Latest Updates
-
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ!
ವೋಡ್ಕಾದ ಹತ್ತು ಪರಿಣಾಮಕಾರಿ ಅಂಶಗಳು
ನಮ್ಮಲ್ಲಿ ಕೆಲವರಿಗೆ, ವೋಡ್ಕಾ ಒಂದು ಆಲ್ಕೋಹಾಲಿಕ್ ಪಾನೀಯವಾಗಿದ್ದು, ಇಥೇನಲ್, ನೀರು ಮತ್ತು ಕೆಲವು ಸುಗಂಧದಿಂದ ಮಾಡಿರುತ್ತಾರೆ ಎಂದೇ ತಿಳಿದಿರುತ್ತದೆ. ಈಗಿನ ಆಧುನಿಕ ವೋಡ್ಕಾ ತಯಾರಿಯು ಕೆಲವೊಂದು ಹಣ್ಣುಗಳು ಮತ್ತು ಸಕ್ಕರೆಯನ್ನು ಒಳಗೊಂಡಿರುತ್ತದೆ. ಕೆಲವೊಮ್ಮೆ ಆಲೂಗಡ್ಡೆ ಅಥವಾ ತಾಜಾ ಧಾನ್ಯಗಳನ್ನು ಕೂಡ ರುಚಿ ಹೆಚ್ಚಿಸಲು ಇದಕ್ಕೆ ಬಳಸುತ್ತಾರೆ.
ವೋಡ್ಕಾವನ್ನು ಯುರೋಪ್ ದೇಶಗಳಲ್ಲಿ ಒಂದು ಅನನ್ಯ ಮತ್ತು ಹೆಚ್ಚು ಬಳಕೆಯಲ್ಲಿರುವ ಪಾನೀಯವಾಗಿ ಪರಿಗಣಿಸುತ್ತಾರೆ. ಇಷ್ಟಲ್ಲದೆ ಇದು ಮನೆಮಂದಿಯೊಡನೆ ಕೂಡ ಸೇವಿಸಬಹುದಾದ ಪಾನೀಯವಾಗಿದೆ. ಈ ಮದ್ಯದ ಪಾನೀಯ ಕೆಲವೊಂದು ಆರೋಗ್ಯಕಾರಿ ಅಂಶಗಳನ್ನು ಒಳಗೊಂಡಿದೆ ಎಂಬುದು ನಿಮಗೆ ತಿಳಿದಿದೆಯೇ? ಇಂದಿನ ಲೇಖನ ವೋಡ್ಕಾದ ಕೆಲವೊಂದು ಆರೋಗ್ಯಕಾರಿ ಅಂಶಗಳನ್ನು ಕುರಿತು ನಿಮ್ಮೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳಲಿದೆ.
ಹೆಚ್ಚಿನ ಮದ್ಯಪಾನದ ಅಂಶಗಳನ್ನು ಹೊಂದಿದ್ದರೂ ಕೂಡ ವೋಡ್ಕಾ ಒಂದು ಒಳ್ಳೆಯ ಪಾನೀಯವಾಗಿದೆ ಇದು ಕೆಲವೊಂದು ಆರೋಗ್ಯಯುತ ಅಂಶಗಳನ್ನು ಕೂಡ ನಿಮಗೆ ಕೊಡುಗೆಯಾಗಿ ನೀಡುತ್ತದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ವೋಡ್ಕಾದ ಕುರಿತಾದ ಹತ್ತು ಆರೋಗ್ಯಕಾರಿ ಅಂಶಗಳನ್ನು ಕುರಿತು ತಿಳಿದುಕೊಳ್ಳಿ.
ಹುಡುಗರೇ ಮಹಿಳೆಯರಿಗಿಂತ ಬೀರ್ ಬೊಂಬಾಟ್ ಗೊತ್ತೇನ್ರಿ?

ಒತ್ತಡ ನಿವಾರಕ
ನೀವು ನಿದ್ರಾಹೀನತೆಯ ಕೊರತೆಯಿಂದ ಬಳಲುತ್ತಿದ್ದರೆ ವೋಡ್ಕಾ ಸೇವಿಸುವುದು ಉತ್ತಮವಾಗಿರುತ್ತದೆ. ಇದನ್ನು ಸೀಮಿತವಾಗಿ ಮಿತವಾಗಿ ತೆಗೆದುಕೊಂಡಲ್ಲಿ ನಿಮ್ಮಲ್ಲಿನ ನಿದ್ದೆಯ ಸಮಸ್ಯೆಗಳನ್ನು ದೂರಮಾಡಿ ಚೆನ್ನಾಗಿ ನಿದ್ದೆ ಬರುವಂತೆ ಇದು ಮಾಡುತ್ತದೆ.

ಡಯೆಟ್
ಇದು ಸ್ವಲ್ಪ ಕೂಡ ಕೊಬ್ಬನ್ನು ಹೊಂದಿಲ್ಲ. ಇದನ್ನು ಕಡಿಮೆ ಕ್ಯಾಲೋರಿ ಇರುವ ಆಹಾರದೊಂದಿಗೆ ಸೇವಿಸಬಹುದಾಗಿದೆ. ಅಧಿಕ ತೂಕ ಮತ್ತು ಬೊಜ್ಜಿನ ಸಮಸ್ಯೆಯಿಂದ ನೀವು ಬಳಲುತ್ತಿದ್ದಲ್ಲಿ, ಇದು ನಿಮಗೆ ಮಾನಸಿಕ ಸಮಾಧಾನವನ್ನು ನೀಡುವುದರ ಜೊತೆಗೆ ನಿಮ್ಮ ತಿನ್ನುವ ಚಟವನ್ನು ಕಡಿಮೆ ಮಾಡುತ್ತದೆ.

