For Quick Alerts
ALLOW NOTIFICATIONS  
For Daily Alerts

ಎಚ್ಚರ: ರಕ್ತದೊತ್ತಡ ಅಧಿಕವಾಗುತ್ತಿದೆ ಎಂಬುದನ್ನು ಸೂಚಿಸುವ ಲಕ್ಷಣಗಳಿವು!

By Super
|

ಅಧಿಕ ರಕ್ತದೊತ್ತಡವು ಒಂದು ಸಾಮಾನ್ಯವಾದ ಆರೋಗ್ಯದ ಸಮಸ್ಯೆಯಾಗಿದ್ದು, ಇದು ಅಧಿಕ ಸಂದರ್ಭಗಳಲ್ಲಿ ನಿಮ್ಮ ಜೀವವನ್ನು ಅಪಾಯಕ್ಕೆ ಸಿಲುಕಿಸಿ ಬಿಡುತ್ತದೆ. ಅಧಿಕ ರಕ್ತದೊತ್ತಡದಿಂದ ನರಳುವ ಸುಮಾರು ಜನರಿಗೆ ತುಂಬಾ ವರ್ಷಗಳ ಕಾಲ ಅದರ ಲಕ್ಷಣಗಳು ಕಂಡು ಬಂದಿರುವುದಿಲ್ಲ. ರಕ್ತವು ರಕ್ತ ನಾಳಗಳ ಮೂಲಕ ಹರಿಯುವಾಗ ಅಪಧಮನಿಯ ಗೋಡೆಗಳ ಮೇಲೆ ಉಂಟು ಮಾಡುವ ಒತ್ತಡವೇ ರಕ್ತದೊತ್ತಡ.

ಅಂದರೆ ಯಾವಾಗ ಒಬ್ಬ ವ್ಯಕ್ತಿಯು ತಾನು ಅಧಿಕ ರಕ್ತದೊತ್ತಡದಿಂದ ನರಳುತ್ತಿದ್ದೇನೆ ಎಂದು ಹೇಳುತ್ತಾನೋ, ಆಗ ಅವನ ಅಪಧಮನಿಯ ಗೋಡೆಗಳು ಹೃದಯದಿಂದ ಪಂಪ್ ಆಗಿ ಬರುವ ರಕ್ತದ ಅಧಿಕವಾದ ಒತ್ತಡವನ್ನು ಸ್ವೀಕರಿಸುತ್ತಿವೆ ಎಂದು ಭಾವಿಸಿ. ಸಾಮಾನ್ಯವಾದ ರಕ್ತದೊತ್ತಡವು 140/80mmHg ಇರುತ್ತದೆ. ಯಾವಾಗ ಇದು 140/90mmHg ಆಗುತ್ತದೋ, ಆಗ ನೀವು ಅದಕ್ಕಾಗಿ ಪರೀಕ್ಷೆಯನ್ನು ನಡೆಸಿ ಕಾರಣವನ್ನು ತಿಳಿದು ಕೊಳ್ಳಬಹುದು ಎಚ್ಚರ: ಅಧಿಕ ರಕ್ತದೊತ್ತಡ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ!

ಸಾಮಾನ್ಯವಾಗಿ ಕೋಪಗೊಂಡಾಗ ಜೊತೆಯವರು ಸಂತೈಸುವುದು ಹೀಗೆ "ಕೋಪ ಮಾಡಿಕೊಳ್ಳಬೇಡಿ, ನಿಮ್ಮ ಬೀಪಿ ಜಾಸ್ತಿಯಾಗುತ್ತದೆ". ಅಂದರೆ ಕೋಪದಿಂದ ಕುದಿಯುವಾಗ ರಕ್ತದೊತ್ತಡ ಹೆಚ್ಚಾಗುತ್ತಿದೆ ಎಂದು ಎಲ್ಲರೂ ಬಲ್ಲರು. ರಕ್ತದೊತ್ತಡ ಹೆಚ್ಚುವ ಸೂಚನೆಯನ್ನು ಕೋಪ ನೀಡುತ್ತಿದೆ ಎಂದಾಯ್ತು. ಅಂತೆಯೇ ಸಾಮಾನ್ಯಸ್ಥಿತಿಯಲ್ಲಿದ್ದಾಗಲೂ ಅಧಿಕವಾಗಿರುವ ರಕ್ತದೊತ್ತಡವನ್ನು ಕೆಲವು ಸೂಚನೆಗಳು ನೀಡುತ್ತವೆ... ಕೋಪದಿಂದಾಗಿ ದೇಹದಲ್ಲಿ ಆಗುವ ಬದಲಾವಣೆಗಳಿವು!

