Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಮೂತ್ರದಲ್ಲಿ ಕಂಡುಬರುವ ಉರಿಯನ್ನು ನಿವಾರಿಸುವುದು ಹೇಗೆ?
ಸಾಮಾನ್ಯವಾಗಿ ನೀರಿನ ಅಂಶ ದೇಹಕ್ಕೆ ಅಗತ್ಯವಿರುವುದರಿಂದ, ಸಾಧ್ಯವಾದಷ್ಟು ನೀರು ಕುಡಿಯುವುದು ಅತ್ಯವಶ್ಯಕ. ಡಿಹೈಡ್ರೇಶನ್ (Dehydration) ಎನ್ನುವುದು ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ, ಇದು ದೇಹದಲ್ಲಿ ನೀರಿನ ಅಂಶವನ್ನು ಕಡಿಮೆಗೊಳಿಸುವುದರ ಜೊತೆಗೆ ಅನೇಕ ಸಮಸ್ಯೆಗಳನ್ನು ತರುತ್ತದೆ.
ದೇಹದಲ್ಲಿ ಉಂಟಾಗುವ ಅನೇಕ ಸಮಸ್ಯೆಗಳಿಗೆ ಡಿಹೈಡ್ರೇಶನ್ ( ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿರುವುದು ) ಕಾರಣವಾಗಿದೆ. ಉದಾಹರಣೆಗೆ ಮೂತ್ರದಲ್ಲಿ ಉರಿ ಕಾಣಿಸಿಕೊಳ್ಳುವುದು, ಅಥವಾ ಮೂತ್ರವು ಹಳದಿ ಬಣ್ಣಕ್ಕೆ ತಿರುಗುವುದು ಹಾಗೂ ಮೂತ್ರ ಮಾಡುತ್ತಿರುವಾಗ ಅಥವಾ ಮಾಡಿದ ನಂತರ ಉರಿ ಕಾಣಿಸಿಕೊಳ್ಳುವುದು. ಇಂತಹ ಅನೇಕ ಲಕ್ಷಣಗಳು ಡಿಹೈಡ್ರೇಶನ್‌ನಿಂದಾಗಿ ಕಂಡುಬರುತ್ತದೆ.
ಬಹಳಷ್ಟು ಜನ ಪ್ರತಿದಿನ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯದೇ ಇರುವುದರಿಂದ ಕೂಡ ಇಂತಹ ಸಮಸ್ಯೆಗಳು ತಲೆದೂರುತ್ತವೆ. ನೀವು ಕೂಡ ಇಂತಹ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಖಂಡಿತವಾಗಿಯೂ ಬೋಲ್ಡ್ ಸ್ಕೈ ನಿಮಗೆ ಸಹಾಯ ಮಾಡಲಿದೆ.
ಮೊದಲಿಗೆ ಪ್ರತಿ ದಿನ ಸರಿಯಾಗಿ ನೀರು ಕುಡಿಯುವುದನ್ನು ಮರೆಯಬೇಡಿ, ಅಲ್ಲದೆ ನೀರು ಕುಡಿಯುವುದರ ಜೊತೆಗೆ ಹಣ್ಣಿನ ಜ್ಯೂಸ್, ಹಾಗೂ ತರಕಾರಿಗಳನ್ನು ಸೇವಿಸಲು ಮರೆಯದಿರಿ. ಉದಾಹರಣೆಗೆ, ಕಲ್ಲಂಗಡಿ ಹಣ್ಣು (ವಾಡರ್‌ಮೆಲನ್), ಕಿತ್ತಳೆ ಹಣ್ಣುಗಳು ಮತ್ತು ಹಸಿರು ಎಲೆಗಳ ತರಕಾರಿಗಳು ಅಂದರೆ ಬಸಳೆ, ಸೊಪ್ಪು,ಹಾಗೂ ನೀರಿನ ಅಂಶ ಹೆಚ್ಚಿರುವ ಪದಾರ್ಥಗಳನ್ನು ಹೆಚ್ಚು ಸೇವಿಸಿ.
ಆರೋಗ್ಯಕರವಾದ ದೇಹಕ್ಕಾಗಿ ಅಥವಾ ದೃಢವಾದ ಕೂದಲನ್ನು ಬೆಳೆಸುವುದಕ್ಕೆ ನೀವು ಬಯಸುವಿರಾದರೆ ಈ ಕೆಳಗೆ ನೀಡಲಾಗಿರುವ ಸಲಹೆಗಳನ್ನು ಓದಿ.

ನೀರಿನ ಬಾಟಲ್ ಅನ್ನು ಇಟ್ಟುಕೊಂಡಿರಿ:
ಕೆಲಸ ನಿಮಿತ್ತ ಪ್ರಯಾಣ ಮಾಡುತ್ತಿರುವಾಗ ಅಥವಾ ಜಿಮ್ ಮಾಡುತ್ತಿರುವಾಗ, ಅಥವಾ ಯಾವುದೇ ಸ್ಥಳಕ್ಕೆ ನೀವು ಹೋದರು ಕೂಡ ನೀರಿನ ಬಾಟಲ್ ಕೊಂಡು ಹೋಗುವುದನ್ನು ಮರೆಯಬೇಡಿ. ಇದರಿಂದ ಪ್ರತಿ ನೀರಿನ ಗುಟುಕು ಕೂಡ ನಿಮ್ಮ ದಾಹ ಶಮನ ಮಾಡುವುದರ ಜೊತೆಗೆ ನಿಮ್ಮನ್ನು ಆರೋಗ್ಯಕರವನ್ನಾಗಿ ಮಾಡುತ್ತದೆ.

ದೈನಂದಿನ ಟಾರ್ಗೆಟ್ ತಲುಪಲು ಪ್ರಯತ್ನಿಸಿ:
ಪ್ರತಿ ದಿನ ನೀ್ವು ಕುಡಿಯುವ ನೀರಿನಲ್ಲಿ ಟಾರ್ಗೆಟ್ ಇಟ್ಟುಕೊಳ್ಳಿ, ನೀವು ಕುಡಿಯುವ ನೀರಿನ ಮಟ್ಟವನ್ನು ಹೆಚ್ಚಿಸಿಕೊಳ್ಳದಿದ್ದರೆ ಅದು ನಿಮ್ಮ ತಪ್ಪಾಗುತ್ತದೆ. ಕೆಲವೊಮ್ಮೆ ನೀವು ಕಡಿಮೆ ಅಥವಾ ದೀರ್ಘ ಅವಧಿಯ ನಂತರ ಅರ್ಧ ಗ್ಲಾಸ್ ನೀರನ್ನು ಕುಡಿದರೆ, ಅದು ನಿಮ್ಮ ದೇಹದಲ್ಲಿ ನೀರಿನ ಅಂಶವನ್ನು ಹೆಚ್ಚಿಸಲು ಸಹಕಾರಿಯಾಗುವುದಿಲ್ಲ. ಬದಲಾಗಿ ಪ್ರತಿ ದಿನ ನೀವು ಕುಡಿಯುವ ನೀರಿನಲ್ಲಿ ಟಾರ್ಗೆಟ್ ಇಟ್ಟುಕೊಳ್ಳಿ ಉದಾಹರಣೆಗಾಗಿ ಪ್ರತಿ ಗಂಟೆಗೆ 1 ಗ್ಲಾಸ್ ನೀರು ಅಥವಾ 1 ಲೀಟರ್ ಬಾಟಲ್ ನೀರನ್ನು 2 ಗಂಟೆಗಳಲ್ಲಿ ಕುಡಿಯಲು ಪ್ರಯತ್ನಿಸಿ. ಸಂಜೆಯ ಸಮಯದಲ್ಲಿ ಸರಿಯಾಗಿ ನೀರು ಕುಡಿಯದವರಿಗೆ ಇದು ಸೂಕ್ತ ಉಪಾಯವಾಗಿದೆ.

ಜ್ಯೂಸ್:
ಪ್ರತಿದಿನ ಜ್ಯೂಸ್ ಕುಡಿಯುವುದರಿಂದ ಕೂಡ ದೇಹದಲ್ಲಿ ನೀರಿನ ಅಂಶವನ್ನು ಹೆಚ್ಚಿಸಲು ಸಹಕಾರಿಯಾಗಲಿದೆ. ಪ್ರತಿ ದಿನ ಆರೋಗ್ಯಕರವಾದ ಹಣ್ಣಿನ ಹಾಗೂ ತರಕಾರಿ ಜ್ಯೂಸ್ ಅನ್ನು ಸೇವಿಸಿ.

ಎಳನೀರು:
ಪ್ರತಿದಿನ ನೀವು ಎಳನೀರು ಕುಡಿಯುವುದರಿಂದ ಕೂಡ ದೇಹದಲ್ಲಿ ನೀರಿನ ಅಂಶವನ್ನು ಹೆಚ್ಚಿಸಲು ಸಹಕಾರಿಯಾಗಲಿದೆ. ಅದಾಗಿಯೂ ಪ್ರತಿದಿನ ನೀವು ಎಳನೀರು ಕುಡಿಯುವುದರಿಂದ ಮೂತ್ರ ಮಾಡುವಾಗ ಉಂಟಾಗುವ ಉರಿ ಹಾಗೂ ರೋಗದ ಸೋಂಕನ್ನು ಶಮನಗೊಳಿಸುವಲ್ಲಿ ಸಹಕಾರಿಯಾಗಲಿದೆ.

ಹಣ್ಣು ಹಾಗೂ ತರಕಾರಿಗಳು:
ಹಲವಾರು ಹಣ್ಣುಗಳು ಹಾಗೂ ತರಕಾರಿಗಳಲ್ಲಿ ನೀರಿನ ಅಂಶಗಳು ಹೆಚ್ಚಿದ್ದು ನಿಮ್ಮ ದೇಹವನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಲು ಇದು ಸಹಕಾರಿಯಾಗಲಿದೆ. ಸಮಾನ್ಯವಾಗಿ ಕಲ್ಲಂಗಡಿ ಹಣ್ಣು (ವಾಡರ್‌ಮೆಲನ್), ಕಿತ್ತಳೆ ಹಣ್ಣುಗಳು, ಟೊಮ್ಯಾಟೋ, ಸ್ಟ್ರಾಬೇರಿಗಳಲ್ಲಿ ಹೆಚ್ಚಿನ ಪ್ರಮಾಣದ ನೀರಿನ ಅಂಶವಿರುವುದರಿಂದ, ಇದನ್ನು ಪ್ರತಿ ನಿತ್ಯ ಸೇವಿಸುವುದು ಅವಶ್ಯಕ.

ಕೆಫೀನ್‌ಗೆ ಬೈ ಬೈ ಹೇಳಿ:
ಬಹಳಷ್ಟು ಜನರು ಕೆಫೀನ್‌ಗೆ ವ್ಯಸನಿಯಾಗಿರುತ್ತಾರೆ, ಇದು ಸಾಧ್ಯವಾದಷ್ಟು ನಾವು ದೂರ ಇಟ್ಟುಕೊಳ್ಳುವುದು ಅತ್ಯವಶ್ಯಕ. ಕೆಫೀನ್‌ನಂತಹ ಪದಾರ್ಥವು ದೇಹದಲ್ಲಿ ವ್ಯತಿರಿಕ್ತ ಪರಿಣಾಮ ಬೀರುವುದರ ಜೊತೆಗೆ, ನೀರಿನ ಅಂಶವನ್ನು ಕಡಿಮೆಗೊಳಿಸುತ್ತದೆ.



Click it and Unblock the Notifications