For Quick Alerts
ALLOW NOTIFICATIONS  
For Daily Alerts

ಕಿವಿ ನೋವನ್ನು ತಡೆಗಟ್ಟಲು ಅನುಸರಿಸಬೇಕಾದ ವಿಧಾನಗಳೇನು?

|

ಕಿವಿ ನೋವು ಅಥವಾ ಸೋಂಕು ಎಲ್ಲಾ ಪ್ರಾಯದವರನ್ನು ಕಾಡುವಂತಹ ಒಂದು ಸಾಮಾನ್ಯ ಅಂತೆಯೇ ತೀಕ್ಷ್ಣ ಸಮಸ್ಯೆಯಾಗಿದೆ. ಮಕ್ಕಳಿಂದು ಹಿಡಿದು ದೊಡ್ಡವರನ್ನೂ ಕಾಡುವ ಈ ನೋವು ಕಿರಿಕಿರಿ ಮತ್ತು ಭಯಂಕರ ವೇದನೆಯನ್ನುಂಟುಮಾಡುತ್ತದೆ.

ಕಿವಿಯ ಮಧ್ಯಭಾಗದಲ್ಲಿ ದೀರ್ಘಕಾಲದ ನೋವು ಮತ್ತು ಉರಿಯೂತದೊಂದಿಗೆ ಸಂಯೋಜನೆಗೊಂಡು ಬ್ಯಾಕ್ಟೀರಿಯಾ ಅಥವಾ ವೈರಲ್ ಸೋಂಕು ಕಿವಿಯ ಸೋಂಕಾಗಿದೆ. ಸಣ್ಣ ಕಂಪಿಸುವ ಕಿವಿ ಮೂಳೆಗಳ ಖಾಲಿ ಸ್ಥಳ ಒಳಗೊಂಡಂತೆ ಕಿವಿ ತಮಟೆಯ ಹಿಂಭಾಗದಲ್ಲಿ ಕಿವಿಯ ಮಧ್ಯ ಭಾಗವನ್ನು ಇದು ಸಾಮಾನ್ಯವಾಗಿ ಹಾನಿ ಮಾಡುತ್ತದೆ. ಕಿವಿಯ ಸೋಂಕಿನ ಪರಿಣಾಮ ಮತ್ತು ಅದು ನಿಮ್ಮನ್ನು ಬಾಧಿಸುತ್ತಿರುವ ವಿಧಾನವನ್ನು ಅನುಸರಿಸಿ ಇದಕ್ಕೆ ಚಿಕಿತ್ಸೆಯನ್ನು ಒದಗಿಸಬಹುದು. ಕಿವಿಯ ಉರಿಯೂತದಿಂದ ಉಂಟಾಗುವ ಕಿವಿ ನೋವು ಹೆಚ್ಚು ಬಾಧಿಸುತ್ತಿರುವ ಸೋಂಕಾಗಿದೆ.

ಇಲ್ಲಿ, ಕಿವಿಯ ಮಧ್ಯಭಾಗವು ಸೋರಲು ತೊಡಗುತ್ತದೆ ಮತ್ತು ಇದು ನೋವನ್ನು ಉಂಟುಮಾಡುತ್ತದೆ. ವ್ಯಾಕ್ಸ್ ಹಾಗೂ ಇತರ ನೇರ ಶೇಖರಣೆ, ಕಿವಿಯ ತಮಟೆ ಕಂಪನ ಹೀಗೆ ಹಲವಾರು ಕಾರಣಗಳಿಂದ ಕಿವಿ ನೋವು ಪ್ರಾರಂಭಗೊಳ್ಳುತ್ತದೆ.

