Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಡಯಟ್ ಮಾಡದೆಯೇ ತೂಕ ಕಳೆದುಕೊಳ್ಳಬಹುದೇ?
ನೀವು ತುಂಬಾ ಇಷ್ಟ ಪಟ್ಟ, ನಿಮ್ಮ ಅಚ್ಚುಮೆಚ್ಚಿನ ಅದೃಷ್ಟದ ಉಡುಗೆಯನ್ನು ಧರಿಸಲು ನಿಮಗೆ ಕಷ್ಟವಾಗುತ್ತಿದೆಯೇ? ಚಿಂತಿಸಬೇಡಿ ಅದಕ್ಕಾಗಿ ಯಾವುದೇ ರೀತಿಯಾದ ಡಯಟ್ ಸಹ ನೀವು ಮಾಡಬೇಕಿಲ್ಲ. ಪ್ರತಿ ದಿನ 500 ಕ್ಯಾಲೋರಿಗಳನ್ನು ನೀವು ಕರಗಿಸಿದರೆ ಅಥವಾ ತಿನ್ನುವುದನ್ನು ಕಡಿಮೆ ಮಾಡಿದರೆ, ಪ್ರತಿ ವಾರಕ್ಕೆ ಒಂದು ಪೌಂಡ್ ತೂಕವನ್ನು ಕರಗಿಸಬಹುದು.
ನಿಮ್ಮ ಪ್ರಸ್ತುತ ತೂಕವನ್ನು ಉಳಿಸಿಕೊಳ್ಳಬೇಕೆಂದರೆ ಪ್ರತಿದಿನ 100 ಕ್ಯಾಲೋರಿಗಳನ್ನು ಸೇವಿಸುವುದನ್ನು ಕಡಿಮೆ ಮಾಡಿದರೆ ಸಾಕು. ಏಕೆಂದರೆ ಬಹುಪಾಲು ವಯಸ್ಕರು ಪ್ರತಿ ವರ್ಷ 1-2 ಪೌಂಡ್ ಬೆಳೆಯುತ್ತಾರೆ. ಇವುಗಳಲ್ಲಿ ಯಾವುದಾದರು ಒಂದು ಅಥವಾ ಇನ್ನಿತರ ತಂತ್ರಗಳನ್ನು ಪ್ರಯತ್ನಿಸಿ ನೋಡಿ, ತೂಕ ಖಡಾಖಂಡಿತವಾಗಿ ಕಡಿಮೆಯಾಗುತ್ತದೆ, ಅದೂ "ಡಯಟ್" ಇಲ್ಲದೇನೆ!:

ರಾತ್ರಿ ಎಂಟು ಗಂಟೆಯ ನಂತರ ಊಟ ಮಾಡಬೇಡಿ
ಆದಷ್ಟು ರಾತ್ರಿ ಎಂಟು ಗಂಟೆಯ ಒಳಗಾಗಿ ನಿಮ್ಮ ಊಟವನ್ನು ಸೇವಿಸಿ. ಇದರಿಂದ ಸಂಜೆ ಅಂದರೆ ರಾತ್ರಿ ಊಟಕ್ಕಿಂತ ಮೊದಲು ನೀವು ಯಾವುದಾದರು ಕುರುಕಲು ತಿಂಡಿ ತಿನ್ನುವ ಚಟವನ್ನು ನಿಯಂತ್ರಿಸಬಹುದು. ಒಂದು ವೇಳೆ ಇದು ನಿಮ್ಮಿಂದ ಸಾಧ್ಯವಾಗದೇ ಹೋದಲ್ಲಿ ಯಾವುದಾದರು ಒಂದು ಹರ್ಬಲ್ ಟೀಯನ್ನು ಸೇವಿಸಿ. ನಂತರ ಹಲ್ಲುಜ್ಜಿ, ಬಾಯಿಯನ್ನು ತೊಳೆಯಿರಿ. ಇದರಿಂದ ನಿಮ್ಮ ತಿನ್ನುವ ಬಯಕೆಗೆ ಕಡಿವಾಣ ಬೀಳುತ್ತದೆ.

