Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಯಾರು ಹೆಚ್ಚು ಫಿಟ್ ? ಮಹಿಳೆರು v/s ಪುರುಷರು
ಹೆಣ್ಣು ಮತ್ತು ಗಂಡಿನ ದೇಹ ವಿನ್ಯಾಸ ಬೇರೆ ರೀತಿಯಲ್ಲಿದ್ದರೂ ಇಬ್ಬರೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆದರೆ ಯಾರು ಹೆಚ್ಚು ಫಿಟ್ ಆಗಿರುತ್ತಾರೆ ಎಂಬುದು ಸಾಮಾನ್ಯವಾಗಿ ಎಲ್ಲರೂ ಗೊಂದಲಗೊಳ್ಳುವ ಪ್ರಶ್ನೆ. ಇತ್ತೀಚಿಗೆ ನಡೆದ ಆಯುರ್ನಿರೀಕ್ಷೆ ಸಂಶೋಧನೆ ಪ್ರಕಾರ ಮಹಿಳೆಯರು ಪುರುಷರಿಗಿಂತ ಹೆಚ್ಚು ಕಾಲ ಬದುಕುತ್ತಾರೆ.ಆದರೂ ಆಳವಾದ ನೋಟವನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಕೆಲವು ವ್ಯತ್ಯಾಸ ಕಂಡು ಬರುತ್ತದೆ.
ಕೆಲವು ರೋಗಗಳು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಕಾಣಿಸಿಕೊಳ್ಳಬಹುದು.ಇದನ್ನು ತಿಳಿಯಲು ಈ ಕೆಳಗೆ ನೀಡಿರುವ ಮಾಹಿತಿಯನ್ನು ಓದಿ ನೋಡಿ.
ಬೇಸಿಗೆಯಲ್ಲಿ ನಿಮ್ಮ ತೂಕ ಇಳಿಸಲು ಈ ಹಣ್ಣುಗಳು ಸಾಕು!

ಅಸ್ತಿರಂದ್ರತೆ(Osteoporosis):
ಮೂಳೆಯನ್ನು ಸವೆಯುವ ಈ ರೋಗ ಮಹಿಳೆಯರಲ್ಲಿ ಹೆಚ್ಚು.ಶೇಖಡಾ 75 ರಷ್ಟು ಅಸ್ತಿರಂದ್ರತೆಯನ್ನು ಮಹಿಳೆಯರು ಅನುಭವಿಸುತ್ತಿದ್ದಾರೆ.ಆದಾಗ್ಯೂ 50 ವರ್ಷದ ನಂತರ ಐದರಲ್ಲಿ ಒಬ್ಬರಂತೆ ಪುರುಷರಿಗೂ ಕಾಣಿಸಿಕೊಳ್ಳಬಹುದು ಆದರೆ ಇದು ಗೊತ್ತು ಹಿಡಿಯುವುದು ಸಾಧ್ಯವಾಗುವುದೇ ಇಲ್ಲ,ಏಕೆಂದರೆ ಮಹಿಳೆಯರೇ ಈ ಸಮಸ್ಯೆಯನ್ನು ಹೆಚ್ಚು ಅನುಭವಿಸುತ್ತಾರೆ.
ಮಹಿಳೆಯರಿಗೆ ಮೂಳೆಯ ಸಾಂದ್ರತೆ ಕಡಿಮೆ ಇರುತ್ತದೆ ಮತ್ತು ವಯಸ್ಸಾಗುತ್ತಿದ್ದಂತೆ, ಮೆನೋಪಾಸ್ ಆದ ನಂತರ,ಮೂಳೆಯ ಸವೆತ ಹೆಚ್ಚುತ್ತದೆ.ಈಸ್ಟ್ರೋಜೆನ್ ಮೂಳೆಯನ್ನು ರಕ್ಷಿಸುತ್ತದೆ. ಸಮಸ್ಯೆ ಕಡಿಮೆ ಮಾಡಿಕೊಳ್ಳಿ :-ಭಾರತೀಯರು ಮೂಳೆ ಸಾಂದ್ರತೆ ಹೆಚ್ಚಿಸುವ ಪೌಷ್ಟಿಕಾಂಶ ತೆಗೆದುಕೊಳ್ಳುವುದು ಕಡಿಮೆ ಆದ್ದರಿಂದ ಸಾಕಷ್ಟು ಕಬ್ಬಿಣದ ಅಂಶವಿರುವ ಪೌಷ್ಟಿಕಾಂಶ ಬಳಸಬೇಕು ಮತ್ತು ವಿಟಮಿನ್ ಡಿ ತೆಗೆದುಕೊಳ್ಳಬೇಕು.ಪ್ರತಿದಿನ ಮೂವತ್ತು ನಿಮಿಷ ಏರೋಬಿಕ್ಸ್ ಅಥವಾ ಬ್ರಿಸ್ಕ್ ನಡಿಗೆ ಯಾವುದೇ ರೀತಿಯ ವ್ಯಾಯಾಮ ಮಾಡುವುದರಿಂದ ಕೂಡ ದೇಹ ಮತ್ತು ಮೂಳೆ ಬಲಯುತವಾಗುತ್ತದೆ.

