ಮದ್ಯವ್ಯಸನಿಗಳು ಮತ್ತು ಶ್ವಾಸಕೋಶದ ಆರೋಗ್ಯ

By Manorama Hejmadi
Subscribe to Boldsky

ಶಿಕಾಗೋದ ಲೊಯೋಲಾ ವಿಶ್ವವಿದ್ಯಾಲಯದ ವೈದ್ಯಕೀಯ ಕಾಲೇಜಿನ ಪ್ರೊಫೆಸರ್ ಮಾಜಿದ್ ಅಫ್ಸರ್ " ಚೆಸ್ಟ್" ಎಂಬ ಪತ್ರಿಕೆಯಲ್ಲಿ ಹಂಚಿಕೊಂಡ ಅವರ ಸಂಶೋಧನೆಯ ಶೀರ್ಷಿಕೆ ಹೀಗಿದೆ: ಮದ್ಯಪಾನ ಸೇವನೆಯು ಶ್ವಾಸಕೋಶದ ಆರೋಗ್ಯವನ್ನು ಹದಗೆಡಿಸುತ್ತದೆ. "ಈ ಬರಹದಲ್ಲಿ ಅವರು , ಮದ್ಯಪಾನ ವ್ಯಸನಿಗಳ ಉಸಿರನ್ನು ಪರೀಕ್ಷೆಗೊಳಪಡಿಸಿ, ಅವರ ಶ್ವಾಸಕೋಶದ ಆರೋಗ್ಯದ ಮಟ್ಟವನ್ನು ಅಳೆದಿದ್ದಾರೆ.

 Alcohol Abuse Affects Breathing - Warns A Study
 

ಅಮೇರಿಕಾದ ಕಾಯಿಲೆಗಳ ಕುರಿತ ಸಂಶೋಧನಾ ಕೇಂದ್ರ ಮತ್ತು ಕಾಯಿಲೆ ತಡೆಗಟ್ಟುವಿಕೆ ಮತ್ತು ಪರೀಕ್ಷೆ ನಡೆಸುವ ಸಂಸ್ಥೆಗಳು ಹಮ್ಮಿಕೊಂಡ ಒಂದು ಯೋಜನೆಯ ಅಡಿಯಲ್ಲಿ ನಡೆದ ಸಂಶೋಧನೆ ಇದಾಗಿದೆ.  ಸುಮಾರು ಹನ್ನೆರಡು ಸಾವಿರಕ್ಕೂ ಮಿಕ್ಕಿ ಮದ್ಯ ವ್ಯಸನಿಗಳನ್ನು ಈ ಪರೀಕ್ಷೆಗಾಗಿ ಆಯ್ದುಕೊಳ್ಳಲಾಗಿತ್ತು.  ಈ ಸಂಶೋಧನೆ 2007 ರಿಂದ 2012ರ ವರೆಗೂ ನಡೆದಿತ್ತು. ಟ್ಯಾಟೂ ಹಾಕಿಸಿ, ಮದ್ಯಪಾನ ಪರೀಕ್ಷೆ ಮಾಡಿ! 

ಪ್ರತಿದಿನ ಒಮ್ಮೆ ಮತ್ತು ಹೆಚ್ಚುಬಾರಿ ಕುಡಿಯುವವರು, ತಿಂಗಳಿಗೆ ನಾಲ್ಕೈದು ಬಾರಿ ಕುಡಿಯುವವರು, ತಿಂಗಳಿಗೆ ಒಮ್ಮೆ ಮಾತ್ರ ಕುಡಿಯುವವರು ಮತ್ತು ಎಂದೂ ಮದ್ಯ ಕುಡಿಯದವರು . ಹೀಗೆ ನಾಲ್ಕು ವಿಭಾಗದ ಜನ ಈ ಗುಂಪಿನಲ್ಲಿದ್ದರು.

ಈ ಪ್ರಭೇದಗಳ ವ್ಯಕ್ತಿಗಳ ಉಸಿರನ್ನು (ನಿಶ್ವಾಸ )ಪರಿಶೀಲನೆಗೆ ಒಳಪಡಿಸಲಾಯ್ತು. ಮದ್ಯ ವ್ಯಸನಿಗಳ ನಿಶ್ವಾಸದಲ್ಲಿ ನೈಟ್ರಿಕ್ ಆಕ್ಸೈಡ್‌ನ ಮಟ್ಟ ಬಹಳ ಕ್ಷೀಣವಾಗಿರುವುದು ಕಂಡು ಬಂದಿತು.     ಶ್ವಾಸಕೋಶದ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳು

 Alcohol Abuse Affects Breathing - Warns A Study
  

ಹೆಚ್ಚೆಚ್ಚು ಮದ್ಯಪಾನ ಮಾಡುವವರ ನಿಶ್ವಾಸದಲ್ಲಿ ನೈಟ್ರಿಕ್ ಆಕ್ಸೈಡ್‌ನ ಮಟ್ಟ ಬಹಳಷ್ಟು ಕುಸಿದಿರುತ್ತಿತ್ತು.  "ಅಸ್ತಮಾ ರೋಗಿಯ ನಿಶ್ವಾಸವನ್ನು ಪರಿಶೀಲಿಸಿ, ಅದರಲ್ಲಿರುವ ನೈಟ್ರಿಕ್ ಆಸಿಡ್ ಮಟ್ಟವನ್ನು ತಿಳಿಯುವ ಮೂಲಕ, ಆತನಿಗೆ ನೀಡುತ್ತಿರುವ ಅಸ್ತಮಾ ಚಿಕಿತ್ಸೆಯ ಫಲಾಫಲವನ್ನು ವಿಶ್ಲೇಶಿಸಲಾಗುತ್ತದೆ. ಆತ ಮದ್ಯ ವ್ಯಸನಿಯಾಗಿದ್ದಾಗ, ಈ ಪರೀಕ್ಷೆ ಬುಡಮೇಲಾಗುವ ಸಂಭವವಿದೆ, ವೈದ್ಯರು ಈ ಅಂಶವನ್ನು ಗಮನದಲ್ಲಿರಿಸಬೇಕು..." ಎಂದು ಎಚ್ಚರಿಸುತ್ತಾರೆ, ಅಫ್ಸರ್.

(ಐಎಎನ್ಎಸ್ ವರದಿ)  

For Quick Alerts
ALLOW NOTIFICATIONS
For Daily Alerts

    English summary

    Alcohol Abuse Affects Breathing - Warns A Study

    Drinking too much alcohol may disrupt the healthy balance in the lungs and impact your breathing, a new study warns. In the study, adults who drink excessively were found to have less nitric oxide in their exhaled breath than adults who do not drink.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more