ಪ್ರತಿದಿನ 100 ಕ್ಯಾಲೋರಿಯನ್ನು ಕರಗಿಸಿ
ವರ್ಷದಲ್ಲಿ ಅಂದಾಜು 10 ಪೌಂಡ್ ಕಡಿಮೆ ಮಾಡಬೇಕಂದಾದಲ್ಲಿ, ಪ್ರತಿದಿನ 100 ಕ್ಯಾಲೋರಿಯನ್ನು ಕರಗಿಸಿ. ಪ್ರತಿದಿನ ಒಂದು ಮೈಲಿ ನಡೆಯಿರಿ ಅಂದರೆ 20 ನಿಮಿಷ ನಿರಂತರವಾಗಿ ನಡೆಯಿರಿ. ಕಳೆ ಕೀಳುವುದೋ ಅಥವಾ ಗಿಡ ನೆಡುವ ಕೆಲಸಗಳನ್ನು 20 ನಿಮಿಷ ಮಾಡಿ. ನಿಮ್ಮ ಲಾನ್‍ನಲ್ಲಿರುವ ಹುಲ್ಲನ್ನು 20 ನಿಮಿಷ ಕತ್ತರಿಸಿ. 30 ನಿಮಿಷಗಳ ಕಾಲ ಮನೆಯನ್ನು ಸ್ವಚ್ಛಗೊಳಿಸಿ. ಹತ್ತು ನಿಮಿಷಗಳ ಕಾಲ ಜಾಗ್ ಮಾಡಿ. ಇವುಗಳಲ್ಲಿ ಯಾವುದಾದರು ಒಂದು ಕೆಲಸವನ್ನು ಮಾಡುತ್ತ ಬನ್ನಿ.

ಆಹಾರ ಸೇವಿಸಿದ ದಿನಚರಿ ಇಡಿ
ನೀವು ಸೇವಿಸಿದ ಆಹಾರವನ್ನು ಚಾಚೂ ತಪ್ಪದೆ ಒಂದೆಡೆ ಬರೆದಿಡಿ. ಇದು ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದನ್ನು ಬರೆಯಲು ತುಂಬಾ ಸಮಯ ಬೇಕಾಗುವುದಿಲ್ಲ. ಆದರೆ ಇದರಿಂದ ನಿಮಗೆ ನಿಮ್ಮ ಆಹಾರ ಕ್ರಮದ ಮೇಲೆ ಒಂದು ಹಿಡಿತ ದೊರೆಯುತ್ತದೆ.

ಮಾಂಸಾಹಾರವನ್ನು ತ್ಯಜಿಸಿ
ಆದಷ್ಟು ಸಸ್ಯಾಹಾರವನ್ನು ಸೇವಿಸುವುದರಿಂದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಸಸ್ಯಾಹಾರಿಗಳು ಮಾಂಸಾಹಾರಿಗಳಿಗಿಂತ ಕಡಿಮೆ ತೂಕವನ್ನು ಹೊಂದಿರುತ್ತಾರೆ. ಇದಕ್ಕೆ ಹಲವಾರು ಕಾರಣಗಳು ಇರಬಹುದು. ಆದರೆ ಇದರಲ್ಲಿ ಲೆಗ್ಯುಮೆಗಳು ಪ್ರಧಾನ ಪಾತ್ರವನ್ನುವಹಿಸುತ್ತವೆ.

ರೆಡ್ ಸಾಸ್ ತೆಗೆದುಕೊಳ್ಳಿ
ಕ್ರೀಮ್ ಇರುವ ಇತರ ಸಾಸ್‍ಗಳಿಗಿಂತ ಟೊಮಾಟೊ ಸಾಸ್ ಉತ್ತಮವಾದ ಆಯ್ಕೆಯಾಗಿರುತ್ತದೆ. ಇದರಲ್ಲಿ ಕಡಿಮೆ ಕ್ಯಾಲೋರಿಗಳು ಇರುತ್ತವೆ. ಆದರೆ ಸೇವಿಸುವಾಗ ಪ್ರಮಾಣ ಬದ್ಧತೆಯ ಬಗ್ಗೆ ಮಾತ್ರ ಮರೆಯಬೇಡಿ.