ದೇಹದಲ್ಲಿ ರಕ್ತ ಹೇಗೆ ಕಾರ್ಯ ನಿರ್ವಹಿಸುತ್ತದೆ?

ದೇಹದಲ್ಲಿ ರಕ್ತ ಹೇಗೆ ಕಾರ್ಯ ನಿರ್ವಹಿಸುತ್ತದೆ?

ನಮ್ಮ ದೇಹದ ಪ್ರತಿ ಜೀವಕೋಶಕ್ಕೂ ಆಹಾರದ ಅವಶ್ಯಕತೆ ಇದೆ ಮತ್ತು ಅಲ್ಲಿಂದ ತ್ಯಾಜ್ಯಗಳನ್ನು ದೇಹದಿಂದ ಹೊರಹಾಕಬೇಕಾಗುತ್ತದೆ. ಈ ಕೆಲಸವನ್ನು ರಕ್ತ ಮಾಡುತ್ತದೆ. ಆದರೆ ರಕ್ತ ಒಂದೆಡೆಯಿಂದ ಇನ್ನೊಂದೆಡೆ ನರಗಳ ಒಳಗೆ ಸಂಚರಿಸಲು ನರದ ಆ ತುದಿಯಿಂದ ನೂಕಬೇಕಾಗುತ್ತದೆ. (ಒಂದು ಪೈಪಿನೊಳಗೆ ನೀರು ಹಾಕಿ ಬಾಯಿಯಿಂದ ಊದಿದರೆ ನೀರು ಅತ್ತ ಬರುತ್ತದಲ್ಲಾ ಹಾಗೆ). ಈ ಕೆಲಸವನ್ನು ಹೃದಯ ಮಾಡುತ್ತದೆ. ಒಳ್ಳೆಯ ರಕ್ತವನ್ನು (ಅಂದರೆ ಜೀವಕೋಶಗಳಿಗೆ ಆಹಾರ - ಆಮ್ಲಜನಕ)ವನ್ನು ಕೊಂಡೊಯ್ಯಲು ದೂಡಿ ಕೊಡುತ್ತದೆ. ಅಂತೆಯೇ ಜೀವಕೋಶಗಳಿಂದ ಕೆಟ್ಟ ರಕ್ತ (ಅಂದರೆ ತ್ಯಾಜ್ಯ-ಇಂಗಾಲದ ಡೈ ಆಕ್ಸೈಡ್ ಹೊಂದಿರುವ) ರಕ್ತವನ್ನು ಎಳೆದುಕೊಳ್ಳುತ್ತದೆ. ಈ ಎರಡೂ ಒತ್ತಡಗಳಿಗೆ ವೈದ್ಯಭಾಷೆಯಲ್ಲಿ ಸಂಕೋಚನ (systolic) ಮತ್ತು ವ್ಯಾಕೋಚನ (diastolic) ಒತ್ತಡ ಎಂದು ಕರೆಯುತ್ತಾರೆ.

ಅಧಿಕ ರಕ್ತದೊತ್ತಡ ಎಂದರೇನು?

ಅಧಿಕ ರಕ್ತದೊತ್ತಡ ಎಂದರೇನು?

