಮುಕ್ಕಾಲು ಗಂಟೆ ಏನನ್ನೂ ಸೇವಿಸಬಾರದು. ಬಳಿಕ ಅಲ್ಪ ಉಪಾಹಾರ ಸೇವಿಸಿ. ಕೆಲವೇ ದಿನಗಳಲ್ಲಿ ಉತ್ತಮ ಪರಿಹಾರ ಕಂಡುಬರುತ್ತದೆ. ಶುಂಠಿ ಜಜ್ಜಿ ಹಾಕಿದ ಬಿಸಿ ನೀರು ಕುಡಿದರೆ-ತೂಕ ಇಳಿಕೆ...
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