ಊಟಕ್ಕೆ ಮೊದಲು ಹಣ್ಣುಗಳನ್ನು ಸೇವಿಸಿ
ಊಟಕ್ಕೆ ಅರ್ಧ ಗಂಟೆ ಮೊದಲು ಹಣ್ಣನ್ನು ಸೇವಿಸುವುದು ಉತ್ತಮ. ಇದರಿಂದ ಹಣ್ಣುಗಳು ಬೇಗ ಜೀರ್ಣವಾಗುತ್ತವೆ. ಖಾಲಿ ಹೊಟ್ಟೆಯಲ್ಲಿ ಹಣ್ಣುಗಳನ್ನು ಸೇವಿಸುವುದರಿಂದ ನಿಮ್ಮ ಜಠರದಲ್ಲಿರುವ ವಿಷಕಾರಿ ಅಂಶಗಳು ತೊಲಗಿ ಹೋಗುತ್ತವೆ. ಇದರಿಂದಾಗಿ ನಿಮ್ಮ ದೇಹಕ್ಕೆ ಅಗತ್ಯವಾದ ಶಕ್ತಿಯು ಲಭಿಸಿ, ನಿಮ್ಮ ತೂಕ ಕಡಿಮೆಯಾಗುತ್ತದೆ.

ನಿಮ್ಮ ಆಹಾರವನ್ನು ಅತಿಯಾಗಿ ಬೇಯಿಸಬೇಡಿ
ನಿಮ್ಮ ಆಹಾರವನ್ನು ಅತಿಯಾಗಿ ಬೇಯಿಸುವುದರಿಂದ ಅವುಗಳಲ್ಲಿರುವ ಪೋಷಕಾಂಶಗಳು ಕಡಿಮೆಯಾಗುತ್ತವೆ. ಇದರಿಂದ ನಿಮ್ಮ ದೇಹಕ್ಕೆ ಕಡಿಮೆ ಪೋಷಕಾಂಶ ಸೇರುತ್ತದೆ. ಆಗ ಇದನ್ನು ಸರಿದೂಗಿಸಿಕೊಳ್ಳಲು ದೇಹವು ಇತರೆ ಕುರುಕಲು ತಿಂಡಿಗಳ ಕಡೆಗೆ ವಾಲಲು ಶುರು ಮಾಡುತ್ತದೆ. ಹಾಗಾಗಿ ಆದಷ್ಟು ಸುಶಿ ಮತ್ತು ಸಲಾಡ್‍ಗಳನ್ನು ಸೇವಿಸಿ. ಹಬೆಯಲ್ಲಿ ಬೇಯಿಸಿದ, ಸುಟ್ಟ ಆಹಾರ ಮತ್ತು ತರಕಾರಿಗಳನ್ನು ಸೇವಿಸಿ. ಮೈಕ್ರೋ ವೇವ್ ಓವೆನ್‍ನಲ್ಲಿ ಆಹಾರಗಳನ್ನು ಬಿಸಿ ಮಾಡುವುದನ್ನು ನಿಯಂತ್ರಿಸಿ.

ನೀವು ಬಡಿಸಿಕೊಳ್ಳುವ ಆಹಾರದ ಪ್ರಮಾಣವನ್ನು ತಗ್ಗಿಸಿ
ಮನೆಯಲ್ಲಾಗಲಿ ಅಥವಾ ಹೋಟೆಲ್ ಆಗಲಿ ನಮಗೆ ಅಗತ್ಯವಾದ ಆಹಾರ ಪ್ರಮಾಣಕ್ಕಿಂತ ಹೆಚ್ಚಿಗೆ ಬಡಿಸಲು ಅವಕಾಶ ಕೊಡಬೇಡಿ. ಆದಷ್ಟು ಕಡಿಮೆ ಹಾಕಿಸಿಕೊಂಡು ಊಟಮಾಡಿ. ಹೀಗೆ ಶೇ.10% ರಿಂದ 20% ಕಡಿಮೆ ಮಾಡಿದ್ದಾದಲ್ಲಿ ನಿಮ್ಮ ತೂಕ ಸುಲಭವಾಗಿ ಇಳಿದು ಹೋಗುತ್ತದೆ. ಆದಷ್ಟು ಪಲ್ಯ ಮುಂತಾದವುಗಳನ್ನು ಬಟ್ಟಲಿನಲ್ಲಿ ಹಾಕಿಸಿಕೊಳ್ಳಬೇಡಿ. ನಿಮ್ಮ ತಟ್ಟೆಯಲ್ಲಿ ಯಾವುದೇ ತೆರನಾದ ಅಳತೆ ಮಾಡಬಹುದಾದ ವಸ್ತುಗಳು ಇರದಂತೆ ನೋಡಿಕೊಳ್ಳಿ.