ಆರೋಗ್ಯವಂತ ಶರೀರದಲ್ಲಿ ಇದು 120/80mm/hg ಎಂಬ ಮಾಪನದಲ್ಲಿ ಅಳೆಯುತ್ತಾರೆ. ಒಂದು ವೇಳೆ ಯಾವುದೋ ಕಾರಣದಿಂದ ರಕ್ತ ತಲುಪಬೇಕಾದ ತುದಿಯಲ್ಲಿ ಪೂರ್ಣಪ್ರಮಾಣದಲ್ಲಿ ಲಭ್ಯವಾಗದಿದ್ದರೆ ಅಲ್ಲಿನ ಜೀವಕೋಶಗಳು ಕೂಗಿಕೊಳ್ಳುತ್ತವೆ, ನಮಗೆ ಆಹಾರ ಸಿಗುತ್ತಿಲ್ಲ, ಸ್ವಲ್ಪ ಹೆಚ್ಚಿನ ಒತ್ತಡದಿಂದ ರಕ್ತ ಪಂಪ್ ಮಾಡಿ. ಆಗ ಹೃದಯ ಒತ್ತಡವನ್ನು ಕೊಂಚ ಹೆಚ್ಚು ಮಾಡಿ ಆ ತುದಿಗೆ ರಕ್ತ ಸಿಗುವಂತೆ ನೋಡಿಕೊಳ್ಳುತ್ತದೆ. ಇದೇ ಅಧಿಕ ರಕ್ತದೊತ್ತಡ. (ಇದಕ್ಕೆ ತದ್ವಿರುದ್ದವಾದ ಪ್ರಕ್ರಿಯೆ ಕಡಿಮೆ ರಕ್ತದೊತ್ತಡವಾಗಿದೆ). ಇದರಲ್ಲಿ 120 ಇರುವುದು 180ರ ಗಡಿ ದಾಟಿದರೆ ಜೀವಕ್ಕೆ ಅಪಾಯವಿದೆ.

ರಕ್ತದೊತ್ತಡ ಹೆಚ್ಚಾಗಲು ಕಾರಣಗಳೇನು?

ರಕ್ತದೊತ್ತಡ ಹೆಚ್ಚಾಗಲು ಕಾರಣಗಳೇನು?

ಯೌವನದ ದಿನ ಕಳೆದು ಮಧ್ಯವಯಸ್ಸು ದಾಟುತ್ತಿದ್ದಂತೆ ಶರೀರ ಸ್ವಾಭಾವಿಕವಾಗಿ ಶಿಥಿಲಗೊಳ್ಳುವತ್ತ ಪ್ರಾರಂಭಿಸುತ್ತದೆ. ಹಲವು ಕಾರಣಗಳಿಂದಾಗಿ ಹೃದಯದೊತ್ತಡ ಹೆಚ್ಚುತ್ತದೆ. ಅದರಲ್ಲಿ ಮುಖ್ಯವಾದ ಕಾರಣ ಹಿಂದಿನ ದಿನಗಳಲ್ಲಿ ನಾವು ಸೇವಿಸಿದ್ದ ಆಹಾರದಲ್ಲಿದ್ದ ಕೆಟ್ಟ ಕೊಲೆಸ್ಟ್ರಾಲ್. ಇದು ನರಗಳ ಒಳಭಾಗದಲ್ಲಿ ಕವಲಿರುವೆಡೆ, ತಿರುವುಗಳಿರುವೆಡೆ ನಿಧಾನವಾಗಿ ಶೇಖರಗೊಂಡು ನರಗಳ ಒಳವ್ಯಾಸವನ್ನು ಕಿರಿದುಗೊಳಿಸುತ್ತಾ ಹೋಗುತ್ತದೆ. ಜೊತೆಗೇ ಧೂಮಪಾನ, ಮದ್ಯಪಾನ, ಇತರ ಔಷಧಿಗಳ ಅಡ್ಡಪರಿಣಾಮ ಮೊದಲಾದ ಹಲವಾರು ಕಾರಣಗಳಿಂದಲೂ ರಕ್ತದೊತ್ತಡ ಹೆಚ್ಚಾಗುತ್ತಾ ಹೋಗುತ್ತದೆ. ವಾಸ್ತವವಾಗಿ ಹೆಚ್ಚಿರುವ ಈ ರಕ್ತದೊತ್ತಡ ಸಾಮಾನ್ಯ ಜೀವನದಲ್ಲಿ ಯಾವುದೇ ತೊಂದರೆ ನೀಡದ ಕಾರಣ ಹೆಚ್ಚಿನವರಿಗೆ ತಮಗೆ ಅಧಿಕ ರಕ್ತದೊತ್ತಡವಿರುವುದು ಗೊತ್ತೇ ಇರುವುದಿಲ್ಲ. ಪರೀಕ್ಷೆ ಮಾಡಿಕೊಂಡಾಗಲೇ ಇದರ ಇರುವು ಗಮನಕ್ಕೆ ಬರುತ್ತದೆ. ಇಂದು ರಕ್ತದೊತ್ತಡವನ್ನು ಮನೆಯಲ್ಲಿಯೇ ಪರೀಕ್ಷಿಸುವ ಸಾಧನಗಳು ಲಭ್ಯವಿವೆ.