ಹೃದಯ ರೋಗಗಳು:
ಮಹಿಳೆಯರಿಗಿಂತ ಪುರುಷರಿಗೆ ಹೃದಯ ಸಮಸ್ಯೆಗಳು ಹೆಚ್ಚು ಕಾಣಿಸಿಕೊಳ್ಳುತ್ತದೆ.ಆದರೆ ಸಾಯುವವರ ಸಂಖ್ಯೆ 50:50 ಇದೆ.ಏಕೆಂದರೆ ಮಹಿಳೆಯರು ಹೃದಯಾಘಾತದಿಂದ ಸಾಯುತ್ತಾರೆ. ಮೆನೋಪಾಸ್ ನ ಮೊದಲು ಮಹಿಳೆಯರಿಗೆ ಈಸ್ಟ್ರೋಜೆನ್ ರಕ್ಷಣೆ ನೀಡುತ್ತದೆ ಆದರೆ ನಂತರದ ದಿನಗಳಲ್ಲಿ ಇದರ ರಕ್ಷಣೆ ಕಡಿಮೆಯಾಗಿ ಸಮವಯಸ್ಸಿನ ಪುರುಷರಿಗಿಂತ ಮಹಿಳೆಯರು ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. 45 ವರ್ಷದ ಒಳಗೆ ಪುರುಷರು ಮಹಿಳೆಯರಿಗಿಂತ ಹೆಚ್ಚು ರಕ್ತದೊತ್ತಡ,ಹೃದಯ ಕಾಯಿಲೆ ಅನುಭವಿಸುತ್ತಾರೆ ಆದರೆ 75 ರ ನಂತರದ ದಿನಗಳಲ್ಲಿ ಸರಾಸರಿ ಮಹಿಳೆಯರಲ್ಲೇ ಹೆಚ್ಚು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.

ಸಮಸ್ಯೆ ಕಡಿಮೆ ಮಾಡಿಕೊಳ್ಳಿ:
ಧ್ಯವಾದಷ್ಟು ತೂಕ ಕಡಿಮೆ ಮಾಡಿಕೊಳ್ಳಿ, ಧೂಮಪಾನ ಬಿಟ್ಟುಬಿಡಿ, ಆಗಾಗ ರಕ್ತದೊತ್ತಡ, ಕೊಲೆಸ್ಟ್ರಾಲ್ ನೋಡಿಕೊಳ್ಳುತ್ತಿರಿ.