ಕಿವಿ ನೋವಿಗೆ ವೈದ್ಯರ ಚಿಕಿತ್ಸೆಯನ್ನು ಪಡೆದುಕೊಳ್ಳುವುದರಿಂದ ಇಲ್ಲವೇ ಕೆಲವೊಂದು ಮನೆಮದ್ದುಗಳ ಬಳಕೆಯಿಂದ ತಹಬಂದಿಗೆ ತಂದುಕೊಳ್ಳಬಹುದಾಗಿದೆ. ಕಿವಿ ಸೋಂಕಿನ ವಿಪರೀತ ನೋವು ಮತ್ತು ಸೋರಿಕೆಯನ್ನು ತಡೆಗಟ್ಟಲು ಶೀಘ್ರ ಚಿಕಿತ್ಸೆಯನ್ನು ತೆಗೆದುಕೊಳ್ಳಬೇಕಾದ್ದು ಅತ್ಯವಶ್ಯಕವಾಗಿದೆ. ಇಂದಿನ ಲೇಖನದಲ್ಲಿ ಕಿವಿ ನೋವನ್ನು ತಡೆಗಟ್ಟಲು ಮನೆಯಲ್ಲೇ ಅನುಸರಿಸಬೇಕಾದ ಕೆಲವೊಂದು ಕ್ರಮಗಳನ್ನು ಕುರಿತು ಚರ್ಚಿಸೋಣ. ಮನೆಯಲ್ಲೇ ಇದ್ದರೆ ಇಂತಹ ಚಿಕಿತ್ಸೆಗಳನ್ನು ನೀವು ತೆಗೆದುಕೊಳ್ಳಬಹುದು ಆದರೆ ಕಚೇರಿಗೆ ಹೋಗುವವರಾಗಿದ್ದಲ್ಲಿ ವೈದ್ಯರನ್ನು ಕಾಣುವುದು ಅತ್ಯವಶ್ಯಕವಾಗಿದೆ.

ನೋವಿರುವ ಕಿವಿಗೆ ಬಿಸಿಯ ಸ್ಪರ್ಶ

ನೋವಿರುವ ಕಿವಿಗೆ ಬಿಸಿಯ ಸ್ಪರ್ಶ

ಸೋರುತ್ತಿರುವ ಕಿವಿಯಲ್ಲಿ ನೋವು ವಿಪರೀತವಾಗಿದ್ದರೆ, ನೀವು ಹೀಟ್ ಪ್ಯಾಡ್ ಅಥವಾ ಬಿಸಿ ನೀರ ಪ್ಯಾಡ್ ಅನ್ನು ಆ ಕಿವಿಗೆ ಬಳಸಬಹುದಾಗಿದೆ. ಬಿಸಿ ನೀರ ಪ್ಯಾಡ್ ಕಿವಿಗೆ ಶಮನವನ್ನು ನೀಡಿ ಸೋರುವುದನ್ನು ತಡೆಗಟ್ಟುತ್ತದೆ. ಸೋರುತ್ತಿರುವ ಕಿವಿಯ ಸಮಸ್ಯೆಯನ್ನು ಹೊಂದಿರುವ ಯಾರು ಕೂಡ ಹಾಟ್ ವಾಟರ್ ಪ್ಯಾಡ್ ಅನ್ನು ಕಿವಿ ನೋವಿನ ಉಪಶಮನಕ್ಕೆ ಬಳಸಬಹುದಾಗಿದೆ.

ಇಯರ್ ಫೋನ್‌ಗಳನ್ನು ಬಳಸದಿರಿ

ಇಯರ್ ಫೋನ್‌ಗಳನ್ನು ಬಳಸದಿರಿ

ನಿಮ್ಮ ಕಿವಿ ವಿಪರೀತ ನೋವನ್ನು ಉಂಟುಮಾಡುತ್ತಿದ್ದರೆ, ಇಯರ್ ಫೋನ್‌ಗಳನ್ನು ಬಳಸದಿರುವ ತಕ್ಕ ಸಮಯ ಇದಾಗಿದೆ. ಒಮ್ಮೊಮ್ಮೆ ಇಯರ್ ಫೋನ್‌ಗಳಿಂದ ಬರುವಂತಹ ನೇರ ವಿಪರೀತ ಧ್ವನಿ ನಿಮ್ಮ ಕಿವಿ ತಮಟೆಗೆ ಹಾನಿಯನ್ನುಂಟುಮಾಡಬಹುದು. ಹೆಚ್ಚುವರಿ ಹಾನಿಯಿಂದ ಕಿವಿಯನ್ನು ಕಾಪಾಡಿಕೊಳ್ಳುವುದು ಕೂಡ ಕಿವಿ ನೋವಿನಿಂದ ಪರಿಹಾರವನ್ನು ಕಂಡುಕೊಳ್ಳುವ ಒಂದು ವಿಧಾನವಾಗಿದೆ. ದೊಡ್ಡ ಧ್ವನಿ ಮತ್ತು ಶಬ್ಧಗಳು ನಿಮ್ಮ ಕಿವಿಯನ್ನು ತಲುಪದಂತೆ ಎಚ್ಚರಿಕೆ ವಹಿಸುವುದು ಅತ್ಯವಶ್ಯಕವಾಗಿದೆ. ಇಯರ್ ಪ್ಲಗ್ ಬಳಸುವುದಕ್ಕಿಂತ ಹತ್ತಿಯ ಪ್ಲಗ್ ಅನ್ನು ಬಳಸುವುದು ಕೂಡ ಕಿವಿಗುಂಟುಮಾಡುವ ಹೆಚ್ಚುವರಿ ಧ್ವನಿಯನ್ನು ನಿಯಂತ್ರಿಸಲು ಸಹಕಾರಿಯಾಗಿದೆ.