ಅಧಿಕ ರಕ್ತದೊತ್ತಡ ನಿಯಂತ್ರಿಸಬಹುದೇ?

ಅಧಿಕ ರಕ್ತದೊತ್ತಡ ನಿಯಂತ್ರಿಸಬಹುದೇ?

ನಮ್ಮ ಮನೆಯವರ, ನೆರೆಹೊರೆಯಲ್ಲಿರುವ ಹಲವಾರು ಜನರಿಗೆ ಈ ತೊಂದರೆ ಇದ್ದೂ ಅರಿವಿಲ್ಲದವರಾಗಿರುತ್ತಾರೆ. ಅವರ ಆರೋಗ್ಯವನ್ನು ಕೊಂಚ ಗಮನಿಸಿದರೆ ಅವರಲ್ಲಿರುವ ಅಧಿಕ ರಕ್ತದೊತ್ತಡವನ್ನು ಕೆಲವು ಸೂಚನೆಗಳು ಪ್ರಚುರ ಪಡಿಸುತ್ತವೆ. ಉದಾಹರಣೆಗೆ ಸ್ವಲ್ಪ ಸೆಖೆಯಿದ್ದರೂ ಅಧಿಕವಾಗಿ ಬೆವರುವುದು, ತೀವ್ರವಾದ ತಲೆನೋವು, ತಲೆ ತಿರುಗಿ ಬೀಳುವುದು, ಉಸಿರಾಟ ತೀವ್ರವಾಗುವುದು ಮೊದಲಾದವು. ನಿಮ್ಮ ಸುತ್ತಮುತ್ತಲಿನವರಲ್ಲಿ, ಅದರಲ್ಲೂ ಅರವತ್ತು ದಾಟಿದವರಲ್ಲಿ ಅಧಿಕ ರಕ್ತದೊತ್ತಡವಿರುವ ಸಾಧ್ಯತೆ ಹೆಚ್ಚಿರುತ್ತದೆ. ಅದರಲ್ಲೂ ತಕ್ಷಣ ಏರುವ ಅಧಿಕ ರಕ್ತದೊತ್ತಡ ಕಾಳಜಿಯ ವಿಷಯವಾಗಿದೆ. ಈ ಬಗ್ಗೆ ನೀವು ಮಾಹಿತಿ ಪಡೆದಿರುವುದು ಯಾವತ್ತಿಗೂ ಜೀವ ಉಳಿಸಬಲ್ಲುದಾಗಿದೆ. ಹೃದಯದೊತ್ತಡ, ಮತ್ತು ಅದರ ಮೂಲಕ ಸಂಭವಿಸಬಹುದಾದ ಹೃದಯಾಘಾತ ಮೊದಲಾದ ಅಪಾಯಗಳನ್ನು ನಿಮ್ಮ ಅರಿವು ತಡೆಯಬಲ್ಲುದು ಅಥವಾ ಸೂಕ್ತ ಸಮಯದಲ್ಲಿ ನೆರವು ನೀಡಿ ಪ್ರಾಣಗಳನ್ನು ಉಳಿಸಬಲ್ಲುದು.