ಲೈಂಗಿಕ ರೋಗಗಳು:
ಲೈಂಗಿಕ ರೋಗಗಳಿಗೆ ತುತ್ತಾಗುವುದರಲ್ಲಿ ಮಹಿಳೆಯರು ಅಧಿಕ. ಏಕೆಂದರೆ ಯೋನಿಯ ಭಾಗ ತುಂಬಾ ತೆಳುವಾಗಿರುವುದರಿಂದ, ಬ್ಯಾಕ್ಟೀರಿಯ ಮತ್ತು ವೈರಸ್‌ನಿಂದ ಸೋಂಕು ಬೇಗ ಹರಡಿಕೊಳ್ಳುತ್ತದೆ.

ರಕ್ಷಣಾ ವಿಧಾನ:
ಇದನ್ನು ತಡೆಯಲು ಉತ್ತಮ ಮಾರ್ಗವೆಂದರೆ ಲೈಂಗಿಕ ಸಾಮೀಪ್ಯದ ಸಮಯದಲ್ಲಿ ಕಾಂಡೋಮ್ ಬಳಸುವುದು.

ಯಕೃತ್ತಿನ ಹಾನಿ:
ಪುರುಷರು ಮಹಿಳೆಯರಿಗಿಂತ ಹೆಚ್ಚು ಲಿವರ್ ಸಮಸ್ಯೆ ಹೊಂದುತ್ತಾರೆ. ಆದರೆ ಕಳಪೆ ಮಟ್ಟದ ಅಲ್ಕೋಹಾಲ್ ಬಳಸಿದರೆ ಮಹಿಳೆಯರು ಪುರುಷರಿಗಿಂತ ಹೆಚ್ಚಿನ ರೀತಿಯಲ್ಲಿ ಲಿವರ್ ಸಮಸ್ಯೆ ಎದುರಿಸಬೇಕಾಗುತ್ತದೆ.
ಪುರುಷರು ಮಹಿಳೆಯರಿಗಿಂತ ಹೆಚ್ಚು ಅಲ್ಕೋಹಾಲ್ ಕುಡಿಯುತ್ತಾರೆ ಆದರೆ ಮಹಿಳೆಯರಿಗೆ ಅದನ್ನು ಕರಗಿಸುವ ಶಕ್ತಿ ಇರುವುದಿಲ್ಲ , ಮಹಿಳೆಯರ ಯಕೃತ್ತು ಪುರುಷರಿಗಿಂತ ದುರ್ಬಲ ವಾಗಿರುತ್ತದೆ.ಆದ್ದರಿಂದ ಅಲ್ಕೋಹಾಲ್ ರಕ್ತದಲ್ಲಿ ಬೆರೆತು ಲಿವರ್ ಸೇರುತ್ತದೆ ಇದರಿಂದ ಲಿವರ್ ಹಾನಿಗೆ ಒಳಗಾಗುತ್ತದೆ.

ಸಮಸ್ಯೆ ತಪ್ಪಿಸಿಕೊಳ್ಳಲು:
ಪುರುಷರು ವಾರಕ್ಕೆ 21 ಯೂನಿಟ್ ಗಿಂತ ಹೆಚ್ಚು ಮತ್ತು ಮಹಿಳೆಯರು 14 ಕ್ಕಿಂತ ಹೆಚ್ಚು ಸೇವಿಸಬಾರದು.ವಾರದಲ್ಲಿ ಎರಡು ಬಾರಿ ಸೇವಿಸಿದರೆ ಸಾಕು ಎಂದು ಕೂಡ ಹೇಳಲಾಗುತ್ತದೆ.

ನೆಗಡಿ ಮತ್ತು ಜ್ವರ:
ಇತ್ತೀಚೆಗಿನ ಸಂಶೋಧನೆ ಪ್ರಕಾರ ಮಹಿಳೆಯರು ಪುರುಷರಿಗಿಂತ ಕಡಿಮೆ ತಂಡಿ ಮತ್ತು ಫ್ಲೂ ಜ್ವರ ಹೊಂದುತ್ತಾರೆ.
ಕಳೆದ ವರ್ಷ ಸ್ಟ್ರಾಟ್ಫಾರ್ಡ್ ವಿಶ್ವವಿದ್ಯಾಲಯ ನಡೆಸಿದ ಸಂಶೋದನೆ ಪ್ರಕಾರ ಮಹಿಳೆಯರು ಹೆಚ್ಚು ಇಮ್ಮ್ಯೂನಿಟಿ ಹೊಂದಿರುತ್ತಾರೆ.ಮಹಿಳೆಯರ ಈಸ್ಟ್ರೋಜೆನ್ ಹಾರ್ಮೋನು ಫ್ಲೂ ವೈರಾಣುವಿನ ವಿರುದ್ಧ ಹೋರಾಡುತ್ತದೆ.ಪುರುಷರಲ್ಲಿರುವ ಟೆಸ್ಟೋಸ್ಟೆರೋನ್ ವೈರಾಣುವಿನ ವಿರುದ್ಧ ಹೋರಾಡುವ ಅಂಶ ಕಡಿಮೆ ಹೊಂದಿರುತ್ತದೆ.

ಸಮಸ್ಯೆ ಕಡಿಮೆ ಮಾಡಿಕೊಳ್ಳಲು:
ಕೈಯನ್ನು ಆಗಾಗ ಸ್ವಚ್ಚವಾಗಿ ತೊಳೆದುಕೊಳ್ಳಿ. ಸಂಶೋಧನೆಗಳು ತಿಳಿಸುವ ಪ್ರಕಾರ ಈ ಫ್ಲೂ ವೈರಾಣುಗಳು ಒಬ್ಬರಿಂದ ಒಬ್ಬರಿಗೆ ಕೈ ಯ ಮೂಲಕ ಅಥವಾ ಅವರು ಮುಟ್ಟಿದ ಬಾಗಿಲನ್ನು ನೀವು ಮುಟ್ಟುವುದರಿಂದ ಒಬ್ಬರಿಗೊಬ್ಬರಿಗೆ ಹರಡುತ್ತದೆ.

ಶ್ವಾಸಕೋಶದ ಕ್ಯಾನ್ಸರ್:
ಶ್ವಾಸಕೋಶದ ಕ್ಯಾನ್ಸರ್ ಮಹಿಳೆಯರಲ್ಲಿ ಅಧಿಕ. ಕೆಲವು ಭಾಗಗಳಲ್ಲಿ ಪುರುಷರಿಗಿಂತ ಹೆಚ್ಚು ಮಹಿಳೆಯರು ಧೂಮಪಾನ ಮಾಡುತ್ತಾರೆ.ಸಂಶೋಧನೆಗಳ ಪ್ರಕಾರ ಮಹಿಳೆಯರು ಧೂಮಪಾನ ಬಿಡುವುದು ಕಷ್ಟ.ಇದರಿಂದ ಶ್ವಾಸಕೋಶದ ಕ್ಯಾನ್ಸರ್ ಪುರುಷರಿಗಿಂತ ಮೂರು ಪಟ್ಟು ಅಧಿಕವಾಗಿ ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತದೆ.
ಪರಿಹಾರ ಹತ್ತರಲ್ಲಿ ಒಂಬತ್ತರಷ್ಟು ಜನರಿಗೆ ಧೂಮಪಾನದಿಂದ ಶ್ವಾಸಕೋಶದ ಕ್ಯಾನ್ಸರ್ ಸಂಭವಿಸುತ್ತದೆ.ಆದ್ದರಿಂದ ಬಿಟ್ಟುಬಿಡಿ.ಇದರಿಂದ ಕ್ಯಾನ್ಸರ್ ತೊಂದರೆ ಕಡಿಮೆಯಾಗುತ್ತದೆ.



Click it and Unblock the Notifications