ನಿಮ್ಮ ತಟ್ಟೆಯ ಗಾತ್ರದಲ್ಲಿ ಬದಲಾವಣೆ ತನ್ನಿ
12 ಇಂಚಿನ ತಟ್ಟೆಯ ಬದಲಿಗೆ 10 ಇಂಚಿನ ತಟ್ಟೆಯನ್ನು ಬಳಸಿ. ಇದರಿಂದ ನಿಮ್ಮ ಆಹಾರ ಸೇವನೆಯ ಪ್ರಮಾಣ ಆಟೊ ಮೆಟಿಕ್ ಆಗಿ ಕಡಿಮೆಯಾಗುವುದನ್ನು ನೀವೇ ಗಮನಿಸುವಿರಿ. ಕಾರ್ನೆಲ್ಸ್ ಬ್ರೈನ್ ವಾನ್‍ಸಿಂಕ್, ಪಿಎಚ್‍ಡಿ ಯವರು ತಮ್ಮ ಅಧ್ಯಯನದಲ್ಲಿ ಈ ಅಂಶವನ್ನು ಕುರಿತು ವಿವರವಾಗಿ ವಿವರಿಸಿದ್ದಾರೆ. ಅವರ ಪ್ರಕಾರ ತಟ್ಟೆ ಬಟ್ಟಲುಗಳು ದೊಡ್ಡದಾಗಿದ್ದಷ್ಟು, ಜನರು ಅದಕ್ಕೆ ಹೆಚ್ಚಾಗಿ ಆಹಾರವನ್ನು ಬಡಿಸುತ್ತಾರಂತೆ.

ಮಿಂಟ್ ಗಮ್ ಅನ್ನು ಅಗಿಯಿರಿ
ಒಂದು ವೇಳೆ ನಿಮಗೆ ಏನಾದರು ತಿನ್ನಬೇಕು ಎಂಬ ಬಯಕೆ ಉಂಟಾದಲ್ಲಿ ಯಾವುದಾದರು ಸ್ಟ್ರಾಂಗ್ ಫ್ಲೇವರಿನ ಶುಗರ್ ಲೆಸ್ ಚ್ಯೂಯಿಂಗ್ ಗಮ್ ಅಗಿಯಿರಿ. ಕೆಲಸ ಮುಗಿದ ನಂತರ ರಾತ್ರಿಯೂಟ ಮಾಡುವುದು, ಪಾರ್ಟಿಯಲ್ಲಿ ಬೆರೆಯುವುದು, ಟಿವಿ ನೋಡುವುದು, ಇಂಟರ್ ನೆಟ್‍ನಲ್ಲಿ ಸರ್ಫಿಂಗ್ ಮುಂತಾದವು ನಿಮ್ಮ ತಿನ್ನುವ ಚಪಲವನ್ನು ಹೆಚ್ಚಿಸುತ್ತವೆ. ಚ್ಯೂಯಿಂಗ್ ಗಮ್ ಅಗಿಯುವುದರಿಂದ ನಿಮಗೆ ಇತರ ಆಹಾರಗಳು ಅಷ್ಟಾಗಿ ರುಚಿಸದೆ, ಅವುಗಳನ್ನು ನೀವು ಕಡಿಮೆ ಸೇವಿಸುತ್ತೀರಿ.

ತಿನ್ನುವಾಗ "ಬಿಡುವು"ಕೊಡಿ
ಸುಮಾರು ಜನ ಊಟ ಮಾಡುವಾಗ ಬಿಟ್ಟು, ಬಿಟ್ಟು ತಿನ್ನುವ ಅಭ್ಯಾಸವನ್ನು ಇಟ್ಟುಕೊಂಡಿರುತ್ತಾರೆ. ನೀವೆ ಒಮ್ಮೆ ಪರೀಕ್ಷಿಸಿ, ಹೀಗೆ ಊಟ ಮಾಡುವವರು ಇತರರಿಗಿಂತ ಕಡಿಮೆ ಊಟವನ್ನು ಸೇವಿಸುತ್ತಾರೆ. ಬಿಟ್ಟು ಬಿಟ್ಟು ಊಟ ಮಾಡುವವರು, ಇತರರ ಜೊತೆಗೆ ಮಾತನಾಡುತ್ತ, ಕಡಿಮೆ ಸೇವಿಸಲು ಕಾರಣ. ಅವರ ಹೊಟ್ಟೆ ತುಂಬಿದ ಅನುಭವವನ್ನು ಕೊಡುವುದೇ ಆಗಿರುತ್ತದೆ. ನೀವು ಈ ಅಭ್ಯಾಸವನ್ನು ಪಾಲಿಸಿ