ಎದೆಯಲ್ಲಿ ಚುಚ್ಚಿದಂತೆ ನೋವಾಗುವುದು

ಎದೆಯಲ್ಲಿ ಚುಚ್ಚಿದಂತೆ ನೋವಾಗುವುದು

ಕೆಲವೊಮ್ಮೆ ರೋಗಿ ತನ್ನ ಎದೆಯಲ್ಲಿ ಹೃದಯಭಾಗವನ್ನು ನೀವಿಕೊಳ್ಳುತ್ತಾ ತನಗೆ ಚುಚ್ಚಿದಂತೆ ನೋವಾಗುತ್ತಿದೆ ಎಂದು ತಿಳಿಸಿದರೆ ಅದು ಅಧಿಕರಕ್ತದೊತ್ತಡದ ನೇರ ಸೂಚನೆಯಾಗಿದೆ. ಕೂಡಲೇ ಬೀಪಿ ಸಾಧನದಿಂದ ತಪಾಸಿಸಿ ವೈದ್ಯರ ಸಲಹೆ ಪಡೆಯಿರಿ ಅಥವಾ ಕೂಡಲೇ ವೈದ್ಯರ ಬಳಿ ಕೊಂಡು ಹೋಗಿ. ತಡ ಮಾಡಿದಷ್ಟೂ ಅಪಾಯ ಹೆಚ್ಚುತ್ತಾ ಹೋಗುತ್ತದೆ.

ದೃಷ್ಟಿ ಮಂದವಾಗುವುದು

ದೃಷ್ಟಿ ಮಂದವಾಗುವುದು

ಕೆಲವೊಮ್ಮೆ ನಿಮ್ಮ ದೃಷ್ಟಿ ಸರಿಯಾಗಿದ್ದೂ ದೃಶ್ಯ ಸರಿಯಾಗಿ ಕಂಡುಬರದಿದ್ದರೆ ಹೆಚ್ಚಿನ ರಕ್ತದೊತ್ತಡದ ಸೂಚನೆಯಾಗಿರಬಹುದು. ಕಣ್ಣಿನ ವೈದ್ಯರು ನಿಮ್ಮ ಕಣ್ಣಿನ ಈಗಿನ ಮಾಹಿತಿ ನಿಮ್ಮ ಕನ್ನಡಕಕ್ಕೆ (ಇಲ್ಲದಿದ್ದರೆ ಸಾಮಾನ್ಯ ಅಂಶಗಳಿಗೆ) ಸರಿಯಾಗಿದೆ, ಏನೂ ತೊಂದರೆ ಇಲ್ಲ ಎಂದು ತಿಳಿಸಿದ ಬಳಿಕವೂ ದೃಶ್ಯ ಕೆಲವೊಮ್ಮೆ ಮಬ್ಬು ಅಥವಾ ಮಂಜುಮಂಜಾಗಿ ಕಾಣಿಸಿದರೆ ಇದು ಅಧಿಕ ರಕ್ತದೊತ್ತಡದ ಸೂಚನೆಯಾಗಿದೆ.