ಒತ್ತಡ ಹೊಂದದಿರಿ ಮತ್ತು ವಿಶ್ರಾಂತಿ ತೆಗೆದುಕೊಳ್ಳಿ

ಒತ್ತಡ ಹೊಂದದಿರಿ ಮತ್ತು ವಿಶ್ರಾಂತಿ ತೆಗೆದುಕೊಳ್ಳಿ

ನೀವು ಕಿವಿ ನೋವನ್ನು ಹೊಂದಿರುವ ಸಮಯದಲ್ಲಿ ಹೆಚ್ಚು ಒತ್ತಡವನ್ನು ಅನುಭವಿಸುವುದಕ್ಕಿಂತ ವಿಶ್ರಾಂತಿಯನ್ನು ಪಡೆಯುವುದು ಅತ್ಯವಶ್ಯಕವಾಗಿದೆ. ಹೆಚ್ಚು ಗಾಳಿಗೆ ಓಡಾಡುವುದನ್ನು ತಡೆಗಟ್ಟಿ ಮತ್ತು ನಿಮ್ಮ ಕಿವಿಗೆ ನೀರು ಹೋಗದಂತೆ ಎಚ್ಚರ ವಹಿಸಿ. ಇದರಿಂದ ನಿಮ್ಮ ಕಿವಿ ಸೋರುವಿಕೆ ಮತ್ತು ನೋವು ನಿಯಂತ್ರಣಕ್ಕೆ ಬರುತ್ತದೆ. ಕೆಲಸದ ಹೆಚ್ಚುವರಿ ಒತ್ತಡವನ್ನು ನಿಮ್ಮ ಮೇಲೆ ತಂದುಕೊಳ್ಳಬೇಡಿ ಮತ್ತು ಈ ಸಮಯದಲ್ಲಿ ಕಿವಿಯಾಭರಣವನ್ನು ಧರಿಸದಿರುವುದು ಉತ್ತಮ.

ಮೌಖಿಕ ಚಿಕಿತ್ಸೆಯನ್ನು ತೆಗೆದುಕೊಳ್ಳಿ ಮತ್ತು ಮುಲಾಮು ಹಚ್ಚಿ

ಮೌಖಿಕ ಚಿಕಿತ್ಸೆಯನ್ನು ತೆಗೆದುಕೊಳ್ಳಿ ಮತ್ತು ಮುಲಾಮು ಹಚ್ಚಿ

ಸೋಂಕು ಹೆಚ್ಚುವರಿಯಾಗಿದ್ದರೆ ಕೆಲವೊಂದು ಮುಲಾಮನ್ನು ಹಚ್ಚುವುದರಿಂದ ನಿಮ್ಮ ನೋವು ತಹಬಂದಿಗೆ ಬರುತ್ತದೆ. ಕಿವಿಯ ಒಳಗೆ ನೀವು ಹಾನಿಯನ್ನು ಹೊಂದಿದ್ದರೆ, ಮೌಖಿಕ ಚಿಕಿತ್ಸೆಯನ್ನು ನೀವು ಪಡೆದುಕೊಳ್ಳುವುದು ಉತ್ತಮವಾಗಿರುತ್ತದೆ. ಈ ಉದ್ದೇಶಕ್ಕಾಗಿ ನೀವು ವೈದ್ಯರನ್ನು ಕಾಣುವುದು ಅತ್ಯವಶ್ಯಕವಾಗಿದೆ.