ಸರ್ವ ರೋಗ ನಿವಾರಕ
ಇದು ನಿಮ್ಮಲ್ಲಿನ ಎಲ್ಲಾ ಸಮಸ್ಯೆಗಳನ್ನು ದೂರ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಒಂದು ಆಂಟಿಟೋಕ್ಸಿನ್ ಮತ್ತು ಆಂಟಿಸೆಪ್ಟಿಕ್ ಆಗಿ ಕೂಡ ವೋಡ್ಕಾ ಕೆಲಸ ಮಾಡುತ್ತದೆ.

ಸಾವಿನ ಪ್ರಮಾಣ ಇಳಿಕೆ
ಹೌದು. ವೋಡ್ಕಾದ ಬಗೆಗಿನ ಇನ್ನೊಂದು ಮಹತ್ವಕಾರಿಯಾದ ಅಂಶವನ್ನು ನೀವು ತಿಳಿದುಕೊಳ್ಳಲೇಬೇಕು. ನೀವು ಇದನ್ನು ಮಿತವಾಗಿ ಸೇವಿಸುತ್ತಿದ್ದರೆ, ಸಾವಿನ ಪ್ರಮಾಣವನ್ನು ಕಡಿಮೆ ಮಾಡುತ್ತದಂತೆ. ಆಶ್ಚರ್ಯಕಾರಿಯಾಗಿದೆ ಅಲ್ಲವೇ?

ರಕ್ತ ಪರಿಚಲನೆ
ಮಾನವನ ದೇಹದಲ್ಲಿರುವ ರಕ್ತದೊತ್ತಡವನ್ನು ಇದು ನಿಯಂತ್ರಿಸುತ್ತದೆ ಮತ್ತು ಹೃದಯದ ತೊಂದರೆಯನ್ನು ನಿವಾರಿಸುತ್ತದೆ. ಇದು ಉತ್ತಮವಾದ ಮತ್ತು ಮೃದುವಾದ ರಕ್ತಪರಿಚಲನೆಗೆ ನೆರವನ್ನು ನೀಡುತ್ತದೆ.

ಹೆಚ್ಚು ಜ್ವರ
ವೋಡ್ಕಾವನ್ನು ರೋಗಿಗಳ ಕಾಲುಗಳಿಗೆ ಎದೆ ಮತ್ತು ಹಣೆಗೆ ಹಚ್ಚಿದರೆ ಜ್ವರದ ತಾಪಮಾನ ಕಡಿಮೆಯಾಗುತ್ತದಂತೆ!. ಹೆಚ್ಚು ಜ್ವರ ಇದ್ದಲ್ಲಿ ಇದು ದೇಹದ ತಾಪಮಾನವನ್ನು ಕುಗ್ಗಿಸಿ ಜ್ವರವನ್ನು ಕಡಿಮೆ ಮಾಡುತ್ತದೆ.

ಅಲ್ಜಿಮರ್ ಮತ್ತು ಎರಡನೇ ವಿಧ ಮಧುಮೇಹ
ನಿಮಗೆ ಇದು ತಿಳಿದಿದೆಯೇ, ವೋಡ್ಕಾ ಪರಿಣಾಮಕಾರಿಯಾಗಿ ಅಲ್ಜಿಮರ್‌ನ ಅಪಾಯವನ್ನು ಮತ್ತು ಮಧುಮೇಹದ ಎರಡನೇ ವಿಧವನ್ನು ಕಡಿಮೆ ಮಾಡುತ್ತದೆ.

ಜೀರ್ಣಕ್ರಿಯೆ ಸಮಸ್ಯೆ
ಸಣ್ಣ ಪ್ರಮಾಣದ ವೋಡ್ಕಾವನ್ನು ಆಹಾರದಲ್ಲಿ ಸೇರಿಸಿದ್ದರೆ, ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಎಂಬುದು ತಿಳಿದುಬಂದಿದೆ.

ಗಿಡ ಮೂಲಿಕಾ ಔಷಧಗಳಾಗಿ
ವೋಡ್ಕಾದಲ್ಲಿರುವ ಇನ್ನೊಂದು ಪರಿಣಾಮಕಾರಿ ಔಷಧವೆಂದರೆ, ಗಿಡಮೂಲಿಕೆಗಳ ಬೇರುಗಳು ಮತ್ತು ಎಲೆಗಳನ್ನು ವೋಡ್ಕಾದಲ್ಲಿ ಅಧಿಕ ಸಮಯದವರೆಗೆ ನೆನೆಸಿಟ್ಟರೆ ವೋಡ್ಕಾವು ಈ ಗಿಡಮೂಲಿಕೆಗಳಲ್ಲಿನ ಸಾರವನ್ನು ಹೀರಿಕೊಂಡು ಕೆಲವೊಂದು ರೋಗಗಳನ್ನು ನಿವಾರಿಸುವಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.



Click it and Unblock the Notifications