ಮೂಗಿನಲ್ಲಿ ರಕ್ತ ಬರುವುದು

ಮೂಗಿನಲ್ಲಿ ರಕ್ತ ಬರುವುದು

ನಮ್ಮ ದೇಹದ ಹೊರಭಾಗದ ಚರ್ಮದ ಎರಡೂ ಪದರಗಳು ಕೊಂಚ ದಪ್ಪನಾಗಿದ್ದರೂ ಮೂಗಿನ ಹೊಳ್ಳೆಗಳ ಒಳಗಣ ಚರ್ಮ ತೆಳುವಾಗಿದೆ. ಏಕೆಂದರೆ ಈ ಭಾಗದಲ್ಲಿ ಬೆವರುಗ್ರಂಥಿಗಳಿಲ್ಲ. ಆದ್ದರಿಂದ ಕೊಂಚ ಸೆಳೆತವಾದರೂ ಸುಲಭವಾಗಿ ಹರಿಯುತ್ತದೆ. ಕೆಲವೊಮ್ಮೆ ಅಧಿಕ ರಕ್ತದೊತ್ತಡದಿಂದಾಗಿ ಮೂಗಿನೊಳಗಿನ ರಕ್ತನಾಳಗಳು ಉಬ್ಬಿರುವ ಕಾರಣ ಚರ್ಮ ಹರಿದು ರಕ್ತ ಒಸರಲು ತೊಡಗುತ್ತದೆ. ಈ ಸೂಚನೆಯನ್ನು ಕೂಡಲೇ ಗಂಭೀರವಾಗಿ ಪರಿಗಣಿಸಿ, ವೈದ್ಯರ ಬಳಿ ತಪಾಸಣೆ ಮಾಡಿಸುವುದು ಅಗತ್ಯ. ತಡವಾದಷ್ಟೂ ಅಪಾಯ ಹೆಚ್ಚುತ್ತಾ ಹೋಗುತ್ತದೆ.

ಉಸಿರಾಟ ಕಷ್ಟಕರವಾಗುವುದು

ಉಸಿರಾಟ ಕಷ್ಟಕರವಾಗುವುದು

ಕೆಲವೊಮ್ಮೆ ಉಸಿರಾಟ ಕಷ್ಟಕರವಾಗಿ ಒಂದೊಂದು ಉಸಿರಿಗೂ ರೋಗಿ ಹಲಬುವಂತಾಗುವುದು ಅಧಿಕ ರಕ್ತದೊತ್ತಡದ ಇನ್ನೊಂದು ಸೂಚನೆಯಾಗಿದೆ. ಒಂದು ಕ್ಷಣ ಉಸಿರು ಕಟ್ಟಿದಂತಾಗುವುದು, ಮುಂದಿನ ಉಸಿರು ಸರಾಗವಾಗುವುದು, ಮತ್ತೆ ಕಟ್ಟಿದಂತಾಗುವುದು ಹೀಗೆ ತಡೆತಡೆದು ಆಗುವ ಉಸಿರಾಟ ಅಪಾಯಕಾರಿಯಾಗಿದೆ. ತಕ್ಷಣ ವೈದ್ಯರ ಬಳಿ ಕರೆದೊಯ್ಯುವುದು ಅಗತ್ಯವಾಗಿದೆ.

ಮೂತ್ರದಲ್ಲಿ ರಕ್ತ ಕಂಡುಬರುವುದು

ಮೂತ್ರದಲ್ಲಿ ರಕ್ತ ಕಂಡುಬರುವುದು

ಮೂತ್ರದ ಬಣ್ಣ ಕೆಂಪು ಅಥವಾ ನಸುಗಂದು ಬಣ್ಣವಿದ್ದರೆ ಅದರಲ್ಲಿ ರಕ್ತವೂ ಇರಬಹುದು ಅಥವಾ ಬೇರೆ ಕಾರಣದಿಂದಲೂ ಆಗಿರಬಹುದು. ಆದರೆ ಅಧಿಕ ರಕ್ತದೊತ್ತಡವಿದ್ದರೆ ಮೂತ್ರದಲ್ಲಿ ರಕ್ತವಿದ್ದರೆ ವೈದ್ಯರ ಸಲಹೆ ಇಲ್ಲದೇ ಮನೆಮದ್ದು ಬೇಡ. ಏಕೆಂದರೆ ಮೂತ್ರಕೋಶ, ಮೂತ್ರನಾಳ ಮೊದಲಾದ ಸೂಕ್ಷ್ಮ ಅಂಗಗಳಲ್ಲಿರುವ ನರಗಳು ಅತ್ಯಂತ ಕಿರಿದಾಗಿರುತ್ತವೆ. ಅಧಿಕ ರಕ್ತದೊತ್ತಡದಿಂದ ಈ ಕಿರುನಾಳಗಳು (ವಿಶೇಷವಾಗಿ ತುದಿಗಳಲ್ಲಿ) ಬಿರಿದು ರಕ್ತ ಹೊರಗೆ ಒಸರುತ್ತದೆ. ಈ ರಕ್ತ ಮೂತ್ರದೊಂದಿಗೆ ಸೇರಿ ಹೊರಬರುತ್ತದೆ.

