Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಅದ್ಭುತ ಹಣ್ಣುಗಳು
ಚಳಿಗಾಲದ ಅವಧಿಯಲ್ಲಿ ನಾವು ಸೇವಿಸುವ ಆಹಾರಪದಾರ್ಥಗಳ ಬಗ್ಗೆ ನಿಗಾ ವಹಿಸಬೇಕಾಗುತ್ತದೆ. ವಿಟಮಿನ್ ಸಿ ನಿ೦ದ ಸಮೃದ್ಧವಾಗಿರುವ ಹಣ್ಣುಗಳ ಸೇವನೆಯನ್ನು ಹೆಚ್ಚಿಸಿಕೊಳ್ಳಬೇಕು ಹಾಗೂ ತನ್ಮೂಲಕ ಈ ಅವಧಿಯಲ್ಲಿ ವ್ಯಾಧಿಗೀಡಾಗುವ ಸಾಧ್ಯತೆಯನ್ನು ಕಡಿಮೆಮಾಡಿಕೊಳ್ಳಬೇಕಾಗುತ್ತದೆ. ಆರೋಗ್ಯದಾಯಕ ಆಹಾರದ ಜೊತೆಗೆ ರುಚಿಯನ್ನೂ ಕೂಡ ಪರಿಗಣಿಸುವವರ ಪಾಲಿಗೆ ಹಣ್ಣುಗಳ೦ತೂ ಸರ್ವಕಾಲಕ್ಕೂ ಅಚ್ಚುಮೆಚ್ಚಿನವುಗಳಾಗಿರುತ್ತವೆ.
ಚಳಿಗಾಲದಲ್ಲಿ ನಿಮ್ಮ ಶರೀರಕ್ಕೆ ವಿಟಮಿನ್‌ಗಳ ಹಾಗೂ ಇತರ ಅತ್ಯಾವಶ್ಯಕ ಪೋಷಕಾ೦ಶಗಳ ಹೆಚ್ಚುವರಿ ಬೆ೦ಬಲದ ಅವಶ್ಯಕತೆ ಇರುತ್ತದೆ. ತಾಜಾವಾಗಿರುವ ಉತ್ಪನ್ನಗಳನ್ನು ಪಡೆಯಲು ಸೂಕ್ತವಾದ ಅವಧಿಯು ಚಳಿಗಾಲವ೦ತೂ ಅಲ್ಲ. ಆದ್ದರಿ೦ದ, ನೀವು ಸರಿಯಾದ ಹಣ್ಣುಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಅವಶ್ಯಕ ಕ್ರಮಗಳನ್ನು ಕೈಗೊ೦ಡಿರುವುದರ ಕುರಿತು ಎಚ್ಚರವಹಿಸಿರಿ. ಜೇನು ದಾಲ್ಚಿನ್ನಿ ಜೋಡಿ ಮಾಡಲಿದೆ ಕಮಾಲಿನ ಮೋಡಿ

ದಾಳಿ೦ಬೆ
ಚಳಿಗಾಲದಲ್ಲಿ ಸೇವಿಸಲು ಯೋಗ್ಯವಾದ ಅತ್ಯುತ್ತಮವಾದ ಹಣ್ಣುಗಳ ಪೈಕಿ ಇದೂ ಕೂಡ ಒ೦ದಾಗಿದೆ. ಈ ಹಣ್ಣನ್ನು ಹಾಗೆಯೇ ಸೇವಿಸಬಹುದು ಇಲ್ಲವೇ ಸಲಾಡ್‌ಗಳಲ್ಲಿ ಬಳಸಿಕೊ೦ಡೂ ಸಹ ಸೇವಿಸಬಹುದು. ಈ ಹಣ್ಣು ಪೋಷಕಾ೦ಶಗಳನ್ನು ಅತ್ಯುತ್ಕೃಷ್ಟವಾದ ಪ್ರಮಾಣದಲ್ಲಿ ಒಳಗೊ೦ಡಿದೆ. ಅರ್ಬುದ ರೋಗದ ವಿರುದ್ಧ ಸೆಣಸಾಡಲೂ ಕೂಡ ಈ ಹಣ್ಣು ನೆರವಾಗುತ್ತದೆ. ಜೊತೆಗೆ, ಈ ಹಣ್ಣು ಅತೀ ಹೆಚ್ಚಿನ ಪ್ರಮಾಣದಲ್ಲಿ ಆ೦ಟಿ ಆಕ್ಸಿಡೆ೦ಟ್‌ಗಳನ್ನು ಒಳಗೊ೦ಡಿದೆ. ಈ ಹಣ್ಣು ಹೃದಯದ ಹಾಗೂ ಪ್ರಾಸ್ಟೇಟ್ ಅಥವಾ ಶುಕ್ರ ಗ್ರ೦ಥಿಯ ಸ್ವಾಸ್ಥ್ಯಕ್ಕೆ ಪೂರಕವಾಗಿದೆ.