ಮನೆ ಊಟಮಾಡಿ
ವಾರದಲ್ಲಿ ಐದು ದಿನವಾದರು ಮನೆಯಲ್ಲಿಯೇ ಅಡುಗೆ ಮಾಡಿ. ಒಂದು ಗ್ರಾಹಕರ ವರದಿಯ ಸರ್ವೇಯ ಪ್ರಕಾರ " ತೂಕ ಇಳಿಸಿಕೊಳ್ಳುವವರು" ಈ ಅಭ್ಯಾಸದಿಂದ ಯಶಸ್ಸನ್ನು ಕಂಡಿದ್ದಾರಂತೆ. ಜೊತೆಗೆ ಅಡುಗೆ ಕೆಲಸ ಮಾಡುವದು ಒಂದು ವ್ಯಾಯಾಮ ಎಂದು ಭಾವಿಸಿ, ಕೆಲವು ಕ್ಯಾಲೋರಿಗಳು ಕರಗುತ್ತವೆ.

ಯೋಗ ಮಾಡಿ
ತೂಕ ಕಡಿಮೆ ಮಾಡಿಕೊಳ್ಳಲು ಬಯಸುವ ಹೆಂಗಸರಿಗೆ ಯೋಗ ಒಂದು ಅತ್ಯಂತ ಸರಳ ಮತ್ತು ಸುಲಭವಾದ ಮಾರ್ಗವಾಗಿರುತ್ತವೆ. ಯೋಗವು ಆಹಾರವನ್ನು ಸೇವಿಸುವ ಕ್ರಮಕ್ಕೆ ಒಂದು ಕ್ರಮಬದ್ಧತೆ ತಂದು ಕೊಡುತ್ತದೆ. ಯೋಗವು ಮನಸ್ಸಿನಲ್ಲಿ ಒಂದು ಸ್ಥಿತ ಪ್ರಙ್ಞೆಯ ಮನೋಭಾವವನ್ನು ತಂದು ಕೊಡುವುದರಿಂದ ಆಹಾರವನ್ನು ಜೊ ಯೋಚನೆ ಮಾಡಿ ಸೇವಿಸುತ್ತವೆ. ಜೊತೆಗೆ ಯೋಗದಿಂದ ಪ್ರಶಾಂತವಾದ ಮನಸ್ಥಿತಿ ಸಹ ದೊರೆಯುತ್ತದೆ. ಇದರಿಂದ ಸಹ ನಾವು ಕಂಡಾಪಟ್ಟೆ ತಿನ್ನುವುದು ಕಡಿಮೆಯಾಗುತ್ತದೆ.

ಗ್ರೀನ್ ಟೀ ಕುಡಿಯಿರಿ
ತೂಕ ಕಳೆದುಕೊಳ್ಳಬೇಕು ಎಂದು ಬಯಸುವವರು ಗ್ರೀನ್ ಟೀ ಕುಡಿಯುವುದು ಉತ್ತಮ. ಇದು ತೂಕ ಕಡಿಮೆ ಮಾಡುವಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ.

ಆಲ್ಕೋಹಾಲ್ ಅನ್ನು ಕಡಿಮೆ ಸೇವಿಸಿ
ಆಲ್ಕೋಹಾಲ್‍ನ ಪ್ರತಿ ಗ್ರಾಮ್‍ನಲ್ಲಿ ಕಾರ್ಬೋಹೈಡ್ರೇಟ್ ಮತ್ತು ಪ್ರೋಟಿನ್‍ಗಳಿಗಿಂತ ಹೆಚ್ಚಿನ ಪ್ರಮಾಣದ ಕ್ಯಾಲೋರಿಗಳು ಇರುತ್ತವೆ. ಇದು ನಿಮ್ಮ ಪ್ರಙ್ಞೆಯನ್ನು ಹಾಳು ಮಾಡಿ, ಚಿಪ್ಸ್, ಕಡಲೆ ಬೀಜ ಮುಂತಾದ ಕುರುಕಲು ತಿಂಡಿಗಳನ್ನು ತಿನ್ನುವಂತೆ ಮಾಡುತ್ತದೆ.



Click it and Unblock the Notifications