Latest Updates
-
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ!
ತಂಪು ಗಾಳಿ ನೀಡುವ ಹವಾನಿಯಂತ್ರಿತದ ಬಳಕೆ ಹೆಚ್ಚು ಅಪಾಯಕಾರಿ!
ಬೇಸಿಗೆಯ ಉರಿಯನ್ನು ನೀಗಿಸಲು ತಂಪು ಗಾಳಿ ಅತ್ಯವಶ್ಯಕ. ಆದರೆ ಪ್ರಾಕೃತಿಕ ತಂಪು ಗಾಳಿಯಿಂದ ಕೃತಕ ಗಾಳಿಗೆ ನಮ್ಮ ಮನಸ್ಸು ಒಗ್ಗುತ್ತಿರುವುದು ಬದಲಾವಣೆಯ ಪ್ರತಿಫಲ. ಇಂದು ಕಚೇರಿಯಿಂದ ಹಿಡಿದು ಮನೆಗಳಲ್ಲಿ ಕೂಡ ಫ್ಯಾನ್ ಇಲ್ಲವೇ ಹವಾನಿಯಂತ್ರಿತ ಅತ್ಯವಶ್ಯಕ ಎಂದಾಗಿಬಿಟ್ಟಿದೆ. ಅದರಲ್ಲೂ ಹವಾನಿಯಂತ್ರಿತದ ಬಳಕೆ ತುಸು ಹೆಚ್ಚು ಮತ್ತು ಇದಿಲ್ಲದೆ ಮನೆ ಕಚೇರಿಯಿಂದ ಹೊರಗೆ ಅಡಿಯಿಡಲು ನಮಗೆ ಮನಸ್ಸಾಗುವುದಿಲ್ಲ.
ಆದರೆ ಈ ಹವಾನಿಯಂತ್ರಿತ ಉಪಕರಣ ನಮಗೆ ಮಾಡುವ ತೊಂದರೆ ಹೇಗಿದೆ ಎಂಬುದು ನಿಮಗೆ ಗೊತ್ತಿದೆಯೇ? ಹೆಸರಿಗೆ ಮಾತ್ರ ತಂಪು ತಂಪು ಕೂಲ್ ಆಗಿರುವ ಇದು ನಿಮ್ಮ ರಕ್ತವನ್ನೇ ಹೀರಿಬಿಡುವಷ್ಟು ಸಾಮರ್ಥ್ಯವನ್ನು ಹೊಂದಿದೆ.
ಹೃದಯಾಘಾತ, ಹೃದಯ ಬೇನೆ ಮೊದಲಾದ ಹೃದಯ ಸಂಬಂಧಿ ತೊಂದರೆಗಳನ್ನು ಇದು ಒಡ್ಡುತ್ತದೆ. ಇಂದಿನ ಲೇಖನದಲ್ಲಿ ಹವಾನಿಯಂತ್ರಿತ ಉಪಕರಣ ಉಂಟು ಮಾಡುವ ತೊಂದರೆಗಳ ಪಟ್ಟಿಯನ್ನೇ ನಾವಿಲ್ಲಿ ನೀಡಿದ್ದು ಅದರತ್ತ ಗಮನ ಹರಿಸಿ ಅಪಾಯದಿಂದ ಪಾರಾಗಿ!
ಬೆಳಗ್ಗಿನ ನಿದ್ದೆಯನ್ನು ನಿವಾರಿಸಲು 9 ವಿಧಾನಗಳು

ಶ್ವಾಸಕೋಶಗಳಿಗೆ ಹಾನಿ:
ಹವಾನಿಯಂತ್ರಿತದಿಂದ ತಾಪಮಾನದಲ್ಲಿ ತೀವ್ರವಾದ ಬದಲಾವಣೆಗಳುಂಟಾಗುತ್ತವೆ. ಇದು ಉಸಿರಾಟ ತೊಂದರೆಗಳು ಇವೇ ಮೊದಲಾದ ಶ್ವಾಸಕೋಶ ಸಂಬಂಧಿತ ತೊಂದರೆಗಳನ್ನು ತಂದೊಡ್ಡುತ್ತವೆ.

ತ್ವಚೆಗೆ ಹಾನಿ:
ನೀವು ಹವಾನಿಯಂತ್ರಿತ ಕೋಣೆಯಲ್ಲಿ ಹೆಚ್ಚು ಓಡಾಡಿದಷ್ಟು ನಿಮಗೆ ತ್ವಚೆಯ ಸಮಸ್ಯೆಗಳು ಹೆಚ್ಚು. ಇದು ತ್ವಚೆಯನ್ನು ಒಣಗಿಸಿ ಅಪಾಯವನ್ನು ತಂದೊಡ್ಡುತ್ತದೆ.

ಶಬ್ಧ ಮಾಲಿನ್ಯ:
ಕೆಲವೊಂದು ಹವಾನಿಯಂತ್ರಿತಗಳು ಶಬ್ಧವನ್ನುಂಟು ಮಾಡುತ್ತವೆ. ಇದರಿಂದ ದಿನಪೂರ್ತಿ ತಲೆನೋವು ಉಂಟಾಗುತ್ತದೆ.

ಉಸಿರಾಟದ ತೊದರೆಗಳು:
ದುರ್ಬಲ ಗಾಳಿಯು ಹವಾನಿಯಂತ್ರಿತದಿಂದ ಬರುವ ಕಾರಣ ಉಸಿರಾಟ ಸಮಸ್ಯೆಗಳು ನಿಮ್ಮಲ್ಲಿ ಉಂಟಾಗುತ್ತದೆ.

ಅಲರ್ಜಿ:
ಹವಾನಿಯಂತ್ರಣದ ಗಾಳಿ ನಿಮ್ಮಲ್ಲಿ ಅಲರ್ಜಿಯನ್ನು ಉಂಟು ಮಾಡುತ್ತದೆ.

ಕಿರಿಕಿರಿ:
ಚರ್ಮದ ಕಿರಿಕಿರಿಗಳು ಆದರೆ ಗಂಟಲು ಕಿರಿಕಿರಿ ಕೂಡ ಹವಾನಿಯಂತ್ರಿತದಿಂದ ಬರುವಂಥದ್ದಾಗಿದೆ.

ಸಾಮಾನ್ಯ ಶೀತ:
ಗಾಳಿಯು ಒಂದೇ ಕೋಣೆಯಲ್ಲಿ ಸುಳಿದಾಡುವುದರಿಂದ ಇನ್ನೊಬ್ಬರಿಗೆ ನೆಗಡಿ ಉಂಟಾಗಿದ್ದರೆ ಅದು ವೇಗವಾಗಿ ಮತ್ತೊಬ್ಬರಿಗೆ ಹರಡುತ್ತದೆ.

ಕಣ್ಣಿನ ಸಮಸ್ಯೆಗಳು:
ಕಣ್ಣಿನ ಸಮಸ್ಯೆಗಳು ಹವಾನಿಯಂತ್ರಿತದಿಂದ ಉಂಟಾಗುತ್ತವೆ.

ಬಿಸಿಲಿಗೆ ಒಡ್ಡಿಕೊಳ್ಳದಿರುವುದು:
ಹೆಚ್ಚು ಹವಾನಿಯಂತ್ರಿತ ಬಳಕೆಯಲ್ಲಿದ್ದವರು ಬಿಸಿಲಿಗೆ ಒಡ್ಡಿಕೊಳ್ಳುವುದನ್ನು ಸಹಿಸರು. ಅವರು ಬೇಗನೇ ಬಿಸಿಲಿಗೆ ಬಾಡುತ್ತಾರೆ ಮತ್ತು ಬೆವರುತ್ತಾರೆ.

ಆಯಾಸ ಜಾಸ್ತಿ:
ಹವಾನಿಯಂತ್ರಿ ಕೊಠಡಿಯ ಪರಿಣಾಮದಿಂದ ನೀವು ಬೇಗನೇ ಆಯಾಸ ಹೊಂದುತ್ತೀರಿ. ಅಲ್ಲದೆ ನಿರಂತರ ತಲೆನೋವು ನಿಮ್ಮನ್ನು ಕಾಡುತ್ತಿರುತ್ತದೆ.



Click it and Unblock the Notifications