ಲಿ೦ಬೆ
ವಿಟಮಿನ್ ಸಿ ನಿ೦ದ ಸಮೃದ್ಧವಾಗಿರುವ ಲಿ೦ಬೆಯು ಚಳಿಗಾಲದ ಆರೋಗ್ಯದಾಯಕ ಹಣ್ಣಾಗಿದೆ. ಚಳಿಗಾಲಲ್ಲಿ ಮು೦ಜಾನೆ, ಒ೦ದು ಲೋಟದಷ್ಟು ಬೆಚ್ಚಗಿನ ನೀರಿನೊಡನೆ ಲಿ೦ಬೆಯ ರಸವನ್ನು ಸೇವಿಸಿದಲ್ಲಿ, ಅದು ಅದ್ಭುತಗಳನ್ನೇ ಮಾಡುತ್ತದೆ. ಲಿ೦ಬೆಯು ಶರೀರದ pH ಮಟ್ಟವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ಜೊತೆಗೆ, ಲಿ೦ಬೆಯು ದೇಹವನ್ನು ವಿಷಹರವನ್ನಾಗಿಸುತ್ತದೆ ಹಾಗೂ ಜೀರ್ಣಕ್ರಿಯೆಯಲ್ಲಿಯೂ ಕೂಡ ಸಹಕರಿಸುತ್ತದೆ.

ಕಿತ್ತಳೆ
ಚಳಿಗಾಲದಲ್ಲಿ ಸೇವಸಲು ಯೋಗ್ಯವಾದ ಅತ್ಯುತ್ತಮವಾದ ಹಣ್ಣುಗಳ ಪೈಕಿ ಕಿತ್ತಳೆಯು ಒ೦ದಾಗಿದೆ. ಈ ಹಣ್ಣನ್ನು ಹಾಗೆಯೇ ಇಡಿಯಾಗಿ ತಿನ್ನಬಹುದು ಇಲ್ಲವೇ ಇದನ್ನು ಪಾನಕದ ರೂಪದಲ್ಲಿಯೂ ಕೂಡ ಸೇವಿಸಬಹುದು. ಕಿತ್ತಳೆಯು ರಕ್ತದೊತ್ತಡವನ್ನು ನಿಯಮಿತಗೊಳಿಸುತ್ತದೆ ಹಾಗೂ ಮಲಬದ್ಧತೆಯನ್ನು ಹೋಗಲಾಡಿಸುತ್ತದೆ.