ಅಧಿಕ ರಕ್ತದೊತ್ತಡದಿಂದಾಗುವ ಹಾನಿಗಳು

ಅಧಿಕ ರಕ್ತದೊತ್ತಡದಿಂದಾಗುವ ಹಾನಿಗಳು

ಮೇಲೆ ಸೂಚಿಸಿರುವ ಸೂಚನೆಗಳು ಕೇವಲ ಅಧಿಕ ರಕ್ತದೊತ್ತಡಗಳಿಂದ ಮಾತ್ರವೇ ಬಂದಿರಬೇಕಾಗಿಲ್ಲ, ಬೇರೆ ಕಾರಣಗಳೂ ಇರಬಹುದು. ಸೂಕ್ತ ಪರೀಕ್ಷೆಗಳಿಂದ ಮಾತ್ರ ಈ ಎಲ್ಲಾ ಕಾರಣಗಳನ್ನು ದೃಢೀಕರಿಸಿಕೊಳ್ಳಬಹುದು. ಆದರೂ ನಾವೆಲ್ಲರೂ ನಮ್ಮ ಮತ್ತು ನಮ್ಮ ಆತ್ಮೀಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಈ ಸೂಚನೆಗಳನ್ನು ಅರಿತಿರಬೇಕಾದುದು ಅವಶ್ಯವಾಗಿದೆ.

ಅಧಿಕ ರಕ್ತದೊತ್ತಡದಿಂದ ಈ ಕೆಳಗಿನ ಅಪಾಯಗಳು ಸಂಭವಿಸಬಹುದು.

೧) ಕಣ್ಣಿನ ದೃಷ್ಟಿ ಮಂದಗೊಳ್ಳುತ್ತದೆ.

೨) ಮೂತ್ರಪಿಂಡಗಳು ವಿಫಲಗೊಳ್ಳುತ್ತವೆ

೩) ಹೃದಯಾಘಾತ

೪) ಪಾರ್ಶ್ವವಾಯು

ಅಧಿಕ ರಕ್ತದೊತ್ತಡ ಕಡಿಮೆಗೊಳಿಸಲು ಸಲಹೆಗಳು

ಅಧಿಕ ರಕ್ತದೊತ್ತಡ ಕಡಿಮೆಗೊಳಿಸಲು ಸಲಹೆಗಳು

೧) ರಕ್ತದಲ್ಲಿ ಕೊಲೆಸ್ಟ್ರಾಲ್ ಕಡಿಮೆಗೊಳಿಸುವ ಆಹಾರಗಳನ್ನು ಮತ್ತು ವೈದ್ಯರ ಸಲಹೆ ಮೇರೆಗೆ ಔಷಧಿಗಳನ್ನು ಸೇವಿಸುವುದು

೨) ಮದ್ಯಪಾನ ಮತ್ತು ಧೂಮಪಾನವನ್ನು ಬಿಡುವುದು

೩) ಆಹಾರದಲ್ಲಿ ವೈದ್ಯರು ಅನುಮತಿ ನೀಡಿದ ಹಸಿರು ತರಕಾರಿ, ಹಣ್ಣು ಮತ್ತು ಸೊಪ್ಪುಗಳನ್ನು ಸೇವಿಸುವುದು ಯಾವುದಕ್ಕೂ ಅಧಿಕ ರಕ್ತದೊತ್ತಡ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ ಈ ಸ್ಥಿತಿ ಬರದೇ ಇರುವಂತೆ ಆರೋಗ್ಯವಂತರಾಗಿವುದೇ ಹೆಚ್ಚು ಜಾಣತನ ಅಲ್ಲವೇ?

English summary

Signs Your Blood Pressure Is Rising

There are some diseases which you have but don’t get to know sometimes. High Blood pressure is among those. What are the signs of blood pressure increase? Why you have High BP? When the blood rushes fast through your nerves it creates a pressure and you face the problem of high blood pressure.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X