ತಜ್ಞರ ಸಲಹೆಯನ್ನು ಪಡೆದುಕೊಳ್ಳಿ

ತಜ್ಞರ ಸಲಹೆಯನ್ನು ಪಡೆದುಕೊಳ್ಳಿ

ಕಿವಿಯ ಸೋಂಕಿಗೆ ನಾವು ಮೇಲೆ ತಿಳಿಸಿರುವ ಚಿಕಿತ್ಸೆಯನ್ನು ಪಡೆದುಕೊಳ್ಳುವುದಕ್ಕಿಂತ ಮುಂಚೆ, ಅಥವಾ ಈ ವಿಧಾನವನ್ನು ಅನುಸರಿಸಿ ಕೂಡ ನಿಮ್ಮ ನೋವು ಮತ್ತು ಕಿವಿ ಸೋರಿಕೆ ನಿಯಂತ್ರಣಕ್ಕೆ ಬಾರದಿದ್ದಲ್ಲಿ ನೀವು ತಜ್ಞರನ್ನು ಕಾಣುವುದು ಅತ್ಯವಶ್ಯಕವಾಗಿದೆ. ಕಿವಿಯು ನಮ್ಮ ದೇಹದಲ್ಲಿರುವ ಸೂಕ್ಷ್ಮ ಅಂಗವಾಗಿರುವುದರಿಂದ ಇದರ ಬಗ್ಗೆ ನಿರ್ಲಕ್ಷ್ಯವನ್ನು ತಾಳುವುದು ಸರಿಯಲ್ಲ. ಕಿವಿಯು ನಮ್ಮ ದೇಹದ ಮುಖ್ಯ ಭಾಗವಾಗಿರುವುದರಿಂದ ಮತ್ತು ದೇಹದ ನಿಯಂತ್ರಣದಲ್ಲಿ ಪ್ರಮುಖ ಪಾತ್ರವನ್ನು ವಹಿಸುವುದರಿಂದ ಕಿವಿಯನ್ನು ಕುರಿತು ಹೆಚ್ಚು ಜಾಗ್ರತೆ ಮತ್ತು ಮುತುವರ್ಜಿಯನ್ನು ವಹಿಸುವುದು ಆವಶ್ಯಕವಾಗಿದೆ.

ಬೆಳ್ಳುಳ್ಳಿ ಎಣ್ಣೆ

ಬೆಳ್ಳುಳ್ಳಿ ಎಣ್ಣೆ

ಬೆಳ್ಳುಳ್ಳಿಯನ್ನು ಜಜ್ಜಿ ಅದರ ರಸ ತೆಗೆದು ಕೆಲವು ಬಿಂದುಗಳನ್ನು ನೊವಿರುವ ಕಿವಿಗೆ ಹಾಕಿ. ನೋವನ್ನು ನಿವಾರಿಸಿ ಕಿವಿ ಸೋರುವುದನ್ನು ಇದು ಕಡಿಮೆಗೊಳಿಸುತ್ತದೆ. ಈ ರೀತಿಯಲ್ಲೂ ಕಿವಿ ನೋವನ್ನು ಶಮನಗೊಳಿಸಬಹುದು.

ಟೀ ಟ್ರೀ ಎಣ್ಣೆ

ಟೀ ಟ್ರೀ ಎಣ್ಣೆ

ಟೀ ಟ್ರೀ ಎಣ್ಣೆಯ ಮೂರು ಬಿಂದುಗಳು, 2 ಸ್ಪೂನ್‌ನಷ್ಟು ಆಲೀವ್ ಆಯಿಲ್, 1 ಸ್ಪೂನ್ ಏಪಲ್ ಸೀಡರ್ ವಿನೇಗರ್ ಮತ್ತು 1 ಸ್ಪೂನ್‌ನಷ್ಟು ಕೊಲೈಡಲ್ ಸಿಲ್ವರ್ ಅನ್ನು ತೆಗೆದುಕೊಂಡು ಮಿಶ್ರ ಮಾಡಿಕೊಳ್ಳಿ. ನಿಮ್ಮ ತಲೆಯ ಕೆಳಗೆ ಒಂದು ಬಟ್ಟೆ ಹಾಸಿಕೊಂಡು ನೋವಿರುವ ಕಿವಿಯ ಬದಿಯಲ್ಲಿ ಮಲಗಿಕೊಳ್ಳಿ. ಡ್ರಾಪರ್ ಅನ್ನು ಬಳಸಿಕೊಂಡು ಈ ಮಿಶ್ರಣವನ್ನು ಕಿವಿಗೆ ಹಾಕಿಕೊಳ್ಳಿ. 5 ನಿಮಿಷ ಹಾಗೆಯೇ ಮಲಗಿರಿ ನಂತರ ಸರಿಯಾಗಿ ಕುಳಿತುಕೊಳ್ಳಿ. ನಂತರ ಮತ್ತೊಂದು ಬದಿಗೆ ಹೊರಳಿ ಮಲಗಿ. ಹೀಗೆ ಮಾಡುವುದರಿಂದ ಈ ಮಿಶ್ರಣ ನಿಮ್ಮ ಕಿವಿಯನ್ನು ಸರಿಯಾಗಿ ತಲುಪುತ್ತದೆ. 2 ದಿನಗಳಿಗೆ ಎರಡು ಅಥವಾ ಮೂರು ಬಾರಿ ಹೀಗೆ ಮಾಡಿ.

ಈರುಳ್ಳಿ ರಸ

ಈರುಳ್ಳಿ ರಸ

ಸಣ್ಣ ಈರುಳ್ಳಿಯನ್ನು ತೆಗೆದುಕೊಂಡು ಅದನ್ನು ಕತ್ತರಿಸಿಕೊಳ್ಳಿ. ಮೈಕ್ರೋವೇವ್‌ನಲ್ಲಿ 2 ನಿಮಿಷಗಳಷ್ಟು ಕಾಲ ಬಿಸಿ ಮಾಡಿಕೊಳ್ಳಿ. ಅದು ತಣ್ಣಗಾದ ನಂತರ, ರಸವನ್ನು ಹಿಂಡಿ ತೆಗೆಯಿರಿ. ನೋವಿರುವ ಕಿವಿಗೆ 2-3 ಹನಿ ಹಾಕಿಕೊಳ್ಳಿ. ನಂತರ ಮತ್ತೊಂದು ಬದಿಗೆ ಮಲಗಿಕೊಳ್ಳಿ. ಹೀಗೆ ಮಾಡುವುದರಿಂದ ನಿಮ್ಮ ಕಿವಿಗೆ ಸರಿಯಾಗಿ ಮದ್ದು ತಲುಪುತ್ತದೆ. ಪರ್ಯಾಯವಾಗಿ, ಈರುಳ್ಳಿಯನ್ನು ಅರ್ಧ ಗಂಟೆಗಳ ಕಾಲ ಹುರಿದುಕೊಳ್ಳಿ. ನಂತರ ಎರಡು ಸಮಾನ ಭಾಗಗಳನ್ನಾಗಿ ಮಾಡಿಕೊಳ್ಳಿ. ಒಂದು ಭಾಗವನ್ನು ಹತ್ತಿ ಬಟ್ಟೆಯಲ್ಲಿ ಸುತ್ತಿಕೊಳ್ಳಿ ನೋವಿರುವ ಕಿವಿಯ ಮೇಲ್ಭಾಗಕ್ಕೆ ಇದನ್ನು ಹಿಡಿದುಕೊಳ್ಳಿ. 10 ನಿಮಿಷಗಳ ನಂತರ ಇದೇ ವಿಧಾನವನ್ನು ಪುನರಾವರ್ತಿಸಿ.

ತುಳಾಸಿ ಎಲೆಗಳು

ತುಳಾಸಿ ಎಲೆಗಳು

4-5 ತುಳಾಸಿ ಎಲೆಗಳನ್ನು ತೆಗೆದುಕೊಂಡು ರಸ ಹಿಂಡಿಕೊಳ್ಳಿ. ಈ ರಸವನ್ನು ನೋವಿರುವ ಕಿವಿಯ ಸುತ್ತಲೂ ಲೇಪಿಸಿಕೊಳ್ಳಿ. ಕಿವಿಯ ಕಾಲುವೆಗೆ ರಸ ತಲುಪದಂತೆ ಜಾಗರೂಕರಾಗಿರಿ. ತೆಂಗಿನಣ್ಣೆಯ ಮಿಶ್ರಣದೊಂದಿಗೆ ಸಹ ಈ ರಸವನ್ನು ಕಿವಿ ನೋವಿಗೆ ನೀವು ಬಳಸಬಹುದು. ಪ್ರತೀ ದಿನ ಎರಡು ಬಾರಿ ಹೀಗೆ ಮಾಡಿ.

ಉಪ್ಪು

ಉಪ್ಪು

ಮನೆಯಲ್ಲಿ ಶೀಘ್ರವಾಗಿ ದೊರಕುವ ಸಾಮಾಗ್ರಿಯಾಗಿದೆ ಉಪ್ಪು. ಒಂದು ಕಪ್‌ನಷ್ಟು ಉಪ್ಪು ತೆಗೆದುಕೊಂಡು ಅದನ್ನು ಮೈಕ್ರೋವೇವ್‌ನಲ್ಲಿ 3-5 ನಿಮಿಷಗಳ ಕಾಲ ಬಿಸಿ ಮಾಡಿಕೊಳ್ಳಿ. ದಪ್ಪನೆಯ ಕಾಲುಚೀಲದಲ್ಲಿ ಬಿಸಿ ಮಾಡಿದ ಉಪ್ಪನ್ನು ಹಾಕಿ ಕಾಲುಚೀಲದ ತೆರೆದ ಕೊನೆಯನ್ನು ಕಟ್ಟಿಕೊಳ್ಳಿ. ಇದೀಗ ನೋವಿರುವ ಕಿವಿಯ ಬದಿಯಲ್ಲಿ ಮಲಗಿ ಕಿವಿಯ ಅಡಿಯಲ್ಲಿ ಕಾಲುಚೀಲವನ್ನು ಇಡಿ. 8-10 ಬಾರಿ ನಿಮಗೆ ಅವಶ್ಯವಿರುವಷ್ಟು ಬಾರಿ ಹೀಗೆ ಮಾಡಿ. ಇದು ಕಿವಿ ನೋವನ್ನು ತಕ್ಷಣ ನಿವಾರಿಸುತ್ತದೆ.

ಆಲೀವ್ ಆಯಿಲ್

ಆಲೀವ್ ಆಯಿಲ್

ಒಂದು ಪಾತ್ರೆಯಲ್ಲಿ ಆಲೀವ್ ಆಯಿಲ್ ಬಿಸಿ ಮಾಡಿಕೊಳ್ಳಿ. ಇದರ ಕೆಲವು ಹನಿಗಳನ್ನು ನೋವಿರುವ ಕಿವಿಗೆ ಹಾಕಿ. ಎಣ್ಣೆ ತುಂಬಾ ಬಿಸಿಯಾಗಿರಬಾರದು. ಕಿವಿಯಲ್ಲಿ ಬ್ಯಾಕ್ಟಿರಿಯಾದ ಬೆಳವಣಿಗೆಯನ್ನು ಆಲೀವ್ ಆಯಿಲ್ ತಡೆಯುತ್ತದೆ. ಕಿವಿಗೆ ಹಾಕಿಕೊಳ್ಳುವ ಬಡ್ಸ್ ಬಳಸಿ ಆಲಿವ್ ಆಯಿಲ್ ಅನ್ನು ಕಿವಿಗೆ ಹಾಕಿಕೊಳ್ಳಬಹುದು.

ಮಾವಿನ ಎಲೆಯ ರಸ

ಮಾವಿನ ಎಲೆಯ ರಸ

ಮಾವಿನ ಎಲೆಯ ರಸ ಕೂಡ ಕಿವಿ ನೋವನ್ನು ತಕ್ಷಣ ನಿವಾರಿಸುತ್ತದೆ. ತಾಜಾ ಹಾಗೂ ಮೃದುವಾದ ಮಾವಿನ ಎಲೆಯನ್ನು ಜಜ್ಜಿ ಅದರ ರಸ ತೆಗೆಯಿರಿ. ಸ್ವಲ್ಪ ಬಿಸಿ ಮಾಡಿಕೊಂಡು 3-4 ಹನಿ ಕಿವಿಗೆ ಹಾಕಿಕೊಳ್ಳಿ. ನೋವು ಕೂಡಲೇ ಪರಿಹಾರಗೊಳ್ಳುತ್ತದೆ. ದಿನದಲ್ಲಿ ಮೂರು ಅಥವಾ ನಾಲ್ಕು ಸಲ ಈ ವಿಧಾನವನ್ನು ಅನುಸರಿಸಬಹುದು.

English summary

Tips To Care For Ear Infection

Ear infections are common problems for all age types and genders. They can happen to children as well as adults. The ear infection and it's severity is what decides the cure for the same. There are many other ear infections too caused by the wax and dirt accumulation, ear drum vibrations and so on.
X
Desktop Bottom Promotion