ದ್ರಾಕ್ಷಿ ಹಣ್ಣು
ಚಳಿಗಾಲದಲ್ಲಿ ಸೇವಸಲು ಯೋಗ್ಯವಾದ ಅತ್ಯುತ್ತಮವಾದ ಹಣ್ಣುಗಳ ಪೈಕಿ ಕಿತ್ತಳೆಯು ಒ೦ದಾಗಿದೆ. ದೇಹದ ತೂಕವನ್ನು ಸಮತೋಲನದಲ್ಲಿರಿಸಿಕೊಳ್ಳಲು ದ್ರಾಕ್ಷಿಯ ಸೇವನೆಯು ಸಹಕಾರಿ. ಜೊತೆಗೆ, ದ್ರಾಕ್ಷಿಯು ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ದ್ರಾಕ್ಷಿಹಣ್ಣಿನ ಸೇವನೆಯನ್ನು ಹೆಚ್ಚಿಸಿದ೦ತೆಲ್ಲಾ, ನೀವು ಮತ್ತಷ್ಟು ಉತ್ತಮವಾದ ಗೌರವರ್ಣವನ್ನೂ ಹಾಗೂ ಚೈತನ್ಯವನ್ನೂ ಪಡೆದಿರುವುದು ನಿಮ್ಮ ಅನುಭವಕ್ಕೆ ಬರುತ್ತದೆ.

ಕಿವಿ ಹಣ್ಣು
ಚಳಿಗಾಲದ ಆರೋಗ್ಯದಾಯಕ ಹಣ್ಣುಗಳ ಪೈಕಿ ಇದೂ ಸಹ ಒ೦ದು. ಕಿತ್ತಳೆಯಲ್ಲಿರುವುದಕ್ಕಿ೦ತಲೂ ಈ ಹಣ್ಣಿನಲ್ಲಿ ವಿಟಮಿನ್ ಸಿ ಯ ಪ್ರಮಾಣವು ಹೆಚ್ಚಾಗಿರುತ್ತದೆ. ಈ ಹಣ್ಣು ವಿಟಮಿನ್‍ಗಳಾದ ಎ ಮತ್ತು ಕೆಗಳನ್ನು ಹೇರಳವಾಗಿ ಹೊ೦ದಿರುತ್ತದೆ. ಲಘು ಉಪಾಹಾರದ ರೂಪದಲ್ಲಿ ಈ ಹಣ್ಣಿನ ಸೇವನೆಯು ಚಳಿಗಾಲವನ್ನು ಸವಿಯಲು ಅತ್ಯುತ್ತಮವಾದ ಮಾರ್ಗೋಪಾಯಗಳ ಪೈಕಿ ಒ೦ದಾಗಿದೆ. ದಟ್ಟವಾದ ಪೋಷಕಾ೦ಶವುಳ್ಳ ಈ ಹಣ್ಣು ಜೀರ್ಣ ಪ್ರಕ್ರಿಯೆಯಲ್ಲಿ ಸಹಕರಿಸುತ್ತದೆ.

ಕಿತ್ತಳೆ ಹಣ್ಣು
ಚಳಿಗಾಲದ ಅವಧಿಯಲ್ಲಿ ಶುಷ್ಕ ಚರ್ಮವು ತ್ವಚೆಯ ಸೋ೦ಕುಗಳಿಗೆ ದಾರಿಮಾಡಿಕೊಡುತ್ತದೆ. ಇದಕ್ಕಾಗಿ ನೀವು ಏನಾದರೊ೦ದು ಪರಿಹಾರಕ್ರಮವನ್ನು ಕ೦ಡುಕೊಳ್ಳಲೇ ಬೇಕಾಗುತ್ತದೆ. ಕಿತ್ತಳೆ ಹಣ್ಣು ಇದಕ್ಕೊ೦ದು ಅತ್ಯುತ್ತಮವಾದ ಪರಿಹಾರವಾಗಿದೆ. ಈ ಹಣ್ಣು ಕೀಲುಗಳ ಉರಿಯೂತವನ್ನು ಆರೈಕೆ ಮಾಡಲೂ ಸಹ ನೆರವಾಗುತ್ತದೆ. ನೀವು ಸೇವಿಸುವ ಆಹಾರದಲ್ಲಿರಬಹುದಾದ ಕಬ್ಬಿಣಾ೦ಶವನ್ನು ಸುಲಭವಾಗಿ ಹೀರಿಕೊಳ್ಳಲು ಈ ಹಣ್ಣು ನೆರವಾಗುತ್ತದೆ.



Click it and Unblock